ಚರ್ಚೆಗೀಡಾದ ಸೂಪರ್‌ಸ್ಟಾರ್ ಮಮ್ಮುಟಿ 369 ಕಾರು ಸಂಗ್ರಹ

ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮಮ್ಮುಟಿ, ನಟನೆಯ ಜೊತೆಗೆ ಕಾರುಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ. ಮಮ್ಮುಟ್ಟಿರವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಮಲಯಾಳಂ, ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಚರ್ಚೆಗೀಡಾದ ಸೂಪರ್‌ಸ್ಟಾರ್ ಮಮ್ಮುಟಿ 369 ಕಾರು ಸಂಗ್ರಹ

ಇತ್ತೀಚಿನ ದಿನಗಳಲ್ಲಿ ಅವರ 369 ಕಾರು ಸಂಗ್ರಹಗಳ ಬಗ್ಗೆಯೇ ಚರ್ಚೆಯಾಗುತ್ತಿದೆ. 369 ಎಂಬುದು ಅವರ ಬಳಿಯಿರುವ ಕಾರುಗಳ ಸಂಖ್ಯೆಯಲ್ಲ. ಬದಲಿಗೆ ತಮ್ಮ ಕಾರು ಗ್ಯಾರೇಜ್ ಗೆ ಈ ನಟ 369 ಎಂಬ ಹೆಸರನ್ನಿಟ್ಟಿದ್ದಾರೆ. ಅವರ ಬಳಿಯಿರುವ ಎಲ್ಲಾ ಕಾರುಗಳು 369 ಎಂಬ ನಂಬರ್ ಅನ್ನು ಹೊಂದಿವೆ.

ಚರ್ಚೆಗೀಡಾದ ಸೂಪರ್‌ಸ್ಟಾರ್ ಮಮ್ಮುಟಿ 369 ಕಾರು ಸಂಗ್ರಹ

ಮಮ್ಮುಟ್ಟಿರವರು ಬಿಎಂಡಬ್ಲ್ಯು ಇ 46 ಎಂ 3, ಮಿನಿ ಕೂಪರ್ ಎಸ್, ಜಾಗ್ವಾರ್ ಎಕ್ಸ್‌ಜೆ, ಟೊಯೊಟಾ ಲ್ಯಾಂಡ್ ಕ್ರೂಸರ್, ಆಡಿ ಎ 7, ಮಿತ್ಸುಬಿಷಿ ಪಜೆರೊ ಸ್ಪೋರ್ಟ್, ಟೊಯೊಟಾ ಫಾರ್ಚೂನರ್ ಸೇರಿದಂತೆ ಹಲವಾರು ಕಾರುಗಳನ್ನು ಹೊಂದಿದ್ದಾರೆ. ಮಮ್ಮುಟ್ಟಿರವರು ಮೊದಲ ಬಾರಿಗೆ ಮಾರುತಿ 800 ಕಾರನ್ನು ಖರೀದಿಸಿದ್ದರು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಚರ್ಚೆಗೀಡಾದ ಸೂಪರ್‌ಸ್ಟಾರ್ ಮಮ್ಮುಟಿ 369 ಕಾರು ಸಂಗ್ರಹ

ಈ ಎಲ್ಲಾ ಕಾರುಗಳು 369ನೇ ನಂಬರ್ ಹೊಂದಿವೆ ಎಂಬುದು ವಿಶೇಷ. ಮಮ್ಮುಟ್ಟಿರವರು ತಮ್ಮ ಕಾರುಗಳೊಂದಿಗೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಅವರ ಅನೇಕ ಕಾರುಗಳ ಫೋಟೋಗಳು ಸಹ ಬಹಿರಂಗವಾಗಿವೆ. ಈ ಫೋಟೋಗಳಲ್ಲಿ 369ನೇ ಸಂಖ್ಯೆಯ ನಂಬರ್ ಪ್ಲೇಟ್ ಗಳನ್ನು ಕಾಣಬಹುದು.

ಚರ್ಚೆಗೀಡಾದ ಸೂಪರ್‌ಸ್ಟಾರ್ ಮಮ್ಮುಟಿ 369 ಕಾರು ಸಂಗ್ರಹ

ಅವರ ಮಗ, ಚಿತ್ರನಟ ದುಲ್ಕರ್ ಸಲ್ಮಾನ್ ಸಹ ಹಲವಾರು ಕಾರುಗಳನ್ನು ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಅವರು ಸ್ಪೋರ್ಟ್ಸ್ ಕಾರ್ ಅನ್ನು ಚಾಲನೆ ಮಾಡುವಾಗ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಕೊಟ್ಟಾಯಂ-ಕೊಚ್ಚಿ ರಸ್ತೆಯಲ್ಲಿ ಮೂರು ಸ್ಪೋರ್ಟ್ಸ್ ಕಾರುಗಳು ರಸ್ತೆಗಿಳಿದಿದ್ದವು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಚರ್ಚೆಗೀಡಾದ ಸೂಪರ್‌ಸ್ಟಾರ್ ಮಮ್ಮುಟಿ 369 ಕಾರು ಸಂಗ್ರಹ

ಕಪ್ಪು ಬಣ್ಣದ ಲ್ಯಾಂಬೊರ್ಗಿನಿ, ಸಿಲ್ವರ್ ಬಣ್ಣದ ಪೋರ್ಷೆ ಹಾಗೂ ಕೆಂಪು ಬಣ್ಣದ ಪೋರ್ಷೆ ಕಾರುಗಳು ಕೊಟ್ಟಾಯಂ-ಕೊಚ್ಚಿ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದವು. ಇಬ್ಬರು ಬೈಕ್‌ ಸವಾರರು ನೆಚ್ಚಿನ ನಟನ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಆ ಕಾರುಗಳನ್ನು ಬೆನ್ನಟ್ಟಿದ್ದರು.

ಚರ್ಚೆಗೀಡಾದ ಸೂಪರ್‌ಸ್ಟಾರ್ ಮಮ್ಮುಟಿ 369 ಕಾರು ಸಂಗ್ರಹ

ಕಾರುಗಳು ಹೆಚ್ಚಿನ ವೇಗದಲ್ಲಿ ಚಲಿಸುತ್ತಿರಲಿಲ್ಲ ಬದಲಿಗೆ ಬೈಕ್ ಸವಾರರು ವೇಗವಾಗಿ ಬೈಕ್ ಚಾಲನೆ ಮಾಡಿ ಕಾರನ್ನು ಬೆನ್ನಟ್ಟುತ್ತಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ಆದರೆ ಈ ವೀಡಿಯೊವನ್ನು ಯಾವಾಗ ಚಿತ್ರೀಕರಿಸಲಾಗಿತ್ತು ಎಂಬ ಬಗ್ಗೆ ಆ ಅಧಿಕಾರಿಗೆ ಮಾಹಿತಿಯಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಚರ್ಚೆಗೀಡಾದ ಸೂಪರ್‌ಸ್ಟಾರ್ ಮಮ್ಮುಟಿ 369 ಕಾರು ಸಂಗ್ರಹ

ಬೈಕ್ ಸವಾರರ ಬಗ್ಗೆಯೂ ಯಾವುದೇ ಮಾಹಿತಿಯಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಆ ಬೈಕ್‌ಗಳ ನಂಬರ್ ಪ್ಲೇಟ್ ಕೂಡ ವಿಡಿಯೋದಲ್ಲಿ ಸೆರೆಯಾಗಿಲ್ಲ. ಇದೇನೇ ಇರಲಿ ನಟ ಮಮ್ಮುಟ್ಟಿಯವರ ಈ ಕಾರು ಸಂಗ್ರಹವು ಬಹಳ ವಿಶಿಷ್ಟವಾಗಿದೆ.

Most Read Articles

Kannada
English summary
Malayalam superstar Mammootty 369 car collection. Read in Kannada.
Story first published: Saturday, September 12, 2020, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X