ವಿಚಿತ್ರ ಅಪಘಾತ; ಇಂಥವರನ್ನು ಏನ್ ಮಾಡ್ಬೇಕು ನೀವೇ ಹೇಳಿ?
ಇಂದಿನ ಆಧುನಿಕ ಜಗತ್ತಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳ ಪ್ರಮಾಣವೂ ಜಾಸ್ತಿಯಾಗಿ ಬಿಟ್ಟಿದೆ. ನಮ್ಮ ದೈನಂದಿನ ಜೀವನದಲ್ಲಿ ವಾಹನ ಅಪಘಾತಗಳು ಸರ್ವೇ ಸಾಮಾನ್ಯವಾಗಿ ಕಾಣಸಿಗುವ ದೃಶ್ಯವಾಗಿದೆ.
ಹಾಗಿರುವಂತೆಯೇ ಕೆಲವು ಅಪಘಾತಗಳು ಆಕಸ್ಮಿಕ ಎನ್ನುವಂತೆಯೇ ನಡೆದು ಹೋಗುತ್ತದೆ. ಆದರೆ ಇನ್ನು ಕೆಲವು ಬಾರಿ ಉದ್ದೇಶಪೂರ್ವಕವಾಗಿಯೇ ಇಂತಹ ಅಪಘಾತ ಪ್ರಸಂಗಗಳನ್ನು ಸೃಷ್ಟಿ ಮಾಡಿದರೆ ಹೇಗಿರಬಹುದು?
ಹೌದು, ನಾವಿಂದು ಮಾತನಾಡುತ್ತಿರುವುದು ಚೀನಾದ ಟ್ರಾಫಿಕ್ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕ ವೀಡಿಯೋ ಬಗ್ಗೆಯಾಗಿದೆ. ಇಲ್ಲೊಬ್ಬ ಪಾನಮತ್ತನಾಗಿರುವ ದ್ವಿಚಕ್ರ ಸವಾರನೊಬ್ಬ ಟ್ರಾಫಿಕ್‌ನಲ್ಲಿ ಯಾವ ದಿಕ್ಕಿನತ್ತ ಚಲಾಯಿಸಬೇಕೆಂಬುದನ್ನು ತನಗೇ ತಿಳಿಯದೇ ಅಡ್ಡಾದಿಡ್ಡಿ ಮುಂದೆ ಸಿಕ್ಕ ವಾಹನಗಳಿಗೆ ಢಿಕ್ಕಿ ಹೊಡೆಯುತ್ತಾನೆ.
ತಾನು ಮಾಡಿದ ಪಾಪ ಕರ್ಮದ ಫಲ ತಾನೇ ಅನುಭವಿಸಬೇಕು ಎನ್ನುವಂತೆಯೇ ಅಂತಿಮದಲ್ಲಿ ಆತ ಅಲ್ಲಿ ರಸ್ತೆ ಬದಿಯಲ್ಲಿದ್ದ ಹೊಂಡಕ್ಕೆ ಧುಮುಕಿ ಬೀಳುತ್ತಾನೆ. ಇನ್ನು ಆತ ಬದುಕಿದ್ದಾನೋ ಅಥವಾ ಸತ್ತಿದ್ದಾನೋ ಎಂಬುದನ್ನು ದೇವರು ಮಾತ್ರ ಬಲ್ಲ!
ಕಥೆ ಏನೇ ಇರಲಿ ಇಂತಹ ವೀಡಿಯೋಗಳನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ . ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಅಂತಿಮ ಸ್ಲೈಡರ್‌ನಲ್ಲಿ ಕೊಡಲಾಗಿರುವ ವೀಡಿಯೋದಲ್ಲಿ ಈ ವಿಚಿತ್ರ ಸವಾರನ ರೈಡಿಂಗ್ ಆಟವನ್ನೊಮ್ಮೆ ನೋಡಿರಿ... ಇದಕ್ಕೂ ಮೊದಲು ಫೋಟೊ ಗ್ಯಾಲರಿಯಲ್ಲಿ ಕೊಟ್ಟಿರುವ ಚಿತ್ರ ವೀಕ್ಷಿಸಲು ಮರೆಯದಿರಿ...





ವೀಡಿಯೋ ವೀಕ್ಷಿಸಿ


Click it and Unblock the Notifications








