Just In
Don't Miss!
- Lifestyle
ಮಂಗಳವಾರದ ದಿನ ಭವಿಷ್ಯ 10-12-2019
- News
ಸಿದ್ದು, ದಿನೇಶ್ ಗುಂಡೂರಾವ್ ರಾಜೀನಾಮೆ: ಹಾಗೆ ಸುಮ್ಮನೆ!
- Movies
ಮಹತ್ವದ ಪ್ರಾಜೆಕ್ಟ್ ಗೆ ಕೈ ಹಾಕಿದ ಕ್ರಿಕೆಟಿಗ ಎಂ ಎಸ್ ಧೋನಿ
- Finance
ಡಿಸೆಂಬರ್ 9ರ ಚಿನ್ನ- ಬೆಳ್ಳಿ ದರ ಹೀಗಿದೆ
- Technology
ನಿಮ್ಮ ಪಿಸಿಗೆ ವೈರಸ್ ಅಟ್ಯಾಕ್ ಆಗಿದೆಯಾ ಎಂಬುದನ್ನು ಪರೀಕ್ಷಿಸುವುದು ಹೇಗೆ?
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
- Education
KPSC Admit Card 2019: ಗ್ರೂಪ್ "ಬಿ" ಮತ್ತು "ಸಿ" ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಭಾರೀ ಪ್ರಮಾಣದ ದಂಡಕ್ಕೆ ರೋಸಿ ಹೋಗಿ ಬೈಕಿಗೆ ಬೆಂಕಿಯಿಟ್ಟ ಭೂಪ..!
ಈ ವರ್ಷದ ಜುಲೈನಲ್ಲಿ ಸಂಸತ್ತು ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ 2019ನ್ನು ಅಂಗೀಕರಿಸಿತು. ಈ ಕಾಯ್ದೆಯಿಂದಾಗಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ. ಈ ಕಾಯ್ದೆಯನ್ನು ಸೆಪ್ಟೆಂಬರ್1 ರಿಂದ ಜಾರಿಗೆ ತರಲಾಗಿದೆ.

ಈ ದಂಡ ಪ್ರಮಾಣದ ಬಗ್ಗೆ ಅರಿವಿರದ ಜನ ನಿಯಮಗಳನ್ನು ಉಲ್ಲಂಘಿಸಿ ಸಂಚಾರಿ ಪೊಲೀಸರಿಗೆ ಸಿಕ್ಕಿ ಬೀಳುತ್ತಿದ್ದಾರೆ. ಸಿಕ್ಕಿ ಬಿದ್ದ ನಂತರ ಪೊಲೀಸರು ವಿಧಿಸುತ್ತಿರುವ ಭಾರೀ ಪ್ರಮಾಣದ ದಂಡವನ್ನು ಕಟ್ಟಲಾಗದೇ ಪರದಾಡುತ್ತಿದ್ದಾರೆ. ಇನ್ನು ವ್ಯಕ್ತಿಯೊಬ್ಬ ಈ ಭಾರೀ ಪ್ರಮಾಣದ ದಂಡಕ್ಕೆ ರೋಸಿ ಹೋಗಿ ತನ್ನ ಬೈಕಿಗೆ ಬೆಂಕಿ ಹಚ್ಚಿದ್ದಾನೆ.
ಹೌದು, ಭಾರೀ ಪ್ರಮಾಣದ ದಂಡ ವಿಧಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಬೈಕಿಗೆ ಬೆಂಕಿ ಇಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಮಾಳವಿಯಾ ನಗರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೆಹಲಿ ಸಂಚಾರ ಪೊಲೀಸರು ರೂ.25,000ಗಳ ದಂಡ ವಿಧಿಸಿದ ಕಾರಣಕ್ಕೆ ಈ ವ್ಯಕ್ತಿ ತನ್ನ ಬೈಕಿಗೆ ಬೆಂಕಿ ಹಚ್ಚಿದ್ದಾನೆ.

ಪೊಲೀಸರ ಪ್ರಕಾರ, ತನ್ನ ಬೈಕ್‌ಗೆ ಬೆಂಕಿ ಹಚ್ಚಿದಾಗ ಆತ ಕುಡಿದಿದ್ದ. ಇದರ ಬಗ್ಗೆಯೂ ಆತನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ದೆಹಲಿಯ ಸಂಚಾರಿ ಪೊಲೀಸರು ವ್ಯಕ್ತಿಯನ್ನು ತಡೆದು, ತಪಾಸಣೆ ನಡೆಸಿದ್ದಾರೆ. ತಪಾಸಣೆಯ ನಂತರ ಆ ವ್ಯಕ್ತಿಯು ಕುಡಿದಿರುವುದು ಪತ್ತೆಯಾಗಿದೆ.

ಕುಡಿದು ವಾಹನ ಚಲಾಯಿಸುವುದರ ಜೊತೆಗೆ ಆತ ಹಲವು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ರೂ.25,000ಗಳ ದಂಡ ವಿಧಿಸಿ, ಆತನ ಬೈಕ್ ಅನ್ನು ವಶಕ್ಕೆ ಪಡೆಯುವ ವೇಳೆ ಮಾಳವಿಯಾ ನಗರದ ತ್ರಿವೇಣಿ ಕಾಂಪ್ಲೆಕ್ಸ್ ಬಳಿ ಬೈಕಿಗೆ ಬೆಂಕಿ ಹಚ್ಚಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ವೈದಕೀಯ ತಪಾಸಣೆಗೆ ಒಳಪಡಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆಗಾಗಿ ಕೇಂದ್ರ ಸರ್ಕಾರವು ಭಾನುವಾರದಿಂದ ಪರಿಷ್ಕೃತ ದಂಡ ನಿಯಮಗಳನ್ನು ಜಾರಿಗೊಳಿಸಿದೆ. ಹೊಸ ನಿಯಮಗಳು ಜಾರಿಯಾದ ನಂತರ, ಭಾರೀ ಪ್ರಮಾಣದ ದಂಡ ವಿಧಿಸಿದ ಹಲವಾರು ಪ್ರಕರಣಗಳು ದೇಶಾದ್ಯಂತ ವರದಿಯಾಗಿವೆ.

ದೆಹಲಿಯ ಪಕ್ಕದಲ್ಲಿರುವ ಗುರುಗ್ರಾಮದಲ್ಲಿ ದಿನೇಶ್ ಮದನ್ ಎಂಬ ವ್ಯಕ್ತಿಯೊಬ್ಬರಿಗೆ ರೂ.24,000ಗಳ ದಂಡ ವಿಧಿಸಲಾಗಿದೆ. ಆದರೆ ಅವರ ಬಳಿಯಿದ್ದ ಸ್ಕೂಟರ್ ಅನ್ನು ಅವರು ರೂ.15,000 ನೀಡಿ ಖರೀದಿಸಿದ್ದರು. ಬೆಂಗಳೂರಿನಲ್ಲಿಯೂ ಸಹ ಕುಡಿದು ಬೈಕ್ ಚಲಾಯಿಸುತ್ತಿದ್ದ ಯುವಕನಿಗೆ ರೂ.17,000 ದಂಡ ವಿಧಿಸಲಾಗಿದೆ.
MOST READ: ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍ಗೂ ಬಿತ್ತು ಭಾರೀ ದಂಡ..!

ಗುರುಗ್ರಾಮದಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋರಿಕ್ಷಾ ಚಾಲಕನಿಗೆ ರೂ.32,500 ದಂಡ ವಿಧಿಸಲಾಗಿದೆ. ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಗುರುಗ್ರಾಮದ ಟ್ರ್ಯಾಕ್ಟರ್ ಚಾಲಕನಿಗೆ ರೂ.59,000 ದಂಡ ವಿಧಿಸಲಾಗಿದೆ.
MOST READ: ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಭುವನೇಶ್ವರದಲ್ಲಿ ಏಳು ದಿನಗಳ ಹಿಂದಷ್ಟೇ ಸೆಕೆಂಡ್ ಹ್ಯಾಂಡ್ ಆಟೋ ಖರೀದಿಸಿದ್ದ ಆಟೋ ಚಾಲಕನೊಬ್ಬ ಕುಡಿದು ವಾಹನ ಚಲಾಯಿಸಿದ ಕಾರಣಕ್ಕೆ ಹಾಗೂ ಹಲವು ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ರೂ.47,500 ದಂಡ ವಿಧಿಸಲಾಗಿದೆ. ಅಂದ ಹಾಗೆ ಈತ ರೂ.26,000 ನೀಡಿ ಸೆಕೆಂಡ್ ಹ್ಯಾಂಡ್ ಆಟೋ ಖರೀದಿಸಿದ್ದ.
MOST READ: ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಹೊಸ ಕಾಯ್ದೆಯನ್ವಯ ಕುಡಿದು ವಾಹನ ಚಲಾಯಿಸಿದರೆ ರೂ.10,000 ದಂಡ ವಿಧಿಸಲಾಗುವುದು. ಈ ಮೊದಲು ಕುಡಿದು ವಾಹನ ಚಲಾಯಿಸುವವರಿಗೆ ರೂ.2,000 ದಂಡ ವಿಧಿಸಲಾಗುತ್ತಿತ್ತು. ಹೆಲ್ಮೆಟ್ ಇಲ್ಲದೇ ಗಾಡಿ ಚಲಾಯಿಸಿದರೆ ರೂ.1,000 ದಂಡ ವಿಧಿಸುವುದರ ಜೊತೆಗೆ ಲೈಸೆನ್ಸ್ ಅನ್ನು 3 ತಿಂಗಳ ಕಾಲ ಅಮಾನತ್ತಿನಲ್ಲಿಡಲಾಗುವುದು.

ಹಿಂಬದಿ ಸವಾರನು ಹೆಲ್ಮೆಟ್ ಹೊಂದಿಲ್ಲದಿದ್ದರೂ ಸಹ ರೂ.1,000 ದಂಡ ವಿಧಿಸಲಾಗುತ್ತದೆ. ಕೆಲ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಈ ಮೊದಲು ರೂ.100 ದಂಡ ವಿಧಿಸಲಾಗುತ್ತಿತ್ತು. ಈಗ ಈ ಮೊತ್ತವನ್ನು ರೂ.500ಗಳಿಗೆ ಹೆಚ್ಚಿಸಲಾಗಿದೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಸವಾರಿ ಮಾಡಿದರೆ ರೂ.5,000 ದಂಡ ವಿಧಿಸಲಾಗುತ್ತದೆ.

ಸಾರಿಗೆ ಸಚಿವ ನಿತಿನ್ ಗಡ್ಕರಿರವರು ಮಾತನಾಡಿ, ಭಾರೀ ಪ್ರಮಾಣದ ದಂಡ ವಿಧಿಸುತ್ತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಭಾರೀ ಪ್ರಮಾಣದ ದಂಡವನ್ನು ಹಣ ಸಂಗ್ರಹಿಸಲು ವಿಧಿಸುತ್ತಿಲ್ಲ. ಬದಲಿಗೆ ಜನರು ಸಂಚಾರಿ ನಿಯಮಗಳನ್ನು ಉಲ್ಲಂಘಿಸದಂತೆ ಮಾಡುವ ಕಾರಣಕ್ಕೆ ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಜನರು ಕಾನೂನುಗಳನ್ನು ಪಾಲಿಸಿದರೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದು ಅವರು ಹೇಳಿದರು.