ಯುವತಿಯನ್ನು ಥಳಿಸಿ ಬಲವಂತವಾಗಿ ಕ್ಯಾಬ್‌ನೊಳಗೆ ನೂಕಿದ ಯುವಕ... ವಿಡಿಯೋ ವೈರಲ್

ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಯುವತಿಯನ್ನು ಥಳಿಸಿ ಕಾರಿನೊಳಗೆ ನೂಕುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ದೆಹಲಿಯ ಮಂಗೋಲ್‌ಪುರಿ ಮೇಲ್ಸೇತುವೆ ಬಳಿಯ ಜನನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯವನ್ನು ರಸ್ತೆಯಲ್ಲಿ ಹೋಗುತ್ತಿದ್ದ ಮತ್ತೊಬ್ಬ ಚಾಲಕ ತೆಗೆದಿದ್ದು, ದೆಹಲಿ ಪೊಲೀಸರು ವಾಹನ ಮತ್ತು ಅದರ ಚಾಲಕನನ್ನು ಪತ್ತೆಹಚ್ಚಿದ್ದಾರೆ.

ವೀಡಿಯೊ ವೈರಲ್ ಆದ ನಂತರ, ದೆಹಲಿ ಪೊಲೀಸರು ಗುರುಗ್ರಾಮ್‌ನ ರತನ್ ವಿಹಾರ್‌ಗೆ ಸಿಬ್ಬಂದಿಯ ತಂಡವನ್ನು ಕಳುಹಿಸಿದ್ದಾರೆ. ಘಟನೆ ಕುರಿತು ಚಾಲಕ ವಿವರಿಸಿದ್ದು, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವತಿ, ಯುವಕನ ಪತ್ತೆಹಚ್ಚಿದ್ದಾರೆ. ಮೊದಲಿಗೆ, ನಿಧಾನಗತಿಯಲ್ಲಿ ಸಾಗುತ್ತಿದ್ದ ಟ್ರಾಫಿಕ್ ನಡುವೆ ವ್ಯಕ್ತಿಯೊಬ್ಬ ಮಹಿಳೆಯನ್ನು ರಸ್ತೆಯ ಮಧ್ಯದಲ್ಲಿ ಥಳಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಬಳಿಕ ಬಲವಂತವಾಗಿ ಕಾರಿನೊಳಗೆ ಮಹಿಳೆಯನ್ನು ಹಿಂಬದಿಯ ಸೀಟಿನಲ್ಲಿ ತಳ್ಳಿ ವಾಹನದ ಮುಂದಿನ ಸೀಟಿನಲ್ಲಿ ಹೋಗಿ ಕುಳಿತಿದ್ದಾನೆ.

ಯುವತಿಯನ್ನು ಥಳಿಸಿ ಬಲವಂತವಾಗಿ ಕ್ಯಾಬ್‌ನೊಳಗೆ ನೂಕಿದ ಯುವಕ... ವಿಡಿಯೋ ವೈರಲ್

ಕಪ್ಪು ಟೀ ಶರ್ಟ್‌ನ ಇನ್ನೊಬ್ಬ ವ್ಯಕ್ತಿ ಯುವತಿಯ ಜೊತೆಗೆ ಹಿಂದಿನ ಸೀಟಿನಲ್ಲಿ ಕುಳಿತಿದ್ದಾನೆ. ಈ ಕುರಿತು ಭಾನುವಾರ ಪೊಲೀಸರು ಮಾಹಿತಿ ನೀಡಿದ್ದು, ಇಬ್ಬರು ಹುಡುಗರು ಮತ್ತು ಹುಡುಗಿ ಸ್ನೇಹಿತರು ಎಂದು ಹೇಳಿದ್ದಾರೆ. ಅವರು ಇಲ್ಲಿನ ರೋಹಿಣಿಯಿಂದ ವಿಕಾಸಪುರಿಗೆ ಉಬರ್ ಕ್ಯಾಬ್ ಬುಕ್ ಮಾಡಿದ್ದಾರೆ. ಆದರೆ, ದಾರಿ ಮಧ್ಯೆ ಹಳೆ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಕ್ಯಾಬ್‌ನೊಳಗೆ ತೀವ್ರ ವಾಗ್ವಾದದ ನಂತರ, ಮಹಿಳೆ ವಾಹನದಿಂದ ಇಳಿಯಲು ಬಯಸಿದ್ದಳು.

ಆದರೆ, ಇಬ್ಬರು ಯುವಕರು ಆಕೆಯನ್ನು ಬಲವಂತವಾಗಿ ಕ್ಯಾಬ್ ಒಳಗೆ ಕೂರಿಸಿದ್ದಾರೆ. ಈ ಸಂಪೂರ್ಣ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಅಧಿಕಾರಿಗಳ ಗಮಕ್ಕೆ ಬಂದಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, "ಯುವತಿಯನ್ನು ಬಲವಂತವಾಗಿ ವಾಹನಕ್ಕೆ ಹತ್ತಿಸಿ ಥಳಿಸಿದ ಈ ವೈರಲ್ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ನಾನು ದೆಹಲಿ ಪೊಲೀಸರಿಗೆ ನೋಟಿಸ್ ನೀಡುತ್ತಿದ್ದೇನೆ. ಅಂತಹವರ ವಿರುದ್ಧ ಆಯೋಗವು ಕಠಿಣ ಕ್ರಮ ಜರುಗಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅದರ ನಂತರ, ಅವರು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದು, ಎಲ್ಲಾ ಪೊಲೀಸ್ ಕಂಟ್ರೋಲ್ ರೂಮ್ (ಪಿಸಿಆರ್) ಗಳಲ್ಲಿ ಕ್ಯಾಬ್‌ನ ಸಂಖ್ಯೆಯನ್ನು ನೀಡಲಾಗಿದೆ. ದೆಹಲಿ ಮತ್ತು ನೆರೆಯ ಪ್ರದೇಶಗಳಿಗೆ ಶೋಧ ಕಾರ್ಯಾಚರಣೆಗೆ ಎಚ್ಚರಿಕೆ ನೀಡಲಾಗಿದೆ. ಇಲ್ಲಿನ ಔಟರ್ ಡಿಸಿಪಿ ಹರೇಂದರ ಕೆ.ಸಿಂಗ್ ಅವರ ಪ್ರಕಾರ ಟ್ಯಾಕ್ಸಿಯನ್ನು ಶೈಲೇಂದರ್ ಎಂಬಾತನ ಹೆಸರಿನಲ್ಲಿ ನೋಂದಾಯಿಸಲಾಗಿದೆ.

"ಯುವತಿ ಮತ್ತು ಆಕೆಯ ಇಬ್ಬರು ಸ್ನೇಹಿತರು ವೈಯಕ್ತಿಕ ವಿಷಯಗಳ ಬಗ್ಗೆ ಜಗಳವಾಡಿದ್ದು, ನಂತರ ಅದು ದೈಹಿಕ ಹಲ್ಲೆಯ ರೂಪವನ್ನು ಪಡೆಯಿತು. ಯುವತಿ ಏನೂ ಮಾಡಲಾಗದೇ ಟ್ಯಾಕ್ಸಿಯಿಂದ ಹೊರಬಂದಳು, ಆದರೆ ಆಕೆಯ ಸ್ನೇಹಿತರು ಮತ್ತೆ ಕಾರಿನಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದರು. ವಿಷಯ ಗಂಭೀರವಾದ ಕಾರಣ ಯುವತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಮೂವರ ಪ್ರವರ್ತನೆ ಸರಿಯಿಲ್ಲದ ಕಾರಣ ಟ್ಯಾಕ್ಸಿಯಿಂದ ಇಳಿಯಲು ಹೇಳಿರುವುದಾಗಿ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ನಂತರ Paytm ಮೂಲಕ ಮಾಡಿದ ಪಾವತಿ ಮತ್ತು ಕಾರನ್ನು ಬುಕ್ ಮಾಡಲು ಬಳಸಿದ ಸಂಖ್ಯೆಯ ಆಧಾರದ ಮೇಲೆ, ಯುವತಿ ಹಾಗೂ ಇಬ್ಬರು ಸ್ನೇಹಿತರನ್ನು ಸಂಪರ್ಕಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಮೂವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮಹಿಳೆಯ ಹೇಳಿಕೆಯನ್ನು ಆಪ್ತ ಸಮಾಲೋಚಕರೊಂದಿಗೆ ದಾಖಲಿಸಲಾಗಿದೆ, ಆಕೆಗೆ ವೈದ್ಯಕೀಯ ಸಹಾಯವನ್ನು ಸಹ ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಹೇಳಿಕೆ ಮೇರೆಗೆ ಇಬ್ಬರ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, March 20, 2023, 12:20 [IST]
English summary
Man who beat up woman and pushed her into the cab
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+