ಮಾರುತಿ ಏಟಿಗೆ ನಲುಗಿದ ಫೋಕ್ಸ್‌ವ್ಯಾಗನ್: ಪೋಲೊ ಮುಂಭಾಗ ನಜ್ಜುಗುಜ್ಜು, ವಿಟಾರಾ ಡ್ರೈವರ್ ಸೇಫ್!
ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಫೋಕ್ಸ್‌ವ್ಯಾಗನ್ ಪೊಲೊ ನಡುವೆ ಡಿಕ್ಕಿಯಾಗಿರುವ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಅಪಘಾತದ ಚಿತ್ರಗಳು ಫೇಸ್‌ಬುಕ್‌ನ ಗ್ರ್ಯಾಂಡ್ ವಿಟಾರಾ ಕ್ಲಬ್ ಇಂಡಿಯಾದ ಪೇಜ್‌ನಲ್ಲಿ ಹಂಚಿಕೆಯಾಗಿದ್ದು, ಸಂಚಲನವನ್ನು ಉಂಟುಮಾಡಿವೆ. ಕಾರಿನ ಮಾಲೀಕ, "ನನ್ನ ಗ್ರ್ಯಾಂಡ್ ವಿಟಾರಾದಲ್ಲಿ ರಾಂಗ್ ಸೈಡ್‌ನಿಂದ ಪೊಲೊ ಡಿಕ್ಕಿಯಾಯಿತು. ಅದೃಷ್ಟವಶಾತ್, ನಾನು ಯಾವುದೇ ಗಾಯವಿಲ್ಲದೆ ನನ್ನ ಕಾರಿನಿಂದ ಹೊರಬಂದೆ" ಎಂದು ಬರೆದಿದ್ದಾರೆ. ವಿಚಿತ್ರವೆಂಬಂತೆ ವೋಕ್ಸ್‌ವ್ಯಾಗನ್ ಪೋಲೊ ಕಾರಿಗೆ ಗಂಭೀರವಾಗಿ ಹಾನಿಯಾಗಿದೆ.
ಹಂಚಿಕೊಂಡಿರುವ ಚಿತ್ರಗಳಲ್ಲಿ ಪೋಲೊ ಕಾರಿನ ಮುಂಭಾಗದ ಭಾಗವು ಗಂಭೀರವಾಗಿ ಹಾನಿಗೊಳಗಾಗಿದೆ ಎಂದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಡಿಕ್ಕಿಯು ಗ್ರ್ಯಾಂಡ್ ವಿಟಾರಾದ ಬದಿಯ ಭಾಗಕ್ಕೆ ಬಹಳ ಬಲವಾಗಿ ಸಂಭವಿಸಿರಬೇಕು. ಆದರೆ, ಮಾರುತಿ ಕಾರು ಹೆಚ್ಚು ಹಾನಿಗೊಳಗಾದಂತೆ ತೋರುತ್ತಿಲ್ಲ. ಅಪಘಾತದಲ್ಲಿ ಯಾವುದೇ ಗಾಯಗಳಿಲ್ಲದೆ ಗ್ರ್ಯಾಂಡ್ ವಿಟಾರಾದ ಚಾಲಕ ಹೊರಬಂದಿರುವುದಕ್ಕೆ ಈ ಕಾರಿನ ಕ್ಯಾಬಿನ್ ರಚನೆಯ ಗುಣಮಟ್ಟವೇ ಕಾರಣ ಎನ್ನಲಾಗುತ್ತಿದೆ.

ಪೋಲೊ ಮತ್ತು ವಿಟಾರಾ ಎರಡೂ ಕಾರುಗಳು ಕೆಲವೊಂದು ಬಾಹ್ಯ ಹಾನಿಯನ್ನು ಹೊಂದಿದ್ದರೂ, ಪೊಲೊ ಕಾರು ಮಾತ್ರ ಡಿಕ್ಕಿಯ ಪರಿಣಾಮವನ್ನು ಹೆಚ್ಚು ಅನುಭವಿಸಿದೆ. ಇದರಿಂದ, ಸುರಕ್ಷತಾ ರೇಟಿಂಗ್‌ಗಳು ಮಾತ್ರ ಕಾರುಗಳ ಗುಣಮಟ್ಟವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇದಲ್ಲದೆ, ಸುರಕ್ಷಿತ ಮತ್ತು ಜಾಗರೂಕ ಚಾಲನೆ ಯಾವಾಗಲೂ ಮುಖ್ಯ.
ಪೋಲೊ ವಿಷಯ್ಕೆ ಬಂದರೆ ಫೋಕ್ಸ್‌ವ್ಯಾಗನ್ ಕಾರುಗಳು ತಮ್ಮ ಅತ್ಯುತ್ತಮ ಸುರಕ್ಷತಾ ಗುಣಮಟ್ಟದಿಂದಾಗಿ ಜಾಗತಿಕ ಖ್ಯಾತಿಯಲ್ಲಿದ್ದು, ಇತ್ತ ಮಾರುತಿ ಸುಜುಕಿಗೆ ಕಳಪೆ ನಿರ್ಮಾಣ ಗುಣಮಟ್ಟ ಎಂಬ ಇಮೇಜ್ ಇದೆ. ಇತ್ತೀಚೆಗೆ ಎಲ್ಲರನ್ನು ಅಚ್ಚರಿಗೊಳಿಸುವಂತೆ ಗ್ಲೋಬಲ್ ಎನ್‌ಸಿಎಪ್ ಟೆಸ್ಟ್‌ನಲ್ಲಿ ಮಾರುತಿ ಡಿಜೈರ್ ಕಾರು 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆಯುವ ಮೂಲಕ ಕಂಪನಿಯ ಮೌಲ್ಯವನ್ನು ಹೆಚ್ಚಿಸಿದೆ.

ಇದು ಮಾರುತಿ ತನ್ನ ಹೊಸ ತಲೆಮಾರಿನ ವಾಹನಗಳಲ್ಲಿ ವಿಶ್ವದರ್ಜೆಯ ಸುರಕ್ಷತಾ ಸಾಧನಗಳನ್ನು ಒದಗಿಸಿ ಕೃತಜ್ಞತೆ ಸಲ್ಲಿಸುತ್ತಿರುವುದನ್ನು ತೋರಿಸುತ್ತದೆ. ಸದ್ಯ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳು ಅಧಿಕೃತವಾಗಿ ಹೊರಬರದಿದ್ದರೂ, ನಿಜ ಜೀವನದ ಘಟನಾವಳಿಗಳು ಕೆಲವು ಉಜ್ವಲ ನಿರೀಕ್ಷೆಗಳನ್ನು ನೀಡಿವೆ. ಇಂತಹ ಅಪಘಾತ ಸಂದರ್ಭಗಳಲ್ಲಿ ಕಾರು ಉತ್ತಮ ನಿರ್ಮಾಣ ಗುಣಮಟ್ಟವನ್ನು ಹೊಂದಿದೆ ಎಂಬುದು ತಿಳಿಯುತ್ತದೆ.
ಮಾರುತಿ ಸುಜುಕಿ ಕಂಪನಿಯು ದಶಕಗಳಿಂದ ಭಾರತೀಯರ ಮೆಚ್ಚಿನ ಕಾರು ತಯಾರಕರಾಗಿ ಮಿಂಚುತ್ತಿದೆ. ಹೆಚ್ಚಿನ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ, ಸ್ಪರ್ಧಾತ್ಮಕ ಬೆಲೆಗಳು, ದೇಶಾದ್ಯಂತದ ಸೇವಾ ಕೇಂದ್ರಗಳು ಮತ್ತು ಬಿಡಿಭಾಗಗಳ ಸುಲಭ ಲಭ್ಯತೆ ಇದರ ಪ್ರಮುಖ ಆಕರ್ಷಣೆಗಳಾಗಿವೆ. ಈಗ ಮಾರುತಿಯ ಇತ್ತೀಚಿನ ತಲೆಮಾರಿನ ಕಾರುಗಳು ಉತ್ತಮ ರಕ್ಷಣೆ ಮತ್ತು ವಿಶ್ವದರ್ಜೆಯ ಸುರಕ್ಷತಾ ಮಾನದಂಡಗಳನ್ನು ತಲುಪುತ್ತಿರುವುದರಿಂದ, ಈ ಬ್ರ್ಯಾಂಡ್‌ಗೆ ಜನರ ವಿಶ್ವಾಸ ಮತ್ತಷ್ಟು ಹೆಚ್ಚುತ್ತಿದೆ.
ಈ ಹಿಂದೆ ಕೇವಲ ಮಹೀಂದ್ರಾ, ಟಾಟಾ ಮೋಟಾರ್ಸ್ ನಂತಹ ಬ್ರಾಂಡ್‌ಗಳಿಗೆ ಸೀಮಿತವಾಗಿದ್ದ ಗುಣಮಟ್ಟ ಎಂಬ ಪದ ನಿಧಾನವಾಗಿ ಮಾರುತಿ ಕೂಡ ಆಕ್ರಮಿಸುತ್ತಿದೆ. ಸುರಕ್ಷತೆ ಮತ್ತು ಮೈಲೇಜ್ ನಡುವೆ ಸಮತೋಲನ ಸಾಧಿಸುವ ಈ ಹೊಸ ತಲೆಮಾರಿನ ಕಾರುಗಳು ಮಾರುತಿಯ ಭವಿಷ್ಯವನ್ನು ಇನ್ನಷ್ಟು ಬಲಪಡಿಸಬಹುದು. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: Carblog India
Link: https://www.carblogindia.com/vw-polo-crashes-into-maruti-grand-vitara/


Click it and Unblock the Notifications