ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ಪ್ರವಾಸ ತೆರಳಿದ ವೇಳೆ ಪ್ರವಾಸಿಗರು ಸಾಹಸ ಮಾಡಲು ಹೋಗಿ ಸಿಲುಕಿಕೊಂಡಾಗ ಭಾರತೀಯ ಸೇನೆ ರಕ್ಷಣೆ ಮಾಡಿದ ಸಾಕಷ್ಟು ಉದಾಹರಣೆಗಳಿವೆ. ಇದೆ ರೀತಿ ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್‌ನಲ್ಲಿ ಇತ್ತೀಚೆಗೆ ನಾಲ್ವರು ಪ್ರವಾಸಿಗರು ತಮ್ಮ ವಾಹನದಲ್ಲಿ ಸಿಂಧ್ ನದಿಗೆ ಚಲಾಯಿಸಿ ಅಲ್ಲಿ ಸಿಲುಕಿಕೊಂಡ ವೇಳೆ ಭಾರತೀಯ ಸೇನೆ ರಕ್ಷಣೆ ಮಾಡಿದೆ.

ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ನಾಲ್ವರು ಪ್ರವಾಸಿಗರು ತಮ್ಮ ವಾಹನವನ್ನು ಸಿಂಧ್ ನದಿಗೆ ಚಲಾಯಿಸಿ ಅಲ್ಲಿ ಸಿಲುಕಿಕೊಂಡರು. ನಂತರ ಭಾರತೀಯ ಸೇನೆ ಅವರನ್ನು ರಕ್ಷಿಸಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವೈರಲ್ ಕ್ಲಿಪ್‌ನಲ್ಲಿ, ಇಂಟಿಗ್ರೇಟೆಡ್ ಕ್ರೇನ್ ಆರ್ಮ್ ಹೊಂದಿರುವ ಭಾರತೀಯ ಸೇನೆಯ ಟ್ರಕ್ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿರುವುದನ್ನು ಕಾಣಬಹುದು. ಪ್ರವಾಸಿಗರು ತಮ್ಮ ಮಾರುತಿ ಜಿಪ್ಸಿಯನ್ನು ನದಿಯಲ್ಲಿ ಡ್ರೈವ್ ಮಾಡಿದ್ದಾರೆ.

ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ಮಾರುತಿ ಜಿಪ್ಸಿಯಲ್ಲಿ ನದಿಯ ದಡಕ್ಕೆ ದಾಟಲು ಪ್ರಯತ್ನಿಸಿದರು, ಆದರೆ ಅವರು ತಮ್ಮ ವಾಹನದ ಮೇಲೆ ಅತಿಯಾದ ನಂಬಿಕೆಯನ್ನು ಹೊಂದಿದ್ದರು ಮತ್ತು ರಭಸದಿಂದ ಹರಿಯುವ ನದಿಯಲ್ಲಿ ಮಧ್ಯದಲ್ಲಿ ಸಿಲುಕಿಕೊಂಡರು. ಅದೃಷ್ಟವಶಾತ್, ಯಾವುದೇ ಗಾಯಗಳು ಅಥವಾ ಅವಘಡಗಳಿಲ್ಲದೆ ಅವರನ್ನು ರಕ್ಷಿಸಲಾಯಿತು.

ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ವೀಡಿಯೊದಲ್ಲಿ ನೋಡಿದಂತೆ ನದಿಯ ಹರಿವು ಸಾಕಷ್ಟು ಆಕ್ರಮಣಕಾರಿಯಾಗಿದೆ, ವಾಹನದ ಒಳಭಾಗದಿಂದ ಮತ್ತು ತೆರೆದ ಬಾಗಿಲುಗಳ ಮೂಲಕ ನೀರು ಹರಿಯುತ್ತಿದೆ. ಎಸ್‌ಯುವಿ ಸಾಕಷ್ಟು ಅಳದಲ್ಲಿ ಸಿಲುಕಿಕೊಂಡಿದೆ ಮತ್ತು ಪ್ರವಾಸಿಗರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾರುತಿ ಜಿಪ್ಸಿ ಉತ್ತಮ ಆಫ್-ರೋಡ್ ವಾಹನವಾಗಿದ್ದರೂ, ದಿಡ್ಡ ಕಲ್ಲು ಮತ್ತು ರಭಸದಿಂದ ಹರಿಯುವ ನದಿಯನ್ನು ದಾಟಲು ಸಾಕಷ್ಟು ಚಾಲನಾ ಕೌಶಲ್ಯದ ಅಗತ್ಯವಿರುತ್ತದೆ.

ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ಪ್ರವಾಸಿಗರು ನದಿಯಲ್ಲಿ ಸಿಲುಕಿದಾಗ ಭಾರತೀಯ ಸೇನೆಯ ರಕ್ಷಣಾ ತಂಡ ತಕ್ಷಣವೇ ರಕ್ಷಣಾ ವಾಹನ ಮತ್ತು ಅಗತ್ಯ ಸಲಕರಣೆಗಳೊಂದಿಗೆ ಸ್ಥಳಕ್ಕೆ ಧಾವಿಸಿ ನಾಲ್ವರನ್ನು ರಕ್ಷಿಸಿತು. ಎಲ್ಲಾ ನಾಲ್ಕು ಪ್ರವಾಸಿಗರನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ.

ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ಈ ಹಿಂದೆ ಸಾಕಷ್ಟು ಭಾರತೀಯ ಪ್ರವಾಸಿಗರು ತಮ್ಮ ವಾಹನಗಳ ಸಾಮರ್ಥ್ಯವನ್ನು ಅತಿಯಾಗಿ ಅಂದಾಜು ಮಾಡಿ ಸಿಲುಕಿಕೊಂಡಿದ್ದಾರೆ. ಮರಳಿನ ಕಡಲತೀರದಲ್ಲಿ ಜನರು ತಮ್ಮ ವಾಹನಗಳನ್ನು ಓಡಿಸಿವ ಮತ್ತು ಆಫ್ ರೋಡ್ ಹೋಗಿ ಸಿಲಿಕಿಕೊಂಡಿರುವ ಸಾಕಷ್ಟು ವೀಡಿಯೊಗಳು ಆನ್‌ಲೈನ್‌ನಲ್ಲಿವೆ. ಅನೇಕ ವಾಹನಗಳು ಇತರ ನದಿಗಳು ಮತ್ತು ಕಾಡುಗಳಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ನಾವು ನೋಡಿದ್ದೇವೆ.

ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ಆಫ್-ರೋಡ್‌ಗೆ ಹೋಗಲು ಯೋಜಿಸುತ್ತಿದ್ದರೆ, ರೈಡ್‌ನಲ್ಲಿ ಯಾವಾಗಲೂ ತಜ್ಞರನ್ನು ಕರೆದೊಯ್ಯಲು ನಾವು ಓದುಗರಿಗೆ ಸಲಹೆ ನೀಡುತ್ತೇವೆ. ನದಿ ಅಥವಾ ಇತರ ಪರಿಸರ ವ್ಯವಸ್ಥೆಗಳಲ್ಲಿ ಚಾಲನೆ ಮಾಡುವುದು ಪ್ರಕೃತಿಗೆ ಸಾಕಷ್ಟು ಹಾನಿಕಾರಕವಾಗಿದೆ ಎಂದು ಸಹ ಗಮನಿಸಬೇಕು.

ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ಮಾರುತಿ ಜಿಪ್ಸಿ ಭಾರತದಲ್ಲಿ ಇದುವರೆಗೆ ಮಾರಾಟವಾದ ಅತ್ಯಂತ ಐಕಾನಿಕ್ ವಾಹನಗಳಲ್ಲಿ ಒಂದಾಗಿದೆ. ಎರಡನೇ ತಲೆಮಾರಿನ ಸುಜುಕಿ ಜಿಮ್ನಿಯನ್ನು ಆಧರಿಸಿ, ಇದನ್ನು ಮೊದಲು ನಮ್ಮ ಮಾರುಕಟ್ಟೆಯಲ್ಲಿ 1985 ರಲ್ಲಿ ಪರಿಚಯಿಸಲಾಯಿತು ಮತ್ತು ಇದು 2018 ರವರೆಗೆ ನಿಯಮಿತ ಉತ್ಪಾದನೆಯಲ್ಲಿ ಉಳಿಯಿತು. ಅದರ ನಂತರ, ದೇಶೀಯ ಮಾರುಕಟ್ಟೆಯಲ್ಲಿ ಇದನ್ನು ನಿಲ್ಲಿಸಲಾಯಿತು.

ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ಭಾರತದ ರಸ್ತೆಗಳಲ್ಲಿ 34 ವರ್ಷಗಳ ಕಾಲ ರಾಜನಾಗಿ ಮೆರೆದಿದ್ದ ಮಾರುತಿ ಸುಜುಕಿ ಜಿಪ್ಸಿಯನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿತ್ತು. ಮಾರುತಿ ಸುಜುಕಿ ಕಂಪನಿಯ ಈ ಜಿಪ್ಸಿ ಆಫ್ ರೋಡ್ ಪ್ರಿಯರ ಮೆಚ್ಚಿನ ಮಿನಿ ಎಸ್‍ಯುವಿಯಾಗಿತ್ತು. ಅಪಘಾತಗಳು ಸಂಭವಿಸಿದಾಗ ಹೆಚ್ಚಿನ ಪ್ರಕರಣದಲ್ಲಿ ಪ್ರಾಣ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕಾರು ಉತ್ಪಾದಕಾ ಕಂಪನಿಗಳಿಗೆ ಸೂಚಿಸಿತು.

ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ಹೊಸ ಸುರಕ್ಷತಾ ಮಾನದಂಡವನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿತು. ಕನಿಷ್ಠ ಸುರಕ್ಷತಾ ಮಾನದಂಡ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಜಿಪ್ಸಿ ಮಿನಿ ಎಸ್‍ಯುವಿಯನ್ನು ಮಾರುತಿ ಸುಜುಕಿ ಕಂಪನಿ ಕೆಲವೊಂದು ಬದಲಾವಣೆ ಮಾಡಿ ರಸ್ತೆಗೆ ಇಳಿಸಲು ಪ್ರಯತ್ನ ನಡೆಸಿತ್ತು. ಆದರೆ ಹೊಸ ರಕ್ಷಣೆ ಮತ್ತು ಕ್ರ್ಯಾಶ್ ಟೆಸ್ಟ್ ನಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಜಿಪ್ಸಿ ಕಾರಿನ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತು.

ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

1985ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿ ಬಿಡುಗಡೆಯಾಗಿತ್ತು. ಬಿಡುಗಡೆಯಾದಾಗಿನಿಂದಲೂ ಮಾರುತಿ ಸುಜುಕಿ ಜಿಪ್ಸಿ ತನ್ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ 34 ವರ್ಷಗಳ ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿತ್ತು. ಮಾರುತಿ ಜಿಪ್ಸಿಯನ್ನು ಅತಿ ಹೆಚ್ಚು ಖರೀದಿಸುತ್ತಿದ್ದ ಭಾರತೀಯ ಸೇನೆ. 2019 ರಲ್ಲಿ, ತಯಾರಕರು ಜಿಪ್ಸಿ ಉತ್ಪಾದನೆಯನ್ನು ಮರುಪ್ರಾರಂಭಿಸಿದರು, ಇದು ಭಾರತೀಯ ಸೇನೆಗೆ ಪೂರೈಸಲು ಮರುಪ್ರಾರಂಭಿಸಿದರು

ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ಮಾರುತಿ ಸುಜುಕಿ ಜಿಪ್ಸಿ ಬದಲಾಗಿ ತನ್ನ ಉತ್ತರಾಧಿಕಾರಿ ಎಂದು ಕರೆಯಬಹುದಾದ ಮಾರುತಿ ಸುಜುಕಿ ಜಿಮ್ನಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಯೋಜಿಸಿದೆ. ಮಾರುತಿ ಸುಜುಕಿ ಕಂಪನಿಯು ಜಿಮ್ನಿ ಮಿನಿ-ಎಸ್‌ಯುವಿಯನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್​ಪೋದಲ್ಲಿ ಅನಾವಣಗೊಳಿಸಿದ್ದರು. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಮಾರುತಿ ಜಿಪ್ಸಿಯಲ್ಲಿ ನದಿ ದಾಟಲು ಹೋಗಿ ಸಿಲುಕಿದ ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪ್ರವಾಸ ತೆರಳಿದ ವೇಳೆ ಪ್ರವಾಸಿಗರು ಸಾಹಸ ಮಾಡಲು ನದಿಯಲ್ಲಿ ಡ್ರೈವ್ ಮಾಡುತ್ತಾರೆ. ಹೀಗೆ ನದಿಯಲ್ಲಿ ಡ್ರೈವ್ ಮಾಡಿದರೆ ತೈಲ ಸೋರಿಕೆಯಾದರೆ ಸಸ್ಯ ಮತ್ತು ಪ್ರಾಣಿಗಳ ಜೀವಕ್ಕೆ ಹಾನಿ ಮಾಡುತ್ತದೆ. ಅನುಮೋದಿತ ಸ್ಥಳಗಳಲ್ಲಿ ಸೀಮಿತವಾಗಿ ಆಫ್-ರೋಡಿಂಗ್ ಸಾಹಸಗಳನ್ನು ಇಟ್ಟುಕೊಳ್ಳುವುದು ಉತ್ತಮ.

Most Read Articles

Kannada
English summary
Maruti gypsy get stuck in sindhu river indian army rescues tourists details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X