ಕರೋನಾ ವೈರಸ್ ಹರಡುವುದನ್ನು ತಡೆಯಲು ಕೆಮಿಕಲ್ ಟನಲ್ ಅಳವಡಿಸಿಕೊಂಡ ಮಾರುತಿ ಸುಜುಕಿ

ಕರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಸೋಂಕು ನಿವಾರಕ ದ್ರಾವಣ ಸಿಂಪಡಣಾ ಟನಲ್‌ಗಳು ಸಾಕಷ್ಟು ಸಹಕಾರಿಯಾಗುತ್ತಿದ್ದು, ಆಟೋ ಉತ್ಪಾದನಾ ಕಂಪನಿ ಮಾರುತಿ ಸುಜುಕಿ ಸಹ ತನ್ನ ಕಾರು ಉತ್ಪಾದನಾ ಘಟಕಗಳಲ್ಲಿ ಕೆಮಿಕಲ್ ಟನಲ್ ಅಳವಡಿಸಿಕೊಂಡಿದೆ.

ಕರೋನಾ ವೈರಸ್ ಹರಡುವುದನ್ನು ತಡೆಯಲು ಕೆಮಿಕಲ್ ಟನಲ್ ಅಳವಡಿಸಿಕೊಂಡ ಮಾರುತಿ ಸುಜುಕಿ

ಜನದಟ್ಟಣೆ ಹೆಚ್ಚಿರುವ ಮಾರುಕಟ್ಟೆ, ಬಸ್ ನಿಲ್ದಾಣಗಳಲ್ಲಿ ವೈರಸ್ ಹರಡುವಿಕೆ ತಡೆಯಲು ಹೆಚ್ಚಿನ ಸಂಖ್ಯೆಯ ಕೆಮಿಕಲ್ ಟನಲ್‌ಗಳನ್ನು ಅಳವಡಿಕೆ ಮಾಡಿಕೊಳ್ಳಲಾಗುತ್ತಿದ್ದು, ಇದೀಗ ಖಾಸಗಿ ಕಂಪನಿಗಳು ಸಹ ತಮ್ಮ ಉದ್ಯೋಗಿಗಳಿಗೂ ಗರಿಷ್ಠ ಸುರಕ್ಷತೆ ನೀಡುವ ಉದ್ದೇಶದಿಂದ ಕೆಮಿಕಲ್ ಟನಲ್‌ಗಳ ಮೊರೆ ಹೋಗುತ್ತಿವೆ. ಸೋಂಕು ಹರಡುವಿಕೆಯನ್ನು ತಡೆಯಲು ಇದೊಂದು ಉತ್ತಮ ಮಾರ್ಗವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಇದರ ಬಳಕೆ ಹೆಚ್ಚಾಗಬೇಕಿದೆ.

ಕರೋನಾ ವೈರಸ್ ಹರಡುವುದನ್ನು ತಡೆಯಲು ಕೆಮಿಕಲ್ ಟನಲ್ ಅಳವಡಿಸಿಕೊಂಡ ಮಾರುತಿ ಸುಜುಕಿ

ವೈರಸ್ ತಡೆಯಲು ಲಾಕ್‌ಡೌನ್ ಹಾಕಲಾಗಿದ್ದರೂ ಅಗತ್ಯ ವಸ್ತುಗಳ ಖರೀದಿಗಾಗಿ ಹೊರಗೆ ಬರಲೇಬೇಕಾದ ಸಂದರ್ಭಗಳಲ್ಲಿ ಜನಸಂದಣಿ ಉಂಟಾಗಬಹುದಾದ ಪ್ರದೇಶಗಳಲ್ಲಿ ಇಂತಹ ಸೌಲಭ್ಯಗಳ ಬಳಕೆಯು ಉತ್ತಮವಾಗಿದ್ದು, ಇದೀಗ ಖಾಸಗಿ ಕಂಪನಿಗಳು ಇದನ್ನು ಅಳವಡಿಸಿಕೊಳ್ಳುತ್ತಿವೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಇನ್ನು ಕರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿವೆ.

ಕರೋನಾ ವೈರಸ್ ಹರಡುವುದನ್ನು ತಡೆಯಲು ಕೆಮಿಕಲ್ ಟನಲ್ ಅಳವಡಿಸಿಕೊಂಡ ಮಾರುತಿ ಸುಜುಕಿ

ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಯ ಜೊತೆಗೆ ಧನಸಹಾಯವನ್ನು ಕೂಡಾ ಮಾಡುತ್ತಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಕರೋನಾ ವೈರಸ್ ಹರಡುವುದನ್ನು ತಡೆಯಲು ಕೆಮಿಕಲ್ ಟನಲ್ ಅಳವಡಿಸಿಕೊಂಡ ಮಾರುತಿ ಸುಜುಕಿ

ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧದ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ.

ಕರೋನಾ ವೈರಸ್ ಹರಡುವುದನ್ನು ತಡೆಯಲು ಕೆಮಿಕಲ್ ಟನಲ್ ಅಳವಡಿಸಿಕೊಂಡ ಮಾರುತಿ ಸುಜುಕಿ

ಇದರಲ್ಲಿ ಮಾರುತಿ ಸುಜುಕಿ ಕಂಪನಿಯು ಸಹ ಪ್ರಮುಖವಾಗಿದ್ದು, ತನ್ನ ಸಹಭಾಗಿತ್ವದ ಸಂಸ್ಥೆಗಳ ಜೊತೆಗೂಡಿ ವೈದ್ಯಕೀಯ ಉಪಕರಣಗಳ ಜೊತೆಗೆ ಸಾಮಾಜಿಕ ಸೇವೆಯನ್ನು ನಿರ್ವಹಣೆ ಮಾಡುತ್ತಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಕರೋನಾ ವೈರಸ್ ಹರಡುವುದನ್ನು ತಡೆಯಲು ಕೆಮಿಕಲ್ ಟನಲ್ ಅಳವಡಿಸಿಕೊಂಡ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಅದರ ಸಹಭಾಗಿತ್ವದ ಸಂಸ್ಥೆಯಾದ ಕೃಷ್ಣಾ ಮಾರುತಿಯು ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಸರ್ಕಾರದ ಕೈಜೋಡಿಸಿದ್ದು, ಉಚಿತವಾಗಿ 10 ಲಕ್ಷ ಮಾಸ್ಕ್‌ಗಳನ್ನು ಉತ್ಪಾದನೆ ಮಾಡಿ ವಿತರಣೆಗೆ ಚಾಲನೆ ನೀಡಿದೆ.

ಕರೋನಾ ವೈರಸ್ ಹರಡುವುದನ್ನು ತಡೆಯಲು ಕೆಮಿಕಲ್ ಟನಲ್ ಅಳವಡಿಸಿಕೊಂಡ ಮಾರುತಿ ಸುಜುಕಿ

ಕಾರು ಸೀಟ್ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಕೃಷ್ಣಾ ಮಾರುತಿಯು ಮಾರುತಿ ಸುಜುಕಿ ಕಂಪನಿಯ ಸಹಭಾಗಿತ್ವದ ಸಂಸ್ಥೆಯಾಗಿದ್ದು, ಕರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಮಾಸ್ಕ್ ಉತ್ಪಾದನೆ ಮಾಡಿಕೊಡುವುದಾಗಿ ಹೇಳಿತ್ತು. ಇದೀಗ ಮಾಸ್ಕ್ ಉತ್ಪಾದನೆಗೆ ಚಾಲನೆ ನೀಡಿರುವುದಲ್ಲದೆ ಸುಮಾರು 2 ಲಕ್ಷ ಮಾಸ್ಕ್‌ಗಳನ್ನು ಹರಿಯಾಣದ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ವಿತರಣೆ ಮಾಡಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಕರೋನಾ ವೈರಸ್ ಹರಡುವುದನ್ನು ತಡೆಯಲು ಕೆಮಿಕಲ್ ಟನಲ್ ಅಳವಡಿಸಿಕೊಂಡ ಮಾರುತಿ ಸುಜುಕಿ

ಇನ್ನುಳಿದ ಮಾಸ್ಕ್‌ಗಳನ್ನು ಸದ್ಯ ಉತ್ಪಾದನೆ ಪೂರ್ಣಗೊಳಿಸುತ್ತಿದ್ದು, ದಿನಂಪ್ರತಿ 50 ಸಾವಿರ ಮಾಸ್ಕ್‌ಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಜೊತೆಗೆ ವೆಂಟಿಲೆಟರ್‌ಗಳನ್ನು ಸಹ ಉತ್ಪಾದನೆ ಮಾಡುತ್ತಿರುವ ಮಾರುತಿ ಸುಜುಕಿ ಕಂಪನಿಯು ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ಸರ್ಕಾರದ ಪ್ರಯತ್ನಕ್ಕೆ ಸಾಕಷ್ಟು ಸಹಕಾರ ನೀಡುತ್ತಿದೆ.

Most Read Articles

Kannada
English summary
Maruti Suzuki Installs Disinfectant Walk-Through Pathways At Manesar & Gurugram Facilities. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more