ಮಾರಾಟದಲ್ಲಿ ವಿಫಲಗೊಂಡರೂ ಪೊಲೀಸರ ಮನೆಗೆದ್ದ ರಣಬೇಟೆಗಾರ ಮಾರುತಿ ಜಿಮ್ನಿ: ಅಂತಹದ್ದೇನಿದೆ?
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜಿಮ್ನಿ ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಕ್ರಾಂತಿಯನ್ನು ಸೃಷ್ಟಿಸಿತು. ಭಾರತೀಯ ಮಾರುಕಟ್ಟೆಯಲ್ಲೂ ಈ ಎಸ್‍ಯುವಿ ಕ್ರಾಂತಿ ಮಾಡಬಹುದು ಎಂದು ಎಲ್ಲಾರೂ ತಿಳಿದುಕೊಂಡಿದ್ದರು. ಆದರೆ ಎದುರಾಳಿ ಮಹೀಂದ್ರಾ ಥಾರ್ ಮುಂದೆ ಇದು ಮಂಕಾಗಿದೆ. ಮಾರಾಟದಲ್ಲಿ ಮಾರುತಿ ಜುಮ್ನಿ ಕುಸಿತವನ್ನು ಕಾಣುತ್ತಿದೆ. ಈ ಮಾರುತಿ ಜಿಮ್ಮಿ ಮಾದರಿಯು ಒಂದು ಕಾಲದ ಆಫ್-ರೋಡ್ ಕಿಂಗ್ ಆಗಿದ್ದ ಜಿಪ್ಸಿಯ ಉತ್ತರಾಧಿಕಾರಿಯಾಗಿ ಬಂದು ಭಾರತೀಯ ವಾಹನ ಪ್ರೇಮಿಗಳ ಮನ ಗೆಲ್ಲುವಲ್ಲಿ ದೊಡ್ದ ಮಟ್ಟದ ಯಶಸ್ವಿಯಾಗಿಲ್ಲ. ಅದರೂ ಇದರ ಭರ್ಜರಿ ಪರ್ಫಾಮೆನ್ಸ್ ನಿಂದ ಕೆಲವು ಆಫ್-ರೋಡ್ ಪ್ರಿಯರ ಮನೆಗೆದ್ದಿದೆ.
ರಣಬೇಟೆಗಾರ ಮಾರುತಿ ಜಿಮ್ನಿ ಯಾವುದೇ ರಸ್ತೆಯಲ್ಲಿ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಬಳಸಲು ಪರಿಪೂರ್ಣ ವಾಹನ ಎಂಬುದರಲ್ಲಿ ಸಂದೇಹವಿಲ್ಲ. ನಗರದಲ್ಲಿರಲಿ, ಬೆಟ್ಟ-ಗುಡ್ಡಗಳನ್ನು ಹತ್ತುವ ಜಿಮ್ನಿಯ ಸಾಮರ್ಥ್ಯವೇ ಬೇರೆ. ಇದನ್ನು ಅರ್ಥಮಾಡಿಕೊಳ್ಳುವ ಪ್ರತಿಯೊಬ್ಬರೂ ಈಗಾಗಲೇ ವಾಹನವನ್ನು ಹೊಂದಿದ್ದಾರೆ. ಮಾರುತಿ ಸುಜುಕಿಯ ಆಫ್ ರೋಡರ್ ಅನ್ನು ಇದೀಗ ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸರ್ಕಾರ ಜಿಮ್ನಿಯನ್ನು ಹೈರೇಂಜ್ ಪೊಲೀಸ್ ಪಡೆಗೆ ಹಸ್ತಾಂತರಿಸಿದೆ.

ಇಡುಕ್ಕಿ ರಾಜಕ್ಕಾಡ್ ಪೊಲೀಸ್ ಠಾಣೆಗೆ ಹೊಸ ಅತಿಥಿಯಾಗಿ ಮಾರುತಿ ಜಿಮ್ನಿ ಎಸ್‍ಯುವಿಯು ಆಗಮಿಸಿದ್ದಾರೆ. ಇದೀಗ ಅದರ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಗ್ರಾನೈಟ್ ಗ್ರೇ ಬಣ್ಣದ ಜಿಮ್ನಿ ಎಸ್‍ಯುವಿಯು ಆಲ್ಫಾ ಟಾಪ್-ಎಂಡ್ ರೂಪಾಂತರವು ಪೋಲೀಸ್ ಫೋರ್ಸ್ ಜೊತೆಯಲ್ಲಿ ಆಗಮಿಸಿದೆ. ಈ ಹಿಂದೆ ಜಿಪ್ಸಿಯನ್ನು ಹಲವಾರು ರಾಜ್ಯಗಳಲ್ಲಿ ಪೊಲೀಸರು ಮತ್ತು ಸಶಸ್ತ್ರ ಪಡೆಗಳು ಬಳಸುತ್ತಿದ್ದರು
ಇದೀಗ ಜಿಮ್ನಿ ಆ ಸ್ಥಾನಕ್ಕೆ ಬಂದಿದೆ. ಪವರ್ ಸ್ಟೀರಿಂಗ್ ಮತ್ತು ಎಸಿ ಇಲ್ಲದ ಬೇಸ್ ಮಾಡೆಲ್ ವಾಹನಗಳಿಂದ ಹಿಡಿದು ಫುಲ್ ಆಪ್ಶನ್ ಜಿಮ್ನಿವರೆಗೆ, ರಾಜಾಕ್ಕಾಡ್ ಪೊಲೀಸ್ ಠಾಣೆಯಲ್ಲಿ ಹೊಸ ವಾಹನದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ಹಿಂದೆ, ನಟ ಗುಡ್ಡಗಾಡು ಪ್ರದೇಶದಲ್ಲಿ ಪೊಲೀಸರು ಪೋರ್ಸ್ ಗೂರ್ಖಾ ಎಸ್‍ಯುವಿಯನ್ನು ಹೊಂದಿದ್ದರು. ಲೈಫ್ ಸ್ಟೈಲ್ ಆಫ್-ರೋಡರ್, ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ದೇಶದ ಅತ್ಯಂತ ಸಮರ್ಥ ಆಫ್-ರೋಡರ್‌ಗಳಲ್ಲಿ ಒಂದು ಎಂದು ಸಾಬೀತಾಗಿದೆ.

ಆಫ್-ರೋಡ್ ವಾಹನಗಳ ಪ್ರೇಮಿಗಳು ಈ ಜಿಮ್ನಿ ಎಸ್‍ಯುವಿಯನ್ನು ಖರೀದಿಸುತ್ತಿದ್ದಾರೆ. ಮಾರುತಿ ಸುಜುಕಿ ಜಿಮ್ನಿಯನ್ನು ಪ್ರತಿಸ್ಪರ್ಧಿಗಳಾದ ಥಾರ್ ಮತ್ತು ಗೂರ್ಖಾಗೆ ಹೋಲಿಸಿದರೆ ಡ್ರೈವ್ ಮಾಡಲು ಹೆಚ್ಚು ಸುಲಭವಾಗಿದೆ. ಈ ಮಾರುತಿ ಜಿಮ್ನಿ ಕಾಂಪ್ಯಾಕ್ಟ್ ಆಯಾಮಗಳನ್ನು ಹೊಂದಿದೆ. ಇದು ಗರಿಷ್ಠ ಟ್ರಾಫಿಕ್ ಸಮಯದಲ್ಲಿ ಚಾಲನೆ ಮಾಡಲು ಸುಲಭ. ರಸ್ತೆಯಲ್ಲಿ ಕಡಿಮೆ ಜಾಗ ಸಾಕಾಗುತ್ತದೆ.
ಅದರ ಹೊರತಾಗಿ, ಜಿಮ್ನಿಯು ಕುಶಲತೆಯಿಂದ ಕಂಟ್ರೋಲ್ ಮಾಡಲು ತುಂಬಾ ಸುಲಭವಾಗಿದೆ. ಏಕೆಂದರೆ ಇದು ತೂಕದಲ್ಲಿ ಹೆಚ್ಚು ಹಗುರವಾಗಿರುತ್ತದೆ. ಅದಕ್ಕಾಗಿಯೇ ಥಾರ್‌ಗೆ ಹೋಲಿಸಿದರೆ ಜಿಮ್ನಿ ದೈನಂದಿನ ಬಳಕೆ ಮತ್ತು ಪ್ರಯಾಣಕ್ಕೆ ಹೆಚ್ಚು ಪ್ರಾಯೋಗಿಕವಾಗಿದೆ. ಈ ಮಾರುತಿ ಜಿಮ್ನಿ ಎಸ್‍ಯುವಿಯಲ್ಲಿ ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ.
ಜೊತೆಗೆ ಇದರ ಫ್ರಂಟ್ ಲುಕ್ ನೋಡುಗರನ್ನು ಸೆಳೆಯುತ್ತದೆ. ರೇರ್ ಆಕರ್ಷವಾಗಿದೆ. ಕ್ಯಾಬಿನ್ ಒಳಭಾಗವು ಅತ್ಯುತ್ತಮವಾಗಿದೆ. ಮಾರುತಿ ಸುಜುಕಿ ಜಿಮ್ನಿ 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ. ಜಿಮ್ನಿ 5 ಡೋರ್ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಹೊಂದಿದೆ.
ಇದರೊಂದಿಗೆ ಆಟೋಮ್ಯಾಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಹಾಗೂ ಕಿವಿಗೆ ಕೇಳಲು ಹಿತವಾಗಿರುವ ಸೌಂಡ್ ಸಿಸ್ಟಮ್ ಹೊಂದಿದೆ. 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಮಾರುತಿ ಜಿಮ್ನಿಯಲ್ಲಿ ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದೆ.
ಈ ಎಂಜಿನ್ 104.8 ಪಿಎಸ್ ಪವರ್ ಹಾಗೂ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೀಡಿದೆ. ಇನ್ನು ಈ ಎಸ್‍ಯುವಿಯ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಸೈಡ್ ಇಂಪ್ಯಾಕ್ಟ್ ಡೋರ್ ಬೀಮ್ಸ್ ಅನ್ನು ಹೊಂದಿದೆ.


Click it and Unblock the Notifications








