ಎಮ್ಮೆಗಳಿಗೆ ಮಾರುತಿ ಕಾರ್‌ ಡಿಕ್ಕಿ: ತಪ್ಪಿಲ್ಲದಿದ್ರೂ 25 ಸಾವಿರಕ್ಕೆ ಡಿಮ್ಯಾಂಡ್ ಇಟ್ಟ ಎಮ್ಮೆ ಮಾಲೀಕ

ಭಾರತದ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಒಂದು ದೊಡ್ಡ ಸಾವಲು. ಎಲ್ಲಾರಿಗೂ ಸಮಯ ಇಲ್ಲದ ರೀತಿಯಲ್ಲಿ ದುಡುಕಿ ವೇಗವಾಗಿ ಡ್ರೈವಿಂಗ್ ಮಾಡುತ್ತಾರೆ. ಕಾರ್ ಅನ್ನು ನಿಧಾನ ಮಾಡಲು ಸಿಟ್ಟಿನಿಂದಲೇ ನಿಧಾನ ಮಾಡುತ್ತಾರೆ. ರಸ್ತೆಗಳು ಸ್ಥಿತಿಯು ಸುಧಾರಣೆ ಕಾಣುತ್ತಿದ್ದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅಜಾಗರೂಕ ಅಥವಾ ಅತಿವೇಗದ ಚಾಲನೆಯ ಇಂತಹ ಅಪಘಾತಗಳಿಗೆ ಕಾರಣವಾಗಿವೆ.

ಇನ್ನು ಭಾರತದಲ್ಲಿ ಹೆದ್ದಾರಿಗಳಲ್ಲಿ ಪ್ರಾಣಿಗಳು ಕಾಣ ಸಿಗುವುದು ಸಾಮಾನ್ಯ ದೃಶ್ಯವಾಗಿದೆ. ವಾಹನ ಚಾಲಕರಿಗೆ ಈ ಪ್ರಾಣಿಗಳು ಅಪಾಯವನ್ನುಂಟುಮಾಡುತ್ತದೆ. ಭಾರತದ ರಸ್ತೆಗಳಲ್ಲಿ ಹೆಚ್ಚಾಗಿ ಕುರಿ ಮತ್ತು ಧನಗಳು ಹೆಚ್ಚಾಗಿ ಕಾಣಸಿಸುತ್ತದೆ. ಇನ್ನು ಪ್ರಾಣಿಗಳಿಗೆ ಡಿಕ್ಕಿ ಹೊಡೆದು ವಾಹನಗಳಿಗೆ ಗಣನೀಯ ಹಾನಿಯಾಗಿರುವ ಹಲವಾರು ಘಟನೆಗಳು ನಡೆದಿದೆ. ಅದೇ ರೀತಿ ಇತ್ತೀಚೆಗೆ ಹೆದ್ದಾರಿಯ ಮಧ್ಯದಲ್ಲಿ ಎಲ್ಲಿಂದಲೋ ಬಂದ ಎಮ್ಮೆಗಳಿಗೆ (Buffalo) ಮಾರುತಿ ಸುಜುಕಿ ಎಸ್-ಕ್ರಾಸ್ ಡಿಕ್ಕಿ ಹೊಡೆದಿದೆ.

Maruti Suzuki S-Cross Hits Buffalo

ಪ್ರತೀಕ್ ಸಿಂಗ್ ಅವರ ಯೂಟ್ಯೂಬ್ ಚಾನೆಲ್ ಅಪಘಾತದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಾರುತಿ ಸುಜುಕಿ ಎಸ್-ಕ್ರಾಸ್ (Maruti Suzuki S-Cross) ಹೆದ್ದಾರಿಯ ಹೋಗುವಾಗ ಸಡನ್ ಎಮ್ಮೆಗಲ್ಳ ಗುಂಪು ಅಡ್ಡ ಬರುತ್ತದೆ. ಈ ಸಂದರ್ಭದಲ್ಲಿ ಮಾರುತಿ ಕಾರ್ ಎಮ್ಮೆಗೆ ಡಿಕ್ಕಿ ಹೊಡೆದಿದೆ. ವೀಡಿಯೋದಲ್ಲಿ ತೋರಿಸಿರುವ ಘಟನೆಯನ್ನು ಎಸ್-ಕ್ರಾಸ್ ಮಾಲೀಕರು ವರದಿ ಮಾಡಿದ್ದಾರೆ, ಅವರು ಕೇರಳದಿಂದ ಪುರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 16 ರಲ್ಲಿ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಎಮ್ಮೆಗೆ ಡಿಕ್ಕಿ ಹೊಡೆದಿದ್ದಾರೆ.

ಏಕಾಏಕಿ ಎಮ್ಮೆಗಳ ಹಿಂಡು ಕಾಣಿಸಿಕೊಂಡಿದ್ದರಿಂದ ಎಸ್-ಕ್ರಾಸ್ ಚಾಲಕ ತ್ವರಿತವಾಗಿ ನಿಯಂತ್ರಿಸಲು ಸಾಧ್ಯವಾಗದೆ ಹೆದ್ದಾರಿಯಲ್ಲಿದ್ದ ಎಮ್ಮೆಗಳಿಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ಪರಿಣಾಮವಾಗಿ, ಎಮ್ಮೆ ಸ್ಥಳದಲ್ಲೇ ಸಾವನ್ನಪ್ಪಿದೆ ಮತ್ತು ಎಸ್-ಕ್ರಾಸ್ ಮುಂಭಾಗದ ಬಂಪರ್, ಮುಂಭಾಗದ ವಿಂಡ್ ಶೀಲ್ಡ್, ಬಲಭಾಗದ ಹೆಡ್‌ಲ್ಯಾಂಪ್, ಮುಂಭಾಗದ ಫೆಂಡರ್ ಮತ್ತು ಎ-ಪಿಲ್ಲರ್‌ಗೆ ಹಾನಿಯಾಗಿದೆ.

Maruti Suzuki S-Cross Hits Buffalo

ಡಿಕ್ಕಿ ಹೊಡೆದ ನಂತರ ಎಮ್ಮೆಯ ಮಾಲೀಕರು ತನ್ನ ಎಮ್ಮೆ ಸಾವಿಗೆ ಎಸ್-ಕ್ರಾಸ್ ಮಾಲೀಕರಿಗೆ 25 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿದರು. ಆತನ ಅಚ್ಚರಿಗೆ, ಸ್ಥಳೀಯ ಪೊಲೀಸರು ಸಹ ಎಸ್-ಕ್ರಾಸ್ ಮಾಲೀಕರಿಂದ 10,000 ರೂ.ಗಳನ್ನು ಕೊಡಲು ಕೇಳಿದರು. ಆದರೆ ಸ್ಥಳೀಯ ಪೊಲೀಸರಿಗೆ ಯಾವುದೇ ಹಣವನ್ನು ಪಾವತಿಸಲು ನಿರಾಕರಿಸಿದರು.

ಇದು ಆಶ್ಚರ್ಯಕರ ಸಂಗತಿಯಾಗಿದೆ ಏಕೆಂದರೆ ಸ್ಥಳೀಯ ಪೊಲೀಸರು ಎಸ್-ಕ್ರಾಸ್ ಚಾಲಕನನ್ನು ಬೆಂಬಲಿಸಲಿಲ್ಲ, ಅಪಘಾತದ ವೀಡಿಯೊ ಪುರಾವೆಗಳು ಅವನ ಕಾರಿನಲ್ಲಿರುವ ಡ್ಯಾಶ್‌ಕ್ಯಾಮ್‌ನಲ್ಲಿ ದಾಖಲಾಗಿದ್ದರೂ ಸಹ. ಈ ಘಟನೆಯು ಕೆಲವು ವಿಷಯಗಳನ್ನು ಎತ್ತಿ ತೋರಿಸುತ್ತದೆ. ಮೊದಲನೆಯದಾಗಿ, ಹೆಚ್ಚಿನ ವೇಗದ ಹೆದ್ದಾರಿಗಳಲ್ಲಿನ ಅಪಘಾತಗಳು ಯಾವಾಗಲೂ ವಾಹನ ಚಾಲಕರ ತಪ್ಪು ಅಲ್ಲ. ಕೆಲವೊಮ್ಮೆ, ನಿಯಂತ್ರಿಸಲಾಗದ ಸಂದರ್ಭಗಳು ಯಾರ ನಿಯಂತ್ರಣಕ್ಕೂ ಮೀರಿದ ಇಂತಹ ಅಪಘಾತಗಳಿಗೆ ಕಾರಣವಾಗುತ್ತವೆ.

Maruti Suzuki S-Cross Hits Buffalo

ಎರಡನೆಯದಾಗಿ, ಸ್ಥಳೀಯ ಪೊಲೀಸರು ಅಂತಹ ಅನಿಯಂತ್ರಿತ ಸಂದರ್ಭಗಳಲ್ಲಿ ಒಂದು ಕಡೆ ಕುರುಡಾಗಿ ಬೆಂಬಲಿಸುವ ಬದಲು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸುವ ಮೂಲಕ ಕಡಿಮೆ ತಪ್ಪು ಇರುವ ಕಡೆಯನ್ನು ಬೆಂಬಲಿಸಬೇಕು. ಮತ್ತು ಮೂರನೆಯದಾಗಿ, ಈ ಅಪಘಾತವು ವಾಹನದಲ್ಲಿ ಡ್ಯಾಶ್‌ಕ್ಯಾಮ್ ಅನ್ನು ಹೊಂದುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ, ಇದು ಈ ರೀತಿಯ ಅಪಘಾತಗಳಲ್ಲಿ ಪುರಾವೆಗಳನ್ನು ಒದಗಿಸಲು ವರದಾನವಾಗಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಬಗ್ಗೆ ಹೇಳುವುದಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಎಸ್-ಕ್ರಾಸ್ ಕಾರನ್ನು ಬೇಡಿಕೆ ಕುಸಿತ ಕಾರಣ ಸ್ಥಗಿತಗೊಳಿಸಿದೆ. ಈ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ಗಳನ್ನು ಹೊಂದಿತ್ತು. ಈ ವೈಶಿಷ್ಟ್ಯಗಳಲ್ಲಿ ಕೆಲವು ಕ್ರೂಸ್ ಕಂಟ್ರೋಲ್, ವ್ಯಾನಿಟಿ ಮಿರರ್‌ಗಳಲ್ಲಿ ದೀಪಗಳು, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿವೆ.

ಅಲ್ಲದೆ, ಈ ಮಾರುತಿ ಸುಜುಕಿ ಎಸ್-ಕ್ರಾಸ್ ಸಾಂಪ್ರದಾಯಿಕ ಮಾರುತಿಯಂತೆ ಇರಲಿಲ್ಲವಾದ್ದರಿಂದ, ಈ ಕ್ರಾಸ್ ಹೆಚ್ಚು ಬೆಲೆಯೂ ಸಹ ಇತ್ತು. ಇದನ್ನು ಪ್ರಾರಂಭಿಸಿದಾಗ, ಇಂದಿನವರೆಗೂ, ಎಸ್-ಕ್ರಾಸ್ ಅದರ ಸಾಲಿನಲ್ಲಿ ಅತ್ಯಂತ ದುಬಾರಿ ಉತ್ಪನ್ನವಾಗಿದೆ. ಅದರೊಂದಿಗೆ, ಬೆಲೆ ಮತ್ತು ತಾಂತ್ರಿಕ ವಿಶೇಷಣಗಳು (ಆಯಾಮಗಳನ್ನು ಹೊರತುಪಡಿಸಿ) ಮಾರುತಿ ಸುಜುಕಿ ವಿಟಾರಾ ಬ್ರೆಝಾದೊಂದಿಗೆ ಹೊಂದಿಕೆಯಾಗುತ್ತವೆ. ಮತ್ತು ಈ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿ ಎಸ್-ಕ್ರಾಸ್‌ಗಿಂತ ಉತ್ತಮ ಬೇಡಿಕೆಯನ್ನು ಹೊಂದಿದೆ.

Article Published On: Thursday, October 5, 2023, 8:30 [IST]
English summary
Maruti suzuki s cross collided with buffalo importance of dashcam in car details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+