4.5 ಕೋಟಿ ರೂ. ಬೆಲೆಯ SUV ಭೀಕರ ಅಪಘಾತ: ದುಬಾರಿ ವಾಹನ ಅಲ್ಲೇ ಬಿಟ್ಟು ಚಾಲಕ ಪರಾರಿ
ದುಬಾರಿ ಮರ್ಸಿಡಿಸ್ - AMG G63 SUV ಒಂದು ಹೆಚ್ಚಿನ ವೇಗದಲ್ಲಿ ಕಾರಿಡಾರ್‌ನ ಗಾರ್ಡ್‌ರೈಲ್‌ಗಳಿಗೆ ಡಿಕ್ಕಿಹೊಡೆದ ಘಟನೆ ಗುಜರಾತ್‌ನ ಅಹಮದಾಬಾದ್ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ನಡೆದಿದೆ. ಕಾರಿನಲ್ಲಿ ಚಾಲಕನೊಬ್ಬನೆ ಇದ್ದ ಎನ್ನಲಾಗಿದ್ದು, ಕಾರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯ ಮಾದ್ಯಮಗಳಿಂದ ವರದಿಯಾಗಿದೆ.
ತಡರಾತ್ರಿ ಈ ಅವಘಡ ಸಂಭವಿಸಿದೆ. ಘಟನೆಯ ನಿರ್ದಿಷ್ಟ ವಿವರಗಳು ಲಭ್ಯವಿಲ್ಲದಿದ್ದರೂ, ಅತಿಯಾದ ವೇಗದಿಂದ ವಾಹನ ನಿಯಂತ್ರಣ ಕಳೆದುಕೊಂಡು ಘಟನೆ ಸಂಭವಿಸಿದೆ. ಜಿ - ವ್ಯಾಗನ್ ಮುಂಭಾಗಕ್ಕೆ ತೀವ್ರ ಹಾನಿಯಾಗಿದ್ದು, ಬಾನೆಟ್‌ಗೆ ಹೆಚ್ಚಿನ ಹಾನಿಯಾಗಿಲ್ಲ. ಆದರೆ ಮುಂಭಾಗಕ್ಕೆ ಗಮನಾರ್ಹ ಹಾನಿಗಳಿವೆ. ಪಿಲ್ಲರ್‌ಗಳು ಹಾನಿಯಾಗದಂತೆ ಗೋಚರಿಸುತ್ತಿದ್ದು, ವಿಂಡ್‌ಶೀಲ್ಡ್ ಬಿರುಕು ಬಿಟ್ಟಿರುವುದನ್ನು ಅಪಘಾತದ ನಂತರ ಚಿತ್ರಿಸಲಾದ ವಿಡಿಯೋಗಳಲ್ಲಿ ಕಂಡುಬಂದಿದೆ.

ಜಿ ವ್ಯಾಗನ್ ಆತ್ಯಾಧುನಿಕ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಹೊಂದಿದೆಯಾದರೂ, ನಿಯಂತ್ರಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಸಾಮಾನ್ಯವಾಗಿ SUV ಗಳು, ಸೆಡಾನ್ ಅಥವಾ ಹ್ಯಾಚ್‌ಬ್ಯಾಕ್‌ಗಳಿಗೆ ಹೋಲಿಸಿದರೆ ಅವುಗಳ ಎತ್ತರದ ಆಕಾರದಿಂದ ಹೆಚ್ಚಿನ ಗುರುತ್ವಾಕರ್ಷಣೆಯ ಕೇಂದ್ರದಿಂದಾಗಿ, ಕಡಿಮೆ ಸ್ಥಿರತೆಯನ್ನು ಹೊಂದಿರುತ್ತವೆ. ಹಾಗಾಗಿ SUV ಗಳನ್ನು ಚಾಲನೆ ಮಾಡುವಾಗ ಎಚ್ಚರಿಕೆಯನ್ನು ವಹಿಸಬೇಕು.
ವಿಶೇಷವಾಗಿ ಹೆಚ್ಚಿನ ವೇಗದಲ್ಲಿ, ಅವುಗಳು ನಿಯಂತ್ರಣವನ್ನು ಕಳೆದುಕೊಳ್ಳುವ ಮತ್ತು ಟಿಪ್ಪಿಂಗ್‌ಗೆ ಹೆಚ್ಚು ಒಳಗಾಗುತ್ತವೆ. G63 AMG ಅಸಾಧಾರಣವಾದ ವೇಗದ ವಾಹನವಾಗಿದ್ದು, 4.0-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ 577 PS ಪವರ್ ಮತ್ತು 850 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5 ಸೆಕೆಂಡುಗಳಲ್ಲಿ 100 Kph ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಹೆಚ್ಚಿನ ಗುರುತ್ವಾಕರ್ಷಣೆಯ ಕೇಂದ್ರವನ್ನು ಹೊಂದಿರುವ ಇತರ SUV ಗಳಂತೆ, ಇದು ಕೂಡ ತ್ವರಿತ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಿಲ್ಲ. ಇದಲ್ಲದೆ, ಈ ದೊಡ್ಡ SUV ಗಳು ಭಾರವಾಗಿರುತ್ತವೆ. ನಿಧಾನಗೊಳಿಸಲು ಹೆಚ್ಚಿನ ಸಮಯದ ಅಗತ್ಯವಿರುತ್ತದೆ. G63 AMG ಅತ್ಯುತ್ತಮ ಬ್ರೇಕ್‌ಗಳನ್ನು ಹೊಂದಿದ್ದರೂ, ಹೆಚ್ಚಿದ ತೂಕ ಮತ್ತು ಎತ್ತರದಿಂದಾಗಿ ಕೂಡಲೇ ನಿಯಂತ್ರಕ್ಕೆ ಬರುವುದಿಲ್ಲ.
5-ಸ್ಟಾರ್ ರೇಟಿಂಗ್: Mercedes Benz G - class (G - Wagon) ಗ್ಲೋಬಲ್ ಎನ್‌ಸಿಎಪಿನಿಂದ ಪಂಚತಾರಾ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. G - ಕ್ಲಾಸ್ ಅನ್ನು G 350d, G 500, ಮತ್ತು G 63 ರೂಪಾಂತರಗಳು ಮತ್ತು ಎಡ ಮತ್ತು ಬಲಗೈ ಡ್ರೈವ್ ಕಾನ್ಫಿಗರೇಶನ್‌ಗಳನ್ನು ಒಳಗೊಂಡಂತೆ ವಿವಿಧ ಕಾನ್ಫಿಗರೇಶನ್‌ಗಳಲ್ಲಿ ಪರೀಕ್ಷಿಸಲಾಗಿದೆ.

ಇದು ವಯಸ್ಕರ ರಕ್ಷಣೆಯಲ್ಲಿ ಶೇ90, ಮಕ್ಕಳ ಸುರಕ್ಷತೆಯಲ್ಲಿ ಶೇ83 ಮತ್ತು ವಾಹನ ಸುರಕ್ಷತೆಯಲ್ಲಿ ಶೇ72 ರಷ್ಟು ಅಂಕಗಳನ್ನು ಗಳಿಸಿದೆ. ಪರೀಕ್ಷಿತ SUV ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB) ಮತ್ತು ವೇಗ ಎಚ್ಚರಿಕೆ/ಸೀಮಿತ ವ್ಯವಸ್ಥೆಯನ್ನು ಪ್ರಮಾಣಿತವಾಗಿ ಅಳವಡಿಸಿಕೊಂಡಿದೆ. ಜಿ-ಕ್ಲಾಸ್‌ನ ಇತರ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಮುಂಭಾಗ, ಬದಿ ಮತ್ತು ಮೊಣಕಾಲು ಏರ್‌ಬ್ಯಾಗ್‌ಗಳು, ಸೀಟ್ ಬೆಲ್ಟ್ ಪ್ರಿಟೆನ್ಷನರ್‌ಗಳು, ಲೇನ್ ಅಸಿಸ್ಟ್ ಸಿಸ್ಟಮ್ ಮತ್ತು ಎಬಿಎಸ್ ಕೂಡ ಸೇರಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications