ಬ್ರೇಕ್ ಬದಲು ಆಕ್ಸಿಲರೇಟರ್ ಒತ್ತಿದ ಗ್ರಾಹಕ... ಹೊಚ್ಚ ಹೊಸ ಶೋರೂಂ ಕಾರಿಗೆ ಅಪಘಾತ
ಜನರು ತಮ್ಮ ಕನಸಿನ ಕಾರನ್ನು ಡೀಲರ್‌ಶಿಪ್ ಒಳಗೆ ನೋಡಿದಾಗ ತುಂಬಾ ಉತ್ಸುಕರಾಗುವುದು ಸಾಮಾನ್ಯ ಸಂಗತಿ. ಆದ್ರೆ ಈಗ ಮೊದಲಿನಂತಲ್ಲ, ಹೊಸ ಕಾರುಗಳು ನಮಗೆ ತಿಳಿಯದ ಅದೆಷ್ಟೋ ಫೀಚರ್‌ಗಳನ್ನು ಹೊಂದಿರುತ್ತವೆ. ತಿಳಿಯದ ಬಟನ್‌ಗಳನ್ನು ಅಥವಾ ಪೆಡಲ್‌ಗಳನ್ನು ಒತ್ತಿದ್ರೆ ಅನಾಹುತಗಳಿಗೆ ಕಾರಣವಾಗಬಹುದು. ಇದಕ್ಕೆ ಉತ್ತಮ ಉದಾಹರಣೆಯಾಗಿ ಇತ್ತೀಚೆಗೆ ಎಂಜಿ ಡೀಲರ್‌ಶಿಪ್ ಒಳಗೆ ನಡೆದ ಘಟನೆಯೇ ಸಾಕ್ಷಿಯಾಗಿದೆ. ಶೋರೂಂ ಒಳಗೆ ನಿಲ್ಲಿಸಿದ್ದ ಎಂಜಿ ಹೆಕ್ಟರ್ ಎಸ್‌ಯುವಿಯನ್ನು ಪರಿಶೀಲಿಸುತ್ತಿದ್ದ ಗ್ರಾಹಕರೊಬ್ಬರು ಆಕ್ಸಿಲರೇಟರ್ ತುಳಿಯುತ್ತಿದ್ದಂತೆ ಗಾಜು ಒಡೆದು ಕಾರು ಹೊರಗೆ ನುಗ್ಗಿದೆ. ಈ ಕುರಿತ ವಿಡಿಯೋ ಸದ್ಯ ವೈರಲ್ ಆಗಿದೆ.
ತೆಲಂಗಾಣ ರಾಜ್ಯದ ಕರೀಂನಗರದಲ್ಲಿ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ, ಘಟನೆಗೆ ಸಂಬಂಧಿಸಿದ ವೀಡಿಯೊದಲ್ಲಿ ಗ್ರಾಹಕರು ಎಂಜಿ ಹೆಕ್ಟರ್ ಎಸ್‌ಯುವಿಯ ವೈಶಿಷ್ಟ್ಯಗಳನ್ನು ಪರಿಶೀಲಿಸಲು ಬಯಸಿದ್ದರು. ಹಾಗಾಗಿ ಕಾರನ್ನು ಆನ್ ಮಾಡಲು ಮಾರಾಟ ಕಾರ್ಯನಿರ್ವಾಹಕರನ್ನು ಕೇಳಿದ್ದಾರೆ. ಬಳಿಕ ವೈಶಿಷ್ಟ್ಯಗಳನ್ನು ಪರಿಶೀಲಿಸುವಾಗ ಆಕಸ್ಮಿಕವಾಗಿ ಗೇರ್ ತೊಡಗಿಸಿಕೊಂಡಂತೆ ತೋರುತ್ತದೆ.

ಅದನ್ನು ಅರಿತುಕೊಳ್ಳುವ ಮೊದಲೇ, ಕಾರು ಮುಂದಕ್ಕೆ ಚಲಿಸಿದೆ. ಭಯಭೀತರಾಗಿ ಬ್ರೇಕ್ ಬದಲು ಆಕ್ಸಿಲರೇಟರ್ ಒತ್ತಿದ್ದಾರೆ ಎನ್ನಲಾಗಿದೆ. ಎಸ್‌ಯುವಿ ಡೀಲರ್‌ಶಿಪ್‌ನ ಗಾಜನ್ನು ಒಡೆದು ಮುನ್ನುಗ್ಗಿದೆ. ಅದನ್ನು ನಿಲ್ಲಿಸಲು ಅಲ್ಲಿನ ಸಿಬ್ಬಂದಿ ಕಾರಿನ ಹಿಂದೆ ಓಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದ್ರೆ ಕಾರು ಎಲ್ಲೂ ನಿಲ್ಲದೆ ರಸ್ತೆಗೆ ಹೋಗಿದೆ, ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದೆಯೇ ಎಂಬುದರ ಬಗ್ಗೆ ಖಚಿತತೆ ಇಲ್ಲ.
ವೀಡಿಯೊದಲ್ಲಿ ಕಂಡುಬರುವ ಎಂಜಿ ಹೆಕ್ಟರ್ ಆಟೋಮ್ಯಾಟಿಕ್ ವೇರಿಯೆಂಟ್ ಆಗಿರುವ ಸಾಧ್ಯತೆ ಇದೆ. ಗ್ರಾಹಕ ಬಹುಶಃ ಆಟೋಮ್ಯಾಟಿಕ್ ಕಾರುಗಳ ಬಗ್ಗೆ ಹೆಚ್ಚು ತಿಳಿಯದಿರಬಹುದು, ಇಂತಹ ಕಾರುಗಳೊಂದಿಗೆ ಚಾಲನೆ ಮಾಡುವಾಗ ಜನರು ಮಾಡುವ ಸಾಮಾನ್ಯ ತಪ್ಪು ಇದೇ. ಏಕೆಂದರೆ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಕಾರುಗಳಿಗೆ ತುಂಬಾ ವ್ಯತ್ಯಾಸವಿದೆ ಎಂಬುದನ್ನು ಅರಿತುಕೊಳ್ಳಬೇಕು.

(ಮ್ಯಾನುವಲ್ - ಆಟೋಮ್ಯಾಟಿಕ್ ಬಗ್ಗೆ ವಿವರವಾದ ಮಾಹಿತಿ ಬೇಕಿದ್ದರೆ ಕಮೆಂಟ್‌ನಲ್ಲಿ ತಿಳಿಸಿ) ಚಾಲಕ' ಕಾರು ಚಾಲನೆಯಲ್ಲಿ ಅನುಭವಿಯಂತೆ ತೋರುತ್ತಿಲ್ಲ. ಕಾರುಗಳನ್ನು ಓಡಿಸುವ ಬಗ್ಗೆ ತಿಳಿದಿರುವ ಅಥವಾ ಅನುಭವ ಹೊಂದಿರುವ ವ್ಯಕ್ತಿಯಾಗಿದ್ದರೆ, ತಕ್ಷಣ ಬ್ರೇಕ್ ಹಾಕಿ ಅಪಘಾತವನ್ನು ತಪ್ಪಿಸುತ್ತಿದ್ದರು. ನೀವು ಎಚ್ಚರಿಕೆಯಿಂದ ವಿಡಿಯೋವನ್ನು ನೋಡಿದ್ರೆ, ಚಾಲಕ ಬಾಗಿಲು ತೆರೆದು ಹೊರಗೆ ಜಿಗಿಯಲು ನೋಡುತ್ತಿದ್ದರು.
ಈ ಅಪಘಾತ ಸಂಭವಿಸಿದಾಗ ಹಾಜರಿದ್ದ ಗ್ರಾಹಕರು ಮತ್ತು ಡೀಲರ್ ಶಿಪ್ ಸಿಬ್ಬಂದಿ ಯಾವುದೇ ದೊಡ್ಡ ಗಾಯಗಳಿಲ್ಲದೆ ಪಾರಾಗಿದ್ದಾರೆ. ಕಾರಿನ ಮುಂಭಾಗದಲ್ಲಿ ಡೆಂಟ್ ಗಳು ಆಗಿರುವುದಾಗಿ ತಿಳಿದುಬಂದಿದೆ. ಇಂತಹ ಅಪಘಾತಗಳನ್ನು ತಪ್ಪಿಸಲು, ಶೋರೂಂ ಒಳಗೆ ನಿಲ್ಲಿಸಿರುವ ಡಿಸ್ಪ್ಲೇ ಕಾರುಗಳನ್ನು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ.
ನೀವು ನಿಜವಾಗಿಯೂ ಕಾರಿನ ಎಲ್ಲಾ ವಿವರಗಳು ಮತ್ತು ವೈಶಿಷ್ಟ್ಯಗಳನ್ನು ವಿವರವಾಗಿ ಪರಿಶೀಲಿಸಲು ಬಯಸಿದರೆ, ಸಿಬ್ಬಂದಿ ಸಮ್ಮುಖದಲ್ಲಿ ಡೀಲರ್ ಶಿಪ್‌ನ ಹೊರಗೆ ನಿಲ್ಲಿಸಿರುವ ಕಾರನ್ನು ಹುಡುಕಿ ನೋಡಬಹುದು. ನೀವು ಆಟೋಮ್ಯಾಟಿಕ್ ಕಾರುಗಳೊಂದಿಗೆ ಅನುಭವ ಹೊಂದಿಲ್ಲದಿದ್ದರೆ ಅಲ್ಲಿನ ಸಿಬ್ಬಂದಿಗೆ ತಿಳಿಸಿದರೆ ಅವರು ಪೆಡಲ್‌ಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ವಿವರಿಸುತ್ತಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications