ರೈತ ಕುಟುಂಬದಿಂದ ಬಂದ ಕ್ರೀಡಾ ಸಾಧಕನಿಗೆ ಜಿಂದಾಲ್ - ಎಂಜಿ ಗೌರವ.. ಹೊಸ ಕಾರು ಗಿಫ್ಟ್!

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ, ಭಾರತದ ರಾಷ್ಟ್ರೀಯ ಹಾಕಿ ತಂಡದ ಭಾಗವಾಗಿದ್ದ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ (PR Sreejesh) ಅವರಿಗೆ ಎಂಜಿ ವಿಂಡ್ಸರ್ ಇವಿಯನ್ನು ಉಡೊಗೊರೆಯಾಗಿ ನೀಡಲಾಗಿದೆ. ಒಲಿಂಪಿಕ್ಸ್‌ ಸಂದರ್ಭದಲ್ಲಿ ಜಿಂದಾಲ್ ಹಾಗೂ ಎಂಜಿ ಕಂಪನಿಯ ಪಾಲುದಾರಿಕೆಯಲ್ಲಿ ಭಾಗವಾಗಿ 'ವಿಂಡ್ಸರ್' ಎಲೆಕ್ಟ್ರಿಕ್ ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಆಗಲೇ ಎಂಜಿ ಕಂಪನಿ ಕೂಡ ಒಲಿಂಪಿಕ್ಸ್‌ ಪದಕ ವಿಜೇತರಿಗೆ ಈ ವಿಂಡ್ಸರ್‌ನ್ನು ಗಿಫ್ಟ್ ನೀಡುವುದಾಗಿ ಘೋಷಣೆ ಮಾಡಿತ್ತು. ಸದ್ಯ, ಶ್ರೀಜೇಶ್ ಅವರಿಗೆ ನೂತನ ಕಾರನ್ನು ಡೆಲಿವರಿ ಮಾಡಲಾಗಿದೆ.

ಪಿಆರ್ ಶ್ರೀಜೇಶ್ ಅವರು ಹೊಚ್ಚ ಹೊಸ ಎಂಜಿ ವಿಂಡ್ಸರ್ ಇವಿ (MG Windsor EV) ವಿತರಣೆ ಪಡೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರಿಂದ ಸಹ ಶುಭಾಶಯಗಳ ಮಹಾಪೂರವೇ ಹರಿದುಬರಿತ್ತಿದೆ. ಈ ಹಿಂದೆ ಟಾಟಾ ಮೋಟಾರ್ಸ್ (Tata Motors), ಇದೇ ಪಿಆರ್ ಶ್ರೀಜೇಶ್ ಅವರಿಗೆ ಕರ್ವ್ ಇವಿಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿತ್ತು.

MG Windsor EV Delivered To PR Sreejesh Details

ಮೂಲತಃ ಕೇರಳದ ಕೊಚ್ಚಿ ಸಮೀಪದ ಕಿಝಕ್ಕಂಬಲಂ ಎಂಬ ರೈತ ಕುಟುಂಬದಲ್ಲಿ ಜನಿಸಿದ ಶ್ರೀಜೇಶ್ ಅವರು, ಮೊದಲಿಗೆ ವಾಲಿಬಾಲ್‌ ಕ್ರೀಡಾಪಟು ಆಗಿದ್ದರು. ಆ ನಂತರ, ಹಾಕಿಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದರು. ಶ್ರೀಜೇಶ್ ರಾಷ್ಟ್ರೀಯ ಹಾಕಿ ತಂಡವನ್ನು ನಾಯಕರಾಗಿಯೂ ಮುನ್ನೆಡೆಸಿದ್ದರು. ಅವರು ಭಾರತದ ಮಹಾಗೋಡೆ (Great wall of India) ಎಂಬ ಬಿರುದನ್ನು ಹೊಂದಿದ್ದಾರೆ.

ಶ್ರೀಜೇಶ್ ಉಡುಗೊರೆಯಾಗಿ ಪಡೆದ ಎಂಜಿ ವಿಂಡ್ಸರ್ ಇವಿ ವಿಶೇಷತೆಗಳೇನು: ಈ ಕಾರು ರೂ.3.99 ಲಕ್ಷದಿಂದ ರೂ.15.99 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 38 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಿಂಗಲ್ ಚಾರ್ಜ್‌ನಲ್ಲಿ 331 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

MG Windsor EV Delivered To PR Sreejesh Details

ಈ ಕಾರು ಎಕ್ಸೈಟ್, ಎಕ್ಸ್‌ಕ್ಲೂಸಿವ್ ಹಾಗೂ ಎಸೆನ್ಸ್ ಎಂಬ ಮೂರು ರೂಪಾಂತರಗಳನ್ನು ಪಡೆದಿದೆ. ಇಕೋ, ಇಕೋ ಪ್ಲಸ್, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ತನ್ನದಾಗಿಸಿಕೊಂಡಿದೆ. ಇದು 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 604 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ತನ್ನದಾಗಿಸಿಕೊಂಡಿದೆ.

ನೂತನ ಎಂಜಿ ವಿಂಡ್ಸರ್ ಇವಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (15.6-ಇಂಚು), ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪೋರ್ಟ್ ಮತ್ತು ಪುಶ್ ಬಟನ್ ಸ್ಟಾರ್ಟ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ಈ ಮೊದಲು ಶ್ರೀಜೇಶ್‌ಗೆ ಗಿಫ್ಟ್ ಸಿಕ್ಕಿದ್ದ ಟಾಟಾ ಕರ್ವ್ ಇವಿ ಹೇಗಿದೆ: ಇದು ಕನಿಷ್ಠ ರೂ.17.49 ಲಕ್ಷ ಮತ್ತು ಗರಿಷ್ಠ ರೂ.21.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. 45 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 55 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 502 ಕಿಲೋಮೀಟರ್ ಕ್ರಮಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, February 14, 2025, 8:30 [IST]
English summary
Mg windsor ev delivered to pr sreejesh details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+