ನಿಮ್ಮ ಕಾರಿನಲ್ಲಿ ಮಲಗುವ ಸೌಕರ್ಯವಿದೆಯೇ?

By Nagaraja

ನಿಮ್ಮ ಕಾರಿನಲ್ಲಿ ಮಲಗುವ ಸೌಕರ್ಯವಿದೆಯೇ? ಹೌದು, ಇಂತಹದೊಂದು ವಿಶೇಷ ಶಿಬಿರ ವಾಹನವೊಂದನ್ನು ಮಿನಿ ಕಂಪನಿ ಅನಾವರಣಗೊಳಿಸಿದೆ. ಇದು ಕೇವಲ ಮಲಗಲು ಮಾತ್ರವಲ್ಲ ದೂರ ಪ್ರಯಾಣಕ್ಕೆ ತರಳುವವರ ಅನುಕೂಲಕ್ಕಾಗಿ ಇತರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ.

ನೂತನ ತಂತ್ರಜ್ಞಾನ ಆವಿಷ್ಕರಿಸುವುದರಲ್ಲಿ ಸದಾ ಮುಂದಿರುವ ಮಿನಿ, ಮೂರು ನೂತನ ಕಾನ್ಸೆಪ್ಟ್ ವಾಹನಗಳನ್ನು ಪ್ರದರ್ಶಿಸಿದೆ. ಇದರಲ್ಲಿ ಸಫಾರಿ ಸ್ಟೈಲ್‌‍ನ ರೂಫ್ ಟಾಪ್ ಟೆಂಟ್, ಶಿಬಿರ ವಾಹನ ಹಾಗೂ ಪ್ರಕಾಶಮಾನವಾದ ರೆಡ್ ಕಾರವನ್ ಸೇರಿದೆ.

ಮಿನಿ ಶಿಬಿರ ವಾಹನ

ಇದು ಜಗತ್ತಿನ ಅತಿ ಚಿಕ್ಕದಾದ ಶಿಬಿರ ವಾಹನವೆಂಬ ಖ್ಯಾತಿಗೆ ಪಾತ್ರವಾಗಲಿದೆ. ಆದರೆ ಇಂತಹದೊಂದು ಹೆಸರು ಗಿಟ್ಟಿಸಿಕೊಳ್ಳಲು ಪ್ರಸ್ತುತ ಕಾನ್ಸೆಪ್ಟ್ ಹಂತದಲ್ಲಿರುವ ಮಿನಿ ಉತ್ಪಾದನಾ ವರ್ಷನ್ ಪಡೆದುಕೊಳ್ಳಬೇಕಾಗಿದೆ.

ಮಿನಿ ಶಿಬಿರ ವಾಹನ

ವಾರಂತ್ಯದ ಪ್ರವಾಸಗಳಿಗೆ ತೆರಳುವವರಿಗಾಗಿ ಮಿನಿ ಕ್ಲಬ್ ವ್ಯಾನ್ ವಿನ್ಯಾಸಿತಗೊಳಿಸಲಾಗಿದೆ. ಇದರಲ್ಲಿ ಮಲಗಲು ವ್ಯವಸ್ಥೆಯಿದ್ದು, ಇನ್ನು ಅಡುಗೆಗಾಗಿ ಸಣ್ಣದಾದ ಕಿಚನ್, ಸ್ಟೋವ್ ಹಾಗೂ ಇತರ ಆಹಾರ ಪದಾರ್ಥಗಳು ಕೊಳೆಯದಂತೆ ನೋಡಲು ಫ್ರಿಡ್ಜ್ ವ್ಯವಸ್ಥೆಯಿದೆ.

ಮಿನಿ ಶಿಬಿರ ವಾಹನ

ಅಷ್ಟೇ ಅಲ್ಲದೆ ಮನರಂಜನೆಗಾಗಿ ಟಿ.ವಿ. ವ್ಯವಸ್ಥೆ ಹಾಗೂ ಗಾಳಿ ಬೆಳಕು ಹಾಯಿಸುವುದಕ್ಕಾಗಿ ಸಣ್ಣದಾದ ಕಿಟಕಿ ಲಗತ್ತಿಸಲಾಗಿದೆ.

ಮಿನಿ ಶಿಬಿರ ವಾಹನ

ಹಾಗಿದ್ದರೂ ಒಂದು ಮಂದಿಗಷ್ಟೇ ಮಲಗುವ ವ್ಯವಸ್ಥೆಯನ್ನು ಮಿನಿ ಕ್ಲಬ್ ವ್ಯಾನ್ ಕ್ಯಾಂಪ್‌ರ್‌ ಹೊಂದಿದೆ.

ಮಿನಿ ಶಿಬಿರ ವಾಹನ

ಇನ್ನು ಹ್ಯಾಂಡ್ ಹೋಲ್ಡ್ ಶವರ್ ವ್ಯವಸ್ಥೆಯಿದ್ದರೂ ಶೌಚಾಲಯದ ಕೊರತೆಯನ್ನು ಸಹ ಅನುಭವಿಸುತ್ತದೆ.

ಮಿನಿ ಶಿಬಿರ ವಾಹನ

ಇನ್ನು ಕಾರಿನ ಮೇಲೆ ಡೇರೆ ಹೊಂದಿರುವ ಕಂಟ್ರಿಮ್ಯಾನ್ ಎಎಲ್‌ಎಲ್4 ಕ್ಯಾಂಪ್ ಕಾರನ್ನು ಮಿನಿ ಅನಾವರಣಗೊಳಿಸಿದೆ. ಇದನ್ನು ಸಫಾರಿ ಸ್ಟೈಲ್‌ನಲ್ಲಿ ವಿನ್ಯಾಸಿತಗೊಳಿಸಲಾಗಿದೆ.

ಮಿನಿ ಶಿಬಿರ ವಾಹನ

ಇದರ ಮೇಲ್ಛಾವಣಿ ಮಡಚಬಹುದಾಗಿದ್ದು, ಅಗತ್ಯಕ್ಕಾನುಸಾರವಾಗಿ ಬಳಕೆ ಮಾಡಬಹುದಾಗಿದೆ. ಹಾಗೆಯೇ ಕಾರಿನ ಮೇಲ್ಗಡೆ ಹತ್ತಲು ಮೆಟ್ಟಿಲುಗಳ ವ್ಯವಸ್ಥೆಯಿದೆ.

ಮಿನಿ ಶಿಬಿರ ವಾಹನ

ಡ್ರೈವಿಂಗ್ ಬಳಿಕ ತುಂಬಾ ಸುಸ್ತಾಗಿದ್ದರೆ ಚಾಲಕರು, ಸ್ಟೋರೆಜ್ ಬಾಕ್ಸ್‌ನಂತಹ ಈ ಮೇಲ್ಛಾವಣಿಯನ್ನು ತೆರೆದು ಮಲಗಬಹುದಾಗಿದೆ.

ಮಿನಿ ಶಿಬಿರ ವಾಹನ

ಇನ್ನೂ ಕೊನೆಯದಾಗಿ ಮಿನಿ ಕೌಲೆ ಐಷಾರಾಮಿ ಕಾರವನ್‌ನಲ್ಲಿ ಇಬ್ಬರಿಗೆ ಪಯಣಿಸಬಹುದಾಗಿದೆ. ಅಂದರೆ ಹೊಸತಾಗಿ ಮದುವೆಯಾದವರು ಹನಿಮೂನ್‌ಗೆ ಈ ಗಾಡಿ ಬಳಕೆ ಮಾಡಬಹುಬಹುದು. ಇದರಲ್ಲಿ ಕಿಚನ್ ಸೌಲಭ್ಯ ಮಾತ್ರವಲ್ಲದೆ ಮನರಂಜನೆಗಾಗಿ ಡಿವಿಡಿ ಪ್ಲೇಯರ್ ಇತರ ಅನೇಕ ಸೌಲಭ್ಯಗಳನ್ನು ಲಗತ್ತಿಸಲಾಗಿದೆ.

ಮಿನಿ ಶಿಬಿರ ವಾಹನ

ಹಾಗಿದ್ದರೂ ಸದ್ಯಕ್ಕಂತೂ ಈ ಎಲ್ಲ ಮಾದರಿಗಳ ಉತ್ಪಾದನಾ ವರ್ಷನ್ ಪಡೆದುಕೊಳ್ಳುವ ಯಾವುದೇ ಇರಾದೆಯನ್ನು ಮಿನಿ ಹೊಂದಿಲ್ಲ. ಆದರೆ ಇತರ ಉತ್ಸಾಹಿ ವಾಹನ ಪ್ರಿಯರು ಇಂತಹ ಕಾನ್ಸೆಪ್ಟ್‌ಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ.

More from DriveSpark

Article Published On: Monday, October 28, 2013, 15:16 [IST]
English summary
Mini has revealed three concept vehicles for campers including a safari-style roof-top tent, camper van for one and bright red caravan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+