ನನ್ನ ಹೈಡ್ರೋಜನ್ ಕಾರು ಬಳಸಿಕೊಳ್ಳಿ: ಉಪ ಮುಖ್ಯಮಂತ್ರಿಗೆ ಕಾರು ನೀಡಿ ಅನುಭವ ಕೇಳಿದ ಗಡ್ಕರಿ
ದೇಶದಲ್ಲಿ ಪರ್ಯಾಯ ಇಂಧನ ವಾಹನಗಳನ್ನು ಹೆಚ್ಚಿಸುವಲ್ಲಿ ಜನಪ್ರಿಯತೆ ಗಳಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್-ಚಾಲಿತ ಕಾರುಗಳಲ್ಲಿ ಓಡುತ್ತಿರುವುದು ಇತ್ತಿಚೆಗೆ ಕಂಡುಬಂದಿದೆ. ಇದೀಗ ಅವರು ಹೊಚ್ಚಹೊಸ ಹ್ಯುಂಡೈ ಐಯೊನಿಕ್-5 ಎಲೆಕ್ಟ್ರಿಕ್ ಕಾರನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಹೊಸ ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (BNCAP) ಬಿಡುಗಡೆಗಾಗಿ, ಸಚಿವರು ತಮ್ಮ ಹೊಸ ಹ್ಯುಂಡೈ Ioniq 5 ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಹೊಸ ಎಲೆಕ್ಟ್ರಿಕ್ ಕಾರಿಗೂ ಮೊದಲು, ಸಚಿವರು ಟೊಯೋಟಾ ಮಿರಾಯ್ ಹೈಡ್ರೋಜನ್-ಚಾಲಿತ ಸೆಡಾನ್‌ನಲ್ಲಿ ಓಡಾಡುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಇಷ್ಟು ದಿನಗಳು ಅವರು ಓಡಾಡಿದ್ದಾಗಿದೆ, ಈಗ ತಮ್ಮ ಸುತ್ತಮುತ್ತಲಿನ ಪ್ರಮುಖರು ಕೂಡ ಪರಿಸರ ಸ್ನೇಹಿ ಕಾರುಗಳಲ್ಲಿ ಓಡುವಂತೆ ಉತ್ತೇಜಿಸುತ್ತಿದ್ದಾರೆ.

ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ಸಚಿವ ನಿತಿನ್ ಗಡ್ಕರಿ ಹೈಡ್ರೋಜನ್ ಚಾಲಿತ ಮಿರಾಯ್ ಸೆಡಾನ್ ಅನ್ನು ನೀಡಿದ್ದಾರೆ ಎಂದು ಈಗ ವರದಿಯಾಗಿದೆ. ಇತ್ತೀಚೆಗೆ, ತೇಜಸ್ವಿ ಯಾದವ್ ಈ ಸೆಡಾನ್ ಒಳಗೆ ಹೋಗುತ್ತಿರುವುದು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಈ ಹೈಡ್ರೋಜನ್ ಚಾಲಿತ ಕಾರಿನ ಅನುಭವವನ್ನು ಪಡೆದು ನನಗೆ ತಿಳಿಸಿ ಎಂದು ನೀಡಿದ್ದಾರೆಂದು ತೇಜಸ್ವಿ ಯಾದವ್ ತಿಳಿಸಿದ್ದಾರೆ.
ಟೊಯೋಟಾ ಮಿರೈ ಹೈಡ್ರೋಜನ್: ಟೊಯೊಟಾ ಮಾರ್ಚ್ 2022 ರಲ್ಲಿ ಭಾರತದಲ್ಲಿ ಮಿರಾಯ್ ಫ್ಯೂಲ್ ಸೆಲ್ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿತು. ಹೊಸ ವಾಹನವು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ ಅಥವಾ ICAT ನೊಂದಿಗೆ ಪ್ರಾಯೋಗಿಕ ಕಾರ್ಯಕ್ರಮದ ಭಾಗವಾಗಿ ಪ್ರಾರಂಭವಾಯಿತು. ಕರ್ನಾಟಕದಲ್ಲಿನ ಟೊಯೊಟಾದ ಸೌಲಭ್ಯವು ಭಾರತದಲ್ಲಿ ಎರಡನೇ ತಲೆಮಾರಿನ ಮಿರಾಯ್ ಅನ್ನು ಉತ್ಪಾದಿಸುತ್ತದೆ.
ಮಿರೈ ಜಲಜನಕದಿಂದ ಶಕ್ತಿಯನ್ನು ಪಡೆಯುತ್ತದೆ, ಇದು ವಿದ್ಯುತ್ ಉತ್ಪಾದಿಸುವುದರ ಜೊತೆಗೆ ಸಂಕುಚಿತ ಅನಿಲವನ್ನು ಬಳಸಿಕೊಂಡು ಕಾರನ್ನು ಓಡಿಸುತ್ತದೆ. ಮಿರಾಯ್ ಹೆಚ್ಚಿನ ಒತ್ತಡದ ಹೈಡ್ರೋಜನ್ ಇಂಧನ ಟ್ಯಾಂಕ್ ಅನ್ನು ಹೊಂದಿದ್ದು, ಸಂಪೂರ್ಣವಾಗಿ ಹೈಡ್ರೋಜನ್ ನೊಂದಿಗೆ ತುಂಬಿದರೆ ಬರೋಬ್ಬರಿ 646 ಕಿ.ಮೀ ಮೈಲೇಜ್ ನೀಡುತ್ತದೆ.
ಪವರ್ಟ್ರೇನ್ ಹೈಡ್ರೋಜನ್ ಅನ್ನು ನೀರು ಮತ್ತು ಆಮ್ಲಜನಕವಾಗಿ ಪರಿವರ್ತಿಸುತ್ತದೆ. ಒಂದು ಚಿಕ್ಕ ಬ್ಯಾಟರಿಯು ಶಕ್ತಿಯನ್ನು ಸಂಗ್ರಹಿಸಿ ಮೋಟಾರಿಗೆ ಪವರ್ ನೀಡಲು ಬಳಸಿಕೊಳ್ಳುತ್ತದೆ. ಸಾಮಾನ್ಯ ಎಲೆಕ್ಟ್ರಿಕ್ ವಾಹನಗಳಿಗಿಂತ ಇದರ ಬ್ಯಾಟರಿ 30 ಪಟ್ಟು ಚಿಕ್ಕದಾಗಿದೆ. ನಿತಿನ್ ಗಡ್ಕರಿ ಅವರು ಹೈಡ್ರೋಜನ್ ಮತ್ತು ಎಫ್‌ಸಿಇವಿಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಾಯೋಗಿಕ ಉಪಕ್ರಮವನ್ನು ಉದ್ಘಾಟಿಸಿದ್ದರು.

ಹುಂಡೈ ಅಯೋನಿಯಾ 5: ಇದೇ ಜನವರಿಯಲ್ಲಿ ಹ್ಯುಂಡೈ ಭಾರತದಲ್ಲಿ ಹೊಸ Ioniq 5 EV ಕ್ರಾಸ್ಒವರ್ ಅನ್ನು ಬಿಡುಗಡೆ ಮಾಡಿತ್ತು. ಕಂಪನಿಯು ಈ ಹೊಸ ಕ್ರಾಸ್ಒವರ್ ಅನ್ನು ರೂ. 44.95 ಲಕ್ಷದ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ. ಈ ಕ್ರಾಸ್ಒವರ್ ರೆಟ್ರೊ-ಫ್ಯೂಚರಿಸ್ಟಿಕ್ ನೋಟ, ವಿಭಿನ್ನ LED ಹೆಡ್‌ಲ್ಯಾಂಪ್, LED ಟೈಲ್ ಲ್ಯಾಂಪ್, ಪಿಕ್ಸಲೇಟೆಡ್ ಥೀಮ್ ಅನ್ನು ಹೊಂದಿದೆ.
Ioniq 5ನ ಚೂಪಾದ ರೇಖೆಗಳು, ಸುಕ್ಕುಗಟ್ಟಿದ ವಿಂಡ್‌ಶೀಲ್ಡ್ ಮತ್ತು ಸಮತಟ್ಟಾದ ಮೇಲ್ಮೈನೊಂದಿಗೆ ತುಂಬಾ ಆಕರ್ಷಕ ಡಿಸೈನ್ ಹೊಂದಿದೆ. ಜೊತೆಗೆ 20-ಇಂಚಿನ ಏರೋ-ಆಪ್ಟಿಮೈಸ್ಡ್ ಅಲಾಯ್ ವೀಲ್‌ಗಲು ಟರ್ಬೈನ್-ತರಹದ ಡಿಸೈನ್ ಒಳಗೊಂಡಿವೆ. ಹೊಸ ಹ್ಯುಂಡೈ Ioniq 5 ಅನ್ನು ಒಂದೇ ಡ್ರೈವ್‌ಟ್ರೇನ್ ಆಯ್ಕೆಯೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

ಇದರ ಎಲೆಕ್ಟ್ರಿಕ್ ಮೋಟಾರ್ 217 ಎಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 72.6 kWh ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಜೋಡಿಯಾಗಿ ಬರುತ್ತದೆ. ಈ ಬ್ಯಾಟರಿಯು 800V ಕ್ಷಿಪ್ರ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು 18 ನಿಮಿಷಗಳಲ್ಲಿ 10% ರಿಂದ 80% ವರೆಗೆ ಚಾರ್ಜ್ ಮಾಡಬಹುದು, Ioniq 5 ಅನ್ನು ಒಂದೇ ಚಾರ್ಜ್‌ನಲ್ಲಿ 631 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಒದಗಿಸುತ್ತದೆ.


Click it and Unblock the Notifications