ಬಸ್ ಸಂಚರಿಸುವಾಗಲೇ ಮುರಿದು ಬಿದ್ದ ಸೇತುವೆ; ಯಾತ್ರಿಕರು ಪವಾಡ ಸದೃಶ ಪಾರು
ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವ ಬಸ್ಸೊಂದು ಸೇತುವೆ ಮೇಲೆ ಸಂಚರಿಸುತ್ತಿರುವಾಗಲೇ ಸೇತುವೆ ಮುರಿದು ಬಿದ್ದ ಭೀಕರ ಘಟನೆ ಗುಜರಾತ್ ನಿಂದ ವರದಿಯಾಗಿದೆ.
ವಿಜ್ಞಾನ ಲೋಕವನ್ನೇ ಬೆಚ್ಚಿ ಬೀಳಿಸಿದ ಅಪಘಾತ ಪ್ರಸಂಗ
ಗುಜರಾತ್‌ನ ಜನಾಗಢ್ ನಲ್ಲಿ ಘಟನೆ ನಡೆದಿದ್ದು, ಬಸ್ ಇನ್ನೇನು ಸೇತುವೆ ದಾಟುತ್ತಿದೆ ಎನ್ನುವಷ್ಟರಲ್ಲಿ ಹಿಂಭಾಗವು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಆದರೆ ಯಾತ್ರಿಕರೆಲ್ಲರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಕೆಶೋದ್ ಸಮೀಪದ ಸರದ್ ಗ್ರಾಮದಲ್ಲಿ ಸೇತುವೆ ದಾಟುತ್ತಿದ್ದ ವೇಳೆ ಸಿನೆಮೇಯಾ ಶೈಲಿಯಲ್ಲಿ ಅಪಘಾತ ಸಂಭವಿಸಿತ್ತು.

ಬಸ್ಸಿನಲ್ಲಿ 25ರಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಯಾರಿಗೂ ಗಾಯಗಳು ಸಂಭವಿಸಿಲ್ಲ.

ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್ಸಿನಿಂದ ಹೊರ ತೆಗೆಯಲಾಗಿದೆ. ಬಳಿಕ ಅಗತ್ಯ ಪ್ರಥಮ ಚಿಕಿತ್ಸೆಯನ್ನು ನೀಡಲಾಯಿತು.

ಕಳಪೆ ಕಾಮಗಾರಿಯೇ ಸೇತುವೆ ಮುರಿದು ಹೋಗಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಸ್ಸಿನ ಹಿಂಬದಿಯ ಚಕ್ರವು ಮುರಿದು ಬಿದ್ದ ಸೇತುವೆಯಲ್ಲಿ ನಿಂತುಕೊಂಡ ಕಾರಣ ದೊಡ್ಡ ದುರಂತ ತಪ್ಪಿ ಹೋಗಿದಂತಾಗಿದೆ. ಬಳಿಕ ಒಬ್ಬೊಬ್ಬರನ್ನೇ ಬಸ್ಸಿನಿಂದ ಹೊರತೆಗೆಯಲಾಯಿತು.

ಚಾಲಕನ ಸಮಯ ಪ್ರಜ್ಞೆಯಿಂದಾಗಿ ಹಿಂಭಾಗದಲ್ಲಿದ್ದ ಪ್ರಯಾಣಿಕರನ್ನು ಮುಂಭಾಗಕ್ಕೆ ಕರೆಸುವ ಮೂಲಕ ಬಸ್ಸಿನ ಭಾರ ಸಮತೋಲನವನ್ನು ಕಾಪಾಡಲಾಯಿತು.

ಬೇಸಿಗೆ ಕಾಲ ಆಗಿರುವುದರಿಂದ ಸೇತುವೆಯಲ್ಲಿ ನೀರಿನ ಪ್ರವಾಹ ಕೂಡಾ ಇರಲಿಲ್ಲ. ಒಟ್ಟಿನಲ್ಲಿ ದೊಡ್ಡ ದುರಂತವೇ ತಪ್ಪಿದಂತಾಗಿದೆ.

ಹಿಟ್ ಆ್ಯಂಡ್ ರನ್; ಕಾರಿನ ಟಾಪಲ್ಲಿ ಶವದೊಂದಿಗೆ ಪರಾರಿ ಯತ್ನ! ಮುಂದಕ್ಕೆ ಓದಿ

ಬೈಕ್ ಬ್ರೇಕ್ ಲೈಟ್ ಒಡೆದ ಬಳಿಕವೂ ಮಾನವೀಯತೆ ಮೆರೆದ ಸವಾರ

ಕೈಕೊಟ್ಟ ಜಿಪಿಎಸ್; ಕಾರಿನೊಂದಿಗೆ ಕೆರೆಯೊಳಗೆ ಧುಮುಕಿದ ಯುವತಿ


Click it and Unblock the Notifications








