ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ 'ಮಿರ್ಜಾಪುರ್' ಮುನ್ನಾ ಭಾಯ್
ಸಿನಿಮಾ ರಂಗ ಎಂಬ ಕಲರ್‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍ಗಳಿವೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಈ ಸಿನಿಮಾ ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ.

ಇತ್ತೀಚೆಗೆ ಸಿನಿಮಾ ಸೆಲಬ್ರಿಟಿಗಳು ಹೆಚ್ಚಾಗಿ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯನ್ನು ಆಯ್ಕೆ ಮಾಡುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಮಿರ್ಜಾಪುರ'ದಲ್ಲಿ ಬಬ್ಲು ಭಯ್ಯಾ ಪಾತ್ರದಲ್ಲಿ ನಟಿಸುವ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ ವಿಕ್ರಾಂತ್ ಮಾಸ್ಸೆ ಅವರು ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯನ್ನು ಖರೀದಿಸಿದ್ದರು. ಇದೀಗ ಮಿರ್ಜಾಪುರ ಸೀರಿಸ್ ಮತ್ತೊಂದು ನಟ ದಿವ್ಯೆಂದು ಶರ್ಮಾ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಈ ಎಸ್‍ಯುವಿಯ ಬೆಲೆಯು ರೂ.1.16 ಕೋಟಿಯಾಗಿದೆ.

ಮಿರ್ಜಾಪುರ ಸೀರಿಸ್ ನಲ್ಲಿ ಮುನ್ನಾ ಭಾಯ್ ಪಾತ್ರದಲ್ಲಿ ನಟಿಸುವ ಮೂಲಕ ದಿವ್ಯೆಂದು ಶರ್ಮಾ ಹೆಚ್ಚು ಜನಪ್ರಿಯತೆ ಗಳಿಸಿಕೊಂಡರು. ನಟ ದಿವ್ಯೆಂದು ಶರ್ಮಾ ಅವರು ತಮ್ಮ ಹೊಸ ಕಾರಿನೊಂದಿಗಿನ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

ನಟ ದಿವ್ಯೆಂದು ಶರ್ಮಾ ಅವರು ಖರೀದಿಸಿದ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಈ ಜಿಎಲ್ಎಸ್ ಎಂಬುದು ಮರ್ಸಿಡಿಸ್ ಬೆಂಝ್ ಪ್ರಮುಖ ಎಸ್‍ಯುವಿಯಗಿದೆ. ಜಿಎಲ್ಎಸ್ ಮತ್ತೊಂದು ರೂಪಾಂತರವನ್ನು 450 4MATIC ಎಂದು ಕರೆಯುತ್ತಾರೆ.

ಈ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರದಲ್ಲಿ 3.0-ಲೀಟರ್ ಇನ್-ಲೈನ್ ಸಿಕ್ಸ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಬ್ರ್ಯಾಂಡ್ ನ ಇಕ್ಯೂ ಬೂಸ್ಟ್ ಸಿಸ್ಟಂಗೆ ಹೊಂದಿಕೆಯಾಗಿದೆ.

ಈ ಎಂಜಿನ್ 367 ಬಿಹೆಚ್‍ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರವು 3.0 ಲೀಟರ್ ಇನ್-ಲೈನ್ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 330 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನುಉ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯುಯಲ್ಲಿ ಎಲ್‌ಇಡಿ ಡಿಆರ್‌ಎಲ್, ಎಲ್‌ಇಡಿ ಟೈಲ್ ಲೈಟ್, ಕ್ರೋಮ್ ಅಡ್ಡಲಾಗಿರುವ ಸ್ಲ್ಯಾಟ್‌ಗಳೊಂದಿಗೆ ಫ್ರಂಟ್ ಗ್ರಿಲ್ ಮತ್ತು ಮಧ್ಯದಲ್ಲಿ ಮರ್ಸಿಡಿಸ್ ಬೆಂಝ್ ಲೋಗೊವನ್ನು ನೀಡಿದೆ.

ಇನ್ನು ಈ ಎಸ್‍ಯುವಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, 21 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್, ಕ್ರೋಮ್ ಬೆಜೆಲ್‌ಗಳೊಂದಿಗೆ ಡ್ಯುಯಲ್ ಎಕ್ಸಾಸ್ಟ್ ಮಫ್ಲರ್‌ಗಳು ಮತ್ತು ಹಲವಾರು ಸೂಕ್ಷ್ಮ ನವೀಕರಣಗಳನ್ನು ಒಳಗೊಂಡಿದೆ.

ಈ ಹೊಸ ಎಸ್‍ಯುವಿಯ ಇಂಟಿರಿಯರ್ ನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬ್ರ್ಯಾಂಡ್‌ನ ಎಂಬಿಎಕ್ಸ್ ತಂತ್ರಜ್ಞಾನ, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಪನೋರಮಿಕ್ ಸನ್‌ರೂಫ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು 5 ಹಂತದ ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ. ಈ ಮರ್ಸಿಡಿಸ್ ಜಿಎಲ್ಎಸ್ ತನ್ನ ಹಿಂದಿನ ಕಾರಿಗಿಂತ 77 ಎಂಎಂ ಮತ್ತು 22 ಎಂಎಂ ಅಗಲ ಹೊಂದಿದೆ.

ಮರ್ಸಿಡಿಸ್ ಜಿಎಲ್ಎಸ್ ಕಾರು 60 ಎಂಎಂನಷ್ಟು ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿ ಐಷಾರಾಮಿ ಆರು ಸೀಟುಗಳ ಕ್ಯಾಬಿನ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ತಲೆಮಾರಿನ ಮಾದರಿಯಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್7 ಎಸ್‍ಯುವಿಗೆ ಪೈಪೋಟಿಯನ್ನು ನೀಡುತ್ತದೆ.

ಇನ್ನು ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಇಕ್ಯೂಎಸ್ 580 4 ಮ್ಯಾಟಿಕ್ ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತು. ಈ ಇವಿ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 1.55 ಕೋಟಿ ಬೆಲೆ ಹೊಂದಿದೆ. ವಿಶ್ವಾದ್ಯಂತ ಎಲೆಕ್ಟ್ರಿಕ್ ಸರಣಿ ಕಾರುಗಳ ಸಂಖ್ಯೆ ಹೆಚ್ಚಿಸಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಎರಡನೇ ಕಾರು ಮಾದರಿಯಾಗಿ ಇಕ್ಯೂಎಸ್ 580 ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಈ ಎಲೆಕ್ಟ್ರಿಕ್ ಕಾರು ಮಾದರಿಯು ಮರ್ಸಿಡಿಸ್ ನಿರ್ಮಾಣದ ಇತರೆ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಬ್ಯಾಟರಿ ಪ್ಯಾಕ್ ಸೇರಿದಂತೆ ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಈ ಮರ್ಸಿಡಿಸ್ ಇಕ್ಯೂಎಸ್ 580 4 ಮ್ಯಾಟಿಕ್ ಎಲೆಕ್ಟ್ರಿಕ್ ಸೆಡಾನ್ ಕಾರು ಮಾದರಿಯು ಭಾರತದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿದೆ.


Click it and Unblock the Notifications








