ರೂ.1.16 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್‍ಯುವಿ ಖರೀದಿಸಿದ 'ಮಿರ್ಜಾಪುರ್​' ಖ್ಯಾತಿಯ ನಟ ವಿಕ್ರಾಂತ್

ಸಿನಿಮಾ ರಂಗ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ.

ರೂ.1.16 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್‍ಯುವಿ ಖರೀದಿಸಿದ 'ಮಿರ್ಜಾಪುರ್​' ಖ್ಯಾತಿಯ ನಟ ವಿಕ್ರಾಂತ್

ಇತ್ತೀಚೆಗೆ ನಟ ವಿಕ್ರಾಂತ್ ಮಾಸ್ಸೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಅವರು ಸಿಂಗಲ್ ಟೋನ್ ಬ್ಲ್ಯಾಕ್ ಬಣ್ಣದ ಮಾದರಿಯನ್ನು ಆರಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 400ಡಿ 4MATIC ರೂಪಾಂತರವನ್ನು ಖರೀದಿಸಿದ್ದಾರೆ. ಇದರ ಬೆಲೆಯು ರೂ. 1.16 ಕೋಟಿಯಾಗಿದೆ. ಮಿರ್ಜಾಪುರ'ದಲ್ಲಿ ಬಬ್ಲು ಭಯ್ಯಾ ಪಾತ್ರದಲ್ಲಿ ನಟಿಸುವ ಮೂಲಕ ವಿಕ್ರಾಂತ್ ಮಾಸ್ಸೆ ಹೆಚ್ಚು ಜನಪ್ರಿಯತೆ ಗಳಿಸಿಕೊಂಡರು.

ರೂ.1.16 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್‍ಯುವಿ ಖರೀದಿಸಿದ 'ಮಿರ್ಜಾಪುರ್​' ಖ್ಯಾತಿಯ ನಟ ವಿಕ್ರಾಂತ್

ನಟ ವಿಕ್ರಾಂತ್ ಮಾಸ್ಸೆ ಅವರು ಸೀನ್ ದಿಲ್ರುಬಾ, ಕ್ರಿಮಿನಲ್ ಜಸ್ಟಿಸ್ ಇತ್ಯಾದಿ ಸೀರಿಸ್ ಗಳಲ್ಲಿಯು ನಟಿಸಿದ್ದಾರೆ. ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ನಟ ವಿಕ್ರಾಂತ್ ಮಾಸ್ಸೆ ಅವರು ಶೀತಲ್ ಠಾಕೂರ್ ಅವರೊಂದಿಗೆ ಹಿಮಾಚಲ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಸಪ್ತಪದಿ ತುಳಿದರು.

ರೂ.1.16 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್‍ಯುವಿ ಖರೀದಿಸಿದ 'ಮಿರ್ಜಾಪುರ್​' ಖ್ಯಾತಿಯ ನಟ ವಿಕ್ರಾಂತ್

ಇನ್ನು ಜಿಎಲ್ಎಸ್ ಎಂಬುದು ಮರ್ಸಿಡಿಸ್ ಬೆಂಝ್ ಪ್ರಮುಖ ಎಸ್‍ಯುವಿಯಗಿದೆ. ಜಿಎಲ್ಎಸ್ ಮತ್ತೊಂದು ರೂಪಾಂತರವನ್ನು 450 4MATIC ಎಂದು ಕರೆಯುತ್ತಾರೆ, ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.18 ಕೋಟಿಯಾಗಿದೆ.

ರೂ.1.16 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್‍ಯುವಿ ಖರೀದಿಸಿದ 'ಮಿರ್ಜಾಪುರ್​' ಖ್ಯಾತಿಯ ನಟ ವಿಕ್ರಾಂತ್

ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರದಲ್ಲಿ 3.0-ಲೀಟರ್ ಇನ್-ಲೈನ್ ಸಿಕ್ಸ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಬ್ರ್ಯಾಂಡ್ ನ ಇಕ್ಯೂ ಬೂಸ್ಟ್ ಸಿಸ್ಟಂಗೆ ಹೊಂದಿಕೆಯಾಗುತ್ತದೆ.

ರೂ.1.16 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್‍ಯುವಿ ಖರೀದಿಸಿದ 'ಮಿರ್ಜಾಪುರ್​' ಖ್ಯಾತಿಯ ನಟ ವಿಕ್ರಾಂತ್

ಈ ಎಂಜಿನ್ 367 ಬಿಹೆಚ್‍ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರವು 3.0 ಲೀಟರ್ ಇನ್-ಲೈನ್ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 330 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನುಉ ಉತ್ಪಾದಿಸುತ್ತದೆ.

ರೂ.1.16 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್‍ಯುವಿ ಖರೀದಿಸಿದ 'ಮಿರ್ಜಾಪುರ್​' ಖ್ಯಾತಿಯ ನಟ ವಿಕ್ರಾಂತ್

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯುಯಲ್ಲಿ ಎಲ್‌ಇಡಿ ಡಿಆರ್‌ಎಲ್‌, ಎಲ್‌ಇಡಿ ಟೈಲ್ ಲೈಟ್, ಕ್ರೋಮ್ ಅಡ್ಡಲಾಗಿರುವ ಸ್ಲ್ಯಾಟ್‌ಗಳೊಂದಿಗೆ ಫ್ರಂಟ್ ಗ್ರಿಲ್ ಮತ್ತು ಮಧ್ಯದಲ್ಲಿ ಮರ್ಸಿಡಿಸ್ ಬೆಂಝ್ ಲೋಗೊವನ್ನು ಅಳವಡಿಸಲಾಗಿದೆ.

ರೂ.1.16 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್‍ಯುವಿ ಖರೀದಿಸಿದ 'ಮಿರ್ಜಾಪುರ್​' ಖ್ಯಾತಿಯ ನಟ ವಿಕ್ರಾಂತ್

ಇನ್ನು ಈ ಎಸ್‍ಯುವಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, 21 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್, ಕ್ರೋಮ್ ಬೆಜೆಲ್‌ಗಳೊಂದಿಗೆ ಡ್ಯುಯಲ್ ಎಕ್ಸಾಸ್ಟ್ ಮಫ್ಲರ್‌ಗಳು ಮತ್ತು ಹಲವಾರು ಸೂಕ್ಷ್ಮ ನವೀಕರಣಗಳನ್ನು ನಡೆಸಲಾಗಿದೆ.

ರೂ.1.16 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್‍ಯುವಿ ಖರೀದಿಸಿದ 'ಮಿರ್ಜಾಪುರ್​' ಖ್ಯಾತಿಯ ನಟ ವಿಕ್ರಾಂತ್

ಈ ಹೊಸ ಎಸ್‍ಯುವಿಯ ಇಂಟಿರಿಯರ್ ನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬ್ರ್ಯಾಂಡ್‌ನ ಎಂಬಿಎಕ್ಸ್ ತಂತ್ರಜ್ಞಾನ, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಪನೋರಮಿಕ್ ಸನ್‌ರೂಫ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು 5 ಹಂತದ ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ. ಈ ಮರ್ಸಿಡಿಸ್ ಜಿಎಲ್ಎಸ್ ತನ್ನ ಹಿಂದಿನ ಕಾರಿಗಿಂತ 77 ಎಂಎಂ ಮತ್ತು 22 ಎಂಎಂ ಅಗಲವನ್ನು ಹೊಂದಿದೆ.

ರೂ.1.16 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್‍ಯುವಿ ಖರೀದಿಸಿದ 'ಮಿರ್ಜಾಪುರ್​' ಖ್ಯಾತಿಯ ನಟ ವಿಕ್ರಾಂತ್

ಹೊಸ ಜಿಎಲ್ಎಸ್ ಕಾರು 60 ಎಂಎಂನಷ್ಟು ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿ ಐಷಾರಾಮಿ ಆರು ಸೀಟುಗಳ ಕ್ಯಾಬಿನ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ತಲೆಮಾರಿನ ಮಾದರಿಯಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್7 ಎಸ್‍ಯುವಿಗೆ ಪೈಪೋಟಿಯನ್ನು ನೀಡುತ್ತದೆ.

ರೂ.1.16 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್‍ಯುವಿ ಖರೀದಿಸಿದ 'ಮಿರ್ಜಾಪುರ್​' ಖ್ಯಾತಿಯ ನಟ ವಿಕ್ರಾಂತ್

ಇನ್ನು ಇದೀಗ ಮರ್ಸಿಡಿಸ್ ಬೆಂಝ್ ಕಂಪನಿಯು 5ನೇ ಜನರೇಷನ್ ಸಿ-ಕ್ಲಾಸ್ ಕಾರು ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಮರ್ಸಿಡಿಸ್ ಬೆಂಜ್ ಇಂಡಿಯಾ ಇಂದು ಹೊಸ ಸಿ ಕ್ಲಾಸ್ ಸೆಡಾನ್ ಉತ್ಪಾದನೆಯ ಪ್ರಾರಂಭವನ್ನು ಘೋಷಿಸಿದೆ. ಮೊದಲ ಯುನಿಟ್ ಪುಣೆ ಬಳಿಯ ಚಕನ್‌ನಲ್ಲಿ ಕಂಪನಿಯ ಸ್ಥಾವರವನ್ನು ಹೊರತಂದಿದೆ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆಂಝ್ ಇಂಡಿಯಾ, ತನ್ನ ಹೊಸ ಸಿ-ಕ್ಲಾಸ್ ಸೆಡಾನ್ ಕಾರು ಖರೀದಿಗಾಗಿ ಬುಕಿಂಗ್ ಅನ್ನು ಬುಧವಾರದಿಂದ (ಏಪ್ರಿಲ್ 13) ಪ್ರಾರಂಭಿಸಲಾಗಿದೆ. ಕಾರಿನ ಬುಕ್ಕಿಂಗ್ ಟೋಕನ್ ಮೊತ್ತ ರೂ.50,000 ನಿಗದಿಪಡಿಸಲಾಗಿದೆ. ಹೊಸ ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಕಾರು ಬಾಹ್ಯ ಮತ್ತು ಆಂತರಿಕ ನವೀಕರಣಗಳೊಂದಿಗೆ ಬರುತ್ತದೆ.

ರೂ.1.16 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್‍ಯುವಿ ಖರೀದಿಸಿದ 'ಮಿರ್ಜಾಪುರ್​' ಖ್ಯಾತಿಯ ನಟ ವಿಕ್ರಾಂತ್

ಹೊಸ ತಲೆಮಾರಿನ ಬಹುನಿರೀಕ್ಷಿತ ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಮೇ 10, 2022 ರಂದು ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ. ಇದು ತನ್ನ ಫ್ರ್ಯಾಂಚೈಸ್ ಪಾಲುದಾರ ನೆಟ್ವರ್ಕ್‌ನಲ್ಲಿ ಮತ್ತು ಮರ್ಸಿಡಿಸ್-ಬೆಂಝ್ ಇಂಡಿಯಾ ಆನ್ಲೈನ್ ಸ್ಟೋರ್‌ನಲ್ಲಿ ಡಿಜಿಟಲ್ ಆಗಿ ಲಭ್ಯವಾಗಲಿದೆ. ಈ ಹೊಸ ತಲೆಮಾರಿನ ಸಿ-ಕ್ಲಾಸ್ ಸೆಡಾನ್ ನಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಸಲಾಗಿದೆ.

Article Published On: Thursday, May 5, 2022, 10:35 [IST]
English summary
Mirzapur star vikrant massey buys new mercedes benz gls details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+