ವ್ಯಾಗನ್ ಆರ್‍ಗಿಂತಲೂ ಅಗ್ಗದ ಬೆಲೆಗೆ ಪಜೆರೋ ಮಾರಾಟ ಮಾಡಲಿದ್ದಾರೆ ಈ ನಟ..!
ಮಿಟ್ಸುಬಿಷಿ ಕಂಪನಿಯ ಪಜೆರೋ ಎಸ್‍ಎಫ್‍ಎಕ್ಸ್ ಭಾರತದಲ್ಲಿ ಮಾರಾಟವಾಗುವ ಅತ್ಯುತ್ತಮವಾದ ಆಫ್ ರೋಡ್ ಕಾರುಗಳಲ್ಲಿ ಒಂದಾಗಿದೆ. ಈ ಎಸ್‍ಯುವಿಯನ್ನು ಈಗ ಸ್ಥಗಿತಗೊಳಿಸಲಾಗಿದ್ದರೂ, ತನ್ನ ಆಫ್ ರೋಡ್ ಸಾಮರ್ಥ್ಯ ಹಾಗೂ ಚಾಸೀಸ್‍ನಿಂದಾಗಿ ಈ ಎಸ್‍ಯುವಿ ಇನ್ನೂ ಕಾರು ಪ್ರಿಯರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ.

ಈ ಎಸ್‍ಯುವಿ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಶಾರೂಖ್ ಖಾನ್‍ರಂತಹ ತಾರೆಯರು ಈ ಎಸ್‍ಯುವಿಯನ್ನು ಹೊಂದಿದ್ದರು. ಈ ಎಸ್‍ಯುವಿಯನ್ನು ಹೊಂದಿದ್ದ ಮತ್ತೊಬ್ಬ ಬಾಲಿವುಡ್ ತಾರೆಯೆಂದರೆ ಅಭಯ್ ಡಿಯೊಲ್. ಅವರು ತಮ್ಮ ಬಳಿಯಿರುವ ಪಜೆರೋ ಎಸ್‍ಎಫ್‍ಎಕ್ಸ್ ಎಸ್‍ಯುವಿಯನ್ನು ಮಾರಾಟ ಮಾಡಲು ಬಯಸಿದ್ದಾರೆ.

ಕಪ್ಪು ಹಾಗೂ ಬಿಳಿ ಬಣ್ಣದಲ್ಲಿರುವ ಈ ಎಸ್‍ಯುವಿಗೆ ರೂ.4.99 ಲಕ್ಷ ಬೆಲೆ ನಿಗದಿಪಡಿಸಿದ್ದಾರೆ. ಈ ಬೆಲೆಯು ಟಾಪ್ ಎಂಡ್ ಮಾದರಿಯ ಮಾರುತಿ ಸುಜುಕಿ ವ್ಯಾಗನ್‍ಆರ್ ಹ್ಯಾಚ್‍ಬ್ಯಾಕ್ ಕಾರಿಗಿಂತ ಕಡಿಮೆಯಾಗಿದೆ. ಯಾವ ಕಾರಣಕ್ಕೆ ಈ ಎಸ್‍ಯುವಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬುದು ತಿಳಿದು ಬಂದಿಲ್ಲ.

ಈ ಮಿಟ್ಸುಬಿಷಿ ಪಜೆರೋ ಎಸ್‍ಎಫ್‍ಎಕ್ಸ್ ರೂ. 4.99 ಲಕ್ಷ ಬೆಲೆಯನ್ನು ಹೊಂದಿರುವ ಕಾರಣಕ್ಕೆ ಹಾಗೂ ಅಭಯ್ ಡಿಯೊಲ್ ಈ ಎಸ್‍ಯುವಿಯ ಮಾಲೀಕರು ಎಂಬ ಕಾರಣಕ್ಕಾಗಿ ಹೆಚ್ಚು ಸುದ್ದಿಯಾಗುತ್ತಿದೆ. ಯಾವುದೇ ಸೆಲೆಬ್ರಿಟಿ ತಮ್ಮ ಬಳಿಯಿರುವ ಕಾರ್ ಅನ್ನು ಮಾರಾಟ ಮಾಡುವುದಾದರೆ, ಸೆಲೆಬ್ರಿಟಿ ಕಾರು ಎಂಬ ಕಾರಣಕ್ಕೆ ಹೆಚ್ಚಿನ ಬೆಲೆಯನ್ನು ನಿಗದಿಪಡಿಸಲಾಗುತ್ತದೆ.

ಆದರೆ ಅಭಯ್ ಡಿಯೊಲ್‍ರವರು ತಮ್ಮ ಬಳಿಯಿರುವ ಪಜೆರೊ ಎಸ್‍ಎಫ್‍ಎಕ್ಸ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಪಜೆರೋ ಎಸ್‍ಯುವಿ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯನ್ನು 2008ರಲ್ಲಿ ಮುಂಬೈನಲ್ಲಿ ಖರೀದಿಸಲಾಗಿತ್ತು.

ಈ ಎಸ್‍ಯುವಿಯು 84,000 ಕಿ.ಮೀಗಳಷ್ಟು ಕ್ರಮಿಸಿದೆ. ಇದುವರೆಗೂ ಈ ಎಸ್‍ಯುವಿಗೆ ಅಭಯ್ ಡಿಯೊಲ್‍ರವರು ಮಾತ್ರ ಏಕೈಕ ಮಾಲೀಕರಾಗಿದ್ದಾರೆ. ಈ ಚಿತ್ರಗಳಲ್ಲಿ ಕಾಣುವಂತೆ ಎಸ್‍ಯುವಿಯ ಹೊರಭಾಗಕ್ಕೆ ಆಗಲಿ ಅಥವಾ ಇಂಟಿರಿಯರ್‍ಗೆ ಆಗಲಿ ಯಾವುದೇ ಹಾನಿಯಾಗಿಲ್ಲ.

ಎಸ್‍ಯುವಿಯನ್ನು ಖರೀದಿಸಿದಾಗ ಹೇಗಿತ್ತೋ ಈಗಲೂ ಸಹ ಎಸ್‍ಯುವಿಯು ಅದೇ ಸ್ಥಿತಿಯಲ್ಲಿದೆ. ಆದರೆ ಹೆಚ್ಚುವರಿಯಾಗಿ ಮುಂಭಾಗದ ಬಂಪರ್‍ಗೆ ಎಲ್‍ಇಡಿ ಬಾರ್ ಅಳವಡಿಸಲಾಗಿದೆ. ಈ ಪಜೆರೋ ಎಸ್‍ಎಫ್‍ಎಕ್ಸ್ 4 ವ್ಹೀಲ್ ಡ್ರೈವ್ ಅನ್ನು ಹೊಂದಿದೆ.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಈ ಎಸ್‍ಯುವಿಯಲ್ಲಿ ಅಳವಡಿಸಲಾಗಿರುವ 2.8 ಲೀಟರಿನ 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಹಾಗೂ 280 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡ್‍ನ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

4 ವ್ಹೀಲ್ ಡ್ರೈವ್ ಜೊತೆಗೆ ಲೋ ರೆಶಿಯೊ ಹಾಗೂ ಹೈ ರೆಶಿಯೊಗಳನ್ನು ನೀಡಲಾಗುತ್ತದೆ. ಬಿಎಸ್ 4 ಎಂಜಿನ್ ಹೊಂದಿರುವ ಈ ಪಜೆರೋ ಎಸ್‍ಎಫ್‍ಎಕ್ಸ್ ಬೇರೆ ಮಾದರಿಯ ಎಸ್‍ಯುವಿಗಳಿಗಿಂತ 10 ಬಿಹೆಚ್‍ಪಿ ಕಡಿಮೆ ಪವರ್ ಹೊಂದಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ನೀವೂ ಸಹ ಒರಟಾಗಿರುವ ಮಿಟ್ಸುಬಿಷಿ ಪಜೆರೋ ಎಸ್‍ಯುವಿಯನ್ನು ಖರೀದಿಸಲು ಬಯಸುತ್ತಿದ್ದರೆ, ಈ ಎಸ್‍ಯುವಿಯನ್ನು ಖರೀದಿಸಬಹುದು. ಖರೀದಿಸುವ ಮುನ್ನ ನೀರಿನಿಂದ ಈ ಎಸ್‍ಯುವಿಗೆ ಯಾವುದಾದರೂ ಹಾನಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.


Click it and Unblock the Notifications








