ಲೇಡಿ ಸೂಪರ್ ಕಾರು ಓಡಿಸಿದ್ರೆ ಇದೇನಾ ಗತಿ ?

By Nagaraja

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಚಾಲನಾ ಕೌಶಲ್ಯವನ್ನು ಸಾಕಷ್ಟು ನಗೆಪಾಟಲಿಗೆಗೊಳಪಡಿಸಲಾಗುತ್ತದೆ. ಮಹಿಳೆಯರಲ್ಲೂ ನುರಿತ ಚಾಲಕಿಯರೂ ಇದ್ದರೂ ಸಹ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ಗೇಲಿ ಮಾಡಲು ಪ್ರಚೋದನೆ ನೀಡುತ್ತದೆ.

ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಥಾಣೆ ಸ್ಥಳೀಯ ಶಾಸಕರ ಪತ್ನಿ ಸುಮನ್ ಮೆಹ್ತಾ ಅವರು ಡ್ರೈವ್ ಮಾಡುತ್ತಿದ್ದ ಹೊಚ್ಚ ಹೊಸ ಲಂಬೋರ್ಗಿನಿ ಸೂಪರ್ ಕಾರಿನಲ್ಲಿ ಎಡವಟ್ಟು ಮಾಡಿರುವುದು ಸುದ್ದಿಗೆ ಗ್ರಾಸವಾಗಿದೆ.

ಲೇಡಿ ಸೂಪರ್ ಕಾರು ಓಡಿಸಿದ್ರೆ ಇದೇನಾ ಗತಿ ?

ಸ್ಥಳೀಯ ಶಾಸಕ ನರೇಂದ್ರ ಮೆಹ್ತಾ ಎಂಬವರ ಪತ್ನಿ ಸುಮನ್ ಮೆಹ್ತಾ, ಥಾಣೆಯ ಮಿರಾ-ಭಯಂಧರ್ ರಸ್ತೆಯಲ್ಲಿ 3.43 ಕೋಟಿ ಬೆಲೆ ಬಾಳುವ ಲಂಬೋರ್ಗಿನಿ ಹ್ಯುರಕನ್ ಸೂಪರ್ ಕಾರನ್ನು ನೇರವಾಗಿ ಬದಿಯಲ್ಲಿ ನಿಂತಿರುವ ಆಟೋ ರಿಕ್ಷಾಗೆ ಢಿಕ್ಕಿ ಹೊಡೆದಿದ್ದಾರೆ.

ಲೇಡಿ ಸೂಪರ್ ಕಾರು ಓಡಿಸಿದ್ರೆ ಇದೇನಾ ಗತಿ ?

ಹೊಚ್ಚ ಹೊಸ ಕಾರಿನ ಮಾಲಿಕತ್ವ ದಾಖಲೆಗಳನ್ನು ಪಡೆದ ಅರ್ಧ ತಾಸಿನೊಳಗೆ ಕಾರು ಅಪಘಾತಕ್ಕೊಳಗಾಗಿದೆ. ಆದರೆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಲೇಡಿ ಸೂಪರ್ ಕಾರು ಓಡಿಸಿದ್ರೆ ಇದೇನಾ ಗತಿ ?

ಸುಮನ್ ಮೆಹ್ತಾ ಚಾಲನೆ ಮೇಲೆ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಂಡಿರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಲೇಡಿ ಸೂಪರ್ ಕಾರು ಓಡಿಸಿದ್ರೆ ಇದೇನಾ ಗತಿ ?

ಕೇಸರಿ ವರ್ಣದ ಲಂಬೋ ಹ್ಯುರಕನ್ ಕಾರಿಗೆ ಜಾಗತಿಕ ಮಟ್ಟದಲ್ಲೂ ಅತೀವ ಬೇಡಿಕೆಯಿದ್ದು, ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 3.43 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಲೇಡಿ ಸೂಪರ್ ಕಾರು ಓಡಿಸಿದ್ರೆ ಇದೇನಾ ಗತಿ ?

ಇಟಲಿಯ ಐಕಾನಿಕ್ ಸಂಸ್ಥೆಯಿಂದ ನಿರ್ಮಿತ ಲಂಬೋರ್ಗಿನಿ ಹ್ಯುರಕನ್ ಕಾರಿನಲ್ಲಿರುವ ಶಕ್ತಿಶಾಲಿ 5.2 ಲೀಟರ್ ವಿ10 ಎಂಜಿನ್ 560 ಎನ್ ಎಂ ತಿರುಗುಬಲದಲ್ಲಿ 610 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಲೇಡಿ ಸೂಪರ್ ಕಾರು ಓಡಿಸಿದ್ರೆ ಇದೇನಾ ಗತಿ ?

ಲಂಬೋರ್ಗಿನಿ ಹ್ಯುರಕನ್ ಕೇವಲ 3.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆ ಹಾಗೂ ಗಂಟೆಗೆ ಗರಿಷ್ಠ 325 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಲೇಡಿ ಸೂಪರ್ ಕಾರು ಓಡಿಸಿದ್ರೆ ಇದೇನಾ ಗತಿ ?

ಒಟ್ಟಿನಲ್ಲಿ ಸುಮನ್ ಮಾಡಿದ ಎಡವಟ್ಟಿನಿಂದಾಗಿ ಅಪಘಾತ ಸಂಭವಿಸಿದ್ದು, ಮಹಿಳೆಯರ ಚಾಲನಾ ಕೌಶಲ್ಯದ ಮೇಲೆ ಕಪ್ಪು ಚುಕ್ಕೆ ಬೀಳುವಂತಾಗಿದೆ. ಈ ಸಂಬಂಧ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

ಅಪಘಾತ ವಿಡಿಯೋ ವೀಕ್ಷಿಸಿ

More from DriveSpark

Article Published On: Wednesday, August 31, 2016, 11:29 [IST]
English summary
Video: Watch This MLA's Wife Crash Her Huracan Within Minutes After Delivery!
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+