ಅಯೋಧ್ಯೆ ತಲುಪಲಾಗದ ಹಳ್ಳಿ ಜನರಿಗಾಗಿ ಮೊಬೈಲ್ ರಾಮಮಂದಿರ ನಿರ್ಮಿಸಿದ ಮಹಾನುಭಾವ!
ಒಂದೆಡೆ ದೇಶವೆಲ್ಲಾ ಅಯೋಧ್ಯೆ ರಾಮ ಜನ್ಮ ಭೂಮಿಯಲ್ಲಿ ಮಂದಿರದ ಉದ್ಘಾಟನೆಗೆ ಕಾತುರದಿಂದ ಕಾಯುತ್ತಿದ್ದರೆ, ಇತ್ತ ಇವರು ಅಯೋಧ್ಯೆ ರಾಮಮಂದಿರವನ್ನೇ ಸ್ಥಳೀಯವಾಗಿ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೈದರಾಬಾದ್ ಮೂಲದ 'ಸುಧಾ ಕಾರ್ ಮ್ಯೂಸಿಯಂ' ಅಯೋಧ್ಯೆಯ ರಾಮಮಂದಿರದ ಮಾದರಿಯನ್ನು ರೂಪಿಸಿದ್ದು, ಈಗ ಸಖತ್ ವೈರಲ್ ಆಗಿದೆ.
ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೂ ಮುನ್ನವೇ ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್‌ನಲ್ಲಿರುವ ಸುಧಾ ಕಾರ್ ಮ್ಯೂಸಿಯಂ, ವಿಶಿಷ್ಟವಾದ ರಾಮಮಂದಿರವನ್ನು ನಿರ್ಮಿಸಿದೆ. ಸುಧಾ ಕಾರ್ ಮ್ಯೂಸಿಯಂ ಒಂದು 'ಮಾಸ್ಟರ್‌ಪೀಸ್' ಅನ್ನು ರಚಿಸಿದ್ದು, ಅದು ಕಾರಿನ ಮೇಲೆ ಜೋಡಿಸಲಾದ ದೇವಾಲಯದ ಪ್ರತಿಕೃತಿಯನ್ನು ತೋರಿಸುತ್ತದೆ. ಥೇಟ್ ಅಯೋಧ್ಯೆಯ ರಾಮ ಮಂದಿರವನ್ನು ಇದು ನೆನಪಿಸುತ್ತದೆ.

ಮೊಬೈಲ್ ಮಂದಿರದ ಉದ್ದೇಶವೇನು?: ಈ ಕಾರಿನ ಮೇಲಿನ ಅಯೋಧ್ಯೆ ರಾಮಮಂದಿರದ ವೀಡಿಯೊವನ್ನು ANI X (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದೆ. ಸುಧಾ ಕಾರ್ ಮ್ಯೂಸಿಯಂನ ಮಾಲೀಕ ಸುಧಾಕರ್ ಯಾದವ್ ಅವರು, ಕಳೆದ ಎರಡು ವರ್ಷಗಳಿಂದ ಯೋಜನೆಯನ್ನು ರೂಪಿಸುತ್ತಿದ್ದಾರೆ ಎಂದು ಎಎನ್‌ಐಗೆ ತಿಳಿಸಿದ್ದಾರೆ. ಮಾದರಿಯನ್ನು ರಚಿಸಲು ಒಟ್ಟು 21 ಜನರು ಒಟ್ಟಾಗಿ ಕೆಲಸ ಮಾಡಿದ್ದಾರೆ.
"ಇದು ಮೊಬೈಲ್ ವ್ಯಾನ್. ನಾನು ಅಂದುಕೊಂಡ ಸಮಯಕ್ಕೆ ಮಂದಿರವನ್ನು ಮುಗಿಸಿರುವುದು ನನಗೆ ತುಂಬಾ ಸಂತೋಷವಾಗಿದೆ. ಜನವರಿ 19 ರಂದು, ನಾವು ಈ ಕಾರನ್ನು ಇಲ್ಲಿನ ಪ್ರಸಿದ್ಧ ವಸ್ತುಪ್ರದರ್ಶನ ಮೈದಾನದಲ್ಲಿ ಇರಿಸಲಿದ್ದೇವೆ. ಇದು ಜನವರಿ 19 ರಿಂದ ಫೆಬ್ರವರಿ 15 ರವರೆಗೆ ಪ್ರದರ್ಶನದಲ್ಲಿರಲಿದೆ. ಎಲ್ಲರೂ ಅಯೋಧ್ಯೆಗೆ ಹೋಗಲು ಸಾಧ್ಯವಿಲ್ಲದ ಕಾರಣ ನಾವು ಅದನ್ನು ಹಳ್ಳಿಗಳಿಗೂ ಕೊಂಡೊಯ್ಯಲಿದ್ದೇವೆ. ನಾವು ಅಯೋಧ್ಯೆಯನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯುತ್ತೇವೆ.

"ತಂತ್ರಜ್ಞಾನ ಮತ್ತು ಕಲೆಯ ವಿಶಿಷ್ಟ ಮಿಶ್ರಣದಲ್ಲಿ, ಹೈದರಾಬಾದ್ ಮೂಲದ ಸುಧಾ ಕಾರ್ ಮ್ಯೂಸಿಯಂ ಮೊಬೈಲ್ ಮೇರುಕೃತಿಯನ್ನು ರೂಪಿಸಿದೆ. ಅಯೋಧ್ಯೆ ರಾಮ ಮಂದಿರವನ್ನು ನೋಡಲಾಗದ ಅದೆಷ್ಟೋ ಜನರಿಗೆ ನಮ್ಮಿಂದ ಆಗುವ ಸಣ್ಣ ಸಹಾಯವನ್ನು ಮಾಡುತ್ತಿದ್ದೇವೆ. ಭಕ್ತರು ನಮ್ಮ ರಾಮಮಂದಿರವನ್ನು ವೀಕ್ಷಿಸಿ ಸಂತೃಪ್ತಿ ಪಡೆಯಬಹುದು ಎಂದು ಸುಧಾಕರ್ ಯಾದವ್ ಹೇಳಿದರು.
ಅಯೋಧ್ಯೆಯ ರಾಮಮಂದಿರದ ಸಮಾರಂಭ: ಇಂದು (ಜನವರಿ 22 ರಂದು) ಮಂದಿರದ ಉದ್ಘಾಟನೆಯು ಭಾರತದ ಇತಿಹಾಸದಲ್ಲೇ ಎಂದು ಕೇಳರಿಯದ ರೀತಿಯಲ್ಲಿ ನಡೆಯುತ್ತಿದೆ. ಈ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ, ದೇಶದ ವಿವಿಧ ಕ್ಷೇತ್ರಗಳ ಸಾವಿರಾರು ಜನರು - ರಾಜಕಾರಣಿಗಳು, ಸಂತರು ಮತ್ತು ಗಣ್ಯರು ಭಾಗವಹಿಸಿದ್ದಾರೆ.
ಬಾಲ ರಾಮನಿಗೆ ಪ್ರಾಣ ಪ್ರತಿಷ್ಠಾಪನೆ: ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ದೇಶಾದ್ಯಂತ ಆಯ್ದ ಗಣ್ಯರನ್ನು ಮಾತ್ರ ಆಹ್ವಾನಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಅವಕಾಶವಿರುವುದಿಲ್ಲ. ಆದರೆ, ನೀವು ಆನ್‌ಲೈನ್‌ನಲ್ಲಿಯೇ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ನೇರವಾಗಿ ವೀಕ್ಷಿಸಬಹುದು. ಹಾಗೆಯೇ ರಾಮಮಂದಿರ ಪ್ರಾಣ ಪ್ರತಿಷ್ಠಾ ಪೂಜೆಯ ಪ್ರಸಾದವನ್ನು ಬುಕ್ ಮಾಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications