ನಾನು ಕಾರು, ಸೈಕಲ್ ಸಹ ಖರೀದಿಸಿಲ್ಲ: ಪ್ರಧಾನಿ ನರೇಂದ್ರ ಮೋದಿ.. ಎಲ್ಲಿ ಹೇಳಿದರೂ ಗೊತ್ತೇ?

ರಾಷ್ಟ್ರ ರಾಜಧಾನಿ ನವದೆಹಲಿಯ ಭಾರತ್ ಮಂಟಪದಲ್ಲಿ ದೇಶದ ಅತಿದೊಡ್ಡ ವಾಹನ ಪ್ರದರ್ಶನ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility Global Expo 2024)ವನ್ನು ಆಯೋಜಿಸಿಲಾಗಿದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎಕ್ಸ್‌ಪೋಗೆ ಭೇಟಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಪುಟ ಸಹೋದ್ಯೋಗಿಗಳಾದ ಪಿಯೂಷ್ ಗೋಯಲ್ (Piyush Goyal), ಹರ್ದೀಪ್ ಸಿಂಗ್ ಪುರಿ (Hardeep Singh Puri) ಮತ್ತು ನಿತಿನ್ ಗಡ್ಕರಿ (Nitin Gadkari) ಸಾಥ್ ನೀಡಿದರು. ಎಕ್ಸ್‌ಪೋದ ವಿವಿಧ ಮಳಿಗೆಗೆ ತೆರಳಿದ ಅವರು, ಸಂಯೋಜಕರು ಮತ್ತು ಪ್ರದರ್ಶಕರೊಂದಿಗೆ ಸಂವಾದ ನಡೆದರು. ಆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

Mobility Sector Crucial Role Make India Developed By 2047: Pm Modi Says In Bharat Mobility Global Expo

ಎಕ್ಸ್‌ಪೋ ಏರ್ಪಡಿಸಿರುವುದು ಅತ್ಯಂತ ಸಂತಸದ ಕ್ಷಣವಾಗಿದೆ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ ಅವರು 'ನಾನು ಈ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಆಟೋಮೋಟಿವ್ (Automotive) ಉದ್ಯಮವನ್ನು ಮೊದಲಿಗೆ ಅಭಿನಂದಿಸುತ್ತೇನೆ. ಇಂದು ಎಲ್ಲಾ ಮಳಿಗೆ (ಸ್ಟಾಲ್‌) ಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ನಾನು ನೋಡಿದ ಮಳಿಗೆಗಳು ಬಹಳ ಆಕರ್ಷಕವಾಗಿವೆ' ಎಂದು ಹೇಳಿದರು.

'ಇದೆಲ್ಲವೂ ನಮ್ಮ ದೇಶದಲ್ಲಿ ನಡೆಯುತ್ತಿರವುದು ಖುಷಿ ತಂದಿದೆ. ನಾನು ಯಾವತ್ತು ಕಾರನ್ನು ಖರೀದಿಸಿಲ್ಲ, ಸೈಕಲ್ ಸಹ ಕೊಂಡಿಲ್ಲ ಹಾಗಾಗಿ ಅನುಭವವಿಲ್ಲ. ದೆಹಲಿಯ ಜನ ಈ ಎಕ್ಸ್‌ಪೋ ನೋಡಲು ಬರಬೇಕು ಎಂದು ಹೇಳಿದರು. ಭಾರತವನ್ನು 2047ರ ವೇಳೆಗೆ ಅಭಿವೃದ್ಧಿಗೊಂಡ ದೇಶವನ್ನಾಗಿಸುವ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ವಾಹನ ಕ್ಷೇತ್ರ (ಚಲನಶೀಲತೆ ವಲಯ - Mobility Sector) ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.

Mobility Sector Crucial Role Make India Developed By 2047: Pm Modi Says In Bharat Mobility Global Expo

'ದೇಶದಲ್ಲಿ 2014ರ ಹಿಂದಿನ 10 ವರ್ಷಗಳ ಅವಧಿಯಲ್ಲಿ ಸುಮಾರು 12 ಕೋಟಿ ವಾಹನಗಳು ಮಾರಾಟವಾಗಿದ್ದವು. ಆದರೆ, 2014ರಿಂದ ಇಲ್ಲಿಯವರೆಗೆ 21 ಕೋಟಿಗೂ ಹೆಚ್ಚು ವಾಹನಗಳು ಮಾರಾಟವಾಗಿವೆ. 10 ವರ್ಷಗಳ ಹಿಂದೆ ಸುಮಾರು 2,000 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗುತ್ತಿದ್ದವು. ಈಗ ಅದು 12 ಲಕ್ಷ ಎಲೆಕ್ಟ್ರಿಕ್ ವಾಹನಗಳಿಗೆ ಏರಿಕೆಯಾಗಿದೆ ಎಂದು ಹೇಳಿದರು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು, ಅಟಲ್ ಸೇತುವನ್ನು ಉಲ್ಲೇಖಿಸಿ, ದೇಶದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಯನ್ನು ಶ್ಲಾಘಿಸಿದರು. ನಾವು ಸಮುದ್ರ ಹಾಗೂ ಪರ್ವತಗಳಿಗೆ ಸವಾಲನ್ನು ಹಾಕುತ್ತಿದ್ದೇವೆ. ದಾಖಲೆ ಸಮಯದಲ್ಲಿ ಎಂಜಿನಿಯರಿಂಗ್ ಅದ್ಭುತಗಳನ್ನು ಮಾಡಿದ್ದೇವೆ. ಅಟಲ್ ಸುರಂಗದಿಂದ ಹಿಡಿದು ಅಟಲ್ ಸೇತುವರೆಗೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ತಿಳಿಸಿದರು.

Mobility Sector Crucial Role Make India Developed By 2047: Pm Modi Says In Bharat Mobility Global Expo

ಕಳೆದ 10 ವರ್ಷದಲ್ಲಿ ದೇಶದಲ್ಲಿ 75 ಹೊಸ ವಿಮಾನನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಸುಮಾರು 4 ಲಕ್ಷ ರಸ್ತೆಗಳನ್ನು ಮಾಡಲಾಗಿದೆ ಎಂದರು. ಬಜೆಟ್ ಬಗ್ಗೆ ಮಾತನಾಡಿದ ಅವರು, ಇದು ಮಧ್ಯಂತರ ಬಜೆಟ್ ಆಗಿತ್ತು. ನಾವು ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬಂದಾಗ ಸಂಪೂರ್ಣ ಬಜೆಟ್ ಮಂಡಿಸಲಿದ್ದೇವೆ. 2014ರಲ್ಲಿ ಭಾರತದ ಬಂಡವಾಳ ವೆಚ್ಚ (Capital Expenditure) ರೂ.2 ಲಕ್ಷ ಕೋಟಿಗಿಂತ ಕಡಿಮೆಯಿತ್ತು. ಈಗ ರೂ.11 ಲಕ್ಷ ಕೋಟಿಗೆ ಹೆಚ್ಚಾಗಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, February 2, 2024, 19:54 [IST]
English summary
Mobility sector crucial role make india developed by 2047 pm modi says in bharat mobility expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+