ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಪೋರ್ಷೆ ಕಾರು

ಪೋರ್ಷೆ ವಿಶ್ವದ ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಈ ಕಂಪನಿಯು ಐಷಾರಾಮಿ ಕಾರುಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಪೋರ್ಷೆ ಪ್ರಪಂಚದಲ್ಲಿರುವ ಶ್ರೀಮಂತರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ.

ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಪೋರ್ಷೆ ಕಾರು

ಇದರ ಜೊತೆಗೆ ಪೋರ್ಷೆ ಕಂಪನಿಯು ಸೂಪರ್ ಕಾರುಗಳನ್ನು ಸಹ ಉತ್ಪಾದಿಸುತ್ತದೆ. ಫೋರ್ಷೆ ಕ್ಯಾರೆರಾ ಜಿಟಿ ಸೂಪರ್ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಅತಿ ವೇಗದಲ್ಲಿ ಚಲಿಸಿ ಅಪಘಾತಕ್ಕೀಡಾಗಿದೆ. ಅಪಘಾತಕ್ಕೀಡಾದಾಗ ಈ ಕಾರ್ ಅನ್ನು ಚಾಲನೆ ಮಾಡುತ್ತಿದ್ದವರು ಕೋಲ್ಟ್‌ರಷ್ ರಾಲಿಯ ಸಂಸ್ಥಾಪಕರಾದ ಬೆಂಜಮಿನ್ ಬೆನ್ ಸೇನ್‌ರವರು. ವರದಿಗಳ ಪ್ರಕಾರ, ಈ ಅಪಘಾತದಿಂದಾಗಿ ಕಾರು ತೀವ್ರವಾಗಿ ಹಾನಿಯಾಗಿದ್ದು, ಸುಮಾರು 12 ಕಾರುಗಳು ಹಾಗೂ ಒಬ್ಬರು ಪಾದಚಾರಿ ಅಪಘಾತಕ್ಕೀಡಾಗಿದ್ದಾರೆ.

ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಪೋರ್ಷೆ ಕಾರು

ಅಪಘಾತದ ಫೋಟೋವನ್ನು ಗಮನಿಸಿದಾಗ ಘಟನೆಯ ತೀವ್ರತೆಯ ಬಗ್ಗೆ ತಿಳಿಯುತ್ತದೆ. ಈ ಅಪಘಾತ ಸಂಭವಿಸಿದಾಗ ಬೆಂಜಮಿನ್‌ರವರು ಆಲ್ಕೊಹಾಲ್ ಸೇವಿಸಿದ್ದರು ಎಂದು ಹೇಳಲಾಗಿದ್ದು, ಪೊಲೀಸರು ಅದನ್ನು ಖಚಿತಪಡಿಸಿದ್ದಾರೆ. ಈ ಘಟನೆ ಏಪ್ರಿಲ್ 7ರಂದು ನಡೆದಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಪೋರ್ಷೆ ಕಾರು

ಈ ಪ್ರಬಲವಾದ ಪೋರ್ಷೆ ಕ್ಯಾರೆರಾ ಜಿಟಿ ಕಾರನ್ನು ಕಾರ್ಬೆಲ್ಲಾ ಕಾರ್ ಟ್ಯೂನಿಂಗ್ ಮೂಲಕ ಬೆಂಜಮಿನ್‌ರವರು ಮತ್ತಷ್ಟು ಬಲಶಾಲಿಯಾಗಿ ಮಾಡಿಫೈಗೊಳಿಸಿದ್ದರು. ಇದರಿಂದಾಗಿ ಈ ಕಾರು ಮೊದಲಿಗಿಂತ ಹೆಚ್ಚು ಪವರ್ ಉತ್ಪಾದಿಸುತ್ತದೆ. ಇದು ಸಹ ಅಪಘಾತಕ್ಕೆ ಕಾರಣವಾಗಿದೆ.

ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಪೋರ್ಷೆ ಕಾರು

ಬೆಂಜಮಿನ್‌ರವರು ಇದಕ್ಕಿಂತ ಹೆಚ್ಚು ಶಕ್ತಿಶಾಲಿಯಾದ ಕಾರುಗಳನ್ನು ಓಡಿಸಿರುವ ಅನುಭವವನ್ನು ಹೊಂದಿದ್ದಾರೆ. ಆದರೂ ಈ ಘಟನೆ ನಡೆದಿದೆ. ಅವರು ಕುಡಿದಿದ್ದ ಕಾರಣಕ್ಕೆ ಸಾರ್ವಜನಿಕ ರಸ್ತೆಯಲ್ಲಿ ಅತಿ ವೇಗವಾಗಿ ಕಾರು ಚಾಲನೆ ಮಾಡಿದ್ದಾರೆ.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಪೋರ್ಷೆ ಕಾರು

ಇದರಿಂದಾಗಿ ಕಾರ್ ಅನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಕ್ಯಾರೆರಾ ಜಿಟಿ ಕಾರು ರಸ್ತೆಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಬೇರೆ ಕಾರುಗಳಿಗೆ ಗುದ್ದಿದೆ. ಈ ಅಪಘಾತದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಪೋರ್ಷೆ ಕಾರು

ಬೆಂಜಮಿನ್‌ರವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವುದರಿಂದ, ಅವರ ಅಭಿಮಾನಿಗಳು ಕೂಡ ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 33 ವರ್ಷದ ಬೆಂಜಮಿನ್ ಹಲವಾರು ಹೈಸ್ಪೀಡ್ ಕಾರುಗಳನ್ನು ಹೊಂದಿದ್ದಾರೆ.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಪೋರ್ಷೆ ಕಾರು

ಮಿರಾಜ್ ಜಿಟಿಯಂತಹ ಹಲವಾರು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಈ ಪೋರ್ಷೆ ಕ್ಯಾರೆರಾ ಸಹ ಒಂದು. ಅಪಘಾತದಲ್ಲಿ ಭಾರಿ ಪ್ರಮಾಣದಲ್ಲಿ ನಜ್ಜುಗುಜ್ಜಾಗಿ ಈ ಕಾರಿನ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಪಘಾತಕ್ಕೀಡಾದ ಈ ಸ್ಥಳದಲ್ಲಿರುವ ಜನರು ಕಾರುಗಳ ಬಗ್ಗೆ ವಿಪರೀತ ಎನ್ನುವಷ್ಟು ಕ್ರೇಜ್ ಹೊಂದಿದ್ದಾರೆ.

ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಪೋರ್ಷೆ ಕಾರು

ಈ ಕಾರುಗಳನ್ನು ನೈಜ ಸಾಮರ್ಥ್ಯಕ್ಕಿಂತ ಹೆಚ್ಚಿನ ಪವರ್ ನೀಡುವಂತೆ ಮಾಡಿಫೈ ಮಾಡಲಾಗಿದೆ. ಮಾಡಿಫೈ ಮಾಡುವ ಕಾರುಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಓಡಿಸಲು ಕಷ್ಟವಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಪೋರ್ಷೆ ಕಾರು

ಬೆಂಜಮಿನ್‌ರವರು ರಾಲಿಗಳಲ್ಲಿ ಭಾಗವಹಿಸುವ ಕಾರಣಕ್ಕೆ ಇದಕ್ಕಿಂತ ಹೈಸ್ಪೀಡ್ ಕಾರುಗಳನ್ನು ಸಹ ಚಾಲನೆ ಮಾಡಬಲ್ಲರು. ಆದರೆ ಮದ್ಯ ಸೇವಿಸಿ ಕಾರು ಚಾಲನೆ ಮಾಡಿದ ಕಾರಣಕ್ಕೆ ಅಪಘಾತಕ್ಕೀಡಾಗಿದ್ದಾರೆ.

Most Read Articles

Kannada
English summary
Modified Porsche Carrera GT causes serious accident. Read in Kannada.
Story first published: Monday, April 13, 2020, 13:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X