ಐಷಾರಾಮಿ ಮಿನಿ ಎಲೆಕ್ಟ್ರಿಕ್ ಕಾರು ಖರೀದಿಸಿದ ಲೇಡಿ ಸೂಪರ್ ಸ್ಟಾರ್
ಸಿನಿಮಾ ರಂಗದಲ್ಲಿರುವ ನಟರು ಮಾತ್ರವಲ್ಲದೇ ನಟಿಯರಿಗೂ ಕೂಡ ಕಾರು ಕ್ರೇಜ್ ಹೆಚ್ಚು ಹೊಂದಿದ್ದಾರೆ. ಸಿನಿಮಾ ನಟಿಯರು ಕೂಡ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ನಟಿಯರು ತಮ್ಮ ಮೆಚ್ಚಿನ ದುಬಾರಿ ಬ್ರ್ಯಾಂಡ್‌ನ ಕಾರುಗಳನ್ನು ಖರೀದಿಸುತ್ತಾರೆ.

ಇದೀಗ ಮಲಯಾಳಂ ಲೇಡಿ ಸೂಪರ್ ಸ್ಟಾರ್ ಮಂಜು ವಾರಿಯರ್ ಅವರು ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ. ನಟಿ ಮಂಜು ವಾರಿಯರ್ ಅವರು ಮಿಡ್ನೈಟ್ ಬ್ಲಾಕ್ ಬಣ್ಣದ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ. ಕಾರಿನ ವಿತರಣೆಯನ್ನು ಪಡೆದುಕೊಂಡ ಬಳಿಕ ಕೇರಳದ ಕೊಚ್ಚಿ ಮೂಲದ ಕ್ಯಾಲ್ಗರಿ ಆಟೋ ಡಿಟೇಲ್ ಹಬ್ ಈ ಕಸ್ಟಮ್ ರೇಸಿಂಗ್ ಹಳದಿ ಬಣ್ಣದ ಯೋಜನೆ ಮತ್ತು ಸ್ಟೈಲಿಂಗ್ ಅನ್ನು ಒದಗಿಸಿತು. ವಾಹನವು ಹೊಸ ಬಣ್ಣದ ಜೊತೆಗೆ ಸ್ಪೋರ್ಟಿ ಪಿಯಾನೋ ಬ್ಲ್ಯಾಕ್ ಸ್ಟ್ರೀಪ್ ಗಳನ್ನು ಹೊಂದಿದೆ.

ಮಂಜು ವಾರಿಯರ್ ಮಲಯಾಳಂ ಚಿತ್ರರಂಗದ ಅತ್ಯಂತ ಯಶಸ್ವಿ ನಟಿ. ಅಲ್ಲದೇ ಇವರು ಸೂಪರ್ ಸ್ಟಾರ್‌ಗಳ ನಾಯಕಿ. 1995ರಲ್ಲಿ ವಾರಿಯರ್ ತನ್ನ 17ನೇ ವಯಸ್ಸಿನಲ್ಲಿ ಸಾಕ್ಷ್ಯಾಮ್ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು.

ನಟಿ ಮಂಜು ವಾರಿಯರ್ ಅವರು 20ನೇ ವಯಸ್ಸಿಗೆ ನಟ ದಿಲೀಪ್ ಅವರನ್ನು ಮದುವೆಯಾಗಿ ನಟನೆಗೆ ಬ್ರೇಕ್ ಹಾಕಿದ್ದರು. ನಂತರ 014ರಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ ಈ ಜೋಡಿ 2015ರಲ್ಲಿ ವಿಚ್ಛೇದನವನ್ನೂ ಪಡೆಯಿತು. ಬಳಿಕ ಚಿತ್ರರಂಗಕ್ಕೆ ಮರಳಿದ ಮಂಜು 'ಹೌ ಓಲ್ಡ್ ಆರ್ ಯು' ಎಂಬ ಸೂಪರ್ ಹಿಟ್ ಸಿನಿಮಾ ನೀಡಿದರು. ಆನಂತರ ನ್ಯಾಶನಲ್ ಫಿಲ್ಮ್ ಅವಾರ್ಡ್, ಕೇರಳ ರಾಜ್ಯ ಪ್ರಶಸ್ತಿ, 7 ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಇಅವರು ಪಡೆದುಕೊಂಡಿದ್ದಾರೆ.

ನಟಿ ಖರೀದಿಸಿದ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರನ್ನು ಮಿನಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 2022ರ ಫೆಬ್ರವರಿ ತಿಂಗಳ ಕೊನೆಯಲ್ಲಿ ಬಿಡುಗಡೆಗೊಳಿಸಿತ್ತು. ಕಂಪನಿಯು ತನ್ನ ಕಂಪನಿಯು ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿ ಮೊದಲ ಬ್ಯಾಚ್‌ನ ವಿತರಣೆಯನ್ನು ಇತ್ತೀಚೆಗೆ ಪ್ರಾರಂಭಿಸಿತು ಮತ್ತು ಮುಂಬರುವ ದಿನಗಳಲ್ಲಿ ಹೊಸ ಬ್ಯಾಚ್‌ನ ಬುಕಿಂಗ್ ಅನ್ನು ಘೋಷಿಸಬಹುದು.

ಭಾರತದಲ್ಲಿ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ಖರೀದಿಗಾಗಿ ಬುಕ್ಕಿಂಗ್ ಅನ್ನು 2021ರ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭಿಸಲಾಗಿತ್ತು. ಕೆಲವೇ ದಿನಗಳಲ್ಲಿ ಮಾಡೆಲ್‌ಗಾಗಿ ನಿಗದಿಪಡಿಸಿದ ಎಲ್ಲಾ ಯುನಿಟ್ ಗಳು ಸೋಲ್ಡ್ ಔಟ್ ಆಗಿತ್ತು. ಈ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.47.20 ಲಕ್ಷವಾಗಿದೆ.

ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರನ್ನು ಭಾರತಕ್ಕೆ ಸಿಬಿಯು ಮಾದರಿಯಾಗಿ ಭಾರತಕ್ಕೆ ತರಲಾಗಿದೆ. ಹೊಸ ಮಿನಿ ಕೂಪರ್ ಎಸ್‌ಇ ಬಿಎಂಡಬ್ಲ್ಯು ಗ್ರೂಪ್‌ನಿಂದ ಭಾರತದಲ್ಲಿ ಮಾರಾಟವಾಗುವ ಮೊದಲ ಆಲ್-ಎಲೆಕ್ಟ್ರಿಕ್ ಮಾದರಿಯಾಗಿದೆ. ಕೂಪರ್ ಎಸ್‌ಇ 3-ಡೋರಿನ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ. ಈ ಹೊಸ ಮಿನಿ ಎಲೆಕ್ಟ್ರಿಕ್ ಕಾರು ಒಂದೇ ರೂಪಾಂತರದಲ್ಲಿ ಲಭ್ಯವಿದೆ.

ಈ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು 32.6 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಇನ್ನು ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಎಲೆಕ್ಟ್ರಿಕ್ ಪವರ್‌ಟ್ರೇನ್ 181 ಬಿಹೆಚ್‍ಪಿ ಪವರ್ ಮತ್ತು 270 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು 7.3 ಸೆಕೆಂಡುಗಳಲ್ಲಿ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಮಿನಿ ಎಲೆಕ್ಟ್ರಿಕ್ ಕಾರು 150 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಇನ್ನು ಡಬ್ಲ್ಯುಎಲ್‌ಟಿಪಿ ಪ್ರಕಾರ ಹೊಸ ಮಿನಿ ಎಲೆಕ್ಟ್ರಿಕ್ ಕಾರನ್ನು ಒಂದು ಭಾರೀ ಪೂರ್ತಿಯಾಗಿ ಚಾರ್ಜ್‌ನಲ್ಲಿ 270 ಕಿಲೋಮೀಟರ್‌ಗಳ ವರೆಗೆ ಚಲಿಸುತ್ತದೆ. 11kW ಎಸಿ ವಾಲ್-ಬಾಕ್ಸ್ ಚಾರ್ಜರ್ ಅನ್ನು ಸೇರಿಸಲಾಗಿದೆ, ಇದು ಕಾರನ್ನು ಗಂಟೆಗಳಲ್ಲಿ ಶೂನ್ಯದಿಂದ ಶೇ.80 ರಷ್ಟು ಚಾರ್ಜ್ ಮಾಡುತ್ತದೆ.

ಗ್ರಾಹಕರು 50kW ಡಿಸಿ ಫಾಸ್ಟ್ ಚಾರ್ಜರ್ ಅನ್ನು ಸಹ ಬಳಸಬಹುದು ಅದು ಕೇವಲ 36 ನಿಮಿಷಗಳಲ್ಲಿ 0-80 ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು, ಯೂನಿಯನ್ ಜ್ಯಾಕ್ ವಿಷಯದ ಎಲ್ಇಡಿ ಟೈಲ್‌ಲೈಟ್‌ಗಳು, ರೌಂಡ್ ORVM ಗಳು ಮತ್ತು ಆ ಪರಿಚಿತ ಪ್ರೊಫೈಲ್‌ನಂತಹ ಅಂಶಗಳನ್ನು ಉಳಿಸಿಕೊಂಡಿದೆ.

ಈ ಕಾರಿನ ಮುಂಭಾಗದ ಗ್ರಿಲ್ ಪ್ಯಾನೆಲ್ ಮತ್ತು ಹೊಸ 'ಇ' ಬ್ಯಾಡ್ಜ್‌ನೊಂದಿಗೆ ತನ್ನನ್ನು ಪ್ರತ್ಯೇಕಿಸುತ್ತದೆ. ಈ ಮಿನಿ ಎಲೆಕ್ಟ್ರಿಕ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಈ ಮಾದರಿಯು ಕೂಪರ್ ಎಸ್‌ಇ 3-ಡೋರಿನ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ, 2019 ರಲ್ಲಿ ಜಾಗತಿಕವಾಗಿ ಪರಿಚಯಿಸಲಾದ ಬ್ರ್ಯಾಂಡ್‌ನ ಮೊದಲ ಆಲ್-ಎಲೆಕ್ಟ್ರಿಕ್ ಕಾರ್ ಕೂಪರ್ ಎಸ್‌ಇ ಇದಾಗಿದೆ, ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ವೈಟ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್, ಮೂನ್‌ವಾಕ್ ಗ್ರೇ ಮತ್ತು ಬ್ರಿಟಿಷ್ ರೇಸಿಂಗ್ ಗ್ರೀನ್, ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಈ ಕಾರಿನ ವ್ಹೀಲ್ ಗಳು ORVM ಗಳಲ್ಲಿ ಕಾಂಟ್ರಾಸ್ಟ್ ಯೆಲ್ಲೋ ಹೈಲೈಟ್‌ಗಳೊಂದಿಗೆ ಬರಲಿದೆ.

ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಒಳಭಾಗದಲ್ಲಿ 5.5-ಇಂಚಿನ ಬಣ್ಣದ MID, 8.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಪೋರ್ಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ನಪ್ಪಾ ಲೆದರ್ ಸ್ಟೀರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ, ಇದರಲ್ಲಿರುವ ಅಂಡಾಕಾರದ ಆಕಾರದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಮಧ್ಯದಲ್ಲಿ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಸಹ ಹೊಂದಿರುತ್ತದ. ಡಿಸ್‌ಪ್ಲೇ ವ್ಯಾಪಕವಾದ ಕನೆಕ್ಟೆಡ್ ಕಾರ್ ಫೀಚರ್‌ಗಳು ಮತ್ತು ಕನ್ಸಿಯರ್ಜ್ ಸೇವೆಗಳನ್ನು ನೀಡುತ್ತದೆ.ಇವುಗಳಲ್ಲಿ ರಿಮೋಟ್ ಕಾರ್ ಲಾಕಿಂಗ್/ಅನ್‌ಲಾಕ್ ಮತ್ತು ಒಬ್ಬರ ಸ್ಮಾರ್ಟ್‌ಫೋನ್‌ನಿಂದ ಒಳಾಂಗಣದ ಪ್ರಿ-ಕಂಡೀಷನಿಂಗ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ.

ಇನ್ನು ಯೆಲ್ಲೋ ಅಸ್ಸೆಂಟ್ ಒಳಭಾಗಕ್ಕೂ ಸಾಗಿಸಲಾಗುತ್ತದೆ. ಹೊಸ ಪವರ್‌ಟ್ರೇನ್‌ನಿಂದ ಆಂತರಿಕ ಮತ್ತು ಬೂಟ್ ಸ್ಥಳವು ಹೆಚ್ಚಾಗಿ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ಹೇಳಿದೆ. ಇನ್ನು ಪಿಲ್ಲರ್‌ಗಳನ್ನು ಎಲ್ಲಾ ಬಣ್ಣದ ಟ್ರಿಮ್‌ಗಳಲ್ಲಿ ಬ್ಲ್ಯಾಕ್ ಅಂಶಗಳನ್ನು ಹೊಂದಿದೆ. ಇದು ಕಾರಿಗೆ ಆಕರ್ಷಕ ಲುಕ್ ನೀಡುತ್ತದೆ.


Click it and Unblock the Notifications