ರೂ.2.45 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ನಟ ದುಲ್ಕರ್ ಸಲ್ಮಾನ್

ದುಲ್ಕರ್ ಸಲ್ಮಾನ್ ಮಲಯಾಳಂ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ, ಇವರು ಮಲಯಾಳಂನಲ್ಲಿ ಮಾತ್ರವಲ್ಲದೆ ತೆಲುಗು ಮತ್ತು ತಮಿಳಿನ ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇವರ ಸ್ಟೈಲ್ ಮತ್ತು ನಟನೆಯಿಂದಾಗಿ ಇವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ.

ರೂ.2.45 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ನಟ ದುಲ್ಕರ್ ಸಲ್ಮಾನ್

ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿರುವ ದುಲ್ಕರ್ ಸಲ್ಮಾನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಡಿಕ್ಯೂ ಎಂದು ಕರೆಯುತ್ತಾರೆ. ದುಲ್ಕರ್ ಸಲ್ಮಾನ್ ಬರೀ ಮಲಯಾಳಂನ ನಟನಲ್ಲ. ಆತ ಪಾನ್ ಇಂಡಿಯಾ ಸ್ಟಾರ್. ಯಾಕೆಂದರೆ ತಮಿಳು ಮತ್ತು ತೆಲಗು ಜೊತೆಯಲ್ಲಿ ಬಾಲಿವುಡ್ ನಲ್ಲಿ ಒಂದು ಪತ್ತೇದಾರಿ ಥ್ರೀಲ್ಲರ್ ಚಿತ್ರದಲ್ಲಿಯು ಕೂಡ ನಟಿಸಿದ್ದಾರೆ. ಹೀಗೆ ಆತ ನಾಲ್ಕು ಸಿನಿಮಾ ರಂಗದಲ್ಲಿ ನಟಿಸಿದ್ದಾರೆ.

ರೂ.2.45 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ನಟ ದುಲ್ಕರ್ ಸಲ್ಮಾನ್

ದುಲ್ಕರ್ ಸಲ್ಮಾನ್ ಚಿತ್ರಗಳು ಯಾವುಗಳು ಹೊಸತನದಿಂದ ಕೂಡಿರುತ್ತದೆ, ಇದರಿಂದ ಇವರ ಸಿಮಿಮಾಗಳು ಹೆಚ್ಚಿನ ಜನರನ್ನು ಸೆಳೆಯುತ್ತದೆ. ಇವರ್ ಚಾರ್ಲಿ ಚಿತ್ರವು ಏನೆಲ್ಲಾ ಹೊಸತನ್ನು ಪ್ರೇಕ್ಷಕರಿಗೆ ಉಣಬದಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.

ರೂ.2.45 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ನಟ ದುಲ್ಕರ್ ಸಲ್ಮಾನ್

ನಟ ದುಲ್ಕರ್ ಸಲ್ಮಾನ್ ಅವರು ಹೆಚ್ಚು ಕಾರು ಕ್ರೇಜ್ ಅನ್ನು ಹೊಂದಿದ್ದಾರೆ. ಇದಿಗ ಅವರು ಹೊಸ ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯನ್ನು ಖರೀದಿಸಿದ್ದಾರೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ದುಬಾರಿ ಎಸ್‍ಯುವಿಗಳಲ್ಲಿ ಒಂದಾಗಿದೆ,

ರೂ.2.45 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ನಟ ದುಲ್ಕರ್ ಸಲ್ಮಾನ್

ಈ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.45 ಕೋಟಿಯಾಗಿದೆ, ನಟ ದುಲ್ಕರ್ ಸಲ್ಮಾನ್ ಮತ್ತು ಅವರ ತಂದೆ ಮಮ್ಮೂಟಿಯೊಂದಿಗೆ ಹಲವಾರು ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಇವರ ಬಳಿ ಸೂಪರ್ ಕಾರುಗಳು, ಎಸ್‍ಯುವಿಗಳು, ದುಬಾರಿ ಕಾರುಗಳ ಜೊತೆಗೆ ವಿಂಟೇಜ್ ಕಾರುಗಳನ್ನು ಹೊಂದಿದ್ದಾರೆ. ಇವರು ಕಾರುಗಳ ದೊಡ್ಡ ಗ್ಯಾರೇಜ್ ಅನ್ನೇ ಹೊಂದಿದ್ದಾರೆ.

ರೂ.2.45 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ನಟ ದುಲ್ಕರ್ ಸಲ್ಮಾನ್

ಹೊಸ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯು ಸೈನೊ ಆಲಿವ್ ಗ್ರೀನ್ ಶೇಡ್‌ನಿಂದ ಕೂಡಿದೆ, ಜೊತೆಗೆ, ಕ್ಯಾಬಿನ್ ಅನ್ನು ನೀಲಿ ಮತ್ತು ಕಪ್ಪು ಡ್ಯುಯಲ್-ಟೋನ್ ಅಪ್‌ಹೋಲ್ಸ್ಟರಿಯಿಂದ ಒಳಗೊಂಡಿದೆ. ಈ ಎಸ್‍ಯುವಿಗಳು ವ್ಹೀಲ್ ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ.

ರೂ.2.45 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ನಟ ದುಲ್ಕರ್ ಸಲ್ಮಾನ್

ಇನ್ನು ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಬಿಟುರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 577 ಬಿಎಚ್‌ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ರೂ.2.45 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ನಟ ದುಲ್ಕರ್ ಸಲ್ಮಾನ್

ಇನ್ನು ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯು ಸಮರ್ಥ ಆಫ್-ರೋಡ್ ಎಸ್‍ಯುವಿಯಾಗಿದೆ. ಆಟೋ ತಯಾರಕರ 4 ಮ್ಯಾಟಿಕ್ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿದೆ.

ರೂ.2.45 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ನಟ ದುಲ್ಕರ್ ಸಲ್ಮಾನ್

ಈ ಐಷಾರಾಮಿ ಎಸ್‍ಯುವಿಯು ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳೊಂದಿಗೆ ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳು, ಪನಾಮೆರಿಕಾನಾ ಗ್ರಿಲ್ ಮತ್ತು ನಾಲ್ಕು ದಶಕಗಳಿಂದ ಬದಲಾಯಿಸದ ಬಾಕ್ಸಿ ಸಿಲೂಯೆಟ್ ಅನ್ನು ಹೊಂದಿದೆ.

ರೂ.2.45 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ನಟ ದುಲ್ಕರ್ ಸಲ್ಮಾನ್

ದುಲ್ಕರ್ ಸಲ್ಮಾನ್ ಹೊರತಾಗಿ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯನ್ನು ಹೊಂದಿರುವ ಇತರ ಜನಪ್ರಿಯ ನಟರಲ್ಲಿ ಆಸಿಫ್ ಅಲಿ, ಜಿಮ್ಮಿ ಶೀರ್‌ಗಿಲ್, ಅಖಿಲ್ ಅಕ್ಕಿನೇನಿ, ರಾಮ್ ಕಪೂರ್ ಮುಂತಾದವರಿದ್ದಾರೆ.

ರೂ.2.45 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ನಟ ದುಲ್ಕರ್ ಸಲ್ಮಾನ್

ಇನ್ನು ಮರ್ಸಿಡಿಸ್ ಬೆಂಝ್ 350ಡಿ ಎಂಬ ಐಷಾರಾಮಿ ಎಸ್‍ಯುವಿಯನ್ನು ಭಾರತದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಲ್ಲಿ ಲೀಟರ್ ವಿ6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 281 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಮರ್ಸಿಡಿಸ್ ಬೆಂಝ್ 350ಡಿ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,62 ಕೋಟಿಯಾಗಿದೆ

ರೂ.2.45 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ನಟ ದುಲ್ಕರ್ ಸಲ್ಮಾನ್

ದುಲ್ಕರ್ ಸಲ್ಮಾನ್ ಅವರ ಬಳಿ ಇರುವ ಇತರ ಕಾರುಗಳು, ಜಾಗ್ವಾರ್ ಎಕ್ಸ್‌ಜೆ ಎಲ್, ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್, ಪೋರ್ಷೆ ಪನಾಮೆರಾ, ಟೊಯೊಟಾ ಲ್ಯಾಂಡ್ ಕ್ರೂಸರ್, ಆಡಿ ಎ7 ಸ್ಪೋರ್ಟ್‌ಬ್ಯಾಕ್, ಮರ್ಸಿಡಿಸ್ ಬೆಂಝ್ ಡಬ್ಲ್ಯು 123, ವೋಲ್ವೋ ಎಸ್ಟೇಟ್, ಇ 46 ಬಿಎಂಡಬ್ಲ್ಯು ಎಂ3, ಮಿನಿ ಕೂಪರ್ ಎಸ್ ಮತ್ತು ಇತರ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

Image Courtesy: DQ car collection 369/Instagram

Most Read Articles

Kannada
English summary
Mollywood star dulquer salman new ride is a mercedes amg g63 suv in olive green shade details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X