ಈ ಕೋತಿ ಮಾಡಿದ ಚೇಷ್ಟೆಯ ಬೆಲೆ ಒಂದು ಲೀಟರ್‌ಗೆ 70 ರೂ. ಎಂದರೆ ನಂಬಲೇ ಬೇಕು !!
ಕೋತಿ ಚೇಷ್ಟೆ ಬಗ್ಗೆ ನಿಮಗೆ ಹೆಚ್ಚು ಹೇಳಬೇಕಿಲ್ಲ. ಅದು ಚೇಷ್ಟೆಯಿಂದಲೇ ಗುರುತಿಸಿಕೊಳ್ಳುವಂತಹ ಪ್ರಾಣಿ. ತನ್ನ ಆಹಾರಕ್ಕಾಗಿ ಅಂಗಡಿಗಳಿಗೆ ನುಗ್ಗುವುದು, ಸಿಕ್ಕ ಸಿಕ್ಕ ಜನರ ಕೈಲಿರುವ ಆಹಾರ ಪೊಟ್ಟಣಗಳನ್ನು ಕಿತ್ತುಕೊಳ್ಳುವುದು ಮಾಡುತ್ತದೆ.
ಕೋತಿ ಚೇಷ್ಟೆ ಬಗ್ಗೆ ನಿಮಗೆ ಹೆಚ್ಚು ಹೇಳಬೇಕಿಲ್ಲ. ಅದು ಚೇಷ್ಟೆಯಿಂದಲೇ ಗುರುತಿಸಿಕೊಳ್ಳುವಂತಹ ಪ್ರಾಣಿ. ತನ್ನ ಆಹಾರಕ್ಕಾಗಿ ಅಂಗಡಿಗಳಿಗೆ ನುಗ್ಗುವುದು, ಸಿಕ್ಕ ಸಿಕ್ಕ ಜನರ ಕೈಲಿರುವ ಆಹಾರ ಪೊಟ್ಟಣಗಳನ್ನು ಕಿತ್ತುಕೊಳ್ಳುವುದು ಮಾಡುತ್ತದೆ.

ಆದ್ರೆ, ಹರಿಯಾಣದ ಪಾಣಿಪತ್ ಜಿಲ್ಲೆಯ ಕೋತಿಯೊಂದು ಒಂದು ಹೆಜ್ಜೆ ಮುಂದೆ ಹೋಗಿ ಗಾಡಿಗಳ ಪೆಟ್ರೋಲ್ ಪೈಪ್ ಕಿತ್ತು ಪೆಟ್ರೋಲ್ ಕುಡಿಯುವ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದರೆ ನಂಬಲೇ ಬೇಕು. ಪೆಟ್ರೋಲ್ ಕುಡಿಯುವುದಕ್ಕೆ ಅಡಿಕ್ಟ್ ಆಗಿದ್ದ ಕೋತಿಯೊಂದು ಬೈಕ್‍ಗಳಿಂದ ಪೆಟ್ರೋಲ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದೆ.

ಆಶ್ಚರ್ಯವೆನ್ನಿಸಿದರೂ ಇದು ನಿಜ ಸಂಗತಿಯಾಗಿದೆ. ಹೌದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಪೆಟ್ರೋಲ್ ಕುಡಿಯುವ ಚಟ ಹಚ್ಚಿಕೊಂಡಿರುವ ಕೋತಿಯ ಈ ವರ್ತನೆ ಕಂಡು ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಈ ವಿಚಿತ್ರ ಕೋತಿ ಮಾರುಕಟ್ಟೆಯಲ್ಲಿ ನಿಲ್ಲಿಸಿರುವ ಬೈಕ್‌ಗಳ ಪೆಟ್ರೋಲ್ ಪೈಪ್ ತೆಗೆದು ಪೆಟ್ರೋಲ್ ಹಿರುವ ಮೂಲಕ ತನ್ನ ಬಾಯಾರಿಕೆಯನ್ನು ತಗ್ಗಿಸಿಕೊಳ್ಳುತ್ತಿದೆ ಹಾಗು ಯಾವಾಗ್ಲೂ ನಶೆಯಲ್ಲಿ ಇರುತ್ತಿದ್ದು, ಬಾಳೆಹಣ್ಣು ಕೊಟ್ಟರೂ ನಿರಾಕರಿಸುತ್ತಿತ್ತು ಎಂದು ವರದಿಯಾಗಿದೆ.

ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ಕೋತಿಯೊಂದು ಪೆಟ್ರೋಲ್ ಕದ್ದು ಕುಡಿಯುತ್ತಿದ್ದು, ಸ್ಥಳೀಯ ಮಾರಾಟಗಾರರಲ್ಲಿ ಆತಂಕ ಸೃಷ್ಟಿಸಿದೆ. ಸಾರ್ವಜನಿಕರು ಸಕಲ ರೀತಿಯಲ್ಲಿ ಯತ್ನಿಸಿದರೂ, ಈ ಮರ್ಕಟವನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಘಟನೆಯ ವಿವರ :
ಆ ಪ್ರದೇಶದ ಕೆಲವು ವ್ಯಾಪಾರಿಗಳು ತಮ್ಮ ಬೈಕ್‌ಗಳನ್ನು ಶಾಪ್ ಎದುರಿಗೆ ಪಾರ್ಕ್ ಮಾಡುತ್ತಿದ್ದರು. ನಿತ್ಯ ಸಂಜೆ ಹೊತ್ತು ಮನೆಗೆ ಹೋಗೋಣ ಎಂದು ಬೈಕ್ ತೆಗೆದರೆ ಅದರಲ್ಲಿ ಪೆಟ್ರೋಲ್ ಇರುತ್ತಿರಲಿಲ್ಲ. ಪೆಟ್ರೋಲ್ ಹೇಗೆ ಮಾಯವಾಗುತ್ತಿದೆ ಎಂದು ಅವರು ಚಕಿತರಾದರು. ಹಾಗಾಗಿ ಅವರೆಲ್ಲ ಕೂಡಿ ಒಂದು ನಿರ್ಧಾರಕ್ಕೆ ಬಂದರು.

ಪೆಟ್ರೋಲ್ ಕಳ್ಳತನ ಮಾಡ್ತಿರೋದು ಯಾರು ಅನ್ನೋದನ್ನ ಪತ್ತೆ ಮಾಡಲು ಕ್ಯಾಮೆರಾ ಅಳವಡಿಸಿದ್ದರು. ಆಗ ನಿಜವಾದ ಕಳ್ಳ ಯಾರು ಅನ್ನೋದು ಬಯಲಾಗಿದೆ. ಕೋತಿಯೊಂದು ಪೈಪ್ ಮೂಲಕ ಪೆಟ್ರೋಲ್ ಎಳೆದುಕೊಂಡು ಪೆಟ್ರೋಲ್ ಟ್ಯಾಂಕ್ ಖಾಲಿಯಾಗಿಸುತ್ತಿದ್ದುದನ್ನ ಕಂಡ ಬೈಕ್ ಮಾಲೀಕರು ದಂಗಾಗಿದ್ದಾರೆ.

ಪ್ರಸ್ತುತ ಈ ಕೋತಿ ಪೆಟ್ರೋಲ್ ಕುಡಿಯುತ್ತಿಲ್ಲ. ಯಾಕೆಂದರೆ ನಗರದಲ್ಲಿ ಸ್ವಯಂಸೇವಕ ಸಂಸ್ಥೆಯೊಂದನ್ನ ನಡೆಸುತ್ತಿರುವ ಗೌರವ್ ಲೇಖಾ ಅವರು ಕೋತಿಯನ್ನು ತೆಗೆದುಕೊಂಡು ಹೋಗಿ ಪೆಟ್ರೋಲ್ ಕುಡಿದು ಹದಗೆಟ್ಟಿದ್ದ ಅದರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿ ಲೇಖಾ, ಈ ಕೋತಿ ನಿಜಕ್ಕೂ ಪೆಟ್ರೋಲ್‍ಗೆ ಅಡಿಕ್ಟ್ ಆಗಿತ್ತು. ಯಾರಾದ್ರೂ ಕಡಲೆಕಾಯಿ ಅಥವಾ ಬಾಳೇಹಣ್ಣು ಕೊಟ್ಟರೂ ತೆಗೆದುಕೊಳ್ತಿರಲಿಲ್ಲ. ಯಾವಾಗ್ಲೂ ನಶೆಯಲ್ಲಿ ಇರುತ್ತಿದ್ದರಿಂದ ಈ ಕೋತಿ ಯಾರಿಗೂ ಅಪಾಯ ಮಾಡ್ತಿರಲಿಲ್ಲ ಎಂದು ಹೇಳಿದ್ದಾರೆ.
ಪೆಟ್ರೋಲ್ ಕುಡಿಯುವ ಕೋತಿಯ ಜನಪ್ರಿಯತೆಯೂ ಹೆಚ್ಚಾಗುತ್ತಿದ್ದು, ದೇಶಾದ್ಯಂತ ಸುದ್ದಿಯಾಗುತ್ತಿದೆ. ಈ ಮಂಗನ ವರ್ತನೆಯ ಬಗ್ಗೆ ಸಾಕಷ್ಟು ಸುದ್ದಿಗಳೂ ಪ್ರಕಟವಾಗುತ್ತಿವೆ.


Click it and Unblock the Notifications








