ವಿಶ್ವದ ಐಷಾರಾಮಿ ರೈಲು ಮಹಾರಾಜಾಸ್ ಎಕ್ಸ್‌ಪ್ರೆಸ್ ಬಗ್ಗೆ ನೀವು ಕೇಳರಿಯದ ಸತ್ಯಗಳು!
ಜಾಗತಿಕ ಮಟದಲ್ಲಿ ಭಾರತದ ಕೀರ್ತಿ ಪತಾಕೆ ಮಗದೊಮ್ಮೆ ಮೇಲಕ್ಕೆ ಹಾರತೊಡಗಿದ್ದು, ಮಹಾರಾಜಾ ಎಕ್ಸ್ ಪ್ರೆಸ್ ವಿಶ್ವದ ಅತ್ಯಂತ ಐಷಾರಾಮಿ ಹಾಗೂ ದುಬಾರಿ ರೈಲೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದುಡ್ಡಿನಿಂದ ಸಂತೋಷವನ್ನು ಸಂಪಾದಿಸಲು ಸಾಧ್ಯವಿಲ್ಲವಂತೆ! ನಿಜ. ಆದರೆ ಏಳು ತಾರೆಯ ಸಂಚರಿಸುವ ಐಷಾರಾಮಿ ಹೋಟೆಲ್ ನಿಮ್ಮದಾಗಬಹುದಲ್ಲವೇ? ವಿಶ್ವದಲ್ಲೇ ಅತಿ ದೊಡ್ಡ ರೈಲು ಜಾಲವನ್ನು ಹೊಂದಿರುವ ಭಾರತವೀಗ ಜಗತ್ತಿನ ಅತ್ಯಂತ ಐಷಾರಾಮಿ ರೈಲನ್ನು ಹೊಂದಿರುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಆರ್‌ಸಿಟಿಸಿ ನಿಂದ ಒಡೆತನದ ಮಹಾರಾಜಾಸ್ ಎಕ್ಸ್ ಪ್ರೆಸ್, ಸ್ಪೇನ್ ನ ಮಾರ್ಬೆಲ್ಲಾದಲ್ಲಿ 2016 ಸೆವೆನ್ ಸ್ಟಾರ್ ಐಷಾರಾಮಿ ಅತಿಥಿ ಸತ್ಕಾರ ಮತ್ತು ಜೀವನಶೈಲಿ ಪ್ರಶಸ್ತಿಗೆ ಅರ್ಹವಾಗಿದೆ.

ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೋರೇಷನ್ (ಐಆರ್ ಸಿಟಿಸಿ) ಒಡೆತನದಲ್ಲಿರುವ ಮಹಾರಾಜಾಸ್ ಎಕ್ಸ್ ಪ್ರೆಸ್, ಎಲ್ಲ ರೀತಿಯ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.

ಆಗ್ನೇಯ ಹಾಗೂ ಮಧ್ಯ ಭಾರತದ 12 ಪ್ರವಾಸಿ ತಾಣಗಳನ್ನು ಅದರಲ್ಲೂ ಪ್ರಮುಖವಾಗಿಯೂ ರಾಜಸ್ತಾನವನ್ನು ಕೇಂದ್ರಿಕರಿಸಿರುವ ಮಹಾರಾಜಾಸ್ ಎಕ್ಸ್ ಪ್ರೆಸ್ ಅಕ್ಟೋಬರ್‌ನಿಂದ ಎಪ್ರಿಲ್ ತಿಂಗಳ ಅವಧಿಯಲ್ಲಿ ಸಂಚರಿಸುತ್ತದೆ.

ಇದಕ್ಕೂ ಮೊದಲು 2012, 2013, 2014, 2015ನೇ ಸಾಲಿನಲ್ಲಿ ಸತತವಾಗಿ ನಾಲ್ಕು ಬಾರಿ ವಿಶ್ವದ ಐಷಾರಾಮಿ ರೈಲು ಪ್ರಶಸ್ತಿಗೆ ಪಾತ್ರವಾಗಿರುವ ಮಹಾರಾಜಾಸ್ಎಕ್ಸ್ ಪ್ರೆಸ್, ಜಗತ್ತಿನ ಅತಿ ದುಬಾರಿ ರೈಲು ಕೂಡಾ ಹೌದು.

ಇತಿಹಾಸದತ್ತ ಗಮನ ಹಾಯಿಸಿದಾಗ ಮಹಾರಾಜಾಸ್ ಎಕ್ಸ್ ಪ್ರೆಸ್ ರೈಲಿನ ಕಾರ್ಯಾಚರಣೆಯನ್ನು 2010ರಲ್ಲಿ ಆರಂಭಿಸಲಾಗಿತ್ತು. ಇದರ ನಿರ್ವಹಣೆ ನೋಡಿಕೊಳ್ಳುವುದಕ್ಕಾಗಿ ಐಆರ್ ಸಿಟಿಸಿ ಮತ್ತು ಕಾಕ್ಸ್ ಆಂಡ್ ಕಿಂಗ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಗಳು ಜಂಟಿಯಾಗಿ ರಾಯಲ್ ಇಂಡಿಯನ್ ರೈಲ್ ಟೂರ್ಸ್ ಲಿಟಿಮೆಡ್ (ಆರ್ ಐಆರ್ ಟಿಎಲ್) ಆರಂಭಿಸಿತ್ತು.

ಆದರೆ ಈ ಒಪ್ಪಂದವನ್ನು 2011ರಲ್ಲಿ ವಜಾಗೊಳಿಸಿತ್ತಲ್ಲದೆ ತದಾ ಬಳಿಕ ಸಂಪೂರ್ಣ ಅಧೀನತೆಯನ್ನು ಐಆರ್ ಸಿಟಿಸಿ ವಹಿಸಿಕೊಂಡಿತ್ತು.

ಮಹಾರಾಜಾಸ್ ಎಕ್ಸ್ ಪ್ರೆಸ್ ರೈಲಿನಲ್ಲಿ ಅತ್ಯಾಧುನಿಕ ಆರಾಮದಾಯಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ನ್ಯೂಮ್ಯಾಟಿಕ್ ಸಸ್ಪೆನ್ಷನ್, ಲೈವ್ ಟಿವಿ, ವೈಫೈ, ಹೊಂದಿಕೊಂಡಿರುವ ಶೌಚಾಲಯ, ಭೋಜನಾಲಯ, ಬಾರ್, ಲಾಂಜ್, ಸ್ಮರಣೆಯ ವಸ್ತು ಸಂಗ್ರಹಾಲಯ, ದೊಡ್ಡದಾದ ಕ್ಯಾಬಿನ್, ರೋಲ್ ಟಾಪ್ ಬಾತ್ ಮತ್ತು ಹೆಚ್ಚು ಸ್ಥಳಾವಕಾಶಯುಕ್ತ ಆಸನ ಕೊಠಡಿಗಳನ್ನು ಪಡೆದಿದೆ.

ಸವಾರಿ ಬಂಡಿ
ಮಹಾರಾಜಾಸ್ ಎಕ್ಸ್ ಪ್ರೆಸ್ 23 ಬೋಗಿಗಳನ್ನು ಹೊಂದಿರಲಿದೆ. ಇವುಗಳು, ವಸತಿ, ಊಟ, ಬಾರ್, ಕೋಣೆ, ಜನರೇಟರ್ ಮತ್ತು ಸ್ಟೋರ್ ಕೋಣೆಗಳನ್ನು ಸೇರಿವೆ.

14 ಆತಿಥಿ ರೈಲು ಬಂಡಿಗಳು ಸೇರಿದಂತೆ ಒಟ್ಟು 88 ಪ್ರಯಾಣಿಕರನ್ನು ಭಾರತದ ಇತಿಹಾಸ ಪ್ರಸಿದ್ಧ ತಾಣಗಳಿಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಪಡೆದಿದೆ.

'ರಾಜಹಾ ಕ್ಲಬ್' ಎಂಬ ಖಾಸಗಿ ಬಾರ್, ಎರಡು ಡೈನಿಂಗ್ ಕೋಣೆ ಮತ್ತು ಬಾರ್ ಕಾರು ವ್ಯವಸ್ಥೆಗಳು ಇದರಲ್ಲಿದೆ. ನೀರು ಫಿಲ್ಟ್ರೇರೇಷನ್ ಸಹ ಇದರಲ್ಲಿದೆ.

ಕ್ಯಾಬಿನ್ ಸಂರಚನೆ
5 ಡಿಲಕ್ಸ್ ಕಾರ್ಸ್,
6 ಜೂನಿಯರ್ ಸ್ಯೂಟ್ ಕಾರ್ಸ್,
2 ಸ್ಯೂಟ್ ಕಾರ್ಸ್,
1 ಅಧ್ಯಕ್ಷೀಯ ಸ್ಯೂಟ್ ಕಾರ್,
1 ಬಾರ್ ಕಾರ್ ಮತ್ತು 1 ಲಾಂಜ್ ಕಾರ್,
2 ರೆಸ್ಟೋರೆಂಟ್ ಕಾರ್,
1 ಅಡುಗೆ ಕಾರ್,
1 ಸ್ಟಾಫ್ ಕೋಚ್,
1 ಎಕ್ಸ್ ಕ್ಯೂಟಿವ್ ಮ್ಯಾನೇಜರ್ ಮತ್ತು ಟೂರ್ ಮ್ಯಾನೇಜರ್ ಕೋಚ್

ಪ್ರತಿಯೊಂದು ಆತಿಥಿ ಕೊಠಡಿಗಳಲ್ಲೂ ಎಲ್ ಸಿಡಿ ಟಿವಿ, ಪರಿಸರ ಸ್ನೇಹಿ ಶೌಚಾಲಯ, ಡೈರಕ್ಟ್ ಡಯಲ್ ಫೋನ್, ಡಿವಿಡಿ ಪ್ಲೇಯರ್, ಇಂಟರ್ ನೆಟ್, ವೈಯಕ್ತಿಕ ತಾಪಮಾನ ನಿಯಂತ್ರಣ ಮತ್ತು ಎಲೆಕ್ಟ್ರಾನಿಕ್ ಸೇಫ್ಸ್ ಉಪಕರಣಗಳ ವ್ಯವಸ್ಥೆಯಿರಲಿದೆ.

ತಲಾ 42 ಆತಿಥಿಗಳು ಕುಳಿತುಕೊಳ್ಳಬಹುದಾದ ಎರಡು ಡೈನಿಂಗ್ ಕೋಚ್ ಗಳನ್ನು ಇದು ಪಡೆದಿದೆ. ತನ್ಮೂಲಕ ಎಲ್ಲ ಆತಿಥಿಗಳಿಗೂ ಏಕಕಾಲಕ್ಕೆ ಕುಳಿತುಕೊಂಡು ಉಣ್ಣುವ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.

ರೆಸ್ಟೋರೆಂಟ್ ಗಳಿಗೆ 'ರಂಗ್ ಮಹಲ್' ಮತ್ತು 'ಮಯೂರ್ ಮಹಲ್' ಗಳೆಂಬ ಇತಿಹಾಸ ಪ್ರಸಿದ್ಧ ಹೆಸರನ್ನಿಡಲಾಗಿದೆ. ಮಯೂರ್ ಮಹಲ್ ನಲ್ಲಿ ನವಿಲಿನ ಥೀಮ್ ನಂತೆ ಆಲಂಕರಿಸಲಾಗಿದೆ.

ರೆಸ್ಟೋರೆಂಡ್ ಮೆನುಗಳಲ್ಲಿ ಸಾಂಪ್ರದಾಯಕ ಭಾರತೀಯ ಭೋಜನದಿಂದ ಹಿಡಿದು, ಚೀನಾ ಸೇರಿದಂತೆ ಇತರೆ ಖಂಡಗಳ ಭೋಜನ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗಿದೆ.

ಅಧ್ಯಕ್ಷೀಯ ಕೋಣೆಯಲ್ಲಿ ಪ್ರತ್ಯೇಕ ಆಸನ ಹಾಗೂ ಭೋಜನ ಕೊಠಡಿ, ಮಾಸ್ಟರ್ ಬೆಡ್ ರೂಂ, ಶೌಚಾಲಯ, ಶವರ್, ಬಾತ್ ಟಬ್, ಜೋಡಿ ಬೆಡ್ ರೂಂ ಇತ್ಯಾದಿ ಸೇವೆಗಳಿರಲಿದೆ.

ಸೇವೆಗಳು - ಹೇರಿಟೇಜ್ ಆಫ್ ಇಂಡಿಯಾ
ಅವಧಿ: 7 ರಾತ್ರಿ/ಎಂಟು ದಿವಸ
ತಲುಪುವ ತಾಣಗಳು: ಮುಂಬೈ - ಅಂಜತಾ - ಉದಯ್ ಪುರ್ - ಜೋಧ್ ಪುರ - ಬಿಕಾನೆರ್ - ಜೈಪುರ - ರಣತಂಬೋರ್ - ಆಗ್ರಾ - ದೆಹಲಿ

ಟ್ರೆಷರ್ ಆಫ್ ಇಂಡಿಯಾ
ಅವಧಿ: 3 ರಾತ್ರಿ/ನಾಲ್ಕು ದಿವಸ
ತಲುಪುವ ತಾಣಗಳು: ದೆಹಲಿ - ಆಗ್ರಾ - ರಣತಂಬೋರ್ - ಜೈಪುರ - ದೆಹಲಿ

ಜೆಮ್ಸ್ ಆಫ್ ಇಂಡಿಯಾ
ಅವಧಿ: 3 ರಾತ್ರಿ/ನಾಲ್ಕು ದಿವಸ
ತಲುಪುವ ತಾಣಗಳು: ದೆಹಲಿ - ಆಗ್ರಾ - ರಣತಂಬೋರ್ - ಜೈಪುರ - ದೆಹಲಿ

ಇಂಡಿಯನ್ ಪನೋರಮ
ಅವಧಿ: 7 ರಾತ್ರಿ/ಎಂಟು ದಿವಸ
ತಲುಪುವ ತಾಣಗಳು: ದೆಹಲಿ - ಜೈಪುರ - ರಣತಂಬೋರ್ - ಫಾತೇಪುರ ಸಿಕ್ರಿ - ಆಗ್ರಾ - ಗ್ವಾಲಿಯರ್ - ಓರ್ಚಾ - ಖಜುರಾಹೊ - ವಾರಣಾಸಿ - ಲಕ್ನೋ - ದೆಹಲಿ

ದಿ ಇಂಡಿಯನ್ ಸ್ಪ್ಲೆಂಡರ್
ಅವಧಿ: 7 ರಾತ್ರಿ/ಎಂಟು ದಿವಸ
ತಲುಪುವ ತಾಣಗಳು: ದೆಹಲಿ - ಆಗ್ರಾ - ರಣತಂಬೋರ್ - ಜೈಪುರ - ಬಿಕಾನೆರ್ - ಜೋಧ್ ಪುರ - ಉದೈಪುರ - ಬಲಸಿನೊರ್ - ಮುಂಬೈ

ಎಲ್ಲ ಕ್ಯಾಬಿನ್ ಗಳಲ್ಲೂ ಐಷಾರಾಮಿ ಸೌಲಭ್ಯಗಳನ್ನು ನೀಡುತ್ತಿರುವ ದೇಶದ ಏಕಮಾತ್ರ ರೈಲು ಇದಾಗಿದೆ. ಇದರಲ್ಲಿ ಆಧುನಿಕತೆಗೆ ತಕ್ಕಂತೆ ಆತಿಥಿಗಳ ಅರಾಮದಾಯಕತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ಇವನ್ನೂ ಓದಿ
01. ಕಣ್ಣಿಗೆ ಮುದ ನೀಡುವ ಜಗತ್ತಿನ 25 ಮನೋಹರ ರೈಲು ಮಾರ್ಗಗಳು
02. ದೇಶದ 15 ನಯನ ಮನೋಹರ ಕಡಲ ತೀರಕ್ಕೆ ಜಾಲಿ ರೈಡ್
03. ಘಾಟಿ ಪ್ರದೇಶದಲ್ಲಿ ಸುರಕ್ಷಿತ ವಾಹನ ಚಾಲನೆ ಹೇಗೆ?


Click it and Unblock the Notifications








