1947ರ ನಂತರ ದೇಶ ಕಂಡ ಅತ್ಯಂತ ಜನಪ್ರಿಯ ಕಾರುಗಳಿವು: ಅಂಬಾಸಿಡರ್, ಸ್ವಿಫ್ಟ್ TO ಇನ್ನೋವಾ

ಭಾರತಕ್ಕೆ 1947 ಆಗಸ್ಟ್ 15ರಂದು ಸ್ವಾತಂತ್ರ್ಯ ದೊರಯಿತು. ಆ ಬಳಿಕ ದೇಶದಲ್ಲಿ ಶರವೇಗದಲ್ಲಿ ಕೈಗಾರಿಕೆ ಹಾಗೂ ವಿವಿಧ ಉದ್ಯಮಗಳು ಅಭಿವೃದ್ಧಿಗೊಂಡಿವು. ಇಂದು ಭಾರತ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ಸಾಲಿನಲ್ಲಿ ನಿಂತಿದ್ದು, ವಾಹನೋದ್ಯಮವು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡಿದ್ದು, ನಮ್ಮಲ್ಲಿ ಉತ್ಪಾದಿಸಿದ ಕಾರುಗಳನ್ನು ಪ್ರಪಂಚದ ನಾನಾ ಭಾಗಗಳಿಗೆ ರಫ್ತು ಮಾಡಲಾಗುತ್ತಿದೆ.

ದೇಶದಲ್ಲಿ ತಯಾರಿಸಿದ ಕೆಲವೇ ಕೆಲವು ಕಾರುಗಳಿಗೆ ಮಾತ್ರವೇ ಜನರು ವಿಭಿನ್ನವಾದ ಸ್ಥಾನವನ್ನು ನೀಡಿದ್ದು, ಇವತ್ತಿಗೂ ಅವುಗಳನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ಅಂದಹಾಗೆ ಭಾರತದಲ್ಲಿಯೇ ಉತ್ಪಾದಿಸಿ, ಹತ್ತಾರು ವರ್ಷಗಳ ಕಾಲ ನಮ್ಮ ಊರುಗಳಲ್ಲಿ ಸಂಚರಿಸಿ, ಮರೆಯಾದ ಕಾರುಗಳು ಹಾಗೂ ಈಗಲೂ ಒಂದಷ್ಟು ಹೊಸ ನವೀಕರಣಗಳನ್ನು ಪಡೆದು ಮಾರಾಟವಾಗುತ್ತಿರುವ ವಿವಿಧ ಕಾರುಗಳ ಬಗ್ಗೆ ಇಲ್ಲಿ ವಿವರಿಸಿದ್ದೇವೆ.

Most Popular Cars In India After 1947 Ambassador Premier Padmini Maruti 800 Swift to Innova

ಮೊದಲಿಗೆ ಹಿಂದೂಸ್ತಾನ್ ಅಂಬಾಸಿಡರ್ (Hindustan Ambassador) ಕಾರಿನ ಕುರಿತು ಮಾತನಾಡೋಣ. ಈ ಕಾರನ್ನು 1957ರಲ್ಲಿ ಬಿಡುಗಡೆ ಮಾಡಲಾಗಿತ್ತು. 2014ರವರೆಗೆ ಉತ್ಪಾದನೆಯಲ್ಲಿತ್ತು. ಖ್ಯಾತ ಉದ್ಯಮಿಗಳು ಮತ್ತು ರಾಜಕಾರಣಿಗಳ ಅಚ್ಚುಮೆಚ್ಚಿನ ವಾಹನವಾಗಿತ್ತು. ಇದರ ಗಟ್ಟಿಮುಟ್ಟಾದ ವಿನ್ಯಾಸ ಆಗಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬರನ್ನು ಆಕರ್ಷಿಸುತ್ತಿತ್ತು. ಕಡೆಯದಾಗಿ ಅಂಬಾಸಿಡರ್ ಕಾರು ರೂ.4.31 ಲಕ್ಷದಿಂದ ರೂ.6.04 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿತ್ತು.

ಅಂಬಾಸಿಡರ್ ಮಾದರಿಯಲ್ಲಿಯೇ ಪ್ರೀಮಿಯರ್ ಪದ್ಮಿನಿ (Premier Padmini) ಕಾರು ಸಹ 90ರ ದಶಕದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿತ್ತು. ಫಿಯೆಟ್ ಕಂಪನಿ ಸಹಭಾಗಿತ್ವದಲ್ಲಿ ಪ್ರೀಮಿಯರ್ ಆಟೋಮೊಬೈಲ್ಸ್ ಲಿಮಿಟೆಡ್‌ ಈ ಕಾರನ್ನು 1964ರಲ್ಲಿ ತಯಾರಿಸಿ, ಭಾರತದಲ್ಲಿ ಪರಿಚಯಿಸಿತ್ತು. ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದ್ದ ಪ್ರೀಮಿಯರ್ ಪದ್ಮಿನಿ ಕಾರನ್ನು ಮಾರುಕಟ್ಟೆಯಲ್ಲಿ ಎದುರಾದ ತೀವ್ರ ಪೈಪೋಟಿಯಿಂದ 2001ರಲ್ಲಿ ಸ್ಥಗಿತಗೊಳಿಸಲಾಯಿತು. ಆಗ ರೂ.1.95 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿತ್ತು.

Most Popular Cars In India After 1947 Ambassador Premier Padmini Maruti 800 Swift to Innova

ಮಾರುತಿ ಉದ್ಯೋಗ್ ಲಿಮಿಟೆಡ್ ಮತ್ತು ಸುಜುಕಿ ಮೋಟಾರ್ ಪಾಲುದಾರಿಕೆಯಲ್ಲಿ ಮಾರುತಿ 800 (Maruti 800) ಕಾರನ್ನು 1983ರಲ್ಲಿ ಬಿಡುಗಡೆ ಮಾಡಲಾಯಿತು. ಅದೇ ವರ್ಷ ಕಾರನ್ನು ವಿತರಣೆಯನ್ನು ಆರಂಭಿಸಲಾಗಿತ್ತು. ಕಡ್ಡಾಯ ಎಮಿಷನ್ ಮಾನದಂಡ ಹಾಗೂ ವಿವಿಧ ಕಾರಣಗಳಿಗೆ ಜನವರಿ 18, 2014ರಲ್ಲಿ ಮಾರುತಿ 800 ಉತ್ಪಾದನೆಯನ್ನು ನಿಲ್ಲಿಸಲಾಯಿತು. ಅಲ್ಲಿಯವರೆಗೆ 29.2 ಲಕ್ಷ ಯುನಿಟ್ ಕಾರುಗಳನ್ನು ತಯಾರಿಸಲಾಗಿತ್ತು. ಪ್ರಸ್ತುತ ಮಾರುತಿ ಸುಜುಕಿ ಆಲ್ಟೊ ಕೆ10 ಕಂಪನಿಯ ಆರಂಭಿಕ ಆವೃತ್ತಿಯಾಗಿದೆ.

ದೇಶೀಯ ಮಾರುಕಟ್ಟೆಗೆ 1985ರಲ್ಲಿ ಬಿಡುಗಡೆಗೊಂಡ ಮಾರುತಿ ಜಿಪ್ಸಿ (Maruti Gypsy) ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆದಿತ್ತು. ಈಗಲೂ ಸೇನಾ ವಾಹನವಾಗಿ ಬಳಕೆಯಲ್ಲಿದೆ. ಎಮಿಷನ್ ನಿಯಮಗಳ ಕಾರಣ 2017ರಲ್ಲಿ ಜಿಪ್ಸಿ ಉತ್ಪಾದನೆವನ್ನು ಸ್ಥಗಿತಗೊಳಿಸಲಾಯಿತು. ಕೊನೆಯದಾಗಿ ರೂ.5.21 ಲಕ್ಷದಿಂದ ರೂ.6.73 ಲಕ್ಷ ದರವನ್ನು ಪಡೆದಿತ್ತು. ಪೆಟ್ರೋಲ್ ಆಯ್ಕೆಯಲ್ಲಿ ದೊರಯುತ್ತಿದ್ದ ಈ ಕಾರು 14.8 ಕೆಎಂಪಿಎಲ್ ಮೈಲೇಜ್ ನೀಡುತ್ತಿತ್ತು. ಈಗ ಜಿಪ್ಸಿ ಜಾಗದಲ್ಲಿ ಜಿಮ್ನಿಯಿದೆ.

Most Popular Cars In India After 1947 Ambassador Premier Padmini Maruti 800 Swift to Innova

1998ರಲ್ಲಿ ಪರಿಚಯಿಸಲಾದ ಹೋಂಡಾ ಸಿಟಿ (Honda City) ಸೆಡಾನ್ ಇವತ್ತಿನ ದಿನವು ಹಲವು ನವೀಕರಣವನ್ನು ಪಡೆದುಕೊಂಡು ಮಾರಾಟವಾಗುತ್ತಿದೆ. ಹೊಸ ತಲೆಮಾರಿನ ಸಿಟಿ ಕಾರು ರೂ.11.71 ಲಕ್ಷದಿಂದ ರೂ.16.19 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2002ರಲ್ಲಿ ಲಾಂಚ್ ಆದ ಮಹೀಂದ್ರಾ ಸ್ಕಾರ್ಪಿಯೋ ಈಗಲೂ ಪ್ರಖ್ಯಾತಿಯನ್ನು ಗಳಿಸಿದ್ದು, ಸ್ಕಾರ್ಪಿಯೋ ಎನ್ ಮತ್ತು ಕ್ಲಾಸಿಕ್ ರೂಪದಲ್ಲಿ ಖರೀದಿಗೆ ಸಿಗುತ್ತಿದೆ.

2005ರಲ್ಲಿ ಬಿಡುಗಡೆಗೊಂಡ ಟೊಯೊಟಾ ಇನ್ನೋವಾ (Toyota Innova) ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದು, ಸದ್ಯ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಇನ್ನೋವಾ ಹೈಕ್ರಾಸ್ ರೂ.19.77 ಲಕ್ಷದಿಂದ ರೂ.30.68 ಲಕ್ಷ, ಇನ್ನೋವಾ ಕ್ರಿಸ್ಟಾ ರೂ.19.99 ಲಕ್ಷದಿಂದ ರೂ.26.30 ಲಕ್ಷ ಎಕ್ಷ್ ಶೋರೂಂ ಬೆಲೆಯನ್ನು ಹೊಂದಿದೆ. 2005ರಲ್ಲಿ ಪರಿಚಯಿಸಲಾದ ಮಾರುತಿ ಸುಜುಕಿ ಸ್ವಿಫ್ಟ್, 2015ರಲ್ಲಿ ಬಂದ ಹ್ಯುಂಡೈ ಕ್ರೆಟಾ ಹಾಗೂ ಟಾಟಾ ನೆಕ್ಸಾನ್ ಕಾರುಗಳ ಸಹ ಹೆಚ್ಚಿನ ಜನಮನ್ನಣೆಯನ್ನು ಗಳಿಸಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, March 20, 2024, 13:01 [IST]
English summary
Most popular cars in india after 1947 ambassador premier padmini maruti800 swift innova
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+