ಜಗತ್ತಿನ ಪ್ರಖ್ಯಾತ ಸರಕು ಸಾಗಾಣೆ ಸೈನ್ಯ ವಿಮಾನಗಳು
ಭಾರತೀಯ ವಾಯುಪಡೆ (ಐಎಎಫ್) ಹೊಸದಾಗಿ ಖರೀದಿಸಿದ್ದ ಅಮೆರಿಕ ನಿರ್ಮಿತ ದೇಶದ ಅತಿ ದೊಡ್ಡ ಸರಕು ಸಾಗಾಟದ ಸೈನಿಕ ವಿಮಾನ ಕಳೆದ ವಾರ ಗ್ವಾಲಿಯಾರ್‌ನಲ್ಲಿ ಪತನಗೊಂಡು ಸಂಭವಿಸಿರುವ ದುರಂತದಲ್ಲಿ ಪೈಲಟ್ ಸೇರಿದಂತೆ ಐವರು ರಕ್ಷಣಾ ಸಿಬ್ಬಂದಿಗಳು ಸಾವನ್ನಪ್ಪಿದ್ದರು.
ವಿಶ್ವದ 10 ಅತ್ಯುತ್ತಮ ವಿಮಾನ ನಿಲ್ದಾಣಗಳು
ಸಾವಿರ ಕೋಟಿ ರು.ಗಳಷ್ಟು ಬೆಲೆಬಾಳುವ ಈ ಸೂಪರ್ ಹರ್ಕ್ಯೂಲಸ್ (ಸಿ-130ಜೆ) ಸರಕು ಸಾಗಣೆ ವಿಮಾನವನ್ನು ಅಮೆರಿಕದಿಂದ ಭಾರತ ಖರೀದಿಸಿತ್ತು. ಆದರೆ ಏಕಾಏಕಿ ವಿಮಾನ ಪತನವಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಸ್ತುತ ವಿಮಾನದಲ್ಲಿ ಆಳವಡಿಸಲಾಗಿರುವ ಬ್ಲ್ಯಾಕ್ ಬಾಕ್ಸ್ ಅಮೆರಿಕಕ್ಕೆ ರವಾನಿಸಲಾಗಿದ್ದು, ಅಲ್ಲಿನ ಪ್ರಾಯೋಗಾಲಯದಲ್ಲಿ ನಡೆಸಲಿರುವ ಪರೀಕ್ಷೆಯ ಬಳಿಕ ವಿಮಾನ ಅಪಘಾತಕ್ಕೀರುವ ನಿಖರ ಕಾರಣ ತಿಳಿದು ಬರಲಿದೆ.

ಆಗ್ರಾ ವಾಯು ನೆಲೆಯಿಂದ ಹಾರಾಟ ಆರಂಭಿಸಿದ ಸಿ-130 ಜೆ ಸೂಪರ್ ಹರ್ಕ್ಯೂಲಸ್ ವಿಮಾನ ಗ್ವಾಲಿಯಾರ್ ವಾಯುನೆಲೆಗಿಂತ 72 ಮೈಲ್ ದೂರದಲ್ಲಿ ಪತನಗೊಂಡಿತ್ತು. ಇದೀಗ ಇದರ ತಯಾರಿಯಲ್ಲಿ ಚೀನಾದ ನಕಲಿ ಬಿಡಿಭಾಗಗಳನ್ನು ಬಳಕೆ ಮಾಡಲಾಗಿತ್ತು ಎಂಬ ಬಲವಾದ ಆರೋಪ ಕೇಳಿಬರುತ್ತಿದೆ.

2010ರಲ್ಲಿ ಬರೋಬ್ಬರಿ ಆರು ಸಾವಿರ ಕೋಟಿ ರುಪಾಯಿ ನೀಡಿ ಅಮೆರಿಕದಿಂದ ಆರು ಸೂಪರ್ ಹರ್ಕ್ಯೂಲಸ್ ವಿಮಾನಗಳನ್ನು ಭಾರತ ಖರೀದಿಸಿತ್ತು. ಈ ವಿಮಾನವು ಯೋಧರನ್ನು ಹಾಗೂ 64 ಪ್ಯಾರಾಟ್ರೂಪರ್‌ಗಳನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಸಣ್ಣ ರನ್‌ವೇಗಳಲ್ಲೂ ಟೇಕ್ ಆಫ್ ಮಾಡುವ ಹಾಗೆಯೇ 20 ಟನ್‌ಗಳನ್ನು ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ.
ಪೋಟೊ ಕೃಪೆ: ಕ್ಲಬ್ ಡಾಟ್ ಮಿಲಿಟರಿ ಡಾಟ್ ಸಿಎನ್

ವಿಶೇಷ ಕಾರ್ಯಾಚರಣೆಗಾಗಿ ಬಳಸಲಾಗುತ್ತಿರುವ ಈ ವಿಮಾನವನ್ನು ಇತ್ತೀಚೆಗೆ ಮಲೇಷ್ಯಾ ವಿಮಾನ ಪತ್ತೆ ಕಾರ್ಯಚರಣೆಗೂ ಬಳಸಿಕೊಳ್ಳಲಾಗಿತ್ತು. ಇನ್ನು ಲಡಾಕ್ ಗಡಿಯಲ್ಲಿ ಚೀನಾಗೆ ನಡುಕ ಸೃಷ್ಟಿಸಲು ಇದೇ ವಿಮಾನ ಬಳಕೆ ಮಾಡಲಾಗಿತ್ತು. ಇನ್ನುಳಿದಂತೆ ಉತ್ತಾರಾಖಂಡ್ ಪ್ರವಾಹ ಸಂದರ್ಭದಲ್ಲೂ ಪರಿಹಾರ ಕಾರ್ಯಕ್ಕೆ ಚುರುಕು ಮುಟ್ಟಿಸಲು ನೆರವಾಗಿತ್ತು.
ಪೋಟೊ ಕೃಪೆ: ಐಡಿಆರ್‌ಡಬ್ಲ್ಯು ಡಾಟ್ ಓರ್ಗ್

ಕ್ಲಾಸಿಕ್ ಹರ್ಕ್ಯೂಲಸ್ ಸರಕು ಸಾಗಾಣೆ ವಿಮಾನಗಳಿಗೆ ಸಾಮತ್ಯೆ ಹೊಂದಿರುವ ಸಿ-130ಜೆ ಹರ್ಕ್ಯೂಲಸ್ ವಿಮಾನವು ನೂತನ ವರ್ಷನ್ ಆಗಿದೆ. ಪ್ರಮುಖವಾಗಿಯೂ ಅಮೆರಿಕ ವಾಯುಪಡೆ ಇದರ ಸೇವೆಯನ್ನು ಪಡೆಯುತ್ತಿದೆ.

ನಿಮ್ಮ ಮಾಹಿತಿಗಾಗಿ, ರಕ್ಷಣೆಗೆ ಅತಿ ಹೆಚ್ಚಿನ ಖಾಲಜಿ ವಹಿಸುತ್ತಿರುವ ಭಾರತ ಸರಕಾರ ವರ್ಷಂಪ್ರತಿ ತನ್ನ ಕೇಂದ್ರ ಬಜೆಟ್‌ನಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ದೇಶದ ಭದ್ರತೆಗಾಗಿ ಮೀಸಲಿಡುತ್ತದೆ.

ಇದೀಗ ಮುಂದಿನ ಸ್ಲೈಡರ್ ಒಂದೊಂದೇ ಕ್ಲಿಕ್ಕಿಸುತ್ತಾ ಜಗತ್ತಿನ ಅತ್ಯಂತ ಜನಪ್ರಿಯ ಸರಕು ಸಾಗಾಣೆ ಸೈನ್ಯ ವಿಮಾನಗಳ ಬಗ್ಗೆ ತಿಳಿದುಕೊಳ್ಳಿರಿ.

ಸಿ 130 ಹರ್ಕ್ಯೂಲಸ್ (Hercules)
ಜಗತ್ತಿನ ಸರಕು ಸಾಗಾಣೆ ಸೈನ್ಯ ವಿಮಾನಗಳ ಪಟ್ಟಿಯಲ್ಲಿ ಸಿ-130 ಹರ್ಕ್ಯೂಲಸ್ ಮೊದಲ ಸ್ಥಾನ ಪಡೆದುಕೊಂಡಿದೆ. ಲೋಕ್‌ಹೀಡ್ ಮಾರ್ಟಿನ್ ತಯಾರಿಸಿರುವ ಈ ವಿಮಾನವನ್ನು ಪ್ರಸ್ತುತ ಜಗತ್ತಿನ 70 ದೇಶಗಳು ಬಳಕೆ ಮಾಡುತ್ತಿವೆ.

ಇಲ್ಯೂಷಿನ್ ಐಎಲ್-76 (Ilyushin)
ಕ್ಯಾಂಡಿಡ್ ಎಂದು ಅರಿಯಲ್ಪಡುವ ಇಲ್ಯೂಷಿನ್ ಐಎಲ್-76 ವಿಮಾನವನ್ನು ಪ್ರಾಥಮಿಕವಾಗಿಯೂ ಯುದ್ಧತಂತ್ರಗಳಿಗಾಗಿ ಬಳಕೆ ಮಾಡಲಾಗುತ್ತದೆ.

ಆಂಟೊನೊವ್ ಎಎನ್-12 (Antonov)
ರಷ್ಯಾ ನಿರ್ಮಿತ ವಿಮಾನವಾಗಿರುವ ಎಎನ್-12, ಪ್ರಮುಖವಾಗಿಯೂ ಅಮೆರಿಕದ ಸಿ-130ಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದೆ. ಪ್ರಸ್ತುತ ವಿವಿಧ ಅಗತ್ಯಗಳಿಗಾಗಿ ಜಗತ್ತಿನ 40 ರಾಷ್ಟ್ರಗಳು ಇದನ್ನು ಬಳಕೆ ಮಾಡುತ್ತಿದೆ.

ಸಿ-47 ಸ್ಕೈಟ್ರೈನ್ (Skytrain)
ಡೌಗ್ಲಾಸ್ ಡಿಸಿ-3 ಏರ್‌ಲೈನರ್ ಈ ಸಾರಿಗೆ ಸೈನ್ಯ ವಿಮಾನವನ್ನು ಅಭಿವೃದ್ಧಿಪಡಿಸಿದೆ. ಎರಡನೇ ಜಾಗತಿಕ ಯುದ್ಧ ಕಾಲಘಟ್ಟದಲ್ಲಿ ಇದನ್ನು ಬಳಕೆ ಮಾಡಲಾಗಿತ್ತು ಎಂಬ ಬಗ್ಗೆಯೂ ಮಾಹಿತಿಯಿದೆ.

ಆಂಟೊನೊವ್ ಎಎನ್-32 (Antonov)
ಕ್ಲೈನ್ ಎಂದು ಅರಿಯಲ್ಪಡುವ ಎಎನ್ 32 ಸಹ ರಷ್ಯಾ ನಿರ್ಮಿತ ಸಾರಿಗೆ ಸೈನ್ಯ ವಿಮಾನವಾಗಿದೆ. ಇದು ಹವಾಮಾನ ವೈಪರೀತವನ್ನು ನಿಭಾಯಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಕ್ಯಾಸಾ ಸಿಎನ್-235 (Casa)
ಟ್ವಿನ್ ಟರ್ಬೊ ಪ್ರೊಪ್ ಎಂಜಿನ್ ಹೊಂದಿರುವ ಕ್ಯಾಸಾ ಸಿಎನ್-235 ವಿಮಾನವನ್ನು ಸ್ಪೇನ್ ಹಾಗೂ ಇಂಡೋನೇಷ್ಯಾದಲ್ಲಿ ತಯಾರಿಸಲಾಗಿದೆ. 30 ದೇಶಗಳು ಬಳಕೆ ಮಾಡುತ್ತಿರುವ ಈ ಸರಕು ಸಾಗಾಣೆ ವಿಮಾನವನ್ನು ವಾಣಿಜ್ಯ ಅಗತ್ಯಗಳಿಗಾಗಿಯೂ ಬಳಕೆ ಮಾಡಲಾಗುತ್ತಿದೆ.

ಸಿ-17 ಗ್ಲೋಬ್‌ಮಾಸ್ಟರ್ III
ಅಮೆರಿಕದ ಬೋಯಿಂಗ್ ಇಂಡಸ್ಟ್ರಿಯಿಂದ ನಿರ್ಮಿತವಾಗಿರುವ ಸಿ-17, ಸೈನ್ಯದ ತ್ವರಿತ ಯುದ್ಧತಂತ್ರಗಳಿಗಾಗಿ ಬಳಕೆ ಮಾಡಲಾಗುತ್ತದೆ.

ಆಂಟೊನೊವ್ ಎಎನ್-124
ರಷ್ಯಾ-ಉಕ್ರೇನ್ ನಿರ್ಮಿತ ಸರಕು ಸಾಗಾಣೆ ವಿಮಾನವಾಗಿರುವ ಆಂಟೊನೊವ್ ಎಎನ್-124, ಜಗತ್ತಿನ ಅತಿ ದೊಡ್ಡ ಸರಕು ಸಾಗಣೆ ವಿಮಾನಗಳಲ್ಲಿ ಒಂದಾಗಿದೆ.

ಟ್ರಾನ್‌ಸಲ್ ಸಿ-160 (Transall)
ಟರ್ಬೊಪ್ರೊಪ್ ನಿಯಂತ್ರಿಂತ ಟ್ರಾನ್ಸ್‌ಸಲ್ ಮಿಲಿಟರಿ ಸಾರಿಗೆ ವಿಮಾನ ಸಾಂಪ್ರದಾಯಿಕ ವಿನ್ಯಾಸವನ್ನು ಪಡೆದುಕೊಂಡಿದೆ. ಇದು ದೊಡ್ಡದಾದ ರೆಕ್ಕೆ ಪಡೆದುಕೊಂಡಿದೆ.

ಸಿ-27ಜೆ ಸ್ಪಾರ್ಟನ್ (Spartan)
ಮಧ್ಯಮ ಗಾತ್ರದ ಸ್ಪಾರ್ಟನ್ ಸಾರಿಗೆ ಸೈನ್ಯ ವಿಮಾನವನ್ನು ಎಂಟು ರಾಷ್ಟ್ರಗಳು ಬಳಕೆ ಮಾಡುತ್ತಿವೆ.

ಇದೀಗ ಫೋಟೊ ಫೀಚರ್ ಕೆಳಗಡೆ ಕೊಡಲಾಗಿರುವ ಸರಕು ಸಾಗಾಣೆ ಸೈನ್ಯ ವಿಮಾನಗಳ ರೋಚಕ ವೀಡಿಯೋ ನೋಡಲು ಮರೆಯದಿರಿ...
ಮಿಸ್ ಮಾಡದಿರಿ: ಸರಕು ಸಾಗಾಣೆ ಸೈನ್ಯ ವಿಮಾನಗಳ ರೋಚಕ ವೀಡಿಯೋ


Click it and Unblock the Notifications








