MotoGP: ವಿಶ್ವದ ಅತಿದೊಡ್ಡ ಮೋಟಾರ್‌ಸೈಕಲ್ ರೇಸ್‌ಗೆ ಕ್ಷಣಗಣನೆ
ಮೋಟೋಜಿಪಿ ವಿಶ್ವ ಚಾಂಪಿಯನ್‌ಶಿಪ್ (MotoGP World Championship) ಪ್ರತಿಷ್ಠಿತ ಮೋಟಾರ್‌ಸೈಕಲ್ ರೇಸ್‌ಗಳಲ್ಲಿ ಒಂದಾಗಿದೆ. ನಮ್ಮ ಭಾರತವು ಈ ಅದ್ಬುತ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಸೆಪ್ಟೆಂಬರ್ 22 ರಿಂದ 24ರವರೆಗೆ ರೇಸ್ ನಡೆಯಲಿದೆ. ಈಗಾಗಲೇ, ಸಿದ್ಧತೆಗಳು ಮುಗಿದಿದ್ದು, ರೇಸ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
ನೋಯ್ಡಾದ ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್ (buddh international circuit) ನಲ್ಲಿ ಅದ್ದೂರಿಯಾಗಿ ರೇಸ್ ಜರುಗಲಿದೆ. 2011 ಹಾಗೂ 2013 ರ ನಡುವೆ ಇಲ್ಲಿ ಫಾರ್ಮುಲಾ 1 ರೇಸ್ ಆಯೋಜಿಸಲಾಗಿತ್ತು. ಇದೀಗ, ಮೋಟಾರ್‌ಸೈಕಲ್ ರೇಸ್ ನಡೆಯುತ್ತಿರುವುದರಿಂದ ಅದಕ್ಕೆ ತಕ್ಕಂತೆ ಟ್ರ್ಯಾಕ್ ಅನ್ನು ಸಿದ್ದಪಡಿಸಲಾಗಿದ್ದು, ರೈಡರ್ ಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.

ಈ ಮೊದಲು ಸರ್ಕ್ಯೂಟ್ ನಲ್ಲಿ ಫಾರ್ಮುಲಾ 1 ರೇಸ್ ನಡೆದಾಗ ಟ್ರ್ಯಾಕ್ 16 ತಿರುವುಗಳನ್ನು (Turn) ಒಳಗೊಂಡಿತ್ತು. ಮೋಟೋಜಿಪಿ ಮೋಟಾರ್‌ಸೈಕಲ್ ರೇಸ್ ಆಗಿರುವುದರಿಂದ ಟ್ರ್ಯಾಕ್ ನ್ನು ಕೊಂಚ ಮಾರ್ಪಾಡು ಮಾಡಲಾಗಿದ್ದು, 13 ತಿರುವುಗಳನ್ನು ಹೊಂದಿದೆ. ಇಲ್ಲಿ, ರೇಸರ್‌ಗಳು 370 kmph ಟಾಪ್ ಸ್ವೀಡ್ ನಲ್ಲಿ ಬೈಕ್ ಓಡಿಸಲು ಸಾಧ್ಯವಾಗುತ್ತದೆ.
ದೇಶದಲ್ಲಿ ಈ ರೇಸ್ ಅನ್ನು 3 ವಿಭಾಗಗಳಲ್ಲಿ ಆಯೋಜಿಸಲಾಗಿದ್ದು, 'ಮೋಟೋಜಿಪಿ' ರೇಸ್‌ನಲ್ಲಿ 11 ತಂಡಗಳ 22 ರೈಡರ್‌ಗಳು ಪಾಲ್ಗೊಂಡು, ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಮೋಟೋ 2 ಮತ್ತು ಮೋಟೋ 3 ರೇಸ್ ಕೂಡ ನಡೆಯಲಿದ್ದು, 40ಕ್ಕೂ ಹೆಚ್ಚಿನ ತಂಡಗಳ 80ಕ್ಕೂ ರೈಡರ್ ಗಳು ಪಾಲ್ಗೊಳ್ಳಲಿದ್ದಾರೆ. ಡುಕಾಟಿ, ಕೆಟಿಎಂ, ಅಪ್ರಿಲಿಯಾ, ಯಮಹಾ, ಸೇರಿದಂತೆ ಪ್ರಮುಖ ಘಟಾನುಘಟಿ ತಂಡಗಳು ಸ್ವರ್ಧೆಯಲ್ಲಿ ಭಾಗವಹಿಸಲಿವೆ.

ನಿಮಗೆ ಗೊತ್ತಿರಲಿ.. ಮೋಟೋಜಿಪಿ ವೀಕ್ಷಣೆಗೆ ಆಯೋಜಕರು, ಟಿಕೆಟ್ ನೀಡುವುದನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಎಲ್ಲವೂ ಮಾರಾಟವಾಗಿತ್ತು. ಈ ಟೆಕೆಟ್ ದರಗಳು, ರೂ.800 ದಿಂದ ರೂ.40,000 ಇತ್ತು. ನೀವು ಮನೆಯಲ್ಲಿಯೇ ಕುಳಿತು ರೇಸ್ ಕಣ್ತುಂಬಿಕೊಳ್ಳಬಹುದು. ಜಿಯೋ ಸಿನಿಮಾ, ಸ್ಪೋರ್ಟ್ಸ್18ನಲ್ಲಿ ಮೋಟೋಜಿಪಿ ರೇಸ್ ನೇರ ಪ್ರಸಾರ ವೀಕ್ಷಿಸಬಹುದು.
ಕಳೆದ ಜುಲೈ ತಿಂಗಳೇ ಮೋಟೋಜಿಪಿ ರೇಸ್ ಆಯೋಜಕರು, ನವದೆಹಲಿಯಲ್ಲಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ನಿವಾಸಕ್ಕೆ ಭೇಟಿ ನೀಡಿದ್ಧರು. ಅತಿಥಿಯಾಗಿ ಆಗಮಿಸುವಂತೆ ಅವರಿಗೆ ಕೈವೈಟಿ ಹೆಲ್ಮೆಟ್ ಗಿಫ್ಟ್ ಕೊಟ್ಟು ಆಹ್ವಾನಿಸಿದ್ದರು. ಅನುರಾಗ್ ಠಾಕೂರ್ ಅವರು, ತಮ್ಮ ಮನೆಯ ಆವರಣದಲ್ಲಿ ಸುರಿಯುವ ಮಳೆಯಲ್ಲೂ ಬೈಕ್ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಇನ್ನು, ಭಾರತದ ಯುವಕರು ನಿಧಾನವಾಗಿ ರೇಸ್ ಗಳತ್ತ ವಾಲುತ್ತಿದ್ದಾರೆ. ಅದಕ್ಕೆ ಮೋಟೋಜಿಪಿ ವೀಕ್ಷಿಸಲು ಮಾರಾಟವಾಗಿದ್ದ ಟಿಕೆಟ್ ಸಂಖ್ಯೆಯೇ ಸಾಕ್ಷಿ. ಈಗಾಗಲೇ, ನೋಯ್ಡಾದ ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ಎಲ್ಲ ಸಿದ್ಧತೆಗಳು ಮುಗಿದ್ದು, ಕೆಲವೇ ಗಂಟೆಯಲ್ಲಿ ರೇಸ್ ಆರಂಭವಾಗಲಿದ್ದು, ರೇಸ್ ಪ್ರಿಯರು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ಅಂತಿಮವಾಗಿ ಇನ್ನೆರಡು ದಿನದಲ್ಲಿ ಎಲ್ಲ ಕುತೂಹಲಕ್ಕೂ ತೆರೆ ಬೀಳಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








