ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ

ಈ ವರ್ಷದ ಜುಲೈ ತಿಂಗಳಿನಲ್ಲಿ, ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದ ಪೊಲೀಸರು ಎರಡು ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ 1,500 ಜನರಿಗೆ ದಂಡ ವಿಧಿಸಿದ್ದರು. ನಂಬರ್ ಪ್ಲೇಟ್‍‍ಗಳ ಮೇಲೆ ಜಾತಿಯ ಸ್ಟಿಕ್ಕರ್ ಹಾಗೂ ಬೇರೆ ರೀತಿಯ ಫಲಕಗಳನ್ನು ಹೊಂದಿದ್ದ ವಾಹನಗಳಿಗೆ ದಂಡ ವಿಧಿಸಲಾಗಿತ್ತು.

ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ

ನೋಯ್ಡಾ ಪೊಲೀಸರು ಮತ್ತೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಒಂದೇ ದಿನದಲ್ಲಿ 250ಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಿದ್ದಾರೆ. ನೋಯ್ಡಾ ಪೊಲೀಸರು ಅಕ್ರಮ ಬರಹ ಹೊಂದಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದರು.

ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ

ಜನಪ್ರಿಯ ಬಾಲಿವುಡ್ ಚಿತ್ರ ದಬಾಂಗ್ ಸೇರಿದಂತೆ ವಿವಿಧ ರೀತಿಯ ಬರಹಗಳನ್ನು ಹೊಂದಿದ್ದ ವಾಹನಗಳಿಗೆ ದಂಡ ವಿಧಿಸಲಾಯಿತು. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಕಾರಣಕ್ಕೆ ಈ ವಿಶೇಷ ಕಾರ್ಯಾಚರಣೆಗೆ ದೀಪಾವಳಿಗೂ ಮುನ್ನವೇ ಚಾಲನೆ ನೀಡಲಾಯಿತು.

ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ

ಯಾವುದೇ ರೀತಿಯ ಬರಹಗಳು ವಾಹನದ ನಂಬರ್ ಪ್ಲೇಟ್‍‍ನಲ್ಲಿ ಮಾತ್ರ ಇರಬೇಕಾಗಿಲ್ಲ, ವಾಹನದ ವಿಂಡ್‌ಸ್ಕ್ರೀನ್‌ನಲ್ಲಿದ್ದರೂ ದಂಡ ವಿಧಿಸಲಾಯಿತು. ನೋಯ್ಡಾ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ವೈಭವ್ ಶರ್ಮಾರವರು ಮಾತನಾಡಿ, ನಂಬರ್‌ ಪ್ಲೇಟ್‌ಗಳಲ್ಲಿ ಆಕ್ರಮಣಕಾರಿ ಬರಹ ಅಥವಾ ಜಾತಿಗೆ ಸಂಬಂಧಪಟ್ಟ ಪದಗಳನ್ನು ಬರೆಯುವ ಅಭ್ಯಾಸವನ್ನು ನಿಲ್ಲಿಸಬೇಕಾಗಿದೆ.

ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ

ಇಂತಹ ಬರಹಗಳು ವಾಹನ ಚಾಲಕರಲ್ಲಿ ಅಭದ್ರತೆಯ ಭಾವನೆಯನ್ನು ಉಂಟುಮಾಡುತ್ತವೆ. ಅವು ರಸ್ತೆಯಲ್ಲಿ ಸಂಚರಿಸುವವರಿಗೆ ಕಿರಿಕಿರಿ ನೀಡುತ್ತವೆ. ಆದ್ದರಿಂದ ನಾವು ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ

ವರದಿಗಳ ಪ್ರಕಾರ, ನೋಯ್ಡಾ ಪೊಲೀಸರು 250ಕ್ಕೂ ಹೆಚ್ಚು ಬೈಕ್‌ ಸವಾರರು ಹಾಗೂ ಕಾರು ಚಾಲಕರಿಗೆ ದಂಡ ವಿಧಿಸಿದ್ದಾರೆ. ಡ್ರೈವ್ ಅನ್ನು ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾ ಪ್ರದೇಶಗಳಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ

ಈ ಕಾರ್ಯಾಚರಣೆಯು ಆಪರೇಷನ್ ಕ್ಲೀನ್‍‍ನ ಭಾಗವಾಗಿದ್ದು, ಮುಂದಿನ ದಿನಗಳಲ್ಲಿಯೂ ಮುಂದುವರೆಯಲಿದೆ. ತಮ್ಮ ವಾಹನಗಳಲ್ಲಿ ಜಾತಿಗೆ ಸಂಬಂಧಪಟ್ಟ ಬರಹಗಳನ್ನು ಹೊಂದಿದ್ದ 113 ವಾಹನ ಚಾಲಕರಿಗೆ ದಂಡ ವಿಧಿಸಲಾಯಿತು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ

ಈ ಪೈಕಿ ನಗರ ಪ್ರದೇಶದಲ್ಲಿ 100 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 91 ಜನರ ವಿರುದ್ಧ ತಮ್ಮ ವಾಹನಗಳಲ್ಲಿ ಆಕ್ರಮಣಕಾರಿ ಪದಗಳನ್ನು ಪ್ರದರ್ಶಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ 78 ವಾಹನ ಚಾಲಕರು ನಗರ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ

ಸಂಖ್ಯೆಗಳನ್ನು ಪದದಂತೆ ಕಾಣುವಂತೆ ನಂಬರ್ ಪ್ಲೇಟ್‍‍ಗಳನ್ನು ತಿದ್ದಿರುವುದಕ್ಕೆ 50 ಜನರಿಗೆ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಜೊತೆಗೆ ರಿಜಿಸ್ಟ್ರೇಶನ್ ಪ್ಲೇಟ್‍‍ಗಳಲ್ಲಿ ನಂಬರ್‌ದಾರ್ ಹಾಗೂ ಅಪ್ಪನ ಉಡುಗೊರೆ ಎಂಬ ವಿವಿಧ ರೀತಿಯ ಬರಹಗಳನ್ನು ಹೊಂದಿದ್ದವರಿಗೂ ದಂಡ ವಿಧಿಸಲಾಗಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ

ಪೊಲೀಸರು ಈ ದಂಡದ ದಾಖಲೆಯನ್ನು ತಮ್ಮ ಬಳಿ ಇಟ್ಟುಕೊಳ್ಳಲಿದ್ದಾರೆ. ಮೊದಲ ಬಾರಿಯ ಉಲ್ಲಂಘನೆಗೆ ರೂ.300 ದಂಡ ವಿಧಿಸಿದರೆ, ಎರಡನೇ ಬಾರಿಗೆ ರೂ.500 ದಂಡ ವಿಧಿಸಲಾಗುತ್ತದೆ. 138 ಬೈಕುಗಳು ಸೇರಿದಂತೆ ಇತರ 150 ವಾಹನಗಳಿಗೆ ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್‍‍ಗಳ ಅಡಿಯಲ್ಲಿ ದಂಡ ವಿಧಿಸಲಾಗಿದೆ.

ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ

ನಂಬರ್‌ ಪ್ಲೇಟ್‌ಗಳನ್ನು ಟ್ಯಾಂಪರ್ ಮಾಡುವುದು ಕಾನೂನುಬಾಹಿರವೆಂದು ಪೊಲೀಸರು ತಿಳಿಸಿದ್ದಾರೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177 ಹಾಗೂ 1989ರ ಮೋಟಾರು ವಾಹನ ಕಾಯ್ದೆಯ ನಿಯಮ 50 ಮತ್ತು 51 ರ ಅಡಿಯಲ್ಲಿ, ನಂಬರ್ ಪ್ಲೇಟ್‍‍ನಲ್ಲಿ ರಿಜಿಸ್ಟ್ರೇಶನ್ ನಂಬರ್ ಅನ್ನು ಹೊರತುಪಡಿಸಿ ಬೇರೆ ಯಾವುದೇ ಬರಹಗಳಿರಬಾರದು.

ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ

ಈ ಕಾರ್ಯಾಚರಣೆಯು ಮುಂದಿನ ಹಲವು ದಿನಗಳವರೆಗೂ ಮುಂದುವರೆಯಲಿದ್ದು, ಧಾರ್ಮಿಕ ಸ್ಲೋಗನ್‍‍ಗಳನ್ನು ತಮ್ಮ ವಾಹನಗಳಲ್ಲಿ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

More from DriveSpark

Article Published On: Tuesday, October 29, 2019, 10:39 [IST]
English summary
Motorists fined for displaying caste stickers - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+