ಐಕಾನಿಕ್ ಮಸಲ್ ಕಾರಿನಲ್ಲಿ ಕಾಣಿಸಿಕೊಂಡು ಕಾರು ಉತ್ಸಾಹಿಗಳ ಉಬ್ಬೇರಿಸಿದ ಎಂಎಸ್ ಧೋನಿ
ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಅಭಿಮಾನಿಗಳಿಂದ ಕ್ಯಾಪ್ಟನ್ ಕೂಲ್ ಎಂದು ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಅವರಿಗೆ ಬೈಕ್ ಹಾಗೂ ಕಾರುಗಳ ಕ್ರೇಜ್ ಎಷ್ಟಿದೆ ಎಂಬುದರ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಯಾವ ಮಟ್ಟಿಗೆ ಅಂದ್ರೆ ಅವರ ಗ್ಯಾರೇಜ್‌ಗೆ ಭೇಟಿ ನೀಡುವ ಪ್ರತಿಯೊಬ್ಬರು ಅಚ್ಚರಿಗೊಂಡು ವಾಪಸ್ ಆಗುತ್ತಾರೆ.
ಇತ್ತೀಚೆಗಷ್ಟೇ ರಾಂಚಿಯಲ್ಲಿ ರೋಲ್ಸ್ ರಾಯ್ಸ್ ಓಡಿಸುತ್ತಾ ಕಾಣಿಸಿಕೊಂಡಿದ್ದ ಅವರು, ಮತ್ತೊಮ್ಮೆ ತಮ್ಮ ಊರಿನ ಬೀದಿಗಳಲ್ಲಿ ಮತ್ತೊಂದು ವಿಂಟೇಜ್ ಕಾರನ್ನು ಓಡಿಸುತ್ತಿರುವ ವಿಡಿಯೋ ಹೊರಬಂದಿದೆ. ಐಕಾನಿಕ್ ಮಸಲ್ ಕಾರೊಂದರಲ್ಲಿ ಕಾಣಿಸಕೊಂಡು ಆಟೋ ಉತ್ಸಾಹಿಗಳು ಉಬ್ಬೇರಿಸುವಂತೆ ಮಾಡಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೊಡೋಣ.

ಅಪರೂಪದ ಕೆಂಪು ಬಣ್ಣದ ಪಾಂಟಿಯಾಕ್ ಟ್ರಾನ್ಸ್ ಆಮ್ 1973 ಮಾದರಿಯನ್ನು ಜಾರ್ಖಂಡ್‌ನ ರಾಂಚಿಯ ಬೀದಿಗಳಲ್ಲಿ ಓಡಿಸುತ್ತಾ ಧೋನಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ವಿಡಿಯೋದಲ್ಲಿ ಕಂಡುಬರುವಂತೆ ಧೋನಿ ಎಡಗೈ ಡ್ರೈವ್ ವಾಹನವನ್ನು ಓಡಿಸುತ್ತಿರುವುದು ಖಚಿತವಾಗಿದೆ. ಧೋನಿ ತಮ್ಮ ಅಪರೂಪದ ಕಾರಿನಲ್ಲಿ ತಮ್ಮದೇ ತವರಿನಲ್ಲಿ ಓಡಿಸುತ್ತಿರುವುದನ್ನು ನೋಡಬಹುದು. ಈ ಕಾರು ಮಹಾರಾಷ್ಟ್ರ ನಂಬರ್ ಪ್ಲೇಟ್ ಹೊಂದಿದೆ.
ಈ ವಿಡಿಯೋವನ್ನು ಹಲವಾರು ಸೋಷಿಯಲ್ ಮೀಡಿಯಾ ಸೈಟ್‌ಗಳಲ್ಲಿ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋ ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ. "ಧೋನಿ ನಿಜವಾದ ಕಾರು ಮತ್ತು ಬೈಕ್ ಪ್ರೇಮಿ" ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಒಂದು ವಾರದಲ್ಲಿ ಧೋನಿ ರಾಂಚಿಯಲ್ಲಿ ವಿಂಟೇಜ್ ಕಾರನ್ನು ಓಡಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ.

ಧೋನಿ ಒಡೆತನದ ಕಾರುಗಳಲ್ಲಿ, ಈ ಎರಡು ವಿಂಟೇಜ್ ಕಾರುಗಳು ಅಪರೂಪದ ಐಕಾನಿಕ್ ಕಾರುಗಳಾಗಿವೆ. ಉಳಿದಂತೆ ಏಸ್ ಸ್ಕಿಪ್ಪರ್ ರೋವರ್ ಮಿನಿ ಕೂಪರ್ ಸ್ಪೋರ್ಟ್, ಲ್ಯಾಂಡ್ ರೋವರ್ ಡಿಫೆಂಡರ್ 110, 1971 ರ ಲ್ಯಾಂಡ್ ರೋವರ್ ಸೀರೀಸ್ 3 ಸ್ಟೇಷನ್ ವ್ಯಾಗನ್, ಪಾಂಟಿಯಾಕ್ ಫೈರ್‌ಬರ್ಡ್, ನಿಸ್ಸಾನ್ ಜೊಂಗಾ ಸೆರಿದಂತೆ ಆಕರ್ಷಕ ಮಾದರಿಗಳನ್ನು ಹೊಂದಿದ್ದಾರೆ.
ಬೈಕ್‌ಗಳ ಬಗ್ಗೆ ಹೇಳುವುದೇ ಬೇಡ: ಇತ್ತೀಚೆಗೆ ಭಾರತದ ಮಾಜಿ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಅವರು ಧೋನಿಯ ರಾಂಚಿ ಫಾರ್ಮ್‌ಹೌಸ್ ವೀಡಿಯೊವನ್ನು ಹಂಚಿಕೊಂಡಿದ್ದರು. ಅಲ್ಲಿ ಧೋನಿಯವರ ಬೃಹತ್ ಬೈಕ್‌ಗಳ ಸಂಗ್ರಹವನ್ನು ತೋರಿಸಿದ್ದರು, "ಒಬ್ಬ ವ್ಯಕ್ತಿಯಲ್ಲಿ ನಾನು ನೋಡಿದ ಅತ್ಯಂತ ಕ್ರೇಜಿಯೆಸ್ಟ್ ಪ್ಯಾಶನ್‌ಗಳಲ್ಲಿ ಇದು ಒಂದಾಗಿದೆ ಎಂದು ಧೋನಿಯ ಬೈಕ್ ಸಂಗ್ರಹದ ವಿಡಿಯೋವನ್ನು ಹಂಚಿಕೊಂಡಿದ್ದರು.
ಈ ವಿಡಿಯೋವನ್ನು ಧೋನಿ ಪತ್ನಿ ಸಾಕ್ಷಿ ಚಿತ್ರೀಕರಿಸಿದ್ದು, ಮೋಟಾರ್ ಸೈಕಲ್‌ಗಳು ಮತ್ತು ಕಾರುಗಳಿಂದ ತುಂಬಿರುವ ಎರಡು ಅಂತಸ್ತಿನ ಕಟ್ಟಡವನ್ನು ಇದು ತೋರಿಸುತ್ತದೆ. ಧೋನಿಯ ಗ್ಯಾರೇಜ್‌ನಲ್ಲಿ ನಿಲ್ಲಿಸಿರುವ ಎಲ್ಲಾ ಬೈಕ್‌ಗಳನ್ನು ಗುರುತಿಸಲು ಸಾಧ್ಯವಾಗದಿದ್ದರೂ, ಎರಡೂ ಮಹಡಿಗಳಲ್ಲಿ ಹಲವಾರು ಹಳೆಯ ಮೋಟಾರ್‌ಸೈಕಲ್‌ಗಳನ್ನು ನಿಲ್ಲಿಸಲಾಗಿದೆ ಎಂದು ವೀಡಿಯೊದಿಂದ ತಿಳಿಯಬಹುದು.
ಎಂಎಸ್ ಧೋನಿ ಹಳೆಯ ತಲೆಮಾರಿನ ರಾಯಲ್ ಎನ್‌ಫೀಲ್ಡ್ ಬುಲೆಟ್, ಯಮಹಾ YZF-R6 ಮತ್ತು ಸುಜುಕಿ ಇಂಟ್ರುಡರ್ M1800R ಅನ್ನು ಸಹ ಹೊಂದಿರುವುದು ಅವರ ಗ್ಯಾರೇಜ್‌ನ ಹಳೆಯ ವೀಡಿಯೊಗಳು ಬಹಿರಂಗಪಡಿಸಿವೆ. ಇನ್ನು ಪರಿಸರ ಕಾಳಜಿ ಕೂಡ ಹೊಂದಿರುವ ಧೋನಿಯವರು ಇತ್ತೀಚೆಗೆ ತಮ್ಮ ಗ್ಯಾರೇಜ್‌ಗೆ Kia EV6 ಎಲೆಕ್ಟ್ರಿಕ್ ಕಾರನ್ನು ಸೇರಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications