ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಕ್ರಿಡೆಯ ಹೊರತಾಗಿ ವಾಹನಗಳ ಕುರಿತಾಗಿ ಹೆಚ್ಚಿನ ಕ್ರೇಜ್ ಹೊಂದಿದ್ದು, ಇತ್ತೀಚೆಗೆ ಧೋನಿ ಜನಪ್ರಿಯ ಕಾರ್ ಗ್ಯಾರೇಜ್‌ನಲ್ಲಿ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು ಸದ್ದು ಮಾಡುತ್ತಿದೆ.

ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

ಎಂಎಸ್ ಧೋನಿಗೆ ವಾಹನಗಳ ಮೇಲಿನ ಪ್ರೀತಿ ಹೇಗಿದೆ ಅಂತಾ ಅವರ ಅಭಿಮಾನಿಗಳಿಗೆ ಗೊತ್ತೇ ಇದೆ. ತಮ್ಮ ಫಾರ್ಮ್‌ ಹೌಸ್‌ನಲ್ಲಿ ಧೋನಿ ವಿಶೇಷವಾಗಿ ವಿನ್ಯಾಸಗೊಳಿಸಿದ ಗ್ಯಾರೇಜ್ ಅನ್ನೇ ನಿರ್ಮಾಣ ಮಾಡಿದ್ದು, ಈ ಗ್ಯಾರೇಜ್‌ನಲ್ಲಿ ಧೋನಿ ಇಷ್ಟ ಹಲವಾರು ಬೈಕ್‌ಗಳು ಹಾಗೂ ವಿವಿಧ ಕಾರುಗಳಿವೆ. ಧೋನಿ ಗ್ಯಾರೇಜ್‌ನಲ್ಲಿ ಕೇವಲ ಹೊಸ ವಾಹನಗಳು ಮಾತ್ರವಲ್ಲ ಅಪರೂಪದ ಹಳೆಯ ವಾಹನಗಳ ದೊಡ್ಡ ಸಂಗ್ರವೇ ಇದ್ದು, ಇದೀಗ ಮತ್ತೊಂದು ವಿಂಟೇಜ್ ಕಾರು ಎಂಟ್ರಿ ಕೊಟ್ಟಿದೆ.

ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

ಹೌದು, ಎಂಎಸ್ ಧೋನಿ ತಮ್ಮ ಗ್ಯಾರೇಜ್‌ಗೆ ಮತ್ತೊಂದು ವಿಂಟೇಜ್ ಕಾರನ್ನು ಸೇರ್ಪಡೆಗೊಳಿಸಿದ್ದು, ಇತ್ತೀಚೆಗೆ ನಡೆದ ಆನ್‌ಲೈನ್ ಹರಾಜುವೊಂದರಲ್ಲಿ ಅವರು 1971ರ ಲ್ಯಾಂಡ್ ರೋವರ್ ಸೀರಿಸ್ 3 ಸ್ಟೇಷನ್ ವ್ಯಾಗನ್ ಮಾದರಿಯನ್ನು ಖರೀದಿಸಿದ್ದಾರೆ.

ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

ಬಿಗ್ ಬಾಯ್ ಟಾಯ್ಸ್ ಕಂಪನಿಯು ಇತ್ತೀಚೆಗೆ ಮೊದಲ ಕ್ಲಾಸಿಕ್ ಮತ್ತು ವಿಂಟೇಜ್ ಕಾರುಗಳ ಆನ್‌ಲೈನ್ ಹರಾಜನ್ನು ನಡೆಸಿದ್ದು, ಇದರಲ್ಲಿ ಭಾರೀ ಸಂಖ್ಯೆಯಲ್ಲಿ ವಿಂಟೇಜ್ ಕಾರು ಪ್ರಿಯರು ಭಾಗಿಯಾಗಿದ್ದರು. ಇದೇ ಹರಾಜಿನಲ್ಲಿ ಭಾಗಿಯಾಗಿದ್ದ ಎಂಎಸ್ ಧೋನಿ ತಮ್ಮ ಇಷ್ಟದ ಲ್ಯಾಂಡ್ ರೋವರ್ ಸಿರೀಸ್ 3 ಸ್ಟೇಷನ್ ವ್ಯಾಗನ್ ವಿಂಟೇಜ್ ಕಾರು ಮಾದರಿಯನ್ನು ಭಾರೀ ಮೊತ್ತಕ್ಕೆ ಖರೀದಿಸಿದ್ದಾರೆ.

ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

ಬಿಗ್ ಬಾಯ್ ಟಾಯ್ಸ್ ಕಂಪನಿಯು ನಡೆಸಿದ ಆನ್‌ಲೈನ್ ಹರಾಜಿನಲ್ಲಿ ರೋಲ್ಸ್ ರಾಯ್ಸ್, ಕ್ಯಾಡಿಲಾಕ್, ಷೆವರ್ಲೆ, ಲ್ಯಾಂಡ್ ರೋವರ್, ಆಸ್ಟಿನ್ ಮಾರ್ಟಿನ್, ಮರ್ಸಿಡಿಸ್ ಬೆಂಝ್ ಒಳಗೊಂಡಂತೆ ಒಟ್ಟು 19 ಕಾರುಗಳಿದ್ದವು. ಈ ಪೈಕಿ ಶೇ. 50 ರಷ್ಟು ವಿಂಟೇಜ್ ಕಾರುಗಳು ಈ ಹರಾಜಿನಲ್ಲಿ ಮಾರಾಟವಾಗಿದ್ದು, ಧೋನಿ ಇದರಲ್ಲಿ ಲ್ಯಾಂಡ್ ರೋವರ್ ಸಿರೀಸ್ 3 ಸ್ಟೇಷನ್ ವ್ಯಾಗನ್ ಖರೀದಿಸಿದ್ದಾರೆ.

ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

ಸಿರೀಸ್ 3 ಸ್ಟೇಷನ್ ವ್ಯಾಗನ್ ಮಾದರಿಯು ಲ್ಯಾಂಡ್ ರೋವರ್ ಕಂಪನಿ ನಿರ್ಮಾಣದ ಜನಪ್ರಿಯ ಕಾರುಗಳಲ್ಲಿ ಒಂದಾಗಿದ್ದು, 1971 ರಿಂದ 1985 ರವರೆಗೆ ಇದು ಉತ್ಪಾದನೆಯಲ್ಲಿತ್ತು. ಧೋನಿ ಖರೀದಿ ಮಾಡಿರುವ ಮಾದರಿಯು ಯಾವ ವರ್ಷ ಮಾದರಿಯ ಎನ್ನುವ ನಿಖರ ಮಾಹಿತಿ ಇಲ್ಲವಾದರೂ ಹಳದಿ ಬಣ್ಣ ಆಯ್ಕೆಯೊಂದಿಗೆ ಆಕರ್ಷಕ ಕಾರು ಮಾದರಿಯಾಗಿ ಗುರುತಿಸಿಕೊಂಡಿತ್ತು.

ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

70ರ ದಶಕದಲ್ಲಿಯೇ ಅತಿ ಹೆಚ್ಚು ಎಂಜಿನ್ ಶಕ್ತಿ ಹೊಂದಿದ್ದ ಲ್ಯಾಂಡ್ ರೋವರ್ ಸೀರಿಸ್ 3 ಸ್ಟೇಷನ್ ವ್ಯಾಗನ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 2.3 ಲೀಟರ್, ನಾಲ್ಕು ಸಿಲಿಂಡರ್ ಪ್ರೇರಿತ ಪೆಟ್ರೋಲ್ ಮತ್ತು 3.5 ಲೀಟರ್ ಸಾಮರ್ಥ್ಯದ ವಿ8 ಎಂಜಿನ್ ಆಯ್ಕೆ ಹೊಂದಿತ್ತು.

ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

ಎಂಎಸ್ ಧೋನಿ ಖರೀದಿ ಮಾಡಿರುವ ಸೀರಿಸ್ 3 ಸ್ಟೇಷನ್ ವ್ಯಾಗನ್ ಮಾದರಿಯು 3.5 ಲೀಟರ್ ಸಾಮರ್ಥ್ಯದ ವಿ8 ಎಂಜಿನ್ ಆಯ್ಕೆ ಹೊಂದಿದ್ದು, ಹಾರಾಜು ಮೊತ್ತವನ್ನು ಬಿಗ್ ಬಾಯ್ ಟಾಯ್ಸ್ ಕಂಪನಿಯು ಯಾವುದೇ ನಿಖರ ಮಾಹಿತಿ ನೀಡಿಲ್ಲ.

ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

ಇ-ಹರಾಜಿನಲ್ಲಿ ರೂ. 1 ರೂಪಾಯಿಯಿಂದ ರೂ. 25 ಲಕ್ಷದ ತನಕ ಬಿಡ್ ಮಾಡಿದ್ದ ಬಿಗ್ ಬಾಯ್ ಟಾಯ್ಸ್ ಕಂಪನಿಯು ಸುಮಾರು 10 ವಿಂಟೇಜ್ ಕಾರುಗಳನ್ನು ಮಾರಾಟ ಮಾಡಿದ್ದು, ಸೀರಿಸ್ 3 ಸ್ಟೇಷನ್ ವ್ಯಾಗನ್ ಮಾದರಿಯ ಖರೀದಿಗೆ ಹಲವು ಸೆಲೆಬ್ರಿಟಿಗಳು ದೊಡ್ಡ ಮೊತ್ತದ ಬಿಡ್ ಮಾಡಿದ್ದರು.

ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

ಆದರೆ ಕೊನೆಯ ಹಂತದವರೆಗೂ ತಮ್ಮ ಇಷ್ಟ ಕಾರನ್ನು ಬಿಟ್ಟುಕೊಡದ ಎಂಎಸ್ ಧೋನಿ ಸೀರಿಸ್ 3 ಸ್ಟೇಷನ್ ವ್ಯಾಗನ್ ಮಾದರಿಯ ಮಾಲೀಕತ್ವ ಪಡೆದುಕೊಂಡಿದ್ದು, ವಿಂಟೇಜ್ ಕಾರು ಮಾದರಿಯಾದರೂ ಉತ್ತಮ ಸ್ಥಿತಿಯಲ್ಲಿ ನಿರ್ವಹಣೆ ಮಾಡಲಾಗಿದೆ.

ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

ಸುಮಾರು 45 ರಿಂದ 50 ವರ್ಷಗಳಷ್ಟು ಹಳೆಯದಾರರೂ ಕಾರಿನ ಪ್ರಮುಖ ತಾಂತ್ರಿಕ ಅಂಶಗಳು ಉತ್ತಮ ಸ್ಥಿತಿಯಲ್ಲಿದ್ದು, ಹರಾಜಿನಲ್ಲಿ ಮಾರಾಟ ಮಾಡಲಾದ ಎಲ್ಲಾ ವಿಂಟೇಜ್ ವಾಹನಗಳನ್ನು ನುರಿತ ಆಟೋ ತಜ್ಞರೇ ರೇಟಿಂಗ್ ಮಾಡಿದ್ದಾರೆ ಮತ್ತು ಉತ್ತಮ ರೀತಿಯಲ್ಲಿ ದುರಸ್ತಿ ಮಾಡಲಾಗಿದೆ ಎಂದು ಬಿಗ್ ಬಾಯ್ಸ್ ಟಾಯ್ಸ್ ಕಂಪನಿಯು ವರದಿ ಮಾಡಿದೆ.

ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

ಬಿಗ್ ಬಾಯ್ಸ್ ಟಾಯ್ಸ್ ಕಂಪನಿಯು ಗುರುಗ್ರಾಮ್ ಅಪರೂಪದ ವಿಂಟೇಜ್ ಕಾರ್ ಶೋರೂಂ ಹೊಂದಿದ್ದು, ಹರಾಜಿಗಾಗಿ ಘೋಷಿಸಲಾದ ಎಲ್ಲಾ ಅಪರೂಪದ ವಾಹನಗಳನ್ನು ಪ್ರದರ್ಶಿಸಿದೆ.

ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ವಿಂಟೇಜ್ ಕಾರು

ಇನ್ನು ಭಾರತದಲ್ಲಿ ಪುರಾತನ ವಾಹನಗಳನ್ನು ಖರೀದಿಸುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಬಿಗ್ ಬಾಯ್ಸ್ ಟಾಯ್ಸ್ ಕಂಪನಿಯು ಈ ನಿಟ್ಟಿನಲ್ಲಿ ವಿಂಟೇಜ್ ವಾಹನಗಳ ಖರೀದಿ ಮತ್ತು ಮಾರಾಟದ ಮೇಲೆ ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿದೆ.

ವಿಂಟೇಜ್ ವಾಹನಗಳ ಖರೀದಿ ಮತ್ತು ಮಾರಾಟದ ವ್ಯವಹಾರದ ಮೇಲೆ ಬಿಗ್ ಬಾಯ್ಸ್ ಟಾಯ್ಸ್ ಕಂಪನಿಯು ಮುಂದಿನ ಎರಡು ವರ್ಷಗಳಲ್ಲಿ ಸುಮಾರು ರೂ. 100 ಕೋಟಿ ಹೂಡಿಕೆಗೆ ಮುಂದಾಗಿದ್ದು, ಶೀಘ್ರದಲ್ಲೇ ಮತ್ತೊಂದು ಬೃಹತ್ ವಿಂಟೇಜ್ ಕಾರು ಹರಾಜನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

Article Published On: Tuesday, January 18, 2022, 20:43 [IST]
English summary
Ms dhoni bought a 1971 land rover 3 in online auction of vintage cars details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+