ಧೋನಿ ಕಾರು-ಬೈಕ್ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

By Manoj B.k

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಾಹನಗಳ ಕ್ರೇಜ್ ಹೆಚ್ಚು ಎಂಬುದು ಎಲ್ಲರಿಗೂ ಗೂತ್ತಿರುವ ವಿಚಾರ. ಕ್ರಿಕೆಟ್​ನಷ್ಟೇ ಧೋನಿ ಅವರು ಕಾರು-ಬೈಕ್ ಗಳನ್ನು ಆಸಕ್ತಿಯಿದ್ದು, ಅವರ ಬಳಿಯಿರುವ ಕಾರು ಮತ್ತು ಬೈಕ್ ಸಂಗ್ರಹ ಎಂತವರಿಗೂ ಅಚ್ಚರಿ ಮೂಡಿಸದೆ ಇರಲಾರದು.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಕಾರ್ ಮತ್ತು ಬೈಕ್ ಮೇಲಿನ ಕ್ರೇಜ್‌ನಿಂದ ಅವರು ತಮ್ಮ ಮನೆಯಲ್ಲಿ ವಾಹನಗಳ ಸಂಗ್ರಹಕ್ಕಾಗಿಯೇ ವಿಶೇಷವಾದ ಗ್ಯಾರೇಜ್ ಒಂದನ್ನು ನಿರ್ಮಿಸಿಕೊಂಡಿದ್ದಾರೆ. ಈ ಗ್ಯಾರೇಜ್ ನಲ್ಲಿ ಅವರ ಮೆಚ್ಚಿನ ಹಲವಾರು ಕಾರು-ಬೈಕ್ ಗಳಿವೆ. ಗ್ಯಾರೇಜ್ ಒಳಗೊಂಡೆ ಕಾರು-ಬೈಕ್ ಗಳಿಗೆ ಪಾರ್ಕ್ ಮಾಡಲು ವಿಶಾಲವಾದ ಸ್ಥಳಾವಕಾಶವಿದ್ದು, ಧೋನಿ ಕಾರ್ ಮತ್ತು ಬೈಕ್ ಗ್ಯಾರೇಜ್‌ನಲ್ಲಿರುವ ವಿಶೇಷ ವಾಹನಗಳ ಬಗೆಗೆ ಈ ಲೇಖನದಲ್ಲಿ ತಿಳಿಯೋಣ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಧೋನಿ ಅವರ ಗ್ಯಾರೇಜ್ ನಲ್ಲಿ ಸಾಲು ಸಾಲು ಬೈಕುಗಳನ್ನು ನಿಲ್ಲಿಲಾಗಿದೆ. ಗ್ಯಾರೇಜ್ ನಲ್ಲಿ ಎರಡು ಹಂತದ ಬೈಕ್ ಪಾರ್ಕಿಂಗ್ ಹೊಂದಿದ್ದು, ಧೋನಿ ಅವರಿಗೆ ಕಾರಿನಷ್ಟೇ ಬೈಕುಗಳ ಕ್ರೇಜ್ ಕೂಡಾ ಹೆಚ್ಚಿದೆ ಎನ್ನುವುದಕ್ಕೆ ಇದೇ ಗ್ಯಾರೇಜ್ ಕಲೆಕ್ಷನ್ ನೋಡಿದರೆ ತಿಳಿಯುತ್ತದೆ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಅವರ ಗ್ಯಾರೇ‍‍ಜ್‍ನಲ್ಲಿ ಹಲವು ಎಕ್ಸೊಟಿಕ್ಸ್ ದ್ವಿಚಕ್ರ ವಾಹನಗಳಿವೆ. ಅವರ ಬಳಿ ಇರುವ ಅಪರೂಪದ ಮತ್ತು ದುಬಾರಿ ಬೈಕ್‍ ಕವಾಸಕಿ ಹೆಚ್2, ಯಮಹಾ ವೈಜೆಡ್-ಆರ್ 1, ಕವಾಸಕಿ ನಿಂಜಾ ಝಡ್ಎಕ್ಸ್ 14 ಆರ್, ಹೋಂಡಾ ಫೈರ್‌ಬ್ಲೇಡ್, ಒಂದೆರಡು ಹಾರ್ಲೆ-ಡೇವಿಡ್ಸನ್ ಬೈಕ್‌ಗಳು ಮತ್ತು ಯಮಹಾ ಆರ್‌ಡಿ 350 ಸಹ ಬೈಕ್ ಸ್ಥಾನ ಪಡೆದಿದೆ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಅವರ ಗ್ಯಾರೇ‍‍ಜ್‍ನಲ್ಲಿ ಅತ್ಯಂತ ಅಪರೂಪದ ಕಾನ್ಫೆಡರೇಟ್ ಎಕ್ಸ್ 132 ಹೆಲ್ ಕ್ಯಾಟ್ ಕೂಡ ಸೇರಿದೆ. ಎಂಎಸ್ ಧೋನಿ ಒಡೆತನದ ಐಕಾನಿಕ್ ಕಾರುಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ, ಲ್ಯಾಂಡ್ ರೋವರ್ ಡಿಸ್ಕವರಿ, ಹಮ್ಮರ್ ಎಚ್2 ಮತ್ತು ಇತ್ತೀಚೆಗಿನ ನಿಸ್ಸಾನ್ ಜಾಂಗಾ ಸೇರಿವೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ನಿಸ್ಸಾನ್ ಜಾಂಗಾವು 1950ರಲ್ಲಿ ಉತ್ಪಾದಿಸಿದ ಡಾಡ್ಜ್ ಎಂ 37 ಟ್ರಕ್‍‍ನ ಮಾದರಿಯಲ್ಲಿದೆ. ಜೋಂಗಾ ಡಾಡ್ಜ್ ಎಂ 37 ಟ್ರಕ್‍‍ನ ಚಾಸಿಸ್ ಅನ್ನು ಬಳಸಿದ್ದಾರೆ ಮತ್ತು ಅದನ್ನು ನಿಸ್ಸಾನ್ ಪೆಟ್ರೋಲ್ ಎಂಜಿನ್‍ ಅನ್ನು ಜೋಡಿಸಲಾಗಿದೆ. ಜಾಂಗಾ ಅತ್ಯಂತ ವಿರಳ ಏಕೆಂದರೆ ಭಾರತೀಯ ಸೇನೆಯು ಸೀಮಿತ ಸಂಖ್ಯೆಯಲ್ಲಿ ಈ ವಾಹನವನ್ನು ತಯಾರಿಸಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಅವರ ಬಳಿ ಇರುವ ಯಮಹಾ ಆರ್‌ಡಿ 350 ಬೈಕಿನಲ್ಲಿ 2-ಸ್ಟ್ರೋಕ್ 350 ಸಿಸಿ ಎಂಜಿನ್ ಹೊಂದಿದೆ. ಈ ಎಂಜಿನ್ 30.5 ಬಿಹೆಚ್‌ಪಿ ಪವರ್ ಹಾಗೂ 32.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 6-ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದ್ದು, ಈ ಬೈಕ್ 155 ಕೆ.ಜಿ ತೂಕವನ್ನು ಹೊಂದಿದೆ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಇತ್ತೀಚೆಗೆ ಎಂ‌ಎಸ್ ಧೋನಿಯವರ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿತ್ತು. ಈ ವೀಡಿಯೊದಲ್ಲಿ ಧೋನಿರವರು ತಮ್ಮ ಮಗಳು ಝೀವಾ ಜೊತೆಗೆ ಯಮಹಾ ಆರ್‌ಡಿ 350 ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದಾರೆ. ಈ ವೀಡಿಯೊವನ್ನು ಅವರ ಪತ್ನಿ ಸಾಕ್ಷಿ ಧೋನಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಧೋನಿ ಕೈ ಸೇರಿದ ದುಬಾರಿ ಬೆಲೆಯ ಜೀಪ್ ಗ್ರ್ಯಾಂಡ್ ಚರೋಕಿ

ಕಳೆದ ಕೆಲ ತಿಂಗಳ ಹಿಂದಷ್ಟೇ ಕ್ರಿಕೆಟರ್ ಮಹೀಂದ್ರ ಸಿಂಗ್ ಧೋನಿ ತಮ್ಮ ಕನಸಿನ ಕಾರು ಮಾದರಿಯಾದ ಜೀಪ್ ಗ್ರ್ಯಾಂಡ್ ಚರೋಕಿ ಎಸ್‌ಯುವಿಯನ್ನು ಖರೀದಿ ಮಾಡಿದ್ದರು. ಧೋನಿ ಗ್ಯಾರೇಜ್‌ನಲ್ಲಿ ಜೀಪ್ ಕಂಪನಿಯ ಹೊಸ ಕಾರು ಭಾರೀ ಸದ್ದು ಮಾಡಿತ್ತು.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಜೀಪ್ ಹೊಸ ಕಾರು ಕೈ ಸೇರಿದ ಸಂದರ್ಭದಲ್ಲಿ ಸೇನೆಯಲ್ಲಿ ಗೌರವ ಸೇವೆ ಸಲ್ಲಿಸಿದ ನಂತರ ಧೋನಿ ಇದೀಗ ಮನೆಗೆ ಮರಳಿದ್ದು, ಬಿಡುವಿನ ವೇಳೆ ತಮ್ಮ ಹೊಸ ಕಾರಿನಲ್ಲಿ ಕುಟುಂಬ ಸಮೇತರಾಗಿ ಜಾಲಿ ಡ್ರೈವ್‌ ಮಾಡುತ್ತಿದ್ದಾರೆ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಗ್ರ್ಯಾಂಡ್ ಚರೋಕಿ ಟ್ರ್ಯಾಕ್‌ಹ್ವಾಕ್ 6.2 ಕಾರು ಆವೃತ್ತಿಯು ಧೋನಿ ಅವರು ಕನಸಿನ ಕಾರು ಮಾದರಿಯಾಗಿದ್ದು, ಭಾರತದಲ್ಲಿ ಇದುವರೆಗೂ ಮಾರಾಟವಾದ ಏಕೈಕ ಕಾರು ಮಾದರಿ ಇದಾಗಿದೆ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಗ್ರ್ಯಾಂಡ್ ಚರೋಕಿ ಆವೃತ್ತಿಯಲ್ಲಿ ಸಾಮಾನ್ಯ ಮಾದರಿಗಳು ಭಾರತದಲ್ಲಿ ಮಾರಾಟವಾಗಿದ್ದರೂ ಟ್ರಾಕ್‌ಹ್ವಾಕ್ 6.2 ಆವೃತ್ತಿಯು ಸಾಮಾನ್ಯ ಗ್ರ್ಯಾಂಡ್ ಚರೋಕಿಗಿಂತಲೂ ದುಬಾರಿ ಬೆಲೆ ಪಡೆದುಕೊಂಡಿದ್ದು, ಯುಎಸ್ಎ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗಿದೆ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಸಾಮಾನ್ಯ ಜೀಪ್‌ ಗ್ರ್ಯಾಂಡ್ ಚೆರೋಕಿ ಎಸ್‌ಯುವಿ ಕಾರು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.97 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 1.40 ಕೋಟಿ ಬೆಲೆ ಪಡೆದುಕೊಂಡಿದ್ದರೆ ಧೋನಿ ಖರೀದಿ ಮಾಡಿರುವ ಆಮದು ಕಾರು ಆವೃತ್ತಿಯು ತುಸು ದುಬಾರಿ ಎನ್ನಿಸಲಿದೆ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಗ್ರ್ಯಾಂಡ್ ಚೆರೊಕಿ ಟ್ರ್ಯಾಕ್‌ಹ್ವಾಕ್ 6.2 ಕಾರು ಮಾದರಿಯನ್ನು ಜೀಪ್ ಸಂಸ್ಥೆಯ ತನ್ನ ಬ್ರ್ಯಾಂಡ್ ಅನ್ನು ಉತ್ತಮಗೊಳಿಸಲು ಕಂಪ್ಲೀಟಿ ಬಿಲ್ಟ್ ಯೂನಿಟ್ (CBU) ಮಾರ್ಗದ ಮೂಲಕ ಭಾರತಕ್ಕೆ ಆಮದುಮಾಡಿಕೊಂಡು ಮಾರಾಟ ಮಾಡುತ್ತಿದ್ದು, ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ಹೊಸ ಕಾರು ರೂ. 1.80 ಕೋಟಿ ಬೆಲೆ ಪಡೆದುಕೊಂಡಿತ್ತು.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಮತ್ತೊಂದು ವಿಶೇಷ ಅಂದ್ರೆ, ಗ್ರ್ಯಾಂಡ್ ಚರೋಕಿ ಟ್ರ್ಯಾಕ್‌ಹ್ವಾಕ್ 2019ರ ಪ್ರಥಮ ಆವೃತ್ತಿಯು ಮೊದಲಿಗೆ ಧೋನಿ ಗ್ಯಾರೇಜ್ ಪಾಲಾಗಿದ್ದು, ಅಮೆರಿಕದ ಪ್ರಸಿದ್ದ ಕಾರು ನಿರ್ಮಾಣ ಸಂಸ್ಥೆ ಜೀಪ್ ನಿರ್ಮಾಣದ ವಿಶೇಷ ಕಾರುಗಳಲ್ಲಿ ಇದು ಕೂಡಾ ಒಂದಾಗಿದೆ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

2017ರಿಂದಲೇ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಿರುವ ಗ್ರ್ಯಾಂಡ್ ಚರೋಕಿ ಆಫ್ ರೋಡ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಇದೀಗ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಬಾಲಿವುಡ್‌ನ ಹಲವು ನಟ-ನಟಿಯರ ಕಾರ್ ಗ್ಯಾರೇಜ್‌ನಲ್ಲಿ ಗ್ರ್ಯಾಂಡ್ ಚರೋಕಿ ಸ್ಥಾನ ಪಡೆದಿದ್ದು, ಐಷಾರಾಮಿ ಆಫ್ ರೋಡ್ ಕಾರು ಪ್ರಿಯರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದೆ. ಗ್ರ್ಯಾಂಡ್ ಚೆರೋಕಿ ಎಸ್‍ಯುವಿ ಕಾರು ಲಿಮಿಟೆಡ್ 4x4 ಡೀಸೆಲ್, ಸಮ್ಮಿಟ್ ಪೆಟ್ರೋಲ್ ಮತ್ತು ಎಸ್ಆರ್‌ಟಿ 4x4 ಪೆಟ್ರೋಲ್ ಮತ್ತು ಟ್ರ್ಯಾಕ್‌ಹ್ವಾಕ್ 6.2 ಆವೃತ್ತಿಯಲ್ಲಿ ಖರೀದಿಸಬಹುದಾಗಿದೆ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಸಾಮಾನ್ಯ ಗ್ರ್ಯಾಂಡ್ ಚೆರೋಕಿಯಲ್ಲಿ ಪೆಟ್ರೋಲ್ ಮಾದರಿಗಳು 3.0-ಲೀಟರ್ ಮತ್ತು 3.6-ಲೀಟರ್ ಪೆಂಟಾ‌ಸ್ಟರ್ ವಿ6 ಎಂಜಿನ್ ಜೋಡಣೆ ಮಾಡಿದ್ದರೆ ಧೋನಿ ಖರೀದಿ ಮಾಡಿರುವ ಗ್ರ್ಯಾಂಡ್ ಚರೋಕಿ ಟ್ರೈಲ್‌ಹ್ವಾಕ್ ಕಾರು 6.2 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಸೌಲಭ್ಯವನ್ನು ಹೊಂದಿದೆ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಗ್ರ್ಯಾಂಡ್ ಚರೋಕಿ ಮಾದರಿಯು ವಿಶೇಷವಾಗಿ ಆಫ್ ರೋಡ್ ಕೌಶಲ್ಯ ಪ್ರದರ್ಶನಕ್ಕಾಗಿಯೇ ವಿನ್ಯಾಸಗೊಳಿಸಲಾಗಿದ್ದು, ಸ್ಪೋರ್ಟಿ ಬಂಪರ್, ಮಲ್ಟಿ ಡ್ರೈವ್ ಮೋಡ್, ಸುರಕ್ಷತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಅರಾಮದಾಯಕ ಪ್ರಯಾಣಕ್ಕಾಗಿ 20-ಇಂಚಿನ ಸ್ಪೋರ್ಟಿ ಅಲಾಯ್ ಚಕ್ರಗಳನ್ನು ಪಡೆದಿದೆ.

ಧೋನಿ ಕಾರು-ಬೈಕುಗಳ ಕಲೆಕ್ಷನ್ ಹೊಂದಿರುವ ಗ್ಯಾರೇಜ್ ಹೇಗಿದೆ ಗೊತ್ತಾ?

ಹಾಗೆಯೇ ಸುರಕ್ಷತೆಗಾಗಿ 9-ಏರ್‌ಬ್ಯಾಗ್‌ಗಳು, ಡ್ಯುಯಲ್ ಪನೋರಮಿಕ್ ಸನ್‌ರೂಫ್, ನಪ್ಪಾ ಲೆದರ್ ಆಸನಗಳು, ಹೆಚ್ಐಡಿ ಹೆಡ್‌ಲ್ಯಾಂಪ್‌ಗಳು, ಬ್ಲ್ಯೂ ರೇ ಎಂಟರ್‌ಟೈನ್‌ಮೆಂಟ್ ಸಿಸ್ಟಂ ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

Article Published On: Saturday, May 2, 2020, 13:39 [IST]
English summary
Here’s the first look of Mahendra Singh Dhoni’s car & bike museum. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+