ಧೋನಿ ಮೊದಲ ಬೈಕ್ ರಿಪೇರಿ ಮಾಡಲು ಯಾರಿಂದ ಸಾಧ್ಯ?

ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೀಂದ್ರ ಸಿಂಗ್ ಧೋನಿ ತಮ್ಮ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ತಮ್ಮ ಮೊತ್ತ ಮೊದಲ ಬೈಕ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊರಗೆಡವಿದ್ದಾರೆ. ಒಂದರ ಮೇಲೆ ಒಂದರಂತೆ ಟ್ವೀಟ್ ಮಾಡುತ್ತಾ ಸಾಗಿರುವ ಮಹಿ, ತಮ್ಮ ಮೊದಲ ಬೈಕ್ ಬಗೆಗಿನ ಆಕರ್ಷಕ ಚಿತ್ರಗಳನ್ನು ಹೊರಹಾಕಿದ್ದಾರೆ. ಅಷ್ಟಕ್ಕೂ ಧೋನಿ ಅವರ ಮೊದಲ ಬೈಕ್ ಯಾವುದು? ಉತ್ತರ ಹಾಗೂ ಆಕರ್ಷಕ ಚಿತ್ರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ನಿಮ್ಮ ಮಾಹಿತಿಗಾಗಿ, 1983ರಿಂದ 1990ರ ಅವಧಿಯಲ್ಲಿ ಟು ಸ್ಟ್ರೋಕ್ ಯಮಹಾ ಮೋಟಾರ್ ಸೈಕಲ್ ಜತೆ ಪಾಲುದಾರಿಕೆ ಹೊಂದಿದ್ದ ಎಸ್ಕಾರ್ಟ್ಸ್ ಸಂಸ್ಥೆಯು ಬುಲೆಟ್ ಪ್ರತಿಸ್ಪರ್ಧಿಯಾಗಿ ರಾಜ್‌ದೂತ್ 350 ಅಥವಾ ಆರ್‌ಡಿ 350 ಎಂಬ ಜನಪ್ರಿಯ ಬೈಕನ್ನು ರಸ್ತೆಗಿಳಿಸಿತ್ತು. ಯಮಹಾ ಆರ್‌ಡಿ350ಬಿ ನಕಲು ಎಂದೇ ಬಿಂಬಿಸಲಾಗಿರುವ ರಾಜ್ ದೂತ್ 350 ಬೈಕನ್ನು ದೇಶದ ರಸ್ತೆಗಳಿಗಾನುಸಾರವಾಗಿ ಕಸ್ಟಮೈಸ್ಡ್ ಮಾಡಲಾಗಿತ್ತು. ಆದರೆ ಆ ಬಳಿಕ ಹೆಚ್ಚು ಮಾಲಿನ್ಯ ಹೊರಸೂಸುವುದರಿಂದ ಕಂಪನಿಯ ಮಾನ್ಯತೆಯನ್ನು ರದ್ದುಗೊಳಿಸಲಾಗಿತ್ತು.

ಹಳೆ ರಾಜದೂತ ಸ್ಟೈಲ್

ಹಳೆ ರಾಜದೂತ ಸ್ಟೈಲ್

ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕನೆಂಬ ಪಟ್ಟ ಕಟ್ಟಿಕೊಂಡಿರುವ ಮಹೀಂದ್ರ ಸಿಂಗ್ ಧೋನಿ ತಮ್ಮ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಮೊದಲ ಬೈಕ್ 'ರಾಜ್ ದೂತ್' ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ತುಕ್ಕು ಹಿಡಿದಿರುವ ಧೋನಿ ಬೈಕ್

ತುಕ್ಕು ಹಿಡಿದಿರುವ ಧೋನಿ ಬೈಕ್

ಈ ಬಗ್ಗೆ ಮಾತನಾಡಿಕೊಂಡಿರುವ ವಿಶ್ವಕಪ್ ವಿಜೇತ ನಾಯಕ ಧೋನಿ, ಕೆಲವು ಗಂಟೆಗಳ ಹಿಂದೆ ತಮ್ಮ ನೂತನ ಬೈಕ್ ಈ ರೀತಿಯಾಗಿ ಕಾಣಿಸುತ್ತಿತ್ತು ಎಂದಿದ್ದಾರೆ.

ಎಂಜಿನ್

ಎಂಜಿನ್

ಸದ್ಯ ಕ್ರಿಕೆಟ್ ರಂಗದಿಂದ ದೂರವುಳಿದಿರುವ ಧೋನಿ, ತಮ್ಮ ವಿಶ್ರಾಂತಿ ಸಮಯದಲ್ಲಿ ಬೈಕ್ ಬಿಡಿಭಾಗಗಳನ್ನು ಬಿಚ್ಚುವ ಪ್ರಯತ್ನ ಮಾಡಿದ್ದಾರೆ.

ಸಹಾಯ ಮಾಡ್ತೀರಾ?

ಸಹಾಯ ಮಾಡ್ತೀರಾ?

ಆಟಿಕೆ ವಸ್ತುಗಳ ತರಹ ಯಾವುದೇ ಸಾಮಾಗ್ರಿಗಳನ್ನು ಒಡೆಯುವುದು ಸುಲಭ. ಇಲ್ಲಿಯೂ ಸಹ ಅದೇ ನಡೆದಿದ್ದು. ಪ್ರಸ್ತುತ ಧೋನಿ ಇದನ್ನು ಹೇಗೆ ಮರು ಜೋಡಣೆ ಮಾಡಬೇಕೆಂಬ ಗೊಂದಲದಲ್ಲಿದ್ದಾರೆ?

ಧೋನಿ ಮೊದಲ ಬೈಕ್ 'ರಾಜ್ ದೂತ್'

ಧೋನಿಯ ಈ ಸಮಸ್ಯೆಗೆ ನೀವು ಕೂಡಾ ಸಹಾಯ ಮಾಡಬಹುದು. ಒಂದು ಕೈ ನೋಡ್ತೀರಾ ಹೇಗೆ?

ಧೋನಿ ಮೊದಲ ಬೈಕ್ 'ರಾಜ್ ದೂತ್'

ಈ ಬಗ್ಗೆ ಟ್ವಿಟರ್‌ನಲ್ಲಿ ಮಾತನಾಡಿರುವ ಧೋನಿ, ಬೈಕ್ ಬಿಡಿಭಾಗ ಬಿಚ್ಚುವುದು ತಮಾಷೆಯ ವಿಚಾರ ಆದರೆ ಮರು ಜೋಡಣೆ ಮಾಡುವವರು ಯಾರು? ಎಂದು ವಿವರಿಸಿದ್ದಾರೆ.

ರಾಜದೂತ

ರಾಜದೂತ

ಇದು ಧೋನಿ ಟ್ವಿಟರ್ ಪೇಜ್‌ನಲ್ಲಿ ಬಿಡುಗಡೆ ಮಾಡಿರುವ ರಾಜದೂತ್ ಬೈಕ್‌

Most Read Articles

Kannada
English summary
India captain MS Dhoni, who loves motorbikes, on Thursday, released pictures of his first bike - a Rajdoot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X