ಅಂಬಾನಿಗೆ ಭದ್ರತೆ ನೀಡುತ್ತಿರುವ ಕಾರುಗಳ ಬೆಲೆ ಎಷ್ಟು ಗೊತ್ತಾ?
ಭಾರತದ ಅತಿ ದೊಡ್ಡ ಶ್ರೀಮಂತರಾದ ಮುಖೇಶ್ ಅಂಬಾನಿರವರು ದುಬಾರಿ ಬೆಲೆಯ ಐಷಾರಾಮಿ ಕಾರುಗಳಲ್ಲಿ ಓಡಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಮಕ್ಕಳಾದ ಅನಂತ್ ಅಂಬಾನಿ ಹಾಗೂ ಆಕಾಶ್ ಅಂಬಾನಿರವರು ಯಾವಾಗಲೂ ಸೂಪರ್ ಲಗ್ಷುರಿ ಕಾರುಗಳಲ್ಲಿ ಓಡಾಡುತ್ತಾರೆ.

ಅಂಬಾನಿಯವರ ಕಾರು ಗ್ಯಾರೇಜಿನಲ್ಲಿ ಹೈ ಎಂಡ್ ಮಾದರಿಯ ಹಲವಾರು ಕಾರುಗಳಿವೆ. ಅವುಗಳಲ್ಲಿ ಟೆಸ್ಲಾ ಮಾಡೆಲ್ ಎಸ್, ಲ್ಯಾಂಬೊರ್ಗಿನಿ ಉರುಸ್, ರೋಲ್ಸ್ ರಾಯ್ಸ್ ಕಲಿನನ್ ಸೇರಿದಂತೆ ಹಲವಾರು ಕಾರುಗಳಿವೆ. ಹೊಸ ವೀಡಿಯೊವೊಂದರಲ್ಲಿ ಅಂಬಾನಿಯವರು ಹೊಸ ತಲೆಮಾರಿನ ಮರ್ಸಿಡಿಸ್ ಎಎಂಜಿ ಜಿ 63 ಎಸ್‍ಯುವಿಯನ್ನು ಖರೀದಿಸಿರುವುದನ್ನು ತೋರಿಸಲಾಗಿದೆ.

ಅಂದ ಹಾಗೆ ಮುಖೇಶ್ ಅಂಬಾನಿಯವರು ಮರ್ಸಿಡಿಸ್ ಎಎಂಜಿ ಜಿ 63 ಎಸ್‍ಯುವಿಯನ್ನು ಖರೀದಿಸುತ್ತಿರುವುದಾಗಿ ಇದೇ ಮೊದಲ ಬಾರಿಯಲ್ಲ. ಆದರೆ ಈ ಹೊಸ ಎಸ್‍ಯುವಿಯು ಅಂಬಾನಿಯವರಿಗೆ ನೀಡಲಾಗಿರುವ ಬೆಂಗಾವಲು ಪಡೆಯೊಂದಿಗೆ ಕಾಣಿಸಿಕೊಂಡಿರುವುದು ವಿಶೇಷ.

ಸಿಎಸ್ 12 ವಿಲಾಗ್ಸ್ ಅಪ್‍ಲೋಡ್ ಮಾಡಿರುವ ಈ ವೀಡಿಯೊದಲ್ಲಿ ಮರ್ಸಿಡಿಸ್ ಎಎಂಜಿ ಜಿ 63 ಎಸ್‍ಯುವಿಯ ಜೊತೆಗೆ ಅಂಬಾನಿಯವರ ಬುಲೆಟ್ ಪ್ರೂಫ್ ಡಬ್ಲ್ಯು 221 ಎಸ್ ಕ್ಲಾಸ್ ಕಾರ್ ಅನ್ನು ಸಹ ಕಾಣಬಹುದು.

ಭದ್ರತಾ ಪಡೆಯಲ್ಲಿ ಮೊದಲು ಬಿಎಂಡಬ್ಲ್ಯು ಎಕ್ಸ್ 5 ಕಾರು ನಂತರ ಮುಖೇಶ್ ಅಂಬಾನಿಯವರ ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್ ಡಬ್ಲ್ಯು 221 ಕಾರು, ಅದರ ಹಿಂದೆ ಎರಡು ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‌ಯುವಿ, ಮರ್ಸಿಡಿಸ್ ಎಎಂಜಿ ಜಿ 63 ಹಾಗೂ ಬಿಎಂಡಬ್ಲ್ಯು ಎಕ್ಸ್ 5 ಕಾರುಗಳನ್ನು ಕಾಣಬಹುದು.

ಈ ವೀಡಿಯೊದಲ್ಲಿ ಅಂಬಾನಿಯವರ ಭದ್ರತಾ ಪಡೆಯ ಭಾಗವಾಗಿರುವ ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರ್ ಅನ್ನು ಸಹ ಕಾಣಬಹುದು. ಈ ಕಾರ್ ಅನ್ನು ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದು, ಮುಂದೆ ಹೋಗಲು ಯತ್ನಿಸುತ್ತಿರುವುದನ್ನು ಕಾಣಬಹುದು.

ಅಂಬಾನಿಯವರ ಬೆಂಗಾವಲು ಪಡೆಯಲ್ಲಿರುವ ಬಿಎಂಡಬ್ಲ್ಯು ಎಕ್ಸ್ 5 ಕಾರ್ ಅನ್ನು ಕೆಲವು ವರ್ಷಗಳ ಹಿಂದೆ ಅಳವಡಿಸಿಕೊಳ್ಳಲಾಯಿತು. ಈ ಕಾರುಗಳನ್ನು ಸರ್ಕಾರವು ನೀಡಿಲ್ಲ. ಬದಲಿಗೆ ತಮ್ಮನ್ನು ರಕ್ಷಿಸುವ ಸಿಐಎಸ್ಎಫ್ ಯೋಧರು ಓಡಾಡಲು ಅಂಬಾನಿಯವರು ಬಿಎಂಡಬ್ಲ್ಯು ಎಕ್ಸ್ 5 ಕಾರುಗಳನ್ನು ಖರೀದಿಸಿದ್ದಾರೆ.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಅಂಬಾನಿ ಕುಟುಂಬಕ್ಕೆ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ. ಈ ಭದ್ರತೆಗಾಗಿ ಅಂಬಾನಿಯವರು ಸಿಐಎಸ್‍ಎಫ್‍ಗೆ ವೈಯಕ್ತಿಕವಾಗಿ ಹಣ ಪಾವತಿಸುತ್ತಾರೆ. ಬೆಂಗಾವಲು ವಾಹನದಲ್ಲಿರುವ ಎರಡು ಬಿಎಂಡಬ್ಲ್ಯು ಎಕ್ಸ್ 5 ಕಾರುಗಳ ಬೆಲೆ ರೂ.1.6 ಕೋಟಿಗಳಾಗುತ್ತದೆ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!

ಎಸ್-ಕ್ಲಾಸ್ ಗಾರ್ಡ್ ಡಬ್ಲ್ಯು 221 ಕಾರಿನ ಬೆಲೆಯು ಅದರಲ್ಲಿರುವ ಮಾಡಿಫಿಕೇಶನ್ ಹಾಗೂ ಬ್ಯಾಲಿಸ್ಟಿಕ್ ರಕ್ಷಣೆಗೆ ಅನುಸಾರವಾಗಿ ಸುಮಾರು ರೂ.8ರಿಂದ 9 ಕೋಟಿಗಳಾಗುತ್ತದೆ. ಈ ವೀಡಿಯೊದಲ್ಲಿರುವ ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ ಕಾರುಗಳ ಬೆಲೆ ತಲಾ ಒಂದು ಕೋಟಿಗಳಾಗುತ್ತದೆ.
MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಮರ್ಸಿಡಿಸ್ ಎಎಂಜಿ ಜಿ 63 ಹೊಸ ತಲೆಮಾರಿನ ಕಾರ್ ಆಗಿದೆ. ಈ ಕಾರಿನ ಬೆಲೆಯು ರೂ.2.7 ಕೋಟಿಗಳಾಗುತ್ತದೆ. ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರಿನ ಬೆಲೆ ರೂ.2 ಕೋಟಿಗಳಾಗುತ್ತದೆ. ಒಟ್ಟಾರೆಯಾಗಿ, ಇಡೀ ಬೆಂಗಾವಲು ವಾಹನಗಳ ಬೆಲೆಯೇ ಸುಮಾರು ರೂ.16.3 ಕೋಟಿಗಳಾಗುತ್ತದೆ.

ಈ ವೀಡಿಯೊದಲ್ಲಿ ಅಂಬಾನಿಯವರ ಕುಟುಂಬದ ಬೆಂಗಾವಲು ಪಡೆಯ ವಾಹನಗಳಾದ ರೂ.9 ಕೋಟಿ ಬೆಲೆಯ ಬಿಎಂಡಬ್ಲ್ಯು 7 ಸೀರಿಸ್ ಹೈ ಸೆಕ್ಯುರಿಟಿ ಕಾರು, ಬೆಂಟ್ಲಿ ಬೆಂಟಾಯ್ಗ ವಿ8, ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ ಹಾಗೂ ಬಿಎಂಡಬ್ಲ್ಯು ಎಕ್ಸ್ 5 ಕಾರುಗಳನ್ನು ಕಾಣಬಹುದು.

ಹೊಸ ಆವೃತ್ತಿಯ ಮರ್ಸಿಡಿಸ್ ಎಎಂಜಿ ಜಿ 63 ಕಾರ್ ಅನ್ನು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.2.2 ಕೋಟಿಗಳಾದರೆ, ಆನ್‍ರೋಡ್ ಬೆಲೆಯು ರೂ.3 ಕೋಟಿಗಳಾಗುತ್ತದೆ.

ಈ ಕಾರಿನಲ್ಲಿ ಪೂರ್ಣ ಪ್ರಮಾಣದ ಎಲ್ಇಡಿ ಸೆಟಪ್ ಹಾಗೂ ಬಾನೆಟ್ ಮೌಂಟೆಡ್ ಟರ್ನ್ ಇಂಡಿಕೇಟರ್‍ಗಳಿವೆ. ಈ ಕಾರಿನಲ್ಲಿ ಟೇಲ್‍ಗೇಟ್ ಮೌಂಟೆಡ್ ಸ್ಪೇರ್ ವ್ಹೀಲ್ ಹಾಗೂ 21 ಇಂಚಿನ ದೊಡ್ಡ ಗಾತ್ರದ ಸ್ಪೋಕ್ ಅಲಾಯ್ ವ್ಹೀಲ್‍ಗಳಿವೆ.
ಈ ಕಾರಿನಲ್ಲಿ ಹೊಸ 4.0 ಲೀಟರಿನ ಬೈ ಟರ್ಬೋಚಾರ್ಜ್ಡ್ ವಿ 8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 585 ಬಿಹೆಚ್‍ಪಿ ಪವರ್ ಹಾಗೂ 850 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿರುವ 9 ಸ್ಪೀಡಿನ ಎಎಂಜಿ ಸ್ಪೀಡ್‌ಶಿಫ್ಟ್, ಕಾರ್ ಅನ್ನು ಕೇವಲ 4.5 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುವಂತೆ ಮಾಡುತ್ತದೆ.

ಈ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 220 ಕಿ.ಮೀಗಳೆಂದು ಎಲೆಕ್ಟ್ರಾನಿಕ್ ಆಗಿ ನಿಗದಿಪಡಿಸಲಾಗಿದೆ. ಹೆಚ್ಚುವರಿ ಲಿಮಿಟರ್‍ನಿಂದ ಟಾಪ್ ಸ್ಪೀಡ್ ಅನ್ನು ಇನ್ನೂ 20 ಕಿ.ಮೀ ವೇಗಕ್ಕೆ ಹೆಚ್ಚಿಸಿ ಕೊಳ್ಳಬಹುದು.


Click it and Unblock the Notifications