ಭದ್ರತೆಗಾಗಿ 10 ಕೋಟಿಯ ಮರ್ಸಿಡಿಸ್ ಕಾರು ಖರೀದಿಸಿದ ಮುಕೇಶ್ ಅಂಬಾನಿ: ಬಾಂಬ್ ಬಿದ್ರು ಏನು ಆಗಲ್ಲ!

ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಮುಖ್ಯಸ್ಥ ಮುಖೇಶ್ ಅಂಬಾನಿ (Mukesh Ambani) ದೇಶದ ಅತ್ಯಂತ ಆಗರ್ಭ ಸಿರಿವಂತ. ಜೊತೆಗೆ ವಿಶ್ವದ 11ನೇ ಶ್ರೀಮಂತ ವ್ಯಕ್ತಿ. ಜಿಯೋ ಸೇರಿದಂತೆ ಪ್ರಮುಖ ಉದ್ಯಮಗಳನ್ನು ಮುನ್ನೆಡೆಸುತ್ತಿದ್ದಾರೆ. ಜಗತ್ತಿನಾದ್ಯಂತ ಹಲವು ಪ್ರಸಿದ್ಧ ಭಾರತೀಯ ಕೈಗಾರಿಕೋದ್ಯಮಿಗಳಿದ್ದರೂ, ಅಂಬಾನಿಯವರಷ್ಟು ಖ್ಯಾತಿ ಗಳಿಸಿಲ್ಲ.

ತಮ್ಮ ಕುಟುಂಬದ ಭದ್ರತೆ ವಿಚಾರದಲ್ಲಿ ಮುಕೇಶ್ ಅಂಬಾನಿ ಸಾಕಷ್ಟು ಮುಂಜಾಗ್ರತೆ ವಹಿಸುತ್ತಾರೆ. ಅದಕ್ಕಾಗಿ ಭಾರೀ ಮೊತ್ತವನ್ನು ವ್ಯಯಿಸುತ್ತಾರೆ. ಮುಂಬೈನಲ್ಲಿ ಅವರ ಪತ್ನಿ ನೀತಾ ಅಂಬಾನಿ, ಪುತ್ರರಾದ ಆಕಾಶ್ ಅಂಬಾನಿ, ಅನಂತ್ ಅಂಬಾನಿ, ಸೊಸೆ ಶ್ಲೋಕಾ ಮೆಹ್ತಾ ಅಂಬಾನಿ ಹಾಗೂ ಮೊಮ್ಮಕ್ಕಳು ಎಲ್ಲಿಯಾದರೂ ತೆರಳಬೇಕಾದರೆ ಬೆಂಗಾವಲು ಪಡೆಯ ವಾಹನಗಳು, ಅವರು ಹೋಗುವ ಐಷಾರಾಮಿ ಕಾರುಗಳನ್ನು ಹಿಂಬಾಲಿಸುತ್ತವೆ.

ಭದ್ರತೆಗಾಗಿ 10 ಕೋಟಿಯ ಮರ್ಸಿಡಿಸ್ ಕಾರು ಖರೀದಿಸಿದ ಮುಕೇಶ್ ಅಂಬಾನಿ: ಬಾಂಬ್ ಬಿದ್ರು ಏನು ಆಗಲ್ಲ!

ಮುಖೇಶ್ ಅಂಬಾನಿ, ಕಾಲಕಾಲಕ್ಕೆ ತಮ್ಮ ಕುಟುಂಬದ ಭದ್ರತೆಗೆ ಹೊಸ ವಾಹನಗಳನ್ನು ಖರೀದಿ ಮಾಡುತ್ತಿರುತ್ತಾರೆ. ಇತ್ತೀಚಿನ ವರದಿ ಪ್ರಕಾರ, ಅವರು, ಹೊಸ ಬುಲೆಟ್ ಪ್ರೂಫ್ ಮರ್ಸಿಡಿಸ್ - ಬೆನ್ಜ್ ಕಾರನ್ನು ಕೊಂಡುಕೊಂಡಿದ್ದಾರೆ ಎಂದು ತಿಳುದುಬಂದಿದೆ. ಈ ವರ್ಷ, ಮುಖೇಶ್ ಅಂಬಾನಿ ಖರೀದಿಸಿರುವ ಎರಡನೇ ಐಷಾರಾಮಿ ಕಾರು ಇದಾಗಿದ್ದು, 'ಆಟೋಮೊಬಿಲಿಯಾರ್ಡೆಂಟ್' ನೂತನ ಮರ್ಸಿಡಿಸ್ ಬೆನ್ಜ್ ಎಸ್680 ಗಾರ್ಡ್ (Mercedes-Benz S680 Guard) ಚಿತ್ರವನ್ನು ಹಂಚಿಕೊಂಡಿದೆ.

ಈ ಕಾರಿನ ಬೆಲೆ ರೂ.10 ಕೋಟಿ ಇದ್ದು, ಅಂಬಾನಿ ಅವರ ಬೆಂಗಾವಲು ಪಡೆಯ ಮಹೀಂದ್ರಾ ಸ್ಕಾರ್ಪಿಯೋ, ರೇಂಜ್ ರೋವರ್, ಮರ್ಸಿಡಿಸ್ - ಬೆನ್ಜ್ ಜಿ - ವ್ಯಾಗನ್ ಜೊತೆಯಲ್ಲಿ ಇನ್ಮುಂದೆ ನೋಡಬಹುದು. ಮರ್ಸಿಡಿಸ್ ಬೆನ್ಜ್ ಎಸ್680 ಗಾರ್ಡ್ ವಿಶೇಷತೆ ಬಗ್ಗೆ ಮಾತನಾಡುವುದಾದರೆ, ಇದರ ವಿನ್ಯಾಸ ಬಹುತೇಕ 'ಮರ್ಸಿಡಿಸ್ ಬೆನ್ಜ್ ಎಸ್ ಕ್ಲಾಸ್' ಸೆಡಾನ್ ಗೆ ಹೋಲಿಕೆಯಾಗುತ್ತದೆ.

ಇದು, ಶಕ್ತಿಯುತ ಕಾರಾಗಿದ್ದು, ಸುಮಾರು 2 ಟನ್‌ಗಳಷ್ಟು ತೂಕವಿದ್ದು, ಗಟ್ಟಿಮುಟ್ಟದ ಟೈಯರ್, ಹೊಂದಿದೆ. 6.0 - ಲೀಟರ್ ವಿ12 ಎಂಜಿನ್‌ ಒಳಗೊಂಡಿದ್ದು, 612 Ps ಗರಿಷ್ಠ ಪವರ್ ಹಾಗೂ 830 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುತ್ತದೆ. ಇದರ ಬಾಡಿ ಬುಲೆಟ್ ಮತ್ತು ಬ್ಲಾಸ್ಟ್ - ಪ್ರೂಫ್ ಆಗಿದೆ.

ಇದಿಷ್ಟೇ ಅಲ್ಲದೆ, ಮುಕೇಶ್ ಅಂಬಾನಿ ಅವರು ಸಾಕಷ್ಟು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಭಾರತದ ಅತ್ಯಂತ ದುಬಾರಿ ಎಸ್‌ಯುವಿಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಫ್ಯಾಂಟಮ್, ಅಂಬಾನಿ ಅವರ ಬಳಿಯಿದ್ದು, ಇದರ ಬೆಲೆ ರೂ.13.50 ಕೋಟಿ. ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು 6.75 - ಲೀಟರ್ ವಿ12 ಪೆಟ್ರೋಲ್ ಎಂಜಿನ್‌ ಪಡೆದಿದೆ.

ಮುಕೇಶ್ ಅಂಬಾನಿ ಅವರ ಭದ್ರತೆಗೆಂದು ಇರುವ ಮತ್ತೊಂದು ಕಾರು, ಬಿಎಂಡಬ್ಲ್ಯೂ 760ಎಲ್ಐ. ಈ ಕಾರು,ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ರೂ.8.9 ಕೋಟಿ ಬೆಲೆಯನ್ನು ಹೊಂದಿದೆ. ಇದರ 6 - ಲೀಟರ್ ವಿ12 ಎಂಜಿನ್‌, 544 bhp ಪವರ್ ಮತ್ತು 880 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮತ್ತೊಂದು, 'ಫೆರಾರಿ ಎಸ್ಎಫ್ 90 ಸ್ಟ್ರಾಡೇಲ್' ಇದೊಂದು ಸ್ಪೋರ್ಟ್ಸ್ ಹೈಬ್ರಿಡ್ ಮಾದರಿಯಾಗಿದ್ದು, 2019ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಾಯಿತ್ತು. ಹಲವು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಕಾರು, ರೂ.7.50 ಕೋಟಿ ಬೆಲೆಯನ್ನು ಹೊಂದಿದೆ. ಇದು, ಶಕ್ತಿಯುತ 4 - ಲೀಟರ್ ವಿ8 ಎಂಜಿನ್‌ ಪಡೆದಿದ್ದು, ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: pstips

Article Published On: Friday, September 22, 2023, 11:00 [IST]
English summary
Mukesh ambani convoy gets rs 10 crore mercedes car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+