ಭಾರತದ ಬುಲೆಟ್ ಟ್ರೈನ್‌ನಲ್ಲಿ ಭೂಕಂಪದ ಸೂಚನೆಯ ಟೆಕ್ನಾಲಜಿ: ಇನ್ಮೇಲೆ ನಮ್ಮನ್ನು ಹಿಡಿಯುವವರೇ ಇಲ್ಲ
ಭಾರತದಲ್ಲಿ ಬುಲೆಟ್ ಟ್ರೈನ್ ಬರಬೇಕೆಂಬುದು ಹಲವರ ಬೇಡಿಕೆಯಾಗಿದ್ದು, ಇದಕ್ಕಾಗಿ 2014 ರಲ್ಲಿ ಭಾರತದಲ್ಲಿ ಅಧಿಕಾರಕ್ಕೆ ಬಂದಿದ್ದ ಮೋದಿ ಸರ್ಕಾರ ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಈಗಾಗಲೇ ಬುಲೆಟ್ ಟ್ರೈನ್ ಕುರಿತಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು ಆಗಾಗ ಈ ಕುರಿತಾದ ಸುದ್ದಿಗಳು ಬರುತ್ತಲೇ ಇರುತ್ತದೆ.
ಇನ್ನು ಬುಲೆಟ್ ಟ್ರೈನ್ ಯೋಜನೆಗಳಲ್ಲಿ ಒಂದಾದ ಮುಂಬೈ - ಅಹಮದಾಬಾದ್ (Mumbai - Ahmedabad) ನಡುವೆ ಬುಲೆಟ್ ರೈಲು (Bullet Train) ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಬಹುತೇಕ ಪ್ರಮುಖ ಕೆಲಸಗಳು ಈಗಾಗಲೇ ವೇಗದಲ್ಲಿ ಸಾಗುತ್ತಿದ್ದು, ಎಲ್ಲರ ಕಣ್ಣು ಸಹ ಈ ಕೆಲಸಗಳು ಯಾವಾಗ ಪೂರ್ಣಗೊಂಡು ಬುಲೆಟ್ ಟ್ರೈನ್ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದಾರೆ.

ಇದೀಗ ಮುಂಬೈ - ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಯ ಬಹು ದೊಡ್ಡ ಅಪ್‌ಡೇಟ್ ಒಂದು ಹೊರಬಂದಿದ್ದು, ಎಲ್ಲರ ಕಣ್ಣರಳಿಸಿವೆ. ಹೌದು, ಭಾರತದಲ್ಲಿ ಪ್ರಥಮ ಬಾರಿಗೆ ಬುಲೆಟ್ ಟ್ರೈನ್ ಯೋಜನೆಯಡಿಯಲ್ಲಿ ಭೂಕಂಪ ಸಂಭವಿಸುವಾಗ ಅದಕ್ಕೂ ಮೊದಲು ಸೂಚನೆಗಳು ಸಿಗುವ ನಿಟ್ಟಿನಲ್ಲಿ ಸುಮಾರು 28 ಸೆಸ್ಮೋಮೀಟರ್ (Seismometers) ಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಹೌದು, ಭೂಕಂಪನಗಳ ಸೂಚನೆಗಳನ್ನು ಮೊದಲೇ ತಿಳಿಯುವುದಕ್ಕಾಗಿ ಈ ಸೆಸ್ಮೊಮೀಟರ್‌ಗಳನ್ನು ಅಳವಡಿಸಲಾಗುತ್ತದೆ. ಇದನ್ನು ಈಗ ಮುಂಬೈ ಮತ್ತು ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್‌ಗಳಲ್ಲಿ ಅಳವಡಿಸಲಾಗಿದ್ದು, ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಯನ್ನು ಗಟ್ಟಿಗೊಳಿಸುವ ನಿಟ್ಟಿನಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಮುಂಚಿತವಾಗಿಯೇ ಭೂಕಂಪದ ಸೂಚನೆಗಳನ್ನು ಅರಿಯುವ ಈ ಸೆಸ್ಮೋ ಮೀಟರ್ ಅನ್ನು ಜಪಾನಿಸ್ ಮೂಲದ ಶಿಂಕಾನ್‌ಸೆನ್ ಟೆಕ್ನಾಲಜಿಯನ್ನು ಬಳಸಿ ತಯಾರು ಮಾಡಲಾಗುತ್ತದೆ. ಇದು ತರಂಗಾಂತರ ಅಲೆಗಳ ಸಹಾಯದಿಂದ ಭೂಕಂಪದ ಸೂಚನೆಗಳನ್ನು ಪಡೆದುಕೊಂಡು ಆಟೋಮಾಟಿಕ್ ಆಗಿ ಸಂಪೂರ್ಣ ಪವರ್ ಶಟ್‌ಡೌನ್ ಮಾಡುತ್ತದೆ. ಇದರ ಸಹಾಯದಿಂದ ಭೂಕಂಪ ಸಂಭವಿಸುವ ಸ್ಥಳ ತಲುಪುವ ಮೊದಲೇ ಬುಲೆಟ್ ಟ್ರೈನ್ ಆಫ್ ಆಗಿ ಮುಂದಕ್ಕೇ ಚಲಿಸದೇ ನಿಲ್ಲುತ್ತದೆ.
ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೋರೇಷನ್ ಪ್ರಕಾರ ೨೮ ಸೆಸ್ಮೋಮೀಟರ್‌ಗಳಲ್ಲಿ 22 ಅನ್ನು ಈಗಾಗಲೇ ಅಳವಡಿಸಲಾಗಿದೆ. ಇದು ಮಾತ್ರವಲ್ಲದೇ 8 ಮಹಾರಾಷ್ಟ್ರ - ಮುಂಬೈ, ಥಾಣೆ, ವಿರಾರ್, ಮತ್ತು ಬೈಸಾರ್‌ನಲ್ಲಿ ಅಳವಡಿಸಲಾಗುತ್ತದೆ. ಇದರ ಜೊತೆಗೆ ಇನ್ನೂ 14 ಸೆಸ್ಮೋ ಮೀಟರ್‌ಗಳನ್ನು ಗುಜರಾತ್ - ವಾಪಿ, ಬಿಲ್ಮೋರಾ, ಸೂರತ್, ಭಾರುಚ್, ವಡೋದರಾ, ಆನಂದ್ ಮತ್ತು ಅಹಮದಾಬಾದ್‌ಗಳಲ್ಲಿ ಅಳವಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಇನ್ನು ಮೇಳೆ ತಿಳಿಸಲಾಗಿರುವಂತೆ ಮುಂಬೈ - ಅಹಮದಾಬಾದ್ ಬುಲೆಟ್ ಟ್ರೈನ್ ಹಾದಿಯಲ್ಲಿ 22 ಸೆಸ್ಮೋ ಮೀಟರ್‌ಗಳನ್ನು ಈಗಾಗಲೇ ಅಳವಡಿಸಲಾಗಿದ್ದು, ಇನ್ನುಳಿದ ಆರು ಸೆಸ್ಮೋಮೀಟರ್‌ಗಳನ್ನು ಭೂಕಂಪ ಪೀಡಿತ ಸ್ಥಳಗಳಲ್ಲಿ ಅಳವಡಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಇದರಲ್ಲಿ ಹಳೇ ಭುಜ್, ಕೇದ್, ರತ್ನಗಿರಿ, ಪಾಂಗ್ರಿ ಮುಂದಾತದ ಸ್ಥಳಗಳು ಸೇರಿಕೊಂಡಿವೆ.
ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಷನ್ ಪ್ರಕಾರ ಸೂರತ್ ಮತ್ತು ಬಿಲ್ಮೋರಾ ನಡುವಿನ ಬುಲೆಟ್ ಟ್ರೈನ್ ಉದ್ಘಾಟನೆಯನ್ನು 2026 ರಲ್ಲಿ ಆರಂಭಿಸುವ ಗುರಿಯನ್ನು ಇಟ್ಟುಕೊಂಡು ಕೆಲಸಗಳನ್ನು ಕ್ಷಿಪ್ರ ಗತಿಯಲ್ಲಿ ಮಾಡಲಾಗುತ್ತಿದೆ. ಭಾರತದಲ್ಲೇನಾದರು ಬುಲೆಟ್ ಟ್ರೈನ್‌ಗಳು ಕೆಲಸ ಆರಂಭಿಸಿದರೆ ಸಾರಿಗೆ ಕ್ಷೇತ್ರದಲ್ಲಿ ಅದೊಂದು ಕ್ರಾಂತಿಯಾಗಿ ಇತಿಹಾಸದ ಪುಟಗಳನ್ನು ಸೇರುವುದರಲ್ಲಿ ಸಂಶಯವಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications