ಸೋಂಕು ಹರಡುವಿಕೆಯನ್ನು ತಡೆಯಲು ಆಟೋ ರಿಕ್ಷಾ ಮಾಲೀಕನ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಇಡೀ ವಿಶ್ವವೇ ಮಹಾಮಾರಿ ಕರೋನಾ ವೈರಸ್ ಅಟ್ಟಹಾಸಕ್ಕೆ ನಲುಗಿ ಹೋಗಿದ್ದು, ವೈರಸ್ ತಡೆಗಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕರೋನಾ ವೈರಸ್‌ಗೆ ಸೂಕ್ತವಾದ ಲಸಿಕೆ ಇಲ್ಲದಿರುವುದು ಸಾಕಷ್ಟು ಸಾವು-ನೋವಿಗೆ ಕಾರಣವಾಗಿದ್ದು, ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ ಸದ್ಯಕ್ಕೆ ಮುಂಜಾಗ್ರತೆ ಕ್ರಮಗಳೇ ಜೀವ ರಕ್ಷಣೆಗಿರುವ ಪ್ರಮುಖ ಅಸ್ತ್ರ ಎನ್ನಬಹುದು.

ಆಟೋ ರಿಕ್ಷಾ ಮಾಲೀಕನ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಕರೋನಾ ವೈರಸ್ ಹರಡುವಿಕೆಯನ್ನು ತಡೆಯುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸೋಂಕು ತಗುಲದಂತೆ ಸ್ಯಾನಿಟೈಜ್ ಬಳಕೆ ಮಾಡುವುದು ಸಾಕಷ್ಟು ಸಹಕಾರಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಹಿನ್ನಲೆಯಲ್ಲಿ ಆಟೋ ರಿಕ್ಷಾ ಮಾಲೀಕರೊಬ್ಬರು ಗ್ರಾಹಕರಿಗೆ ಸುರಕ್ಷತೆಯ ಪ್ರಯಾಣಕ್ಕೆ ಒದಗಿಸುವುದಕ್ಕಾಗಿ ಸ್ಯಾನಿಟೈಜ್ ಬಳಕೆಗೆ ಹೊಸ ವಿಧಾನವನ್ನು ಅಳವಡಿಸಿಕೊಂಡಿರುವುದು ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿದೆ.

ಆಟೋ ರಿಕ್ಷಾ ಮಾಲೀಕನ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಸದ್ಯದ ಪರಿಸ್ಥಿತಿಯಲ್ಲಿ ತರಕಾರಿ ಖರೀದಿಯಿಂದ ಹಿಡಿದು ಸಾರಿಗೆ ವ್ಯವಸ್ಥೆಯ ಬಳಕೆಯ ತನಕವು ಸಾಮಾಜಿಕ ಅಂತರದೊಂದಿಗೆ ಸ್ವಚ್ಚತೆ ಬಗೆಗೆ ಹೆಚ್ಚು ಗಮನಹರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಆಟೋ ರಿಕ್ಷಾ ಮಾಲೀಕರೊಬ್ಬರು ಕೈಗೊಂಡಿರುವ ಹೊಸ ಕ್ರಮವು ಆಟೋ ಉದ್ಯಮದ ದಿಗ್ಗಜ ಆನಂದ್ ಮಹೀಂದ್ರಾ ಅವರ ಮೆಚ್ಚುಗೆಗೂ ಕಾರಣವಾಗಿದೆ.

ಆಟೋ ರಿಕ್ಷಾ ಮಾಲೀಕನ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಕರೋನಾ ಅಬ್ಬರದ ನಡುವೆ ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ? ಎನ್ನುವುದರ ಕುರಿತು ಮಾತನಾಡಿರುವ ಆನಂದ್ ಮಹೀಂದ್ರಾ ಅವರು, ಸೋಂಕು ನಿಯಂತ್ರಿಸುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಗ್ರಾಹಕರನ್ನು ಸ್ವಚ್ಚತೆಯೆಡೆ ಪ್ರೇರೆಪಿಸುವ ಬಗೆಗೆ ಆಟೋ ರಿಕ್ಷಾ ಮಾಲೀಕ ತೆಗೆದುಕೊಂಡಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಟೋ ರಿಕ್ಷಾ ಮಾಲೀಕನ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಮುಂಬೈ ನಗರದಲ್ಲಿ ಆಟೋ ರಿಕ್ಷಾ ಮಾಲೀಕನೊಬ್ಬ ಪ್ರಯಾಣಿಕರು ಮತ್ತು ಚಾಲಕ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಹ್ಯಾಂಡ್ ಸ್ಯಾನಿಟೈಜ್ ಮಾಡಿಕೊಳ್ಳಲು ವಾಶ್ ಬೇಸಿನ್ ಸಹ ಅಳವಡಿಸಿಕೊಂಡಿದ್ದು, ಇದು ಗ್ರಾಹಕರಿಗೆ ಸುರಕ್ಷಿತ ಪ್ರಯಾಣಕ್ಕೆ ಸಾಕಷ್ಟು ಸಹಕಾರಿಯಾಗಿದೆ.

MOST READ: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ಆಟೋ ರಿಕ್ಷಾ ಮಾಲೀಕನ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ದೇಶದಲ್ಲೇ ಅತಿ ಹೆಚ್ಚು ಕರೋನಾ ವೈರಸ್ ಸೋಂಕಿತರನ್ನು ಹೊಂದಿರುವ ಮುಂಬೈ ಮಾಹಾನಗರದಲ್ಲಿ ಹೆಜ್ಜೆ ಹೆಜ್ಜೆಗೂ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕಾದ ಅನಿವಾರ್ಯತೆಗಳಿದ್ದು, ಸೋಂಕು ಹರಡುವಿಕೆ ತಪ್ಪಿಸಿ ಸುರಕ್ಷಿತ ಕ್ರಮಗಳೊಂದಿಗೆ ಗ್ರಾಹಕರ ಸೇವೆಗಳನ್ನು ನೀಡುತ್ತಿರುವ ಆಟೋ ರಿಕ್ಷಾ ಮಾಲೀಕನ ಕಾರ್ಯವನ್ನು ಮೆಚ್ಚಲೇಬೇಕು.

ಆಟೋ ರಿಕ್ಷಾ ಮಾಲೀಕನ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಇದಲ್ಲದೆ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿರುವ ಆಟೋ ರಿಕ್ಷಾದಲ್ಲಿ ಸೋಂಕು ಹರಡುವಿಕೆ ತಪ್ಪಿಸಲು ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಮಾಹಿತಿ ಪ್ರದರ್ಶನದ ಜೊತೆಗೆ ತುರ್ತು ಸಹಾಯವಾಣಿಗಳ ಮಾಹಿತಿಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.

MOST READ: ಕೋವಿಡ್ 19: ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಇದಷ್ಟೇ ಅಲ್ಲದೇ ಆಟೋ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ವೈ-ಫೈ ಸೌಲಭ್ಯ ಸಹ ನೀಡಲಾಗುತ್ತಿದ್ದು, ಎಲ್ಲಕ್ಕಿಂತ ಹೆಚ್ಚು ಸ್ವಚ್ಚ ಭಾರತ್ ಅಭಿಯಾನವನ್ನು ಕೈಗೊಂಡಿರುವುದು ಪ್ರಯಾಣಿಕರಿಗೆ ಆಟೋ ರಿಕ್ಷಾ ಪ್ರಯಾಣದಲ್ಲೂ ಒಂದು ಹೊಸ ಅನುಭವ ನೀಡುತ್ತಿದೆ.

Most Read Articles

Kannada
English summary
Mumbai Auto Rickshaw With Hand Washing System Impresses Anand Mahindra. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X