ಸೈಕಲ್'ನಲ್ಲಿಯೇ ಶುರುವಾಯ್ತು ದೋಸಾ ರೆಸ್ಟೋರೆಂಟ್

ಫುಡ್ ಕೋರ್ಟ್ ಹೆಸರಿನಲ್ಲಿ ಮಿನಿ ವ್ಯಾನ್‌ ಅಥವಾ ಮಿನಿ ಬಸ್‌ಗಳಲ್ಲಿ ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳನ್ನು ನಡೆಸುವುದನ್ನು ನಾವು ನೋಡಿರುತ್ತೇವೆ. ಆದರೆ ಮುಂಬೈನ ವ್ಯಕ್ತಿಯೊಬ್ಬರು ವಿಭಿನ್ನವಾದ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.

ಸೈಕಲ್'ನಲ್ಲಿಯೇ ಶುರುವಾಯ್ತು ದೋಸಾ ರೆಸ್ಟೋರೆಂಟ್

ಈ ವ್ಯಕ್ತಿ ಸೈಕಲ್ ಮೂಲಕ ಮೊಬೈಲ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಈ ರೆಸ್ಟೋರೆಂಟ್'ನಲ್ಲಿ ಅವರು ಮುಖ್ಯವಾಗಿ ದೋಸೆಯನ್ನು ಮಾರಾಟ ಮಾಡುತ್ತಾರೆ. ಜೊತೆಗೆ ವಡಾ ಪಾವ್ ಸಹ ಮಾರಾಟ ಮಾಡುತ್ತಾರೆ. ಈ ರೆಸ್ಟೋರೆಂಟ್'ಗಾಗಿ ಅವರು ತವಾ ಹಾಗೂ ಸಣ್ಣ ಒಲೆ ಹೊಂದಿರುವ ಸೈಕಲ್ ಬಳಸುತ್ತಿದ್ದಾರೆ.

ಸೈಕಲ್'ನಲ್ಲಿಯೇ ಶುರುವಾಯ್ತು ದೋಸಾ ರೆಸ್ಟೋರೆಂಟ್

ಒಲೆ ಹಾಗೂ ತವಾಗಳನ್ನು ಸೈಕಲ್'ನ ಹಿಂದಿರುವ ಕ್ಯಾರಿಯರ್'ನಲ್ಲಿಡಲಾಗಿದೆ. ಇವರು ತಮ್ಮ ಬಳಿ ಬರುವ ಗ್ರಾಹಕರಿಗೆ ದೋಸೆ ಹಾಗೂ ವಡಾ ಪಾವ್‌ಗಳನ್ನು ತಯಾರಿಸಿ ನೀಡುತ್ತಾರೆ. ಅವರ ಹೆಸರು ತಿಳಿದು ಬಂದಿಲ್ಲ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸೈಕಲ್'ನಲ್ಲಿಯೇ ಶುರುವಾಯ್ತು ದೋಸಾ ರೆಸ್ಟೋರೆಂಟ್

ಆದರೆ ಜನರು ಅವರನ್ನು ಸೈಕಲ್ ದೋಸಾ ವಾಲಾ ಎಂದು ಕರೆಯುತ್ತಾರೆ. ಮುಂಬೈ ಮೂಲದ ಈ ವ್ಯಕ್ತಿ ಸುಮಾರು 25 ವರ್ಷಗಳಿಂದ ದೋಸೆ ವ್ಯವಹಾರದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಸೈಕಲ್'ನಲ್ಲಿಯೇ ಶುರುವಾಯ್ತು ದೋಸಾ ರೆಸ್ಟೋರೆಂಟ್

ಆದಾಯ ಗಳಿಸಲು ಬೇರೆ ದಾರಿಯಿಲ್ಲದ ಕಾರಣ ಅವರು ತಮ್ಮ ಸೈಕಲ್ ಅನ್ನು ರೆಸ್ಟೋರೆಂಟ್ ಆಗಿ ಬದಲಿಸಿದ್ದಾರೆ. ಅವರು ಮಾರಾಟ ಮಾಡುವ ಆಹಾರಗಳು ವಿಶಿಷ್ಟ ಹೆಸರುಗಳನ್ನು ಹೊಂದಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸೈಕಲ್'ನಲ್ಲಿಯೇ ಶುರುವಾಯ್ತು ದೋಸಾ ರೆಸ್ಟೋರೆಂಟ್

ಅವರು ತಯಾರಿಸುವ ದೋಸೆಯನ್ನು ಮುಂಬೈ ಜನರು ಫ್ಲೈಯಿಂಗ್ ದೋಸಾ ಎಂದು ಕರೆಯುತ್ತಾರೆ. ಇದರ ಜೊತೆಗೆ ಪಿಜ್ಜಾ ಆಕಾರದ ದೋಸೆಯನ್ನು ಸಹ ಅವರು ತಯಾರಿಸುತ್ತಾರೆ ಎಂದು ಹೇಳಲಾಗಿದೆ.

ಸೈಕಲ್'ನಲ್ಲಿಯೇ ಶುರುವಾಯ್ತು ದೋಸಾ ರೆಸ್ಟೋರೆಂಟ್

ಅವರು ತಯಾರಿಸುವ ದೋಸೆಯಲ್ಲಿ ಚೀಸ್ ಹಾಗೂ ವಿಶೇಷ ಮಸಾಲೆ ಸಾಮಗ್ರಿಗಳನ್ನು ಬಳಸುತ್ತಾರೆ. ಈ ಕಾರಣಕ್ಕೆ ಅವರು ಮಾರಾಟ ಮಾಡುವ ದೋಸೆಯ ಬೆಲೆ ತುಸು ದುಬಾರಿಯಾಗಿದೆ ಎಂದು ತಿಳಿದು ಬಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸೈಕಲ್'ನಲ್ಲಿಯೇ ಶುರುವಾಯ್ತು ದೋಸಾ ರೆಸ್ಟೋರೆಂಟ್

ಅವರು ತಯಾರಿಸುವ ಆಹಾರವನ್ನು ರೂ.60ರಿಂದ ರೂ.100ರವರೆಗೆ ಮಾರಾಟ ಮಾಡಲಾಗುತ್ತದೆ. ಕಚೇರಿಗೆ ಹೋಗುವವರು ಹಾಗೂ ಕಾಲೇಜು ವಿದ್ಯಾರ್ಥಿಗಳು ಅವರ ಪಿಜ್ಜಾ ದೋಸೆಯನ್ನು ಹೆಚ್ಚು ಇಷ್ಟಪಡುತ್ತಾರೆ.

ಸೈಕಲ್'ನಲ್ಲಿಯೇ ಶುರುವಾಯ್ತು ದೋಸಾ ರೆಸ್ಟೋರೆಂಟ್

ಕೆಲವು ಗೃಹಿಣಿಯರು ಸಹ ಅವರ ರುಚಿಕರವಾದ ದೋಸೆಯನ್ನು ಇಷ್ಟಪಡುತ್ತಾರೆ. ಅವರು ತಮ್ಮ ಮೊಬೈಲ್ ರೆಸ್ಟೋರೆಂಟ್ ಅನ್ನು ಮುಂಬೈನ ಎನ್ಎಲ್ ಕಾಲೇಜಿನ ಬಳಿ ನಡೆಸುತ್ತಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದೋಸಾ ತವಾವನ್ನು ತಟ್ಟುವ ಮೂಲಕ ತಾವು ಬರುತ್ತಿರುವುದನ್ನು ಜನರಿಗೆ ತಿಳಿಸುತ್ತಾರೆ. ಅವರು ದೋಸಾ ತವಾವನ್ನು ತಟ್ಟಿದಾಗ ಹೆಚ್ಚಾಗಿ ಮಕ್ಕಳೇ ಹೊರ ಬರುತ್ತಾರೆ ಎಂಬುದು ಗಮನಾರ್ಹ.

ಸೈಕಲ್'ನಲ್ಲಿಯೇ ಶುರುವಾಯ್ತು ದೋಸಾ ರೆಸ್ಟೋರೆಂಟ್

ಈ ಸೈಕಲ್ ದೋಸಾ ವಾಲಾನ ಕುರಿತ ವೀಡಿಯೊವನ್ನು ಆಮ್ಚಿ ಮುಂಬೈ ಎಂಬ ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದೆ. ವೈರಲ್ ಆಗಿರುವ ಈ ವೀಡಿಯೊವನ್ನು ಇದುವರೆಗೂ 13 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಚಿತ್ರಕೃಪೆ: ಆಮ್ಚಿ ಮುಂಬೈ

Most Read Articles

Kannada
English summary
Mumbai man runs dosa hotel on bicycle. Read in Kannada.
Story first published: Tuesday, March 30, 2021, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X