18000 ರೂಪಾಯಿ ಬೆಲೆಯ ಟಿಕೆಟ್ ಖರೀದಿಸಿದ ಪ್ರಯಾಣಿಕನಿಗಾಗಿ ಬಳಕೆಯಾಯ್ತು 8 ಲಕ್ಷ ಬೆಲೆಯ ಇಂಧನ

ಬಹುತೇಕ ಜನರಿಗೆ ವಿಮಾನಗಳಲ್ಲಿ ಪ್ರಯಾಣಿಸಬೇಕೆಂಬ ಕನಸಿರುತ್ತದೆ. ಆದರೆ ಹಲವರಿಗೆ ಆ ಕನಸು ನನಸಾಗುವುದಿಲ್ಲ. ಆದರೆ ವ್ಯಕ್ತಿಯೊಬ್ಬರು 360 ಸೀಟುಗಳನ್ನು ಹೊಂದಿದ್ದ ಬೋಯಿಂಗ್ 777 ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ್ದಾರೆ.

18000 ರೂಪಾಯಿ ಬೆಲೆಯ ಟಿಕೆಟ್ ಖರೀದಿಸಿದ ಪ್ರಯಾಣಿಕನಿಗಾಗಿ ಬಳಕೆಯಾಯ್ತು 8 ಲಕ್ಷ ಬೆಲೆಯ ಇಂಧನ

ಈ ಭವ್ಯವಾದ ವಿಮಾನದಲ್ಲಿ ಅವರು ಸುಮಾರು ಎರಡೂವರೆ ಗಂಟೆಗಳ ಕಾಲ ಏಕಾಂಗಿಯಾಗಿ ಪ್ರಯಾಣಿಸಿದರು. ಈ ವಿಷಯವನ್ನು ನಂಬುವುದು ಕಷ್ಟ. ಆದರೆ 40 ವರ್ಷದ ಭಾವೇಶ್ ಜಾವೇರಿ ನಿಜಕ್ಕೂ ಅದೃಷ್ಟಶಾಲಿ. ಅವರು ಮೇ 19ರಂದು ಎಮಿರೇಟ್ಸ್ ವಿಮಾನದಲ್ಲಿ ಮುಂಬೈನಿಂದ ದುಬೈಗೆ ಪ್ರಯಾಣಿಸಿದ್ದರು.

18000 ರೂಪಾಯಿ ಬೆಲೆಯ ಟಿಕೆಟ್ ಖರೀದಿಸಿದ ಪ್ರಯಾಣಿಕನಿಗಾಗಿ ಬಳಕೆಯಾಯ್ತು 8 ಲಕ್ಷ ಬೆಲೆಯ ಇಂಧನ

ಅವರನ್ನು ಹೊರತುಪಡಿಸಿ ವಿಮಾನದಲ್ಲಿ ಬೇರೆ ಯಾವ ಪ್ರಯಾಣಿಕರು ಇರಲಿಲ್ಲ. ನಾನು ವಿಮಾನ ಏರಿದಾಗ ಫ್ಲೈಟ್ ಅಟೆಂಡೆಂಟ್‌ಗಳು ನನ್ನನ್ನು ಚಪ್ಪಾಳೆ ಮೂಲಕಸ್ವಾಗತಿಸಿದರು ಎಂದು ಭಾವೇಶ್ ಜಾವೇರಿ ಹೇಳಿದ್ದಾರೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

18000 ರೂಪಾಯಿ ಬೆಲೆಯ ಟಿಕೆಟ್ ಖರೀದಿಸಿದ ಪ್ರಯಾಣಿಕನಿಗಾಗಿ ಬಳಕೆಯಾಯ್ತು 8 ಲಕ್ಷ ಬೆಲೆಯ ಇಂಧನ

ಕಳೆದ ಎರಡು ದಶಕಗಳಲ್ಲಿ ಭಾವೇಶ್ ಜಾವೇರಿ ಮುಂಬೈ ಹಾಗೂ ದುಬೈ ನಡುವೆ 240ಕ್ಕೂ ಹೆಚ್ಚು ಬಾರಿ ಪ್ರಯಾಣಿಸಿದ್ದಾರೆ. ಆದರೆ ಇದೇ ಮೊದಲ ಬಾರಿ ಏಕಾಂಗಿಯಾಗಿ ಪ್ರಯಾಣಿಸಿದ್ದಾರೆ.

18000 ರೂಪಾಯಿ ಬೆಲೆಯ ಟಿಕೆಟ್ ಖರೀದಿಸಿದ ಪ್ರಯಾಣಿಕನಿಗಾಗಿ ಬಳಕೆಯಾಯ್ತು 8 ಲಕ್ಷ ಬೆಲೆಯ ಇಂಧನ

ಫ್ಲೈಟ್ ಅಟೆಂಡೆಂಟ್‌ ಒಬ್ಬರು ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವುದು ಭಯಾನಕವಾಗಿರಬಹುದು ಎಂದು ತಿಳಿಸಿದ್ದರು. ಭಾವೇಶ್ ಜಾವೇರಿ ತಮ್ಮ ರಾಶಿ ಚಕ್ರ ಸಂಖ್ಯೆಯಾದ 18 ಎ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದರು.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

18000 ರೂಪಾಯಿ ಬೆಲೆಯ ಟಿಕೆಟ್ ಖರೀದಿಸಿದ ಪ್ರಯಾಣಿಕನಿಗಾಗಿ ಬಳಕೆಯಾಯ್ತು 8 ಲಕ್ಷ ಬೆಲೆಯ ಇಂಧನ

ಬೋಯಿಂಗ್ 777 ವಿಮಾನವು ಸುಮಾರು 180 ಟನ್ ತೂಕವನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಟ್ವಿನ್ ಎಂಜಿನ್ ವಿಮಾನಗಳಲ್ಲಿ ಒಂದಾಗಿದೆ. ಮುಂಬೈನಿಂದ ದುಬೈಗೆ ಪ್ರಯಾಣಿಸಲು ರೂ.8 ಲಕ್ಷ ಮೌಲ್ಯದ 17 ಟನ್ ಇಂಧನವನ್ನು ಬಳಸಲಾಗುತ್ತದೆ.

18000 ರೂಪಾಯಿ ಬೆಲೆಯ ಟಿಕೆಟ್ ಖರೀದಿಸಿದ ಪ್ರಯಾಣಿಕನಿಗಾಗಿ ಬಳಕೆಯಾಯ್ತು 8 ಲಕ್ಷ ಬೆಲೆಯ ಇಂಧನ

ಕೇವಲ ಒಬ್ಬರೇ ಒಬ್ಬರು ಪ್ರಯಾಣಿಕರಿಗಾಗಿ ಇಷ್ಟು ಮೊತ್ತದ ಇಂಧನವನ್ನು ಖರ್ಚು ಮಾಡಲಾಗಿದೆ ಎಂಬುದು ಗಮನಾರ್ಹ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭಾರತದಲ್ಲಿ ಕರೋನಾ ವೈರಸ್ ಎರಡನೇ ಅಲೆ ತಾಂಡವವಾಡುತ್ತಿರುವುದರಿಂದ ಭಾರತದಿಂದ ತನ್ನ ದೇಶಕ್ಕೆ ಸಂಚರಿಸುವ ವಿಮಾನಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

18000 ರೂಪಾಯಿ ಬೆಲೆಯ ಟಿಕೆಟ್ ಖರೀದಿಸಿದ ಪ್ರಯಾಣಿಕನಿಗಾಗಿ ಬಳಕೆಯಾಯ್ತು 8 ಲಕ್ಷ ಬೆಲೆಯ ಇಂಧನ

ಸದ್ಯಕ್ಕೆ ಯುಎಇ ನಾಗರಿಕರು, ಯುಎಇ ಗೋಲ್ಡನ್ ವೀಸಾ ಹೊಂದಿರುವವರು ಹಾಗೂ ಗಣ್ಯ ವ್ಯಕ್ತಿಗಳು ಮಾತ್ರ ಭಾರತದಿಂದ ಯುಎಇಗೆ ಪ್ರಯಾಣಿಸಬಹುದು. ಭಾವೇಶ್ ಜಾವೇರಿ ಗೋಲ್ಡನ್ ವೀಸಾ ಹೊಂದಿದ್ದಾರೆ ಎಂಬುದು ಗಮನಾರ್ಹ.

18000 ರೂಪಾಯಿ ಬೆಲೆಯ ಟಿಕೆಟ್ ಖರೀದಿಸಿದ ಪ್ರಯಾಣಿಕನಿಗಾಗಿ ಬಳಕೆಯಾಯ್ತು 8 ಲಕ್ಷ ಬೆಲೆಯ ಇಂಧನ

ಮುಂಬೈ-ದುಬೈ ಮಾರ್ಗದಲ್ಲಿ ಬೋಯಿಂಗ್ 777 ವಿಮಾನವನ್ನು ಚಲಾಯಿಸಲು 17 ಟನ್ ಇಂಧನದ ಜೊತೆಗೆ ಸುಮಾರು ರೂ.70 ಲಕ್ಷ ಖರ್ಚಾಗುತ್ತದೆ. ಆದರೆ ಕೇವಲ ರೂ.18,000 ವೆಚ್ಚದ ಎಕಾನಮಿ ಕ್ಲಾಸ್ ಟಿಕೆಟ್‌ ಖರೀದಿಸಿದ ಭಾವೇಶ್ ಜಾವೇರಿರವರಿಗೆ ಈ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

18000 ರೂಪಾಯಿ ಬೆಲೆಯ ಟಿಕೆಟ್ ಖರೀದಿಸಿದ ಪ್ರಯಾಣಿಕನಿಗಾಗಿ ಬಳಕೆಯಾಯ್ತು 8 ಲಕ್ಷ ಬೆಲೆಯ ಇಂಧನ

ಈ ಎಲ್ಲಾ ಸಂಗತಿಗಳನ್ನು ಗಮನಿಸಿದರೆ ಭಾವೇಶ್ ಜಾವೇರಿ ನಿಜಕ್ಕೂ ಅದೃಷ್ಟಶಾಲಿ ಎನ್ನಬಹುದು. ವಿಮಾನದಲ್ಲಿ ಪ್ರಯಾಣಿಕರೊಬ್ಬರು ಏಕಾಂಗಿಯಾಗಿ ಪ್ರಯಾಣಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ವಿಶ್ವದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಘಟನೆಗಳು ನಡೆದಿದ್ದವು ಎಂಬುದು ಗಮನಾರ್ಹ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Mumbai man travels alone in Boeing 777 plane. Read in Kannada.
Story first published: Wednesday, May 26, 2021, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X