ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಭಾರತದಲ್ಲಿ ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಮಾರ್ಚ್ 24ರಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಯಿತು. ಅಂದಿನಿಂದ ಸಾರ್ವಜನಿಕ ಸಾರಿಗೆಗಳಾದ ಆಟೋ, ಟ್ಯಾಕ್ಸಿ ಹಾಗೂ ಬಸ್‌ಗಳ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಲಾಯಿತು.

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರದ ಮೇಲೂ ನಿರ್ಬಂಧ ವಿಧಿಸಲಾಯಿತು. ಆದರೆ ಈಗ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಸಾರ್ವಜನಿಕ ಸಾರಿಗೆಗೂ ವಿನಾಯಿತಿ ನೀಡಲಾಗಿದ್ದು ಆಟೋ, ಟ್ಯಾಕ್ಸಿ ಹಾಗೂ ಬಸ್ಸು ಸೇರಿದಂತೆ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳ ಮೇಲಿನ ನಿರ್ಬಂಧಗಳನ್ನು ಸಹ ತೆಗೆದು ಹಾಕಲಾಗಿದೆ.

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಆದರೆ ಭಾರತದ ಕೆಲವು ಭಾಗಗಳಲ್ಲಿ ಇನ್ನೂ ಲಾಕ್ ಡೌನ್ ಜಾರಿಯಲ್ಲಿವೆ. ಇದರಲ್ಲಿ ಮುಂಬೈ ಮಹಾನಗರವು ಸಹ ಸೇರಿದೆ. ಮುಂಬೈನಲ್ಲಿ ವಾಹನಗಳ ಕಾರ್ಯಾಚರಣೆಗೆ ಇನ್ನೂ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಈ ನಿರ್ಬಂಧಗಳನ್ನು ಉಲ್ಲಂಘಿಸುವ ವಾಹನ ಮಾಲೀಕರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಮುಂಬೈ ಟ್ರಾಫಿಕ್ ಪೊಲೀಸರ ಪ್ರಕಾರ, ಕಳೆದ ನಾಲ್ಕು ದಿನಗಳಲ್ಲಿ 2 ಸಾವಿರಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಅನುಮತಿ ಹಾಗೂ ಅಗತ್ಯವಿಲ್ಲದೇ ರಸ್ತೆಗಿಳಿದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಳೆದ ಮಂಗಳವಾರದಿಂದ ಶುಕ್ರವಾರದವರೆಗೆ ನಾಲ್ಕು ದಿನಗಳ ಅವಧಿಯ ಕಾರ್ಯಾಚರಣೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಕಳೆದ ವಾರದ ಆರಂಭದಲ್ಲಿಯೇ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಟ್ವಿಟರ್‌ನಲ್ಲಿ ಎಚ್ಚರಿಕೆ ನೀಡಿದ್ದರು. ಅನ್ ಲಾಕ್ ಅವಧಿಯಲ್ಲಿ ಮುಂಬೈ ಪೊಲೀಸರ ನಿಯಮಗಳು ಅಸ್ಪಷ್ಟ ಹಾಗೂ ಗೊಂದಲಮಯವಾಗಿವೆ ಎಂದು ವಾಹನ ಚಾಲಕರು ಹೇಳಿದ್ದಾರೆ.

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಮುಂಬೈ ಪೊಲೀಸರ ಈ ಕ್ರಮದ ವಿರುದ್ಧ ಹಲವರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅನಧಿಕೃತ ಹಾಗೂ ಅನಿವಾರ್ಯವಲ್ಲದ ವಾಹನ ಸಂಚಾರ ಎಂಬುದನ್ನು ಹೇಗೆ ತೀರ್ಮಾನಿಸುತ್ತೀರಿ? ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಹೆಚ್ಚಿನ ದಟ್ಟಣೆ ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಶಾಪಿಂಗ್ ಹಾಗೂ ವ್ಯಾಯಾಮದಂತಹ ಅನಿವಾರ್ಯವಲ್ಲದ ಚಟುವಟಿಕೆಗಳನ್ನು ಮನೆಗಳ ಹತ್ತಿರವೇ ಮಾಡಬೇಕು ಎಂದು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ತಿಳಿಸಿವೆ. ಮುಂಬೈ ಟ್ರಾಫಿಕ್ ಪೊಲೀಸರು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ನಾವು ಅನುಸರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಈ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು ಶಾಪಿಂಗ್ ಮಾಡಲು ಮನೆಯಿಂದ ತುಂಬಾ ದೂರ ಹೋಗಬಾರದು. ಮನೆಗಳಿಗೆ ಹತ್ತಿರವಿರುವ ಸೌಲಭ್ಯಗಳನ್ನು ಬಳಸಿಕೊಂಡು ಶಾಪಿಂಗ್ ಮಾಡಬೇಕು ಎಂದು ಹೇಳಿದ್ದಾರೆ. ಆದರೆ ಕಚೇರಿಗಳಿಗೆ ತೆರಳಲು ಹಾಗೂ ಆಸ್ಪತ್ರೆಗಳಿಗೆ ತೆರಳಲು ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಯಾಣಿಕರು ವಾಹನಗಳಲ್ಲಿ ಸಂಚರಿಸಿದರೂ ಕ್ರಮ ಕೈಗೊಳ್ಳಲಾಗುತ್ತಿದೆ. ತ್ರಿಚಕ್ರ ವಾಹನದಲ್ಲಿ ಚಾಲಕ ಸೇರಿದಂತೆ ಒಟ್ಟು ಮೂರು ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ. ಕಾರುಗಳಲ್ಲಿ ನಾಲ್ಕು ಜನರ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಈ ನಿಯಮವನ್ನು ಉಲ್ಲಂಘಿಸಿದರೂ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂಬೈನಲ್ಲಿ ಮಂಗಳವಾರ 250 ವಾಹನಗಳು, ಬುಧವಾರ 592 ಮತ್ತು ಗುರುವಾರ 633 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಸಂಜೆ 7 ಗಂಟೆ ಹೊತ್ತಿಗೆ 550 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಒಟ್ಟಾರೆಯಾಗಿ, ಕೇವಲ ನಾಲ್ಕು ದಿನಗಳಲ್ಲಿ ಮುಂಬೈ ಪೊಲೀಸರು 2 ಸಾವಿರಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಮುಂಬೈ ಟ್ರಾಫಿಕ್ ಪೊಲೀಸರು ಕಳೆದ ಜೂನ್‌ ತಿಂಗಳಿನಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯಿಂದ 2 ಕಿ.ಮೀ ಮೀರಿ ಸಂಚರಿಸಬಾರದು ಎಂಬ ನಿಯಮವನ್ನು ಜಾರಿಗೆ ತಂದಿದ್ದರು.

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಆದರೆ ವೈದ್ಯಕೀಯ ಅಗತ್ಯತೆಗಳಿಗೆ ಅಥವಾ ಕಚೇರಿಗೆ ಹೋಗಬೇಕಾದರೆ 2 ಕಿ.ಮೀ ದಾಟಬಹುದು ಎಂಬ ಷರತ್ತನ್ನು ವಿಧಿಸಲಾಗಿತ್ತು. ಆದರೆ ಕೆಲ ದಿನಗಳ ನಂತರ ಈ ನಿಯಮಕ್ಕೆ ತಿದ್ದುಪಡಿ ತಂದು 2 ಕಿ.ಮೀ ಎಂಬುದನ್ನು ಮನೆ ಹತ್ತಿರ ಎಂದು ಬದಲಿಸಲಾಯಿತು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಅನ್ ಲಾಕ್ ಅವಧಿಯಲ್ಲಿ ವಾಹನ ಸಂಚಾರರನ್ನು ಗೊಂದಲಕ್ಕೆ ದೂಡುತ್ತಿವೆ ಸಂಚಾರಿ ಪೊಲೀಸರ ನಿಯಮಗಳು

ಇದು ಸಹ ಸಾರ್ವಜನಿಕರನ್ನು ಮತ್ತಷ್ಟು ಗೊಂದಲಕ್ಕೊಳಗಾಗುವಂತೆ ಮಾಡಿತು. ಹೀಗಾಗಿ ಮುಂಬೈ ಪೊಲೀಸ್ ಇಲಾಖೆಯು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಪೊಲೀಸರು ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸದೇ ಜನರನ್ನು ಗೊಂದಲಕ್ಕೆ ದೂಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗುತ್ತಿದೆ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Mumbai traffic police norms creates confusion among motorists. Read in Kannada.
Story first published: Monday, August 24, 2020, 9:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X