ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ಸಂಚಾರಿ ನಿಯಮಗಳನ್ನ ಉಲ್ಲಂಘಿಸುವವರ ವಿರುದ್ಧ ಬೆಂಗಳೂರು ಟ್ರಾಫಿಕ್ ಪೊಲೀಸರು ಈಗಾಗಲೇ ಸಾವಿರಾರು ಪ್ರಕರಣ ದಾಖಲಿಸಿ ಕಠಿಣಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಹಲವರಿಗೆ ತಿಳಿದಿರುವ ಸಂಗತಿ. ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ಬೈಕ್ ಎಕ್ಸಾಸ್ಟ್ ಮಾಡಿಫೈ ಮಾಡಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ.

ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ದ್ವಿಚಕ್ರ ವಾಹನಗಳನ್ನು ಖರೀದಿಸಿದ ಮೊದಲಿನಲ್ಲಿ ವಾಹನದ ಜೊತೆಗೆಯೆ ಹಲವಾರು ಪರೀಕ್ಷೆಗಳು ನಡೆಸಿದ ನಂತರ ಉತ್ತಮವಾದ ಉಪಕರಣಗಳನ್ನು ನೀಡಲಾಗಿರುತ್ತದೆ. ಆದರೆ ಕೆಲ ಗ್ರಾಹಕರು ತಾವು ಖರೀದಿಸಿದ ಬೈಕಿನಲ್ಲಿ ನೀಡಲಾದ ಕೆಲವು ಉಪಕರಣಗಳನ್ನು ಕಿತ್ತೊಗೆದು ಮಾಡಿಫೈ ಮಾಡಲಾದ ಕೆಲವು ಉಪಕರಣಗಳನ್ನು ಅಳವಡಿಸಿಕೊಳ್ಳುತ್ತಾರೆ.

ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈಗೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೈಕ್ ಮೂಲವನ್ನೆ ಬದಲಿಸುವುದು ಸಾಕಷ್ಟು ಟ್ರೆಂಡ್ ಆಗುತ್ತಿದೆ.

ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ಅಂತಹ ಉಪಕರಣಗಳಲ್ಲಿ ಎಕ್ಸಾಸ್ಟ್ ಕೂಡಾ ಒಂದು, ಹೌದು ಹಲವಾರು ಪರ್ಫಾರ್ಮೆನ್ಸ್ ಮತ್ತು ಸ್ಪೋರ್ಟ್ಸ್ ಬೈಕ್‍ಗಳಿಗೆ ನೀಡಲಾದ ಎಕ್ಸಾಸ್ಟ್ ಅನ್ನು ತೆಗೆದು ಹಾಕಿ ಮಾಲೀಕರು ಅದಕ್ಕೆ ಕರ್ಕಷ ಮತ್ತು ಬೈಕಿನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಹಾಗು ರಸ್ತೆಯಲ್ಲಿ ಹೋಗುವವರ ದೃಷ್ಟಿ ತಮ್ಮ ವಾಹನದ ಮೇಲೆ ಬೀಳಲು ಮಾಡಿಫೈಡ್ ಎಕ್ಸಾಸ್ಟ್ ಅನ್ನು ಬಳಸುತ್ತಾರೆ.

ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ಇದು ಕಾನೂನಿನ ಪ್ರಕಾರ ತಪ್ಪು ಎಂದು ತಿಳಿದಿದ್ದರೂ ಸಹ ಈ ತಪ್ಪನ್ನು ಮಾಡುತ್ತಲೇ ಇದ್ದಾರೆ. ಕರ್ಕಷ ಶಬ್ದದಿಂದ ಶಬ್ದ ಮಾಲಿನ್ಯವನ್ನುಂಟು ಮಾಡುವ ಎಕ್ಸಾಸ್ಟ್ ಅಳವಡಿಸಿದ ವಾಹನಗಳನ್ನು ಕಂಡರೆ ಪೊಲೀಸರು ಅದನ್ನು ಅಲ್ಲಿಯೆ ತೆಗೆಸಿ ಅಥವಾ ಸ್ಥಳದಲ್ಲಿಯೆ ವಾಹನಗಳನ್ನು ಸೀಜ್ ಮಾಡಲಾದ ಉದಾಹರಣೆಗಳನ್ನು ನಾವೆಲ್ಲರು ಕಂಡಿದ್ದೇವೆ.

ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ಆದರೆ ಇಂದು ನಾವು ಹೇಳಲು ಹೊರಟಿರುವ ಘಟನೆಯು ಅತಂದ್ದೆ ಆಗಿದ್ದರೂ, ಇದನ್ನು ಪತ್ತೆ ಹಚ್ಚಿದ ನಂತರ ಪೊಲೀಸರು ಮಾಡಿದ ಕೆಲಸವು ಎಲ್ಲರಿಗೂ ಅಚ್ಚರಿ ತರಿಸುತ್ತೆ. ಹಯಾಬುಸ ಬೈಕಿನ ಯುವ ಮಾಲೀಕನೊಬ್ಬ ತನ್ನ ವಾಹನಕ್ಕೆ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಅನ್ನು ಬಳಸಿರುವುದನ್ನು ಕಂಡ ಪೊಲೀಸರು ಅವರನ್ನು ಸುಮ್ಮನೆ ಬಿಟ್ಟಿದ್ದಾರೆ.

ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ಸಾಧಾರಣವಾಗಿ ಹಯಾಬುಸ ಬೈಕಿನಲ್ಲಿ ನೀಡಲಾದ ಎಕ್ಸಾಸ್ಟ್ ಮಫ್ಲರ್ ಅನ್ನು ಈತ ತಗೆದು ಹಾಕಿ ಬ್ರೋಕ್ಸ್ ಪರ್ಫಾರ್ಮೆನ್ಸ್ ಎಂಬ ಕಂಪೆನಿಯ ಎಕ್ಸಾಸ್ಟ್ ಮಫ್ಲರ್ ಅನ್ನು ಅಳವಡಿಸಿಕೊಂಡಿದ್ದಾನೆ. ಈ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಮಫ್ಲರ್ ಬೈಕಿನ ಪರ್ಫಾರ್ಮೆನ್ಸ್ ಅನ್ನು ಅಧಿಕಗೊಳಿಸಿದರೂ, ಹೆಚ್ಚು ಶಬ್ದವನ್ನು ಹೊರಹಾಕುತ್ತದೆ ಎನ್ನಲಾಗಿದೆ.

ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ಹಯಾಬುಸ ಬೈಕಿನ ಯುವ ಮಾಲೀಕ ಮತ್ತು ತನ್ನ ಸ್ನೇಹಿತರು ಹಾಗು ಇನ್ನಿತರೆ ಬೈಕ್ ಸವಾರರು ಮೈಸೂರಿನ ಬಳಿ ಇರುವ ಪ್ರದೇಶದ ಸಮೀಪದಲ್ಲಿ ಫೋಟೊಗಳನ್ನು ಕ್ಲಿಕ್ಕಿಸುತ್ತಾ ಇರುವ ಸಮಯದಲ್ಲಿ ಪೊಲೀಸ್ ವಾಹನವೊಂದು ಸ್ಥಳಕ್ಕೆ ಆಗಮಿಸಿತ್ತು.

MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ..!

ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ಪೊಲೀಸರು ಬಂದ ತಕ್ಷಣವೇ ಅಲ್ಲಿದ್ದ ಕೆಲ ಯುವಕರು ಅಲ್ಲಿಂದ ಭಯಗೊಂಡು ಪರಾರಿಯಾದರು, ಆದರೆ ಹಯಾಬುಸ ಮಾಲೀಕನನ್ನು ಕರೆದ ಪೊಲೀಸರು, ಆ ಯುವಕ ಅಲ್ಲಿ ವ್ಹೀಲಿಂಗ್ ಮಾಡುತ್ತಿರುವುದಾಗಿ ಮತ್ತು ರಸ್ತೆಗಳಲ್ಲಿ ಕರ್ಕಷ ಎಕ್ಸಾಸ್ಟ್ ನಿಂದ ಶಬ್ದ ಮಾಲಿನ್ಯ ಮಾಡುತ್ತಿರುವ ಬಗ್ಗೆ ದೂರು ಬಂದಿರುವುದಾಗಿ ಹೇಳಿದರು.

ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ನಂತರ ಆ ಯುವಕನು ಪೊಲೀಸರಿಗೆ, ಆತನು ಕಳೆದ 30 ನಿಮಿಷದಿಂದ ಇಲ್ಲೆ ಇರುವುದಾಗಿದ್ದು ಯಾವುದೇ ವ್ಹೀಲಿಂಗ್ ಮಾಡುತ್ತಿಲ್ಲವೆಂದು ಕೇವಲ ಫೋಟೊವನ್ನು ಕ್ಲಿಕ್ಕಿಸುತ್ತಿದ್ದೆವು ಎಂದು ಉತ್ತರ ನೀಡಿದ್ದಾನೆ.

ಆದರೆ ವಿಡಿಯೋವನ್ನು ಗಮನಿಸಿದ್ದಲ್ಲಿ ಇದೇ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ದೃಶ್ಯವು ಕಂಡುಬರುತ್ತದೆ. ಇವೆಲ್ಲವೂ ಆದ ನಂತರ ಪೊಲೀಸ್ ವಾಹನದಲಿದ್ದ ಒಬ್ಬ ಅಧಿಕಾರಿಯು ಇವೆಲ್ಲವನ್ನು ಮಾಡಲು ಮೊದಲಿಗೆ ನೀವು ಅನುಮತಿ ಪಡೆಯಬೇಕಾಗಿದ್ದು, ನಂತರ ನಾವು ನಿಮಗೆ ಪೊಲೀಸ್ ರಕ್ಷಣೆಯನ್ನು ನೀಡುತ್ತೇವೆ ಎಂದು ಹೇಳಿ ಅವರನ್ನು ಅಲ್ಲಿಂದ ತೆರಳಲು ಹೇಳಿದ್ದಾರೆ.

ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ಇಲ್ಲಿ ಮುಖ್ಯವಾದ ವಿಚಾರ ಏನಂದ್ರೆ ಕರ್ಕಷ ಎಕ್ಸಾಸ್ಟ್ ಅನ್ನು ಬಳಸಿರುವ ಬೈಕ್ ಮಾಲೀಕನಿಗೆ ಯಾವುದೇ ದಂಡ ವಿಧಿಸದೆ ಪೊಲೀಸರು ಬಿಟ್ಟಿದ್ದಾರೆ. ಪರ್ಫಾರ್ಮೆನ್ಸ್ ಎಕ್ಸಾಸ್ಟ್ ಗಳು ಶಬ್ದ ಮಾಲಿನ್ಯವನ್ನು ಉಂಟು ಮಾಡುತ್ತವೆ ಮತ್ತು ದಿನ ನಿತ್ಯ ಬಳಸುವ ವಾಹನಗಳಲ್ಲಿ ಅವುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ಆದರೆ ಇಂತಹ ಎಕ್ಸಾಸ್ಟ್ ಅನ್ನು ರೇಸಿಂಗ್ ದ್ವಿಚಕ್ರ ವಾಹನಗಳು ಮತ್ತು ಇನ್ನಿತರೆ ಖಾಸಗಿ ಗುಣಲಕ್ಷಣಗಳುಳ್ಳ ವಾಹನಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಮೇಲೆ ಹೇಳಿರುವ ಹಾಗೆ ವಿವಿಧ ಪ್ರಮುಖ ನಗರಗಳಲ್ಲಿರುವ ಪೊಲೀಸರು ಮಾಡಿಫೈಡ್ ಎಕ್ಸಾಸ್ಟ್ ಅನ್ನು ಬಳಸುತ್ತಿರುವ ದ್ವಿಚಕ್ರ ವಾಹನಗಳನ್ನು ಹಿಡಿಯಲು ತನಿಖೆ ಶುರು ಮಾಡಿದ್ದಾರೆ.

MOST READ: ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ಒಟ್ಟಿನಲ್ಲಿ ಮಾಡಿಫೈಡ್ ಎಕ್ಸಾಸ್ಟ್ ಬೈಕ್ ಅನ್ನು ಹಿಡಿಯಲು ಬಂದಿದ್ದ ಪೊಲೀಸರು ಕೊನೆಗೆ ತಾವೇ ರಕ್ಷಣೆ ಕೊಡುವುದಾಗಿ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಬೈಕ್ ಸವಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವುದಕ್ಕೆ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ.

Source: SKS Exotics

Most Read Articles

Kannada
English summary
Rev-crazy Suzuki Hayabusa rider BUSTED. Read In Kannada
Story first published: Wednesday, January 2, 2019, 14:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more