ಮೆಟ್ರೋ ಗ್ರೀನ್ ಲೈನ್‌ಗೆ ರಾಷ್ಟ್ರಪತಿಗಳಿಂದ ಹಸಿರು ನಿಶಾನೆ- ಸೇವೆಗೆ ಮುಕ್ತ ಸಂಪಿಗೆ ಟು ಯಲಚೇನಹಳ್ಳಿ ಮಾರ್ಗ
ಬೆಂಗಳೂರಿನ ಜನತೆಯ ಬಹುನೀರಿಕ್ಷಿತ ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಸಂಪಿಗೆ ರಸ್ತೆ ಟು ಯಲಚೇನಹಳ್ಳಿವರೆಗಿನ ಗ್ರೀನ್ ಕಾರಿಡಾರ್ ಅನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶನಿವಾರ ಲೋಕಾರ್ಪಣೆ ಮಾಡಿದರು.
ಬೆಂಗಳೂರಿನ ಜನತೆಯ ಬಹುನೀರಿಕ್ಷಿತ ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಸಂಪಿಗೆ ರಸ್ತೆ ಟು ಯಲಚೇನಹಳ್ಳಿವರೆಗಿನ ಗ್ರೀನ್ ಕಾರಿಡಾರ್ ಅನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶನಿವಾರ ಲೋಕಾರ್ಪಣೆ ಮಾಡಿದರು.

ನಿತ್ಯ 5-6 ಲಕ್ಷ ಜನ ಪ್ರಯಾಣಿಕರ ನೀರಿಕ್ಷೆ
ಉತ್ತರ ಮತ್ತು ದಕ್ಷಿಣ ಮೆಟ್ರೋ ಗ್ರೀನ್ ಕಾರಿಡಾರ್ ಸಂಚಾರಕ್ಕೆ ಮುಕ್ತವಾಗಿದ್ದು, ಮೊದಲ ಹಂತದ ಮೆಟ್ರೋ ಮಾರ್ಗದಲ್ಲಿ ದಿನನಿತ್ಯ 5 ರಿಂದ 6 ಲಕ್ಷ ಜನ ಪ್ರಯಾಣ ಮಾಡುವ ನೀರಿಕ್ಷೆಯಿದೆ.

6 ನಿಮಿಷಕ್ಕೊಂದು ಮೆಟ್ರೋ ಲಭ್ಯ
ನಾಲ್ಕು ದಿಕ್ಕಿಗೂ ಮೆಟ್ರೋ ಲಭ್ಯ ಹಿನ್ನೆಲೆ ಸಂಚಾರ ದಟ್ಟಣೆ ಹೆಚ್ಚಲಿದ್ದು, ಪ್ರಯಾಣಕ್ಕೆ ಅನುಕೂಲರವಾಗುವ ನಿಟ್ಟಿನಲ್ಲಿ 8 ನಿಮಿಷದ ಬದಲಾಗಿ 6 ನಿಮಿಷಕ್ಕೊಂದು ಮೆಟ್ರೋ ಸಂಚಾರ ಲಭ್ಯವಾಗಲಿದೆ.

ಸಿಆರ್‌ಎಸ್‌ನಿಂದ ಸುರಕ್ಷಾ ಪ್ರಮಾಣ ಪತ್ರ
ಇನ್ನು ಹೊಸ ಮೆಟ್ರೋ ಮಾರ್ಗಗಳ ಸುರಕ್ಷೆತೆ ಬಗ್ಗೆ ಪರಿಶೀಲನೆ ನಡೆಸಿದ್ದ ರೈಲ್ವೇ ಸುರಕ್ಷಾ ಆಯುಕ್ತರು, ಪ್ರತಿ ಗಂಟೆಗೆ 60 ಕಿಮಿ ವೇಗದಲ್ಲಿ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಸದ್ಯ ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ನಲ್ಲೂ ಪ್ರತಿ ಗಂಟೆಗೆ 60 ಕಿ.ಮಿ ವೇಗದಲ್ಲಿ ಮೆಟ್ರೋ ಸಂಚಾರಕ್ಕೆ ಅವಕಾಶವಿದ್ದು, ಸಂಪಿಗೆ ರಸ್ತೆಯಿಂದ ಹೊರಡುವ ಮೆಟ್ರೋ ಕೇವಲ 20 ರಿಂದ 25 ನಿಮಿಷಲ್ಲಿ ಯಲಚೇನಹಳ್ಳಿ ತಲುಪಲಿದೆ.

ಬೆಳಗ್ಗೆ 6ರಿಂದಲೇ ಮೆಟ್ರೋ ಸೇವೆಗಳು ಲಭ್ಯವಿರಲಿದ್ದು, ರಾತ್ರಿ 11 ಗಂಟೆಯ ತನಕ ಮೆಟ್ರೋ ಸಂಚಾರ ಮಾಡಬಹುದಾಗಿದೆ. ಇದರಿಂದ ಈ ಭಾಗದಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ತಗ್ಗುವ ನಿರೀಕ್ಷೆಯಿದೆ.

ಇನ್ನು ನಿಲ್ದಾಣದ ಎಲ್ಲ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ತುರ್ತು ನಿರ್ಗಮನವೂ ಸೇರಿದಂತೆ ಇತರೆ ಅಗತ್ಯ ಸೇವೆಗೆ ಕೂಡಾ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿದ ಯೋಜನಾ ವೆಚ್ಚ
2006ರಲ್ಲಿ ಮೆಟ್ರೋ ಮೊದಲ ಹಂತದ ಕಾಮಗಾರಿಗಾಗಿ 8,154 ಕೋಟಿ ನಿಗದಿಯಾಗಿತ್ತು. ಆದ್ರೆ ಮಾರ್ಗ ವಿಸ್ತರಣೆ ಮತ್ತು ಉಕ್ಕು, ಸಿಮೆಂಟ್ ಬೆಲೆ ಹೆಚ್ಚಳ ಹಿನ್ನೆಲೆ ಯೋಜನಾ ವೆಚ್ಚ 13, 742 ಕೋಟಿಗೆ ತಲುಪಿದೆ.

ಇದಲ್ಲದೇ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಮೆಟ್ರೋ ಸೇವೆ ನೀಡಲು ಮುಂದಾಗಿರುವ ಬಿಎಂಆರ್‌ಸಿಎಲ್, ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ನಲ್ಲಿ 3 ನಿಮಿಷಕ್ಕೊಂದು ಮೆಟ್ರೋ ಹಾಗೂ ಉತ್ತರ ಮತ್ತು ದಕ್ಷಿಣ ಕಾರಿಡಾರ್‌ನಲ್ಲಿ 4 ನಿಮಿಷಕ್ಕೊಂದು ಮೆಟ್ರೋ ಸೇವೆ ಆರಂಭಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ಒಟ್ಟಿನಲ್ಲಿ ಸಿಲಿಕಾನ್ ಜನರ ಬಹುದಿನಗಳ ಕನಸು ಈಡೇರಿದ್ದು, ಈಗಲಾದ್ರೂ ಜನತೆಗೆ ತಲೆನೋವಾಗಿ ಪರಿಣಮಿಸಿರುವ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುವುದೇ ಕಾಯ್ದು ನೋಡಬೇಕಾಗಿದೆ.


Click it and Unblock the Notifications








