ಪ್ರಕ್ಷುಬ್ಧ ಸ್ಥಿತಿಯಲ್ಲಿ ರಷ್ಯಾ ಜೆಟ್ ವಿಮಾನಗಳನ್ನು ತಡೆಹಿಡಿದ ಆರ್‌ಎಎಫ್ ಪಡೆ
ಉತ್ತರ ಯುರೋಪ್‌ನ ಇಸ್ಟೋನಿಯಾ ದೇಶದ ಅಂತರಾಷ್ಟ್ರೀಯ ವಾಯು ವಲಯವನ್ನು ಒಂದು ವಾರದೊಳಗೆ ಎರಡನೇ ಬಾರಿಗೆ ಉಲ್ಲಂಘಿಸಿರುವ ರಷ್ಯಾ ಜೆಟ್ ವಿಮಾನಗಳನ್ನು ಬ್ರಿಟನ್‌ನ ರಾಯಲ್ ಏರ್ ಫೋರ್ಸ್ ಫೈಟರ್ಸ್ ತಡೆ ಹಿಡಿದಿದೆ.
ಗುರುತಿಸಲಾಗದ ಐದು ಜೆಟ್ ವಿಮಾನಗಳು ಅಂತರಾಷ್ಟ್ರೀಯ ವಾಯು ವಲಯ ರೇಖೆಯನ್ನು ಉಲ್ಲಂಘಿಸಿ ಬಂದಿರುವುದರಿಂದ ಆರ್‌ಎಎಫ್ ಪಡೆಯು ತ್ವರಿತ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಇದರೊಂದಿಗೆ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಯುರೋಪ್ ನ ಇಸ್ಟೋನಿಯಾ ದೇಶದಲ್ಲಿ ಆರಂಭದಲ್ಲಿ ಎರಡು ಸು-27 ಫ್ಲ್ಯಾಂಕರ್ ಫೈಟರ್ ಮತ್ತು ಒಂದು ಐಎಲ್-20 ಕೂಪ್ ಎ ಸ್ಥಳಾನ್ವೇಷಣೆ ವಿಮಾನಕ್ಕೆ ಆರಂಭದಲ್ಲಿ ಕಡಿವಾಣ ಹಾಕಲಾಗಿತು. ಇದಾದ ಬಳಿಕ ಉತ್ತರ ಇಸ್ಟೋನಿಯಾದಲ್ಲಿ ಮತ್ತರಡು ಸು-27 ವಿಮಾನವನ್ನು ಸೆರೆ ಹಿಡಿಯಲಾಯಿತು.

ನ್ಯಾಟೋ ಅಧೀನತೆಯಲ್ಲಿರುವ ಬಾಲ್ಟಿಕ್ ಸಮುದ್ರದ ಮೇಲ್ಗಡೆಯಲ್ಲಿರುವ ವಾಯು ವಲಯದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ಸಂಬಂಧ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ಮಾನ್ಯತೆ ಪಡೆದ ಯಾವುದೇ ಗುರುತಿನ ಸಂಕೇತಗಳ ಪ್ರಸರಣವಿಲ್ಲದೆ ರಷ್ಯಾ ಜೆಟ್ ವಿಮಾನಗಳು ಕಾರ್ಯಾಚರಣೆಗೆ ಮುಂದಾಗಿತ್ತು. ಅಲ್ಲದೆ ಪ್ರಾದೇಶಿಕ ಏರ್ ಟ್ರಾಫಿಕ್ಸ್ ಕಂಟ್ರೋಲ್ ಕೇಂದ್ರಗಳಲ್ಲೂ ಸಂಪರ್ಕ ನಡೆಸಿರಲಿಲ್ಲ ಎಂಬುದನ್ನು ಆರ್‌ಎಎಫ್ ರಕ್ಷಣಾ ವಿಭಾಗವು ತಿಳಿಸಿದೆ.

ಕಳೆದ ತಿಂಗಳಲ್ಲಿ ಬಾಲ್ಟಿಕ್ ಸಮುದ್ರ ವಲಯದ ಮೇಲ್ಬಾಗದಲ್ಲಿ ಅತಿಕ್ರಮಣ ತಡೆಯಲು ನ್ಯಾಟೋ ಮತ್ತು ಮೈತ್ರಿ ಕೂಟಕ್ಕೆ ಬೆಂಬಲಿತ ಆರ್‌ಎಎಫ್ ಜೆಟ್ ವಿಮಾನಗಳನ್ನು ನಿಯೋಜಿಸಲಾಗಿತ್ತು. ಮುಂದಿನ ಆಗಸ್ಟ್ ವರೆಗೂ ಕಾವಲುಪಡೆ ಮುಂದುವರಿಯಲಿದೆ.

ಒಟ್ಟಿನಲ್ಲಿ ಬಾಲ್ಟಿಕ್ ಸಮುದ್ರ ಮೇಲ್ಬಾಗದ ವಾಯು ವಲಯದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ. ಈ ಸಂಬಂಧ ರಷ್ಯಾ ಪ್ರತಿಕ್ರಿಯೆ ಏನಾಗಿರಬಹುದೆಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








