'ನೀಡ್ ಫಾರ್ ಸ್ಪೀಡ್' ಸಕತ್ ವೀಡಿಯೋ
ಅಮೆರಿಕದ ಆಕ್ಷನ್ ಚಿತ್ರವಾದ ನೀಡ್ ಫಾರ್ ಸ್ಪೀಡ್ 2014 ಮಾರ್ಚ್ 14ರಂದು ತೆರೆಗಪ್ಪಳಿಸಲು ರೆಡಿಯಾಗುತ್ತಿದೆ. ಇದರಂತೆ ಸ್ಕಾಟ್ ವ್ಹಾ ನಿರ್ದೇಶನದ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ವಾಹನ ಪ್ರಿಯರಿಗೆ ರೋಮಾಂಚಕ ಅನುಭವ ನೀಡುವಂತಾಗಿದೆ.
ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ
ಡ್ರೀಮ್ ವರ್ಕ್ಸ್ ಪಿಕ್ಚರ್ಸ್‌ನಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವನ್ನು ಎಲೆಕ್ಟ್ರಾನಿಕ್ಸ್ ಆರ್ಟ್‌ನ ಜನಪ್ರಿಯ ವೀಡಿಯೋ ಗೇಮ್ ಆಧಾರದಲ್ಲಿ ರಚಿಸಲಾಗಿದೆ.

ಚಿತ್ರದಲ್ಲಿ ಆರೋನ್ ಪಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕ್ರಾಸ್ ಕಂಟ್ರಿ ಸೇರಿದಂತೆ ಅನೇಕ ದುಬಾರಿ ಕಾರುಗಳಲ್ಲಿ ರೇಸಿಂಗ್ ಚಿತ್ರಿಕರಿಸಲಾಗಿದೆ.
ಇದರಲ್ಲಿ ಕ್ರಾಸ್ ಕಂಟ್ರಿ ಅಲ್ಲದೆ ಲಂಬೋರ್ಗಿನಿ ಸೆಸ್ಟೊ ಎಲೆಮೆಂಟೊ, ಬುಗಾಟಿ ವೆರೋನ್ ಸೂಪರ್ ಸ್ಪೋರ್ಟ್, ಮೆಕ್‌ಲ್ಯಾರೆನ್ ಪಿ1 ಸೇರಿದಂತೆ ಹಲವಾರು ಸೂಪರ್ ಕಾರುಗಳಲ್ಲಿ ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಈ ಸಾಹಸ ದೃಶ್ಯ ವೀಕ್ಷಣೆಗಾಗಿ ಕೆಳಗಡೆ ಕೊಟ್ಟಿರುವ ವೀಡಿಯೋ ಲಿಂಕ್ ಕ್ಲಿಕ್ಕಿಸಿರಿ...
<center><iframe width="100%" height="450" src="//www.youtube.com/embed/e73J71RZRn8?rel=0" frameborder="0" allowfullscreen></iframe></center>


Click it and Unblock the Notifications








