ದುಬಾರಿ ಬೆಲೆಯ ರೇಂಜ್ ರೋವರ್ ಕಾರು ಖರೀದಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ
ಒಲಂಪಿಕ್ಸ್ ಇತಿಹಾಸದಲ್ಲಿಯೇ ಅಥ್ಲೆಟಿಕ್ಸ್ ವಿಭಾಗದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ (Neeraj Chopra) ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು. ಇದು ಒಲಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕವಾಗಿದೆ. ಟೋಕಿಯೋದಲ್ಲಿ ನಡೆದ 2020ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಪಡೆದು ಹೊಸ ಇತಿಹಾಸವನ್ನು ನಿರ್ಮಿಸಿದ್ದರು.
ನೀರಜ್ ಚೋಪ್ರಾ 87.58 ಮೀ ಜಾವೆಲಿನ್ ಎಸೆತದಿಂದ ವಿಶ್ವವನ್ನೇ ಬೆರಗುಗೊಳಿಸಿದರು. ಬರೊಬ್ಬರಿ 100 ವರ್ಷಗಳ ನಂತರ ಅಥ್ಲೆಟಿಕ್ಸ್‌ನಲ್ಲಿ ಭಾರತದ ಮೊದಲ ಒಲಿಂಪಿಕ್ ಪದಕ ಇದಾಗಿದೆ. ಈ ವೇಳೆ ಹಲವು ನಗದು ಬಹುಮಾನಗಳು ಮತ್ತು ವಿಶೇಷವಾಗಿ ಕಸ್ಟಮೈಸ್ ಮಾಡಿದ ಮಹೀಂದ್ರಾ ಎಕ್ಸ್‌ಯುವಿ700 ಕಾರನ್ನು ಸಹ ಉಡುಗೊರೆಯಾಗಿ ಪಡೆದುಕೊಂಡಿದ್ದರು. ಇನ್ನು ಅವರು ಭಾರತದಲ್ಲಿ ಸ್ಫೋಟ್ಸ್ ಐಕಾನ್ ಆಗಿರುವುದು ಮಾತ್ರವಲ್ಲದೆ, ಕಾರುಗಳ ಕಲೆಕ್ಷನ್ ಹೊಂದಿರುವ ಕಾರು ಪ್ರಿಯರು ಕೂಡ ಆಗಿದ್ದಾರೆ.

ಇತ್ತೀಚೆಗೆ, ನೀರಜ್ ಅವರ ಕಾರ್ ಗ್ಯಾರೇಜ್‌ಗೆ ಮತ್ತೊಂದು ಐಷಾರಾಮಿ ಕಾರು ಸೇರಿದೆ. ನೀರಜ್ ಚೋಪ್ರಾ ಅವರು ಹೊಚ್ಚಹೊಸ ರೇಂಜ್ ರೋವರ್ ವೆಲಾರ್ (Range Rover Velar) ಎಸ್‍ಯುವಿಯನ್ನು ಖರೀದಿಸಿದ್ದಾರೆ. ಇವರು ಬ್ಲ್ಯಾಕ್ ಬಣ್ಣದ ರೇಂಜ್ ರೋವರ್ ಎಸ್‍ಯುವಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವರು ಖರೀದಿಸಿದ ಎಸ್‍ಯುವಿಯ ಬೆಲೆಯು ಸಮಾರು ರೂ.90 ಲಕ್ಷವಾಗಿದೆ.
ಲಿಂಪಿಕ್ ಚಿನ್ನದ ಪದಕ ವಿಜೇತ ತನ್ನ ಹೊಸ ರೇಂಜ್ ರೋವರ್ ವೆಲಾರ್‌ನ ಚಿತ್ರವನ್ನು ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಲ್ಯಾಂಡ್ ರೋವರ್ - ಮಾಲ್ವಾ ಆಟೋಮೋಟಿವ್ಸ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, ನೀರಜ್ ಚೋಪ್ರಾರನ್ನು ರೇಂಜ್ ರೋವರ್ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಮತ್ತು ಅವರ ಹೊಸ ರೇಂಜ್ ರೋವರ್ ವೆಲಾರ್‌ನಲ್ಲಿ ಅವರನ್ನು ಅಭಿನಂದಿಸುತ್ತೇವೆ ಎಂದು ಪೋಸ್ಟ್ ಹಾಕಿದ್ದಾರೆ.
ನೀರಜ್ ಚೋಪ್ರಾ ಅವರ ಬಳಿ ಹೊಸ ರೇಂಜ್ ರೋವರ್ ವೆಲಾರ್ ಅಲ್ಲದೇ ಈಗಾಗಲೇ ವೈವಿಧ್ಯಮಯ ಹೈ-ಎಂಡ್ ಕಾರುಗಳನ್ನು ಹೊಂದಿದ್ದಾರೆ. ನೀರಜ್ ಚೋಪ್ರಾ ಅವರ ಐಷಾರಾಮಿ ಕಾರುಗಳ ಮೇಲಿನ ಪ್ರೀತಿ ಚಿರಪರಿಚಿತವಾಗಿದೆ ಮತ್ತು ಹೊಸ ರೇಂಜ್ ರೋವರ್ ವೆಲಾರ್ ಜೊತೆಗೆ, ಅವರು ರೇಂಜ್ ರೋವರ್ ಸ್ಪೋರ್ಟ್ ಮತ್ತು ಹಲವಾರು ಇತರ ಉನ್ನತ-ಶ್ರೇಣಿಯ ಕಾರುಗಳನ್ನು ಹೊಂದಿದ್ದಾರೆ.
ನೀರಜ್ ಅವರ ಮಸ್ಟಾಂಗ್ ಕಾರು ಸೆಕೆಂಡ್ ಹ್ಯಾಂಡ್ ಕಾರ್ ಆಗಿದೆ. ನೀರಜ್ ಅವರ ಮಸ್ಟಾಂಗ್ ಐಕಾನಿಕ್ ಕಾರ್ ಆಗಿದೆ. ಇನ್ನು ಅವರ ಹೊಸ ರೇಂಜ್ ರೋವರ್ ವೆಲಾರ್ ಕಾರ್ ಬ್ರಿಟಿಷ್ ತಯಾರಕರು ಅಭಿವೃದ್ದಿಪಡಿಸಿದ್ದಾರೆ. ಭಾರತದಲ್ಲಿ, ರೇಂಜ್ ರೋವರ್ ವೆಲಾರ್ ಅನ್ನು ವಿಭಿನ್ನ ಚಾಲನಾ ಆದ್ಯತೆಗಳಿಗೆ ಸರಿಹೊಂದುವಂತೆ ಮೂರು ಎಂಜಿನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ
ರೇಂಜ್ ರೋವರ್ ವೆಲಾರ್ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಇದು 179 Bhp ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 250 Bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ಟಾಪ್-ಎಂಡ್ ರೂಪಾಂತರಗಳು 3.0-ಲೀಟರ್ V6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 296 Bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ZF ನಿಂದ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು ಟೆರೈನ್ ರೆಸ್ಪಾನ್ಸ್‌ನೊಂದಿಗೆ ಆಲ್-ವೀಲ್-ಡ್ರೈವ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ.


Click it and Unblock the Notifications








