ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಜನಪ್ರಿಯ ನಟಿ

ಬಾಲಿವುಡ್ ಎಂಬ ಕಲರ್ ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳನ್ನು ಹೊಂದಿರುತ್ತದೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದಂತೆ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ. ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಕಾರು ಕ್ರೇಜ್ ಹೆಚ್ಚು ಇರುತ್ತದೆ.

ಸಿನಿಮಾ ನಟಿಯರು ಕೂಡ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ನಟಿಯರು ಮೆಚ್ಚಿನ ಐಷಾರಾಮಿ ಬ್ರ್ಯಾಂಡ್‌ನ ಕಾರುಗಳನ್ನು ಖರೀದಿಸುತ್ತಾರೆ. ಅದರಲ್ಲಿ ಬಾಲಿವುಡ್ ಸೆಲಬ್ರಿಟಿಗಳಿಗೆ ಮರ್ಸಿಡಿಸ್ ಬೆಂಝ್ ಕಾರುಗಳ ಮೇಲೆ ಪ್ರೀತಿ ಹೆಚ್ಚು. ಬಾಲಿವುಡ್ ನಟಿ ನೇಹಾ ಶರ್ಮಾ Mercedes-Benz GLE ಐಷಾರಾಮಿ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಹೊಸ ಐಷಾರಾಮಿ ಕಾರಿನ ವೀಡಿಯೊವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

Neha Sharma

ವೀಡಿಯೊದಲ್ಲಿ ನಟಿ ನೇಹಾ ಶರ್ಮಾ ಮತ್ತು ಸಹೋದರಿ ಐಶಾ ಶರ್ಮಾ ನೋಡಬಹುದು. ಹೊಸ ಕಾರು ಖರೀದಿಸಿದ ನಟಿ ನೇಹಾ ಶರ್ಮಾ ತೆಂಗಿನಕಾಯಿ ಹೊಡೆಯಲು ಪರಡಾಡುತ್ತಾರೆ. ನಂತರ ನಟಿಯ ಸಹೋದರಿ ತೆಂಗಿನಕಾಯಿ ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದಲ್ಲಿ Mercedes-Benz GLE ಕಾರು 300ಡಿ, 450 ಮತ್ತು 400ಡಿ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ.

ಈ ಐಷಾರಾಮಿ ಕಾರಿನ ಬೆಲೆಯು ರೂ.88 ಲಕ್ಷದಿಂದ ರೂ.1.05 ಕೋಟಿಯವರೆಗೆ ಇದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಸದ್ಯಕ್ಕೆ ಬಾಲುವುಡ್ ನಟಿ ನೇಹಾ ಶರ್ಮಾ ಯಾವ ರೂಪಾಂತರವನ್ನು ಖರೀದಿಸಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ. ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ LWB ಅಥವಾ ಲಾಂಗ್-ವೀಲ್‌ಬೇಸ್ ಆವೃತ್ತಿಯಲ್ಲಿ GLE ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ.

Neha Sharma

ಈ ಕಾರಿನಲ್ಲಿ ಹಿಂಬದಿಯ ಪ್ರಯಾಣಿಕರಿಗೆ ಹೆಚ್ಚು ಲೆಗ್‌ರೂಮ್ ಒದಗಿಸಲು ವಿಸ್ತರಿಸಲಾಗಿದೆ. ಈ ಹೊಸ Mercedes-Benz GLE ಕಾರು 4,294 mm ಉದ್ದ, 1,772 mm ಎತ್ತರ ಮತ್ತು 2,157 mm ಅಗಲವನ್ನು ಹೊಂದಿದೆ. ಹೊಸ Mercedes-Benz GLE ಕಾರಿನ 300d ರೂಪಾಂತರವು ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್‌ 245 hp ಮತ್ತು 500 Nm ಅನ್ನು ಉತ್ಪಾದಿಸುತ್ತದೆ.

ಇನ್ನು ಈ ಕಾರಿನ 450ಡಿ ರೂಪಾಂರದಲ್ಲಿ ಆರು-ಸಿಲಿಂಡರ್ ಡೀಸೆಲ್ ಎಂಜಿನ್‌ 325 hp ಮತ್ತು 700 Nm.ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 450 ರೂಪಾಂತರವು 365 hp ಮತ್ತು 500 Nm ಅನ್ನು ಉತ್ಪಾದಿಸುತ್ತದೆ. ಈ ಎಲ್ಲಾ ಎಂಜಿನ್‌ಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಇದರೊಂದಿಗೆ 4MATIC ಸಿಸ್ಟಮ್ ಸಹ ಒಳಗೊಂಡಿದೆ.

ಈ ಐಷಾರಾಮಿ Mercedes-Benz GLE ಕಾರು ಆಯ್ಕೆಮಾಡಬಹುದಾದ ಹಲವಾರು ಫೀಚರ್ಸ್ ಗಳನ್ನು ನೀಡುತ್ತಿದ್ದಾರೆ. ಈ ಕಾರಿನಲ್ಲಿ ಏರ್ ಸಸ್ಪೆನ್ಷನ್, ಮಲ್ಟಿಬೀಮ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಹೈ-ಪರ್ಫಾರ್ಮೆನ್ಸ್ ಹೆಡ್‌ಲ್ಯಾಂಪ್‌ಗಳು, ಪನೋರಮಿಕ್ ಸನ್‌ರೂಫ್, ಅಂಡರ್ ಗಾರ್ಡ್ ಮತ್ತು ಅಲ್ಯೂಮಿನಿಯಂ ರನ್ನಿಂಗ್ ಬೋರ್ಡ್‌ಗಳಿವೆ. ಇನ್ನು ಈ ಕಾರಿನಲ್ಲಿ ಇತರ ವೈಶಿಷ್ಟ್ಯಗಳೆಂದರೆ 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಲೆದರ್ ಅಪ್ಹೋಲ್ಸ್ಟರಿಯನ್ನು ಹೊಂದಿದೆ.

ಇದರೊಂದಿಗೆ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸನ್‌ಬ್ಲೈಂಡ್‌ಗಳು, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಿವೆ. ಇನ್ನು ಬಾಲಿವುಡ್ ನಟ ನಟಿಯರು ಹೆಚ್ಚು ಮರ್ಸಿಡಿಸ್ ಕಾರುಗಳ ಅಭಿಮಾನಿಗಳಾಗಿದ್ದಾರೆ. ಬಾಲಿವುಡ್ ಬಹುತೇಕ ಜನಪ್ರಿಯ ನಟ-ನಟಿಯರು ಮರ್ಸಿಡಿಸ್ ಕಾರುಗಳನ್ನು ಹೊಂದಿವೆ.

More from DriveSpark

Article Published On: Wednesday, April 5, 2023, 11:33 [IST]
English summary
Neha sharma buys new mercedes benz gle details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+