VIDEO.. ಜನಪ್ರಿಯ ಮಹೀಂದ್ರಾ ಕಾರಿನಲ್ಲಿ ಹೀಗಾ ಆಗೋದು: ಮಾಲೀಕ ತೀವ್ರ ಅಸಮಾಧಾನ
ಭಾರತದಲ್ಲಿ ಮಹೀಂದ್ರಾದ ಸ್ಕಾರ್ಪಿಯೋ ಹಾಗೂ ಥಾರ್ ರೀತಿಯಲ್ಲೇ XUV700 ಜನಪ್ರಿಯ ಎಸ್‌ಯುವಿಯಾಗಿದೆ. ಇದು, ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ಮಾರುಕಟ್ಟೆಯನ್ನು ಬಿಡುಗಡೆಗೊಂಡು, ಹೆಚ್ಚಿನ ಗ್ರಾಹರನ್ನು ಸೆಳೆಯುತ್ತಿದೆ. ಆದರೆ, ಈ ಕಾರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಮಸ್ಯೆಗಳು ಕಂಡುಬರುತ್ತಿದ್ದು, ಸದ್ಯ, ಕ್ಯಾಬಿನ್‌ಗೆ ನೀರು ಸೋರಿಕೆಯಾಗಿದೆ ಎಂದು ಗ್ರಾಹಕರೊಬ್ಬರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಬಹುತೇಕರು, ಕಾರಿನೊಳಗೆ ನೀರು ಸೋರಿಕೆಯಾಗುತ್ತಿದೆ ಅಂದ್ರೆ, ತಕ್ಷಣ ಅದರ ಸನ್‌ರೂಫ್ ಕಾರಣ ಇರಬಹುದು ಎಂದು ಅಂದುಕೊಳುತ್ತಾರೆ ಆದರೆ, ಅದು ತಪ್ಪು.. ಇಲ್ಲಿ ಸನ್ ಗ್ಲಾಸ್ ಹೋಲ್ಡರ್‌ನಿಂದ ನೀರು ಜಿನುಗುತ್ತಿದೆ. ಆನ್‌ಲೈನ್‌ನಲ್ಲಿ ಮಹೀಂದ್ರಾ XUV700 ಎಸ್‌ಯುವಿ AX5 ವೇರಿಯೆಂಟ್ ಮಾಲೀಕ ಹಂಚಿಕೊಂಡ ಈ ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಶೇರ್ ಮಾಡಲಾಗಿದೆ.

ಅಷ್ಟಕ್ಕೂ ಇಲ್ಲಿ ನಡೆದಿದ್ದು, ಏನು ಅಂತಾ ಗೊತ್ತಾ?: ವಿಡಿಯೋದಲ್ಲಿ ತೋರಿಸುವಂತೆ XUV700ನಲ್ಲಿ ಅದರ ಮಾಲೀಕ ಎಲ್ಲಿಗೋ ತೆರಳಬೇಕಾದರೆ ಹೊರಭಾಗದಲ್ಲಿ ಮಳೆ ಬಂದಿದೆ. ಆಗ ಸನ್ ಗ್ಲಾಸ್ ಹೋಲ್ಡರ್ ಮುಚ್ಚಿದ್ದರೂ ಅಲ್ಲಿಂದ ಸಣ್ಣದಾಗಿ ನೀರು ಬೀಳಲು ಶುರುವಾಗಿದೆ. ಇದರಿಂದ ಬೇಸರಗೊಂಡ ಅವರು, ಇದರ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವಂತೆ ಮಹೀಂದ್ರಾ ಕಂಪನಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಹೀಂದ್ರಾ, ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಈ ವೀಡಿಯೊದಲ್ಲಿ ತೋರಿಸಲಾಗಿರುವ XUV700 ಹೊಸತೆ ಅಥವಾ ಅವರು, ಎಷ್ಟು ವರ್ಷಗಳಿಂದ ಬಳಕೆ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕಂಪನಿಯ ತನಿಖೆಯಿಂದ ಈ XUV700 ಸನ್ ಗ್ಲಾಸ್ ಹೋಲ್ಡರ್‌ನಿಂದ ನೀರು ಸೋರಿಕೆಗೆ ಕಾರಣವೇನೆಂಬ ಬಗ್ಗೆ ಸತ್ಯಾಸತ್ಯತೆ ತಿಳಿಯಲಿದೆ.

ತೀರಾ ಇತ್ತೀಚೆಗೆ ರಾಜಸ್ತಾನದ ನಡುರಸ್ತೆಯಲ್ಲಿ 'XUV 700' ಹೊತ್ತಿ ಉರಿದಿತ್ತು. ಆಗಲು ಅದರ ಮಾಲೀಕ ಸಾಕಷ್ಟು ಆರೋಪ ಮಾಡಿದ್ದರು. ಆದರೆ, ಘಟನೆ ಸಂಬಂಧ ತನಿಖೆ ನಡೆಸಿದ ಕಂಪನಿ, ಆಫ್ಟರ್ ಮಾರ್ಕೆಟ್ ಎಲೆಕ್ಟ್ರಿಕಲ್ ಆಕ್ಸೆಸರಿಗಳನ್ನು ಅಳವಡಿಸಲು ಎಲೆಕ್ಟ್ರಿಕಲ್ ವೈರಿಂಗ್ ಟ್ಯಾಂಪರಿಂಗ್ ಮಾಡಿರುವುದು ಅಗ್ನಿ ಅವಘಡ ಸಂಭವಿಸಲು ಕಾರಣವೆಂದು ಮಾಹಿತಿ ನೀಡಿತ್ತು.
ಕಳೆದ ಮಾರ್ಚ್ ತಿಂಗಳಲ್ಲಿ ಯೂಟ್ಯೂಬರ್ ತನ್ನ ನೂತನ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‍ಯುವಿಯಲ್ಲಿ ಪ್ರವಾಸಕ್ಕೆ ತೆರಳಿದ್ದರು. ಆ ವೇಳೆ ಜಲಪಾತದ ಕೆಳಗಡೆ ಈ ಸ್ಕಾರ್ಪಿಯೋವನ್ನು ನಿಲ್ಲಿಸಿದ್ದು, ಸನ್‌ರೂಫ್ ಮೂಲಕ ಕ್ಯಾಬಿನ್‌ನೊಳಗೆ ನೀರು ಸೋರಿಕೆಯಾಗಿ, ಆ ವೀಡಿಯೊ ವೈರಲ್ ಆಗಿತ್ತು. ಇದಕ್ಕೆ ಮಹೀಂದ್ರಾ ಸರಿಯಾಗಿಯೇ ಉತ್ತರ ನೀಡಿತ್ತು. ಮತ್ತೊಂದು ದಿನ ಸ್ಕಾರ್ಪಿಯೋ ಎನ್ ಎಸ್‍ಯುವಿಯನ್ನು ಇದೇ ಜಲಪಾತದ ಕೆಳಗೆ ನಿಲ್ಲಿಸಿತ್ತು. ಮೇಲಿಂದ ನೀರು ಬಿದ್ದರೂ, ಕ್ಯಾಬಿನ್‌ನೊಳಗೆ ಒಂದಿಷ್ಟು ಸೋರಿಕೆಯಾಗಿರಲಿಲ್ಲ.
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಹೀಂದ್ರಾ XUV700 ಎಸ್‌ಯುವಿ ಅತ್ಯಂತ ಸುರಕ್ಷಿತ ಕಾರೆಂದು ಹೆಸರುವಾಸಿಯಾಗಿದ್ದು, ರೂ.14.01 ಲಕ್ಷದಿಂದ ರೂ.26.18 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್, 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್. 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದೆ.
XUV700 ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ , ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಟ್ವಿನ್ ಡಿಜಿಟಲ್ ಸ್ಕ್ರೀನ್ಸ್, ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಬಗೆ ಬಗೆಯ ಫೀಚರ್ಸ್ ಪಡೆದಿದೆ.


Click it and Unblock the Notifications