ಹೊಚ್ಚ ಹೊಸ ಬಲೆನೊ ಬೆಂಕಿಗಾಹುತಿ; ಏನಿದು ಸಮಸ್ಯೆ?

By Nagaraja

ನೂತನ ಕಾರುಗಳಿಗೆ ಯಾಕೋ ಅದೃಷ್ಟ ಚೆನ್ನಾಗಿಲ್ಲ ಅನ್ನಿಸುತ್ತಿದೆ. ಇತ್ತೀಚೆಗಷ್ಟೇ ಕೇರಳದಲ್ಲಿ ಹೊಚ್ಚ ಹೊಸ ಬಲೆನೊ ಮತ್ತು ಫೋಕ್ಸ್ ವ್ಯಾಗನ್ ಜೆಟ್ಟಾ ಕಾರುಗಳು ಮುಖಾಮುಖಿ ಢಿಕ್ಕಿಯಾಗಿರುವ ಘಟನೆಯು ವರದಿಯಾಗಿತ್ತು. ಇದಾದ ಒಂದು ವಾರದೊಳಗೆ ಮಗದೊಂದು ಬಲೆನೊ ಅಪಘಾತ ಸ್ಟೋರಿಯು ಬೆಳಕಿಗೆ ಬಂದಿದೆ.

ಈ ಬಾರಿಯೂ ಕೇರಳದಲ್ಲೇ ನಡೆದ ಅಪಘಾತ ಪ್ರಕರಣವೊಂದರಲ್ಲಿ ನೂತನ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಇದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುವಂತಾಗಿದೆ.

ಹೊಚ್ಚ ಹೊಸ ಬಲೆನೊ ಬೆಂಕಿಗಾಹುತಿ

ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಕೇರಳದ ಕೊಚ್ಚಿ ನಗರದಲ್ಲಿ ಅಪಘಾತ ನಡೆದಿದ್ದು, ಮಾರುತಿ ಬಲೆನೊ ಸಂಪೂರ್ಣವಾಗಿ ಅಗ್ನಿ ಸ್ಪರ್ಶವಾಗಿದೆ.

ಹೊಚ್ಚ ಹೊಸ ಬಲೆನೊ ಬೆಂಕಿಗಾಹುತಿ

ಅದೃಷ್ಟವಶಾತ್ ಬಲೆನೊ ಕಾರಿನಲ್ಲಿ ಸಂಚರಿಸುತ್ತಿದ್ದ ಅಪ್ಪ ಮತ್ತು ಮಗ ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಹೊಚ್ಚ ಹೊಸ ಬಲೆನೊ ಬೆಂಕಿಗಾಹುತಿ

ಬಲೆನೊ ಖರೀದಿಸಿ ಇನ್ನೇನು ಮೂರು ತಿಂಗಳು ಕೂಡಾ ಆಗಿರಲಿಲ್ಲ. ಪ್ರಸ್ತುತ ಬೆಂಕಿ ಪ್ರಕರಣವು ಮಾರುತಿ ಸಂಸ್ಥೆಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.

ಹೊಚ್ಚ ಹೊಸ ಬಲೆನೊ ಬೆಂಕಿಗಾಹುತಿ

ಇದೇ ರಸ್ತೆಯಲ್ಲಿ ಸಂಚರಿಸುತ್ತಿರುವ ಬೈಕ್ ಸವಾರನೋರ್ವ ಬಲೆನೊ ಬೊನೆಟ್ ಅಡಿಯಲ್ಲಿ ಹೊಗೆ ಬರುತ್ತಿರುವುದನ್ನು ಎಚ್ಚರಿಸಿರುವುದರಿಂದ ದುರಂತವೊಂದು ತಪ್ಪಿದಂತಾಗಿದೆ.

ಹೊಚ್ಚ ಹೊಸ ಬಲೆನೊ ಬೆಂಕಿಗಾಹುತಿ

ಮಗನನ್ನು ಶಾಲೆಗೆ ತಲುಪಿಸುವ ನಿಟ್ಟಿನಲ್ಲಿ ಬೆಳಗ್ಗೆ ಕೊಚ್ಚಿಯ ಕಂಟೈನರ್ ರಸ್ತೆಯಲ್ಲಿ ಕಾರು ಚಾಲನೆ ಮಾಡಲಾಗಿತ್ತು. ಈ ವೇಳೆಯಲ್ಲಿ ಕಾರಿನ ಎಸಿ ಕೂಡಾ ಆನ್ ಮಾಡಲಾಗಿತ್ತು ಎಂದು ವೃತ್ತಿಯಲ್ಲಿ ಉದ್ಯಮಿ ಆಗಿರುವ ನೌಶಾದ್ ತಿಳಿಸುತ್ತಾರೆ.

ಹೊಚ್ಚ ಹೊಸ ಬಲೆನೊ ಬೆಂಕಿಗಾಹುತಿ

ಟ್ರಾಫಿಕ್ ಜಾಮ್ ನಿಂದಾಗಿ ಅಗ್ನಿಶಾಮಕ ದಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಿರಲಿಲ್ಲ. ಬಳಿಕ ತಡವಾಗಿ ಸ್ಥಳಕ್ಕೆ ಆಗಮಿಸಿದಾಗ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು.

ಹೊಚ್ಚ ಹೊಸ ಬಲೆನೊ ಬೆಂಕಿಗಾಹುತಿ

ಹೆಚ್ಚಿನ ತನಿಖೆಗಾಗಿ ಕಾರನ್ನು ನೆಕ್ಸಾ ಶೋ ರೂಂಗೆ ಒಯ್ಯಲಾಗಿದ್ದು, ಬೆಂಕಿ ಹೇಗೆ ತಗುಲಿದೆ ಎಂಬುದರ ಬಗ್ಗೆ ನಿಖರ ತನಿಖೆ ನಡೆಸಲಾಗುತ್ತದೆ.

More from DriveSpark

Article Published On: Tuesday, August 9, 2016, 12:43 [IST]
English summary
New Maruti Suzuki Baleno Goes Up In Flames
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+