ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ರೈಲ್ವೆ ಸೇವೆಗಳಲ್ಲಿ ಭಾರೀ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಸದ್ಯ ಬುಲೆಟ್ ಟ್ರೈನ್ ಸೇರಿದಂತೆ ಹಲವು ಅತ್ಯಾಧುನಿಕ ಸಾರಿಗೆ ಸೌಲಭ್ಯಗಳನ್ನು ಆರಂಭಿಸುವ ಗುರಿಹೊಂದಿದೆ. ಇದರಲ್ಲಿ ಸದ್ಯಕ್ಕೆ ಹಳಿಗಿಳಿಯಲು ಸಜ್ಜಾಗಿರುವ ಟ್ರೈನ್ 18 ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಇದೇ ವರ್ಷದ ಕೊನೆಯಲ್ಲಿ ಸೇವೆಗೆ ಸಿದ್ದವಾಗಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಹೌದು, ದೇಶದ ಆಧುನಿಕ ಎಂಜಿನ್ ರಹಿತ ರೈಲು ಎಂಬ ಖ್ಯಾತಿ ಹೊಂದಿರುವ ಟ್ರೈನ್-18 ತನ್ನ ಸ್ಪೀಡ್ ಗೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಪರೀಕ್ಷಾರ್ಥ ಸಂಚಾರದ ವೇಳೆ ಹೊಸ ದಾಖಲೆ ನಿರ್ಮಿಸಿತ್ತು. ಗಂಟೆಗೆ ಬರೋಬ್ಬರಿ 180 ಕಿ.ಮೀ ವೇಗದಲ್ಲಿ ಚಲಿಸುವ ಮೂಲಕ ಆಧುನಿಕ ತಂತ್ರಜ್ಞಾನದ ಹೊಸ ಆವಿಷ್ಕಾರಕ್ಕೆ ಮತ್ತೊಂದು ಮುನ್ನುಡಿ ಬರೆದಿತ್ತು.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಕೋಟಾ ಮತ್ತು ರಾಜಸ್ತಾನದ ಸವಾಯಿ ಮಾಧೋಪುರ ನಡುವಿನ ರೈಲು ಮಾರ್ಗದಲ್ಲಿ ನಡೆದ 2ನೇ ಪರೀಕ್ಷಾರ್ಥ ಸಂಚಾರದಲ್ಲಿ ಟ್ರೈನ್ 18 ಟ್ರೈನ್ ಗಂಟೆಗೆ 180 ಕಿಮಿ ವೇಗದಲ್ಲಿ ಚಲಿಸಿದ್ದು, ಸಂಪೂರ್ಣವಾಗಿ ಸ್ವದೇಶದಲ್ಲಿ ತಯಾರಾದ ರೈಲು ಇಷ್ಟು ವೇಗದಲ್ಲಿ ಸಂಚರಿಸಿರುವುದು ಇದೇ ಮೊದಲು ಎನ್ನಬಹುದು.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಸದ್ಯ ಶತಾಬ್ದಿ ಎಕ್ಸ್​​ಪ್ರೆಸ್ ರೈಲು ಪ್ರತಿ ಗಂಟೆಗೆ 130 ಕಿ.ಮಿ ವೇಗದೊಂದಿಗೆ ಭಾರತದಲ್ಲಿರುವ ಚಲಿಸುತ್ತಿರುವ ಅತಿ ವೇಗದ ರೈಲು ಎನ್ನುವ ಖ್ಯಾತಿ ಹೊಂದಿದ್ದು, ಇದೀಗ ಟ್ರೈನ್ 18 ರೈಲು ಗಂಟೆಗೆ ಸರಾಸರಿ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯದೊಂದಿಗೆ ಶತಾಬ್ದಿ ರೈಲನ್ನು ಹಿಂದಿಕ್ಕಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಈ ಮೂಲಕ ದೇಶದಲ್ಲಿ ವೇಗದ ರೈಲು ಎನ್ನುವ ಖ್ಯಾತಿಗೆ ಪಾತ್ರವಾದ ಟ್ರೈನ್ 18 ಮಾದರಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಇದೇ ತಿಂಗಳು 21-22ಕ್ಕೆ ಹೊಸ ರೈಲಿಗೆ ಅಧಿಕೃತ ಚಾಲನೆ ದೊರೆಯುವುದು ಪಕ್ಕಾ ಆಗಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಹೊಸ ರೈಲಿನ ಪರೀಕ್ಷಾರ್ಥ ಕಾರ್ಯಗಳು ನಡೆದ ನಂತರ ಟ್ರೈನ್ 18 ಯಾವ ಮಾರ್ಗದಲ್ಲಿ ಮೊದಲಿಗೆ ಸಂಚಾರ ಆರಂಭ ಮಾಡಬೇಕು ಎಂಬ ಕುತೂಹಲಕ್ಕೆ ಕೇಂದ್ರ ರೈಲ್ವೆ ಮಂಡಳಿಯು ತೆರೆ ಎಳೆದಿದ್ದು, ಅತಿ ವೇಗದ ರೈಲ್ವೆನಲ್ಲಿ ಪ್ರಯಾಣಿಸಲು ಲಕ್ಷಾಂತರ ಪ್ರಯಾಣಿಕರು ಈಗಾಗಲೇ ಕಾಯ್ದುಕುಳಿತಿದ್ದಾರೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ವಾರಾಣಸಿ ಟು ದೆಹಲಿ

ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ರಾಷ್ಟ್ರದ ರಾಜಧಾನಿ ದೆಹಲಿ ನಡುವೆ ಟ್ರೈನ್ 18 ಮೊದಲು ಬಾರಿಗೆ ಸಂಚಾರ ಆರಂಭಿಸಲಿದ್ದು, ಬರೋಬ್ಬರಿ 820 ಕಿ.ಮಿ ದೂರದ ಈ ಮಾರ್ಗವನ್ನು ಟ್ರೈನ್ 18 ಕೆಲವೇ ಗಂಟೆಗಳಲ್ಲಿ ಕ್ರಮಿಸಲಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ವಾರಣಾಸಿಯು ಕೇವಲ ಪ್ರಧಾನಿಯವರು ಪ್ರತಿನಿಧಿಸುವ ಕ್ಷೇತ್ರ ಎಂಬುವುದನ್ನು ಹೊರತುಪಡಿಸಿ ಪವಿತ್ರ ಪುಣ್ಯಕ್ಷೇತ್ರವಾಗಿರುವುದರಿಂದ ದಿನಂಪ್ರತಿ ಇಲ್ಲಿಗೆ ಸಾವಿರಾರು ಜನ ತೀರ್ಥಯಾತ್ರೆಗೆ ಆಗಮಿಸುತ್ತಾರೆ. ಹೀಗಿರುವಾಗ ಟ್ರೈನ್ 18 ಈ ಭಾಗದಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲಕರವಾಗಲಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ವಾರಣಾಸಿಗೆ ಪ್ರಯಾಣ ಬೆಳೆಸುವ ಬರುವ ಬಹುತೇಕ ಪ್ರವಾಸಿಗರು ಮೊದಲ ದೆಹಲಿಗೆ ಆಗಮಿಸಿ ತದನಂತರವಷ್ಟೇ ಅಲ್ಲಿಂದ ವಾರಣಾಸಿಗೆ ಪ್ರಯಾಣ ಬೆಳೆಸುತ್ತಾರೆ. ಈ ವೇಳೆ ಕೈಗೆಟುವ ಬೆಲೆಯ ಪ್ರಯಾಣ ಅಂದ್ರೆ ಅದು ರೈಲು. ಆದ್ರೆ 820 ಕಿ.ಮಿ ದೂರದ ಈ ಪ್ರಯಾಣವು ಸಾಮಾನ್ಯ ರೈಲುಗಳಲ್ಲಿ ಕನಿಷ್ಠ ಅಂದ್ರು 14 ರಿಂದ 16 ಗಂಟೆಗಳ ಪ್ರಯಾಣವಿರುತ್ತೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಇದೇ ಕಾರಣಕ್ಕೆ ಟ್ರೈನ್ 18 ಈ ಮಾರ್ಗದಲ್ಲಿ ಪ್ರಯಾಣಿಸಿದ್ದಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲಕತೆಗಳಿದ್ದು, ಬಹುಮುಖ್ಯವಾಗಿ ಪ್ರಯಾಣದ ಅವಧಿ ಸಾಕಷ್ಟು ತಗ್ಗಲಿದೆ. ಜೊತೆಗೆ ಹೊಸ ಯೋಜನೆಯಿಂದಾಗಿ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹಕಾರಿಯಾಗಲಿದೆ.

MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಸದ್ಯದಲ್ಲೇ ಟ್ರೈನ್ 18 ಸಂಖ್ಯೆಯಲ್ಲಿ ಹೆಚ್ಚಳ..!

ಪರೀಕ್ಷಾರ್ಥ ಸಂದರ್ಭದಲ್ಲಿ ಹೊಸ ರೈಲ್ವೆ ಸೇವೆ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಟ್ರೈನ್ 18 ಸಂಖ್ಯೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿರುವ ಕೇಂದ್ರ ರೈಲ್ವೆ ಮಂಡಳಿಯು ಮುಂಬರುವ 2019ರ ಕೊನೆಗೆ ದೇಶದ ವಿವಿಧ ನಗರಗಳನ್ನು ಸಂಪರ್ಕಿಸಲು ಒಟ್ಟು ಹತ್ತು ಕಡೆಗಳಲ್ಲಿ ಟ್ರೈನ್ 18 ಸಂಚಾರ ಲಭ್ಯವಾಗಲಿವೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಈ ಸಂಬಂಧ ರೈಲ್ವೆ ಸಚಿವಾಲಯವು ಚೆನ್ನೈನಲ್ಲಿರುವ ಐಸಿಎಫ್‍ಗೆ ಮಹತ್ವದ ಸೂಚನೆ ನೀಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಶತಾಬ್ದಿ ರೈಲಿನ ಬದಲಿಗೆ ಸಂಪೂರ್ಣವಾಗಿ ಟ್ರೈನ್ 18 ಸಂಚಾರಕ್ಕೆ ಹೆಚ್ಚಿನ ಒತ್ತು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಹೊಸ ಟ್ರೈನ್ 18 ರೈಲು ಎಂಜಿನ್ ರಹಿತವಾಗಿದ್ದು, ಬುಲೆಟ್ ರೈಲು ಮಾದರಿಯಲ್ಲೇ ಇದನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಟ್ರೈನ್ 18ನಲ್ಲಿ ಪ್ರತ್ಯೇಕ ಎಂಜಿನ್ ಬದಲಾಗಿ ಮೆಟ್ರೋ ರೈಲು ಮಾದರಿಯಲ್ಲಿ ಬೋಗಿಯ ಕೆಳಗಡೆಯೇ ಎಂಜಿನ್ ಜೋಡಣೆ ಮಾಡಲಾಗಿರುತ್ತೆ.

MOST READ: ಕೇವಲ ಎರಡೂವರೆ ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈ ತಲುಪುತ್ತೆ ಈ ಬುಲೆಟ್ ಟ್ರೈನ್

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಹೊಸ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಇವುಗಲ್ಲಿ 52 ಆಸನಗಳ ಹೊಂದಿರುವ ಎರಡು ಎಕ್ಸಿಕ್ಯುಟಿವ್‌ ಬೋಗಿಗಳನ್ನು ನೀಡಲಾಗಿದೆ. ಉಳಿದವು 78 ಆಸನಗಳ ಸಾಮಾನ್ಯ ಬೋಗಿಗಳಿದ್ದು, ಸಂಪೂರ್ಣ ಹವಾನಿಯಂತ್ರಣ, ಸಿಸಿಟಿವಿ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ಫಲಕ, ಸ್ವಯಂ ಚಾಲಿತ ಬಾಗಿಲು ಸೌಲಭ್ಯ ಪಡೆದಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಹಾಗೆಯೇ ಪ್ರತಿ ಎರಡು ಬೋಗಿಗಳ ನಡುವೆ ಮೋಟಾರೈಸ್ಡ್ ಎಂಜಿನ್ ಅಳವಡಿಕೆ ಮಾಡಿರುವುದಿಂದ ರೈಲು ಅತಿ ವೇಗವಾಗಿ ಚಲಿಸಲು ಸಾಧ್ಯವಾಗಿದೆ. ಜೊತೆಗೆ ಕ್ಷಣಾರ್ಧದಲ್ಲಿ ನಿಲ್ಲುವ ಸಾಮರ್ಥ್ಯವನ್ನೂ ಕೂಡಾ ಹೊಂದಿದ್ದು, ಆಗಬಹುದಾದ ರೈಲು ದುರಂತಗಳಿಗೆ ಇದರಿಂದ ತಪ್ಪಿಸಬಹುದಾಗಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಇದಲ್ಲದೇ ದೀರ್ಘಾವಧಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ರೈಲಿನಲ್ಲಿ ವಿಶೇಷ ಮನೋರಂಜನಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವೈ ಫೈ, ವ್ಯಾಕ್ಯೂಮ್ ಟಾಯ್ಲೆಟ್, ಲಗೇಜ್‌ಗೆ ಪ್ರತ್ಯೇಕ ಜಾಗ ಮೀಸಲು, ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಹೊಸ ರೈಲು ನಿರ್ಮಾಣಕ್ಕೆ 100 ಕೋಟಿ ವೆಚ್ಚ!

ಟ್ರೈನ್ 18 ರೈಲು ಯೋಜನೆಯನ್ನು ಪೂರ್ಣಗೊಳಿಸಲು ಬರೋಬ್ಬರಿ ರೂ. 100 ಕೋಟಿ ಖರ್ಚು ಮಾಡಲಾಗಿದ್ದು, ಅತ್ಯಾಧುನಿಕ ಎಂಜಿನ್ ಮಾದರಿ, ಐಷಾರಾಮಿ ಸೌಲಭ್ಯದಿಂದಾಗಿ ರೈಲು ನಿರ್ಮಾಣದ ಖರ್ಚುಗಳು ತುಸು ದುಬಾರಿಯಾಗಿವೆ ಎನ್ನಬಹುದು.

MOST READ: ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಆದ್ರೆ ಹೊಸ ರೈಲು ಪ್ರಸ್ತುತ ರೈಲುಗಳ ಓಡಾಟದ ಅವಧಿಗಿಂತಲೂ ಸಾಕಷ್ಟು ಇಳಿಕೆಯಾಗಲಿದ್ದು, ಇದರಲ್ಲಿ ಮುಖ್ಯವಾಗಿ ರೈಲಿನ ಪ್ರಯಾಣದ ವೆಚ್ಚಗಳು ತಗ್ಗುವ ಮೂಲಕ ಹೊಸ ರೈಲಿನಿಂದ ಸಾಕಷ್ಟು ಲಾಭ ಗಳಿಕೆಯಾಗಲಿದೆ.

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಒಟ್ಟಿನಲ್ಲಿ ಪ್ರಾಯೋಗಿಕ ಓಡಾಟದಲ್ಲೇ ಹೊಸ ನೀರಿಕ್ಷೆ ಹುಟ್ಟುಹಾಕಿರುವ ಟ್ರೈನ್ 18 ಮಾದರಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಲಿದ್ದು, 2019ರ ಕೊನೆಯಲ್ಲಿ ದೇಶದ ಇತರೆ ಮೆಟ್ರೋ ನಗರಗಳ ನಡುವಿನ ಸಂಪರ್ಕಕ್ಕೂ ಇವು ಲಭ್ಯವಾಗುವುದು ಖಚಿತವಾಗಿದೆ.

More from DriveSpark

Article Published On: Monday, December 17, 2018, 16:50 [IST]
English summary
New Routes For Train 18 Finalised By Railway Board. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+